ಬ್ರಹ್ಮಾವರ; ಬಾರಕೂರು ಚೌಳಿಕೆರೆಗೆ ಬಿದ್ದ ಕಾರು ಓರ್ವ ಸಾವು

(ನ್ಯೂಸ್ ಕಡಬ) newskadaba.com ಬ್ರಹ್ಮಾವರ,ಜೂ.21:  ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೆರೆಗೆ ಬಿದ್ದು ಓರ್ವ ಸಾವನ್ನಪ್ಪಿ ಇನ್ನೋರ್ವ ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದ ಘಟನೆ ಬಾರಕೂರು ಚೌಳಿಕೆರೆ ಬಳಿ ರವಿವಾರ ನಡೆದಿದೆ.


ಮೃತ ದುರ್ದೈವಿಯನ್ನು ಉದ್ಯಮಿ ವಕ್ವಾಡಿಯ ಸಂತೋಷ ಶೆಟ್ಟಿ ಎಂದು ಗುರುತಿಸಲಾಗಿದ್ದು ಇವರು ಕೋಟೇಶ್ವರ ಸಮೀಪದ ಬೀಜಾಡಿಯಲ್ಲಿ ಶ್ರೀ ಲಕ್ಷ್ಮೀ ಗ್ಲಾಸ್ ಮತ್ತು ಫ್ಲೈ ವುಡ್ ಶಾಪ್ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Scroll to Top