Mangalore

ವಿಕೆಟ್ ದಾಖಲೆ ವೀರ ರಾಜಿಂದರ್ ಗೋಯೆಲ್ ವಿಧಿವಶ

(ನ್ಯೂಸ್ ಕಡಬ) newskadaba.com ಕೋಲ್ಕತ್ತಾ ,ಜೂ.22: ಭಾರತದ ಮಾಜಿ ಕ್ರಿಕೆಟಿಗ, ಎಡಗೈ ಸ್ಪಿನ್ನರ್, ರಣಜಿ ಕ್ರಿಕೆಟ್ ನ ದಿಗ್ಗಜ ರಾಜಿಂದರ್ ಗೋಯೆಲ್ ರವಿವಾರ ನಿಧನರಾದರು. 77 ವರ್ಷದ ರಾಜಿಂದರ್ ಬಹಳ ಸಮಯದ ಅನಾರೋಗ್ಯದ ಬಳಿಕ ರವಿವಾರ ಕೋಲ್ಕತ್ತಾದ ನಿವಾಸದಲ್ಲಿ ನಿಧನರಾದರು.   ರಾಜಿಂದರ್ ಗೋಯೆಲ್ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದೇ ಇದ್ದರೂ, ದೇಶೀಯ ವಲಯದಲ್ಲಿ ಉತ್ತಮ ಸ್ಪಿನ್ನರ್ ಆಗಿ ಮೂಡಿಬಂದಿದ್ದರು. ಭಾರತದ ದಿಗ್ಗಜ ಬಿಷನ್ ಸಿಂಗ್ ಬೇಡಿ ಸಮಕಾಲೀನ ಸ್ಪಿನ್ನರ್ ಆಗಿದ್ದ ರಾಜಿಂದರ್ 157 […]

ವಿಕೆಟ್ ದಾಖಲೆ ವೀರ ರಾಜಿಂದರ್ ಗೋಯೆಲ್ ವಿಧಿವಶ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

10ನೇ ತರಗತಿ ಪರೀಕ್ಷೆ ಮಹತ್ವದ ನಿರ್ಧಾರ ತೆಗೆದುಕೊಂಡ ಆಂಧ್ರ ಸರ್ಕಾರ

(ನ್ಯೂಸ್ ಕಡಬ) newskadaba.com.ಆಂಧ್ರಪ್ರದೇಶ,ಜೂ.21:ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.ಕೊರೊನಾದಿಂದಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎಲ್ಲಾ ರಾಜ್ಯಗಳು ತಾತ್ಕಾಲಿಕವಾಗಿ ಮುಂದೂಡಿದ್ದವು. ಈಗ ಆಂಧ್ರಪ್ರದೇಶದ ಜಗನ್‍ಮೋಹನ್ ರೆಡ್ಡಿ ಸರ್ಕಾರ 10ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶಿಸಿದೆ. ಈ ಸಂಬಂಧ ಸ್ಪಷ್ಟೀಕರಣ ನೀಡಿರುವ ಆಂಧ್ರಪ್ರದೇಶದ ಶಿಕ್ಷಣ ಸಚಿವ ಆದಿಮುಲಾಪು ಸುರೇಶ್, ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತ ಬಂದಿದೆ. ಹೀಗಾಗಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನೇ ರದ್ದು ಮಾಡಿದ್ದು ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.ಆಂಧ್ರ ಪ್ರದೇಶದಲ್ಲಿ ಈವರೆಗೆ

10ನೇ ತರಗತಿ ಪರೀಕ್ಷೆ ಮಹತ್ವದ ನಿರ್ಧಾರ ತೆಗೆದುಕೊಂಡ ಆಂಧ್ರ ಸರ್ಕಾರ Read More »

ಕರಾವಳಿ

ಬ್ರಹ್ಮಾವರ; ಬಾರಕೂರು ಚೌಳಿಕೆರೆಗೆ ಬಿದ್ದ ಕಾರು ಓರ್ವ ಸಾವು

(ನ್ಯೂಸ್ ಕಡಬ) newskadaba.com ಬ್ರಹ್ಮಾವರ,ಜೂ.21:  ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೆರೆಗೆ ಬಿದ್ದು ಓರ್ವ ಸಾವನ್ನಪ್ಪಿ ಇನ್ನೋರ್ವ ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದ ಘಟನೆ ಬಾರಕೂರು ಚೌಳಿಕೆರೆ ಬಳಿ ರವಿವಾರ ನಡೆದಿದೆ. ಮೃತ ದುರ್ದೈವಿಯನ್ನು ಉದ್ಯಮಿ ವಕ್ವಾಡಿಯ ಸಂತೋಷ ಶೆಟ್ಟಿ ಎಂದು ಗುರುತಿಸಲಾಗಿದ್ದು ಇವರು ಕೋಟೇಶ್ವರ ಸಮೀಪದ ಬೀಜಾಡಿಯಲ್ಲಿ ಶ್ರೀ ಲಕ್ಷ್ಮೀ ಗ್ಲಾಸ್ ಮತ್ತು ಫ್ಲೈ ವುಡ್ ಶಾಪ್ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    

ಬ್ರಹ್ಮಾವರ; ಬಾರಕೂರು ಚೌಳಿಕೆರೆಗೆ ಬಿದ್ದ ಕಾರು ಓರ್ವ ಸಾವು Read More »

ಕರಾವಳಿ, ಕರ್ನಾಟಕ

ಅಡಿಕೆಯಿಂದ ತಯಾರಾಯ್ತು ಸ್ಯಾನಿಟೈಸರ್ ➤ ಹೇಗಿದೆ ಗೊತ್ತ..!?

(ನ್ಯೂಸ್ ಕಡಬ) newskadaba.com ಶಿವಮೊಗ್ಗ,ಜೂ.21: ಯುವ ಉದ್ಯಮಿ ನಿವೇದನ್ ಅಡಿಕೆಯಿಂದ ಸ್ಯಾನಿಟೈಸರ್ ತಯಾರಿಸಿದ್ದಾರೆ.ಹಿಂದೆ ಅಡಿಕೆಯಲ್ಲಿ ಟೀ ಪುಡಿ ತಯಾರಿಸಿದ್ದರು. ನಂತರ ಸುಗಂಧ ದ್ರವ್ಯ, ಅಡಿಕೆ ಜ್ಯೂಸ್ ತಯಾರು ಮಾಡಿದ್ದರು. ಈಗ ಅಡಿಕೆಯಲ್ಲಿ ಸ್ಯಾನಿಟೈಸರ್ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.   ಅಡಿಕೆಯಲ್ಲಿರುವ ಆಯಂಟಿ ಮೈಕ್ರೋಬಿಯಲ್ ಪದಾರ್ಥ ತೆಗೆದು, ಗ್ಯಾಲಿಕ್ ಆಯಸಿಡ್, ಟ್ಯಾನಿಚ್ ಬಳಸಿಕೊಂಡು ಸ್ಯಾನಿಟೈಸರ್ ಸಿದ್ಧಪಡಿಸಲಾಗಿದೆ. ಅದರಲ್ಲಿ ಶೇ 70ರಷ್ಟು‌ ಆಲ್ಕೋಹಾಲ್‌ ಅಂಶವಿದೆ. ಯಾವುದೇ ಸಿಂಥೆಟಿಕ್ ಬಳಸದೆ‌ ನೈಸರ್ಗಿಕವಾಗಿ ತಯಾರು ಮಾಡಲಾಗಿದೆ, ಪರಿಮಳ ಬರಲು ಕಿತ್ತಳೆ‌ ಆಯಿಲ್ ಬಳಸಲಾಗಿದೆ ಎಂದು

ಅಡಿಕೆಯಿಂದ ತಯಾರಾಯ್ತು ಸ್ಯಾನಿಟೈಸರ್ ➤ ಹೇಗಿದೆ ಗೊತ್ತ..!? Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೈಕ್ ಸ್ಟಂಟ್ ಮಾಡಿ ಪ್ರಾಣ ಕಳೆದುಕೊಂಡ ಮೂವರು ಯುವಕರು

(ನ್ಯೂಸ್ ಕಡಬ) newskadaba.com.ಬೆಂಗಳೂರು,ಜೂ.21:ಬೆಳ್ಳಂಬೆಳಗ್ಗೆ ಬೈಕ್‍ನಲ್ಲಿ ಸ್ಟಂಟ್ ಮಾಡಲು ಹೋಗಿ ಮೂವರು ಯುವಕರು ಮೃತಪಟ್ಟ ಘಟನೆ ಯಲಹಂಕ ಸಮೀಪ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ರಸ್ತೆ ಖಾಲಿಯಿದೆ ಎಂದು ಬೈಕ್‍ನಲ್ಲಿ ಹೊರಟ ಯುವಕರು ಹುರುಪಿನಿಂದ ಸ್ಟಂಟ್ ಮಾಡಿದ್ದಾರೆ. ಈ ಸಂದರ್ಭ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾರೆ. ಮೃತರು ಬೆಂಗಳೂರಿನ ಗೋವಿಂದಪುರ ಪ್ರದೇಶದವರು ಎಂದು ತಿಳಿದು ಬಂದಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಬೈಕ್ ಸ್ಟಂಟ್ ಮಾಡಿ ಪ್ರಾಣ ಕಳೆದುಕೊಂಡ ಮೂವರು ಯುವಕರು Read More »

ಕರ್ನಾಟಕ

ಸುಳ್ಯದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಯೋಗ ದಿನಾಚರಣೆ

(ನ್ಯೂಸ್ ಕಡಬ) newskadaba.com. ಸುಳ್ಯ,ಜೂ.21: ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ. ಈ ಹಿನ್ನಲೆಯಲ್ಲಿ ಸುಳ್ಯ ನಗರ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಹಾಗೆಯೇ, ಸ್ವದೇಶಿ ಸಂಕಲ್ಪ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಯೋಗ ದಿನಾಚರಣೆ ಸಂದಭ್ದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಐ ಬಿ ಚಂದ್ರಶೇಖರ, ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ, ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ನಗರ ಪಂಚಾಯತ್ ಸದಸ್ಯರುಗಳಾದ ವಿನಯಕುಮಾರ್ ಕಂದಡ್ಕ, ಸುಧಾಕರ ಕುರುಂಜಿಭಾಗ್, ಬೂತ್

ಸುಳ್ಯದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಯೋಗ ದಿನಾಚರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಾಪತ್ತೆಯಾಗಿದ್ದ ಕಡಬದ ಯುವಕ ಉಡುಪಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com.ಕಡಬ,ಜೂ.21: ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಶೀನಪ್ಪ ಎಂಬವರ ಪುತ್ರ ಪೃಥ್ವಿ ಮೇ 15ರಂದು  ನಾಪತ್ತೆಯಾಗಿದ್ದರು. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಯುವಕನ್ನು ಪತ್ತೆಹಚ್ಚಿದ್ದಾರೆ. ಇಂದು ಉಡುಪಿ ಜಿಲ್ಲೆಯ ಕೋಟ ಎಂಬಲ್ಲಿ ಯವಕನಿರುವ ಖಚಿತ ಮಾಹಿತಿ ಪಡೆದು ಅಲ್ಲಿಗೆ ತೆರಲಿದ ಹೆಡ್ ಕಾನ್ಸ್ಟೇಬಲ್ ಮೋನಪ್ಪ ಗೌಡರು ಅಲ್ಲಿಂದ ಠಾಣೆಗೆ ಕರೆತಂದು ಆತನ ತಂದೆ ತಾಯಿಯೊಂದಿಗೆ ಮನೆಗೆ ಕಳುಹಿಸಿಕೊಡಲಾಗಿದೆ. ಇದರೊಂದಿಗೆ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

ನಾಪತ್ತೆಯಾಗಿದ್ದ ಕಡಬದ ಯುವಕ ಉಡುಪಿಯಲ್ಲಿ ಪತ್ತೆ Read More »

ಕರಾವಳಿ

ಕೊಯಿಲ: ಸಬಳೂರು ಶ್ರೀರಾಮ ಭಜನಾ ಮಂಡಳಿ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

(ನ್ಯೂಸ್ ಕಡಬ) newskadaba.com ಕಡಬ, ಜೂ.21. ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಅಯೋದ್ಯನಗರ ಶ್ರೀ ರಾಮ ಭಜನಾ ಮಂಡಳಿ ವತಿಯಿಂದ ಲಡಕ್ ಗಡಿ ಭಾಗದಲ್ಲಿ ಚೀನಾ ಯೋಧರೊಂದಿಗೆ ಹೋರಾಡಿ ದೇಶಕ್ಕಾಗಿ ಬಲಿದಾನಗೈದಿರುವ ನಮ್ಮ ದೇಶದ ಇಪ್ಪತ್ತು ವೀರ ಯೋಧರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಶನಿವಾರ ಭಜನಾ ಮಂದಿರದಲ್ಲಿ ನಡೆಯಿತು. ವೀರ ಮರಣವನ್ನಪ್ಪಿದ ಯೋಧರಿಗೆ ನುಡಿನಮನ ಸಲ್ಲಿಸಿ, ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಆಲಂಕಾರು ಸಿ . ಎ ಬ್ಯಾಂಕ್ ನಿರ್ದೇಶಕ ರಾಮಚಂದ್ರ ನಾಯ್ಕ ಏಣಿತ್ತಡ್ಕ, ಶ್ರೀ

ಕೊಯಿಲ: ಸಬಳೂರು ಶ್ರೀರಾಮ ಭಜನಾ ಮಂಡಳಿ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ Read More »

ಕರಾವಳಿ

ಕೋವಿಡ್ -19 ಸಂಕಷ್ಟ➤ ನಷ್ಟದ ಭೀತಿಯಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.21:   ಕೋವಿಡ್ 19 ಸಂಕಷ್ಟದಿಂದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಹಿವಾಟಿಗೂ ತೊಮದರೆ ಉಂಟಾಗಿದೆ. ಒಕ್ಕೂಟದಲ್ಲಿ ಹಾಲು ಶೇಖರಣೆ ಏರಿಕೆಯಾಗಿದ್ದು, ನಿತ್ಯ 5 ಲಕ್ಷ ಕೆ.ಜಿ. ಗೂ ಸಧೀಕ ಹಾಲು ಸಂಗ್ರಹಣೆಯಾಗುತ್ತಿದೆ. ಕೋವಿಡ್ -19 ರ ಸಮಸ್ಯೆಯಿಮದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕರ್ನಾಟಕ ಹಾಲು ಮಹಾಮಂಡಳಿಗೆ ನಿತ್ಯ ಮಹಾಮಂಡಳಿಗೆ ನಿತ್ಯ 86.73 ಲಕ್ಷ ಲೀಟರ್ ಹಾಲು ಸಂಗ್ರಹನೆಯಾಗುತ್ತಿದ್ದು, ರಾಜ್ಯದಲ್ಲಿ ಹಾಲು ಮತ್ತು

ಕೋವಿಡ್ -19 ಸಂಕಷ್ಟ➤ ನಷ್ಟದ ಭೀತಿಯಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ Read More »

ಕರಾವಳಿ, ಕರ್ನಾಟಕ

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿದ್ದ ಬಾಲಕನಿಗೆ ಕೊರೊನಾ

(ನ್ಯೂಸ್ ಕಡಬ) newskadaba.com.ಬೆಳಗಾವಿ,ಜೂ.21:ಜೂನ್ 25 ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿದ್ದ 16 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಕಲಬಾಂವಿಯಲ್ಲಿ ನಡೆದಿದೆ. ಈ ಬಾಲಕ ಹೊರರಾಜ್ಯದ ಹಿನ್ನೆಲೆ ಹೊಂದಿದ್ದರಿಂದ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತ ಕಲಬಾಂವಿಯಲ್ಲಿ ಮುಂಬರಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿತ್ತು ಆದರೆ ಈಗ ಆತನಿಗೆ ಸೋಂಕು ತಗುಲಿರುವುದರಿಂದ ಪರೀಕ್ಷೆ ಎದುರಿಸುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಬಾಲಕ ಈ ಹಿಂದೆ ಚೆನ್ನೈನಲ್ಲಿರುವ ಆತನ ಅಕ್ಕನ ಮನೆಗೆ ಹೋಗಿ ಬಂದಿದ್ದ

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿದ್ದ ಬಾಲಕನಿಗೆ ಕೊರೊನಾ Read More »

ಕರಾವಳಿ, ಕರ್ನಾಟಕ
Scroll to Top