Mangalore

ಪುತ್ತೂರು : ಗೃಹರಕ್ಷಕ ದಳದ ಜಗನ್ನಾಥ್ ಸಾರ್ಜೆಂಟ್ ಆಗಿ ಪದೋನ್ನತಿ

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 12: ಗೃಹರಕ್ಷಕ ದಳದವರು ಇತರರಂತಲ್ಲ, ಅವರ ಮೇಲೆ ಸಾಮಾಜಿಕ ಹೊಣೆಗಾರಿಕೆಯ ಜವಾಬ್ದಾರಿ ಇದೆ. ಪ್ರಸ್ತುತ ದಿನದಲ್ಲಿ ತಮ್ಮ ಕರ್ತವ್ಯದ ಜೊತೆಗೆ ಕೋವಿಡ್-19ಗೆ ಸಂಬಂಧಿಸಿ ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿ, ಪ್ರೀತಿ ಮತ್ತು ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು ಅವರು ಹೇಳಿದರು.     ಪುತ್ತೂರು ಗೃಹರಕ್ಷಕ ದಳದಲ್ಲಿ […]

ಪುತ್ತೂರು : ಗೃಹರಕ್ಷಕ ದಳದ ಜಗನ್ನಾಥ್ ಸಾರ್ಜೆಂಟ್ ಆಗಿ ಪದೋನ್ನತಿ Read More »

ಕರಾವಳಿ, ಕರ್ನಾಟಕ

ಕನಕಮಜಲು: ವೇಗವಾಗಿ ಬರುತ್ತಿದ್ದ ಕಾರು ಬ್ಯಾರಿಗೇಟ್‌ ಗೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಕನಕಮಜಲು, ಅ.12: ಪುತ್ತೂರು ಬದಿಯಿಂದ ವೇಗವಾಗಿ ಬರುತ್ತಿದ್ದ ಕಾರು ತಡೆಗೋಡೆಯಂತೆ ನಿರ್ಮಿಸಿದ್ದ ಬ್ಯಾರಿಕೇಟ್‌ ಗೆ ಹೊಡೆದ ಘಟನೆ ಇಂದು ಕನಕಮಜಲಿನ ನರಿಯೂರು ಎಂಬಲ್ಲಿ ನಡೆದಿದೆ.     ಅಪಘಾತಕ್ಕೀಡಾದ ಕಾರು ಈ ಸಂದರ್ಭದಲ್ಲಿ ಸ್ವಲ್ಪ ಮಳೆ ಸುರಿಯುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಯಾವುದೇ ಅಪಾಯವಿಲ್ಲದೆ ಅದೃಷ್ಟವಶಾತ್‌ ನಿಂದ ಪಾರಾಗಿದ್ದಾರೆ.  

ಕನಕಮಜಲು: ವೇಗವಾಗಿ ಬರುತ್ತಿದ್ದ ಕಾರು ಬ್ಯಾರಿಗೇಟ್‌ ಗೆ ಢಿಕ್ಕಿ Read More »

ಕರಾವಳಿ, ಕ್ರೈಮ್ ನ್ಯೂಸ್

ವಿಜಯಲಕ್ಷ್ಮಿ ದರ್ಶನ್‍ಗೆ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 12: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್ ಆಗಿದ್ದಾರೆ. ಅಂತೆಯೇ ಇದೀಗ ಅವರು ತಮ್ಮ ಅಭಿಮಾನಿಗಳ ಜೊತೆ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವಿಜಯಲಕ್ಷ್ಮಿ ಹೊಸ ಉದ್ಯಮವನ್ನು ಆಂಭಿಸಿದ್ದರು. ‘ಮೈ ಫ್ರೆಶ್ ಬಾಸ್ಕೆಟ್’ ಎಂಬ ಆನ್ ಲೈನ್ ಆ್ಯಪ್ ಒಂದನ್ನು ತೆರೆದು ರೈತರಿಗೆ ನೆರವಾಗಿದ್ದರು. ಆ ಆ್ಯಪ್ ಮೂಲಕ ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ನೀಡಬಹುದಾಗಿತ್ತು. ಅಲ್ಲದೆ ಗ್ರಾಹಕರಿಗೂ

ವಿಜಯಲಕ್ಷ್ಮಿ ದರ್ಶನ್‍ಗೆ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ Read More »

ಕರ್ನಾಟಕ

ಶ್ರೀನಗರದಲ್ಲಿ ಎನ್ಕೌಂಟರ್ ➤ ಎಲ್‌ಇಟಿ ಟಾಪ್ ಕಮಾಂಡರ್ ಸೇರಿ ಇಬ್ಬರು ಉಗ್ರರು ಹತ

(ನ್ಯೂಸ್ ಕಡಬ) newskadaba.com ಶ್ರೀನಗರ, ಅ.12: ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ನಡೆದಿದೆ.     ಶ್ರೀನಗರದ ಬಾರ್ಜುಲ್ಲಾ-ರಾಮ್ಬಾಘ್ ಪ್ರದೇಶದಲ್ಲಿ ಉಗ್ರರು ಅಡಗಿಕುಳಿತಿರುವ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಸಿಆರ್’ಪಿಎಫ್ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಇದೀಗ ಎಲ್‌ಇಟಿ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಸೇರಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.ಕಾರ್ಯಾಚರಣೆಯನ್ನು

ಶ್ರೀನಗರದಲ್ಲಿ ಎನ್ಕೌಂಟರ್ ➤ ಎಲ್‌ಇಟಿ ಟಾಪ್ ಕಮಾಂಡರ್ ಸೇರಿ ಇಬ್ಬರು ಉಗ್ರರು ಹತ Read More »

ರಾಷ್ಟ್ರೀಯ ನ್ಯೂಸ್

ಸುಬ್ರಹ್ಮಣ್ಯ: ವಿದ್ಯುತ್‌ ತಂತಿ ತಾಗಿ ಮೃತಪಟ್ಟ ರಾಷ್ಟ್ರ ಪಕ್ಷಿ ನವಿಲು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.12: ಕುಕ್ಕೆ ಸುಬ್ರಹ್ಮಣ್ಯದ ಕೆ ಎಸ್‌ ಎಸ್‌ ಕಾಲೇಜಿನ ಪ್ರಯಾಣಿಕರ ಬಸ್‌ ತಂಗುದಾನದ ಬಳಿ ನವಿಲೊಂದು ತನ್ನ ರೆಕ್ಕೆ ಬಿಚ್ಚಿ ಹಾರುವ ಸಂದರ್ಭದಲ್ಲಿ ವಿದ್ಯುತ್‌ ತಂತಿಗೆ ಅದರ ರೆಕ್ಕೆ ತಾಗಿ ಸಾವಿಗೀಡಾದ ಘಟನೆ ಕಳೆದ ದಿನ ನಡೆದಿದೆ.     ನವಿಲು ಮರದಿಂದ ಬೇರೆಕಡೆಗೆ ಹಾರುವ ಸಂದರ್ಭದಲ್ಲಿ ನವಿಲಿನ ರೆಕ್ಕೆಗೆ ವಿದ್ಯುತ್‌ ತಂತಿ ತಾಗಿ ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಬ್ರಹ್ಮಣ್ಯ: ವಿದ್ಯುತ್‌ ತಂತಿ ತಾಗಿ ಮೃತಪಟ್ಟ ರಾಷ್ಟ್ರ ಪಕ್ಷಿ ನವಿಲು Read More »

ಕರಾವಳಿ

ಆತ್ಮ ನಿರ್ಭರ ಭಾರತ ➤ ಉದ್ಯೋಗ ನೈಪುಣ್ಯ ತರಬೇತಿ ಶಿಬಿರಕ್ಕೆ ಪಂಜದಲ್ಲಿ ಚಾಲನೆ

(ನ್ಯೂಸ್ ಕಡಬ) newskadaba.com ಪಂಜ, ಅ. 12: ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರಕ್ಕೆ ಇಂದು ಪಂಜದಲ್ಲಿ ಚಾಲನೆ ನೀಡಿದರು.   ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಸಹಕಾರ ಭಾರತಿ ದ. ಕ ಜಿಲ್ಲೆ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಪಂಜ ಹಾಗೂ ಏನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದೊಂದಿಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಇಂದು ಶ್ರೀ ಪರಿವಾರ ಪಂಚಲಿಂಗೇಶ್ವರ

ಆತ್ಮ ನಿರ್ಭರ ಭಾರತ ➤ ಉದ್ಯೋಗ ನೈಪುಣ್ಯ ತರಬೇತಿ ಶಿಬಿರಕ್ಕೆ ಪಂಜದಲ್ಲಿ ಚಾಲನೆ Read More »

ಕರಾವಳಿ, ಕರ್ನಾಟಕ

ದುಗಲಡ್ಕ : ಪಿಕಪ್ ವಾಹನ ಪಲ್ಟಿ

(ನ್ಯೂಸ್ ಕಡಬ) newskadaba.com ದುಗಲಡ್ಕ, ಅ. 12: ದುಗಲಡ್ಕ ಸಮೀಪದಲ್ಲಿ ಕಳೆದ ದಿನ ಸಂಜೆ ವೇಳೆಯಲ್ಲಿ ಪಿಕಪ್ ವಾಹನವೊಂದು ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ವಾಹನ ಚರಂಡಿಗೆ ಉರುಳಿದೆ. ಪರಿಣಾಮ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.  

ದುಗಲಡ್ಕ : ಪಿಕಪ್ ವಾಹನ ಪಲ್ಟಿ Read More »

ಕರಾವಳಿ, ಕರ್ನಾಟಕ

ನೆಹರುನಗರದಲ್ಲಿ ಆಟವಾಡುತ್ತಿದ್ದ ಬಾಲಕ ನಾಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.12: ಕಬಕ ಗ್ರಾಮದ ನೆಹರು ನಗರ ಎಂಬಲ್ಲಿ ಆಟವಾಡುತ್ತಿದ್ದ ಬಾಲಕ ರಾತ್ರಿಯಾದರೂ ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಅ.9 ರಂದು ನಡೆದಿದೆ.     ನಾಪತ್ತೆಯಾದ ಬಾಲಕ ಕಬಕ ನೆಹರುನಗರ ನಿವಾಸಿ ಮಹಮ್ಮದ್‌ ಆಲಿಯವರ 9 ವರ್ಷದ ಬಾಲಕ ಫೈರೋಜ್‌ ಎಂದ ಗುರುತಿಸಲಾಗಿದೆ. ಬಾಲಕ ನಾಪತ್ತೆಯಾದ ಕುರಿತು ತಡವಾಗಿ ದೂರು ನೀಡಿದ್ದಾರೆ. ಬಳಿಕ ಎಲ್ಲೂ ಸುಳಿವು ಸಿಗದ ಹಿನ್ನಲೆಯಲ್ಲಿ ಬಾಲಕನ ತಾಯಿ ಕಳೆದ ದಿನ ದೂರು ನೀಡಿದ್ದು, ಪುತ್ತೂರು ಮಹಿಳಾ ಠಾಣಾ

ನೆಹರುನಗರದಲ್ಲಿ ಆಟವಾಡುತ್ತಿದ್ದ ಬಾಲಕ ನಾಪತ್ತೆ Read More »

ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ: ಆಶ್ಲೇಷ ನಕ್ಷತ್ರದಿಂದಾಗಿ ಭಕ್ತರ ನೂಕುನುಗ್ಗಲು

(ನ್ಯೂಸ್ ಕಡಬ) newskadaba.com ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಅ.12: ಕೊರೋನಾ ಹಿನ್ನಲೆಯಲ್ಲಿ ಸೇವೆಗಳಿಗೆ ಮಿತಿ ಇರುವುದರಿಂದ ಭಕ್ತರು ಸರತಿ ಸಾಲಿನಲ್ಲಿ ಹಿಂದಿನ ದಿನವೇ ನಿಲ್ಲಲಾಗಿದ್ದ ದೃಶ್ಯ ಇದೀಗ ಕಂಡುಬಂದಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೆಲವು ದಿನಗಳಿಂದ ಹೆಚ್ಚಿನ ಭಕ್ತರು ಭೆಟಿ ನೀಡುತ್ತಿದ್ದು, ಇಂದಿನ ಸೇವೆಗಾಗಿ ನಿನ್ನೆಯೇ ಭಕ್ತರು ಕ್ಯೂ ನಿಂತಿದ್ದಾರೆ. ಕುಕ್ಕೆಯಲ್ಲಿ ಸೇವೆಗಳಿಗೆ ರಶೀದಿಯನ್ನು ಬೆಳಿಗ್ಗೆ 7 ಗಂಟೆಗೆ ನೀಡಲು ಪ್ರಾರಂಭಿಸುತ್ತಾರೆ. ಆದರೆ, ಇತ್ತ ಭಕ್ತರು  ಇಂದು ಆಶ್ಲೇಷ ನಕ್ಷತ್ರವಿದ್ದು, ವಿಶೇಷ ದಿನವಾಗಿರುವುದರಿಂದ ಹೊರ ರಾಜ್ಯ,

ಕುಕ್ಕೆ ಸುಬ್ರಹ್ಮಣ್ಯ: ಆಶ್ಲೇಷ ನಕ್ಷತ್ರದಿಂದಾಗಿ ಭಕ್ತರ ನೂಕುನುಗ್ಗಲು Read More »

ಕರಾವಳಿ

ಭಾಸ್ಕರ್‌ ಶೆಟ್ಟಿ ಹತ್ಯೆ ಪ್ರಕರಣ ➤ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್.!!

(ನ್ಯೂಸ್ ಕಡಬ) newskadaba.com ಉಡುಪಿ, ಅ.12: 2016 ಜುಲೈ 28ರಂದು  ಕರಾವಳಿ ಭಾಗದಲ್ಲಿ ಸಂಚಲನ ಸೃಷ್ಠಿಸಿದ ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗಾ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ನೋಟಿಸ್ ನೀಡಿದೆ.  ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ನಡೆದಿದ್ದು, ನಂತರ ಶವವನ್ನು ಹೋಮಕುಂಡದಲ್ಲಿ ಸುಟ್ಟು ಹಾಕಲಾಗಿತ್ತು.ಇದೀಗಾ ಉದ್ಯಮಿ ಭಾಸ್ಕರ್‌ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ ಜ್ಯೋತಿಷಿ ನಿರಂಜನ್‌ ಭಟ್‌‌ ಸಲ್ಲಿಸಿದ್ದ ಜಾಮೀನು ಕೋರಿ ಅರ್ಜಿಯ ಸಂಬಂಧ,  ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌‌ ನೀಡಿದೆ.  

ಭಾಸ್ಕರ್‌ ಶೆಟ್ಟಿ ಹತ್ಯೆ ಪ್ರಕರಣ ➤ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್.!! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top