lorry accident

ರೈಲ್ವೇ ಸೇತುವೆಯ ಸೇಫ್ ಗಾರ್ಡ್ ಗೆ ಕಂಟೇನರ್ ಲಾರಿ ಢಿಕ್ಕಿ!

(ನ್ಯೂಸ್ ಕಡಬ) newskadaba.com ವಿಟ್ಲ, ಫೆ. 21. ಕಂಟೇನರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ರೈಲ್ವೇ ಬ್ರಿಡ್ಜ್ ನ ಸೇಫ್ ಗಾರ್ಡ್ ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಕಬಕ ಸಮೀಪದ ಮಿತ್ತೂರು ಎಂಬಲ್ಲಿ ನಡೆದಿದೆ. ರೈಲ್ವೇ ಸೇತುವೆಗೆ ಘನ ವಾಹನಗಳು ತಾಗದಂತೆ ಮುಂಜಾಗರೂಕತಾ ದೃಷ್ಟಿಯಿಂದ  ಈ ಕಂಬವನ್ನು ಅಳವಡಿಸಲಾಗಿರುತ್ತದೆ. ಇದಕ್ಕೆ ಕಂಟೇನರ್ ಲಾರಿಯೊಂದು ಢಿಕ್ಕಿ ಹೊಡೆದಿದ್ದು, ಪರಿಣಾಮ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಸ್ಥಳೀಯರ ಸಹಕಾರದಿಂದ ಕಂಬವನ್ನು ತೆರವುಗೊಳಿಸಿ ವಾಹನ […]

ರೈಲ್ವೇ ಸೇತುವೆಯ ಸೇಫ್ ಗಾರ್ಡ್ ಗೆ ಕಂಟೇನರ್ ಲಾರಿ ಢಿಕ್ಕಿ! Read More »

ಕರಾವಳಿ

ರೋಲರ್ ಸಾಗಾಟದ ಲಾರಿ ಓವರ್ ಬ್ರಿಡ್ಜ್ ಗೆ ಢಿಕ್ಕಿ – ಕೆಲಕಾಲ ಸಂಚಾರ ವ್ಯತ್ಯಯ

(ನ್ಯೂಸ್ ಕಡಬ) newskadaba.com, ಪುತ್ತೂರು, ಫೆ. 13. ರೋಡ್ ರೋಲರ್ ವಾಹನವನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯೊಂದು ರೈಲ್ವೇ ಓವರ್ ಬ್ರಿಡ್ಜ್ ನ ಅಡಿಯಲ್ಲಿ ಸಿಲುಕಿಕೊಂಡ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆಯಾದ ಘಟನೆ ಬಿಸಿರೋಡಿನ ಕೈಕಂಬ ಸಮೀಪದ ಮೊಡಂಕಾಪು ಎಂಬಲ್ಲಿ ನಡೆದಿದೆ. ಖಾಸಗಿ ಗುತ್ತಿಗೆ ಸಂಸ್ಥೆಗೆ ಸೇರಿದ ಲಾರಿ ಇದಾಗಿದ್ದು, ಬೆಂಜನಪದವು ಸೈಟ್ ನಿಂದ ಸವಣೂರಿನಲ್ಲಿ ನಡೆಯಲಿರುವ ಕಾಮಗಾರಿಗೆ ರೋಲರ್ ನ್ನು ಲಾರಿಯಲ್ಲಿ ತುಂಬಿಸಿಕೊಂಡು ಹೋಗಲಾಗಿತ್ತು. ಈ ವೇಳೆ ಮೊಡಂಕಾಪು ಎಂಬಲ್ಲಿ ರೈಲ್ವೇ ಸೇತುವೆಯ ಅಡಿಭಾಗದಲ್ಲಿ ಕ್ರಾಸ್ ಮಾಡಲು

ರೋಲರ್ ಸಾಗಾಟದ ಲಾರಿ ಓವರ್ ಬ್ರಿಡ್ಜ್ ಗೆ ಢಿಕ್ಕಿ – ಕೆಲಕಾಲ ಸಂಚಾರ ವ್ಯತ್ಯಯ Read More »

ಕರಾವಳಿ

ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಲಾರಿ – ಚಾಲಕ, ಕ್ಲೀನರ್ ಪಾರು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 22. ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯ ಚರಂಡಿಗೆ ಉರುಳಿಬಿದ್ದಿದ್ದು, ಚಾಲಕ ಮತ್ತು ಕ್ಲೀನರ್ ಇಬ್ಬರು ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಶುಕ್ರವಾರ ಮುಂಜಾನೆ ದಾಸಕೋಡಿ ಎಂಬಲ್ಲಿ ನಡೆದಿದೆ. ಗಾಯಳುಗಳನ್ನು ಆರಿಫ್ ಮತ್ತು ರಿಯಾಜ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಇದ್ದಿಲು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯು ಚರಂಡಿಗೆ ಬಿದ್ದಿದ್ದು, ಚಾಲಕ ನಿದ್ದೆಯ ಮಂಪರಿನಲ್ಲಿ ವಾಹನ ಚಲಾಯಿಸಿದ ಪರಿಣಾಮ ಈ ಅಪಘಾತ ಸಂಭವಿಸಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಲಾರಿ – ಚಾಲಕ, ಕ್ಲೀನರ್ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್

ಚಾರ್ಮಾಡಿ ಘಾಟ್ ನಲ್ಲಿ 100 ಅಡಿ ಪ್ರಪಾತಕ್ಕೆ ಉರುಳಿದ ಲಾರಿ- ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಚಾರ್ಮಾಡಿ, ಸೆ. 16. ಮಳೆಯಿಂದಾಗಿ ಮಂಜು ಆವರಿಸಿಕೊಂಡಿದ್ದ ಪರಿಣಾಮ ಲಾರಿಯೊಂದು ನೂರು ಅಡಿ ಪ್ರಪಾತಕ್ಕೆ ಉರುಳಿಬಿದ್ದ ಘಟನೆ ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ನಡೆದಿದೆ. ನೀರಿನ ಬಾಟಲ್ ಗಳನ್ನು ತುಂಬಿದ್ದ ಲಾರಿ ಶುಕ್ರವಾರದಂದು ರಾತ್ರಿ ಪುತ್ತೂರಿನಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ವೇಳೆ ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ದಾರಿ ಕಾಣದೇ ರಸ್ತೆ ತಡೆಗೋಡೆಗೆ ಢಿಕ್ಕಿ ಹೊಡೆದು 100 ಅಡಿ ಪ್ರಪಾತಕ್ಕೆ ಬಿದ್ದಿದೆ. ಈ ವೇಳೆ ಅಲ್ಲೇ ಇದ್ದ ದೈತ್ಯ ಮರಕ್ಕೆ ಲಾರಿ ಸಿಲುಕಿಕೊಂಡ

ಚಾರ್ಮಾಡಿ ಘಾಟ್ ನಲ್ಲಿ 100 ಅಡಿ ಪ್ರಪಾತಕ್ಕೆ ಉರುಳಿದ ಲಾರಿ- ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಿಯರ್ ಸಾಗಾಟದ ಲಾರಿ ಪಲ್ಟಿ

(ನ್ಯೂಸ್ ಕಡಬ) newskadaba.com ಅರಂತೋಡು, ಆ. 04. ಖಾಲಿ ಬಿಯರ್ ಬಾಟಲಿ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಅರಂತೋಡು ಸಮೀಪದ ತಿರುವಿನಲ್ಲಿ ಕಳೆದ ರಾತ್ರಿ ನಡೆದಿರುವ ಕುರಿತು ವರದಿಯಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಬಿಯರ್ ಸಾಗಾಟದ ಲಾರಿ ಪಲ್ಟಿ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಮನೆಮೇಲೆ ಮಗುಚಿಬಿದ್ದ ಲಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 22. ನಿಯಂತ್ರಣ ತಪ್ಪಿದ ಲಾರಿಯೊಂದು ಮನೆಮೇಲೆ ಬಿದ್ದ ಘಟನೆ ತಾಲೂಕಿನ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ನಡೆದಿದೆ. ಭಜರಂಗಿ ರೋಡ್ ಲೈನ್ಸ್ ಸಂಸ್ಥೆಗೆ ಸೇರಿದ ಲಾರಿ, ಮಂಗಳೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಪರಿಣಾಮ ಲಾರಿಯಲ್ಲಿದ್ದ ಕೆಂಪು ಇಟ್ಟಿಗೆ ಕೆಳಕ್ಕೆ ಬಿದ್ದು ಚೆಲ್ಲಾಪಿಲ್ಲಿಯಾಗಿದೆ. ರಸ್ತೆ ಬದಿ ರಾಷ್ಟ್ರೀಯ ಹೆದ್ದಾರಿಯವರು ಹಾಕಿದ್ದ ತಡೆ ಬೇಲಿ ಮುರಿದು ಮನೆಯ ಶೆಡ್ ಮೇಲೆ ಲಾರಿ ಮಗುಚಿ ಬಿದ್ದಿದೆ ಎನ್ನಲಾಗಿದೆ.

ಬಂಟ್ವಾಳ: ಮನೆಮೇಲೆ ಮಗುಚಿಬಿದ್ದ ಲಾರಿ Read More »

ಕರಾವಳಿ

ಲಾರಿ ಹರಿದು ಬೈಕ್ ಸಹಸವಾರ ಮೃತ್ಯು..!

(ನ್ಯೂಸ್ ಕಡಬ) newskadaba.com ರಾಯಚೂರು, ಡಿ. 24. ಲಾರಿ ಹರಿದು ಬೈಕ್ ನ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಮಸ್ಕಿ ತಾಲ್ಲೂಕಿನ ಬೇಡರ ಕಾರಲಕುಂಟಿ ಗ್ರಾಮದ ಬಳಿ ಸಂಭವಿಸಿದೆ. ಮೃತರನ್ನು ಲಿಂಗಸುಗೂರು ತಾಲ್ಲೂಕಿನ ಯರಗಂಟಿ ಗ್ರಾಮದ ಶಿವಗ್ಯಾನಪ್ಪ ತಳವಾರ (38) ಎಂದು ಗುರುತಿಸಲಾಗಿದೆ. ಬೈಕ್ ಸವಾರನಿಗೆ ಯಾವುದೇ ಗಾಯಗಳಾಗಿಲ್ಲ. ಮಸ್ಕಿಯಿಂದ ಲಿಂಗಸುಗೂರಿಗೆ ಬೈಕ್ ನಲ್ಲಿ ತೆರಳುವಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಲಾರಿ ಹರಿದು ಬೈಕ್ ಸಹಸವಾರ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top