koila

ಕೊೖಲ ಗ್ರಾ.ಪಂಚಾಯತ್ ► ಜಮಾಬಂದಿ ಸಭೆ

(ನ್ಯೂಸ್ ಕಡಬ) newskadaba.com ಕಡಬ,ಸೆ.23. ಕೊೖಲ ಗ್ರಾಮ ಪಂಚಾಯಿತಿಯ ಜಮಾಬಂದಿ ಕಾರ್ಯಕ್ರಮ ಗ್ರಾ.ಪಂ.ಅಧ್ಯಕ್ಷೆ ಮೀನಾಕ್ಷಿ ಬುಡಲೂರು ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ದ.ಕ.ಜಿ.ಪಂ.ಉಪಕಾರ್ಯದರ್ಶಿ ಉಮೇಶ್ ಎನ್.ಆರ್.ಜಮಾಬಂದಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ 2016-17ನೇ ಸಾಲಿನ ಲೆಕ್ಕಪತ್ರಗಳ ದಾಖಲಾತಿ ಪರಿಶೀಲನೆ ಮತ್ತು ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ನಡೆಸಲಾಯಿತು. ಉಪಾಧ್ಯಕ್ಷೆ ವಿಜಯಶೇಖರ ಅಂಬಾ, ಸದಸ್ಯರುಗಳಾದ ಲಲಿತಾ, ಸುಜಾತ ಶೆಟ್ಟಿ, ಕೆ.ಎ.ಸುಲೈಮಾನ್, ಬೀಪಾತುಮ್ಮ, ಸುಧೀಶ್ ಶೆಟ್ಟಿ, ಹೇಮಾ, ವಿನೋಧರ ಮಾಳ, ತಿಮ್ಮಪ್ಪ ಗೌಡ, ಹರಿಣಿ ಉಪಸ್ಥಿತರಿದ್ದರು. ಪಿಡಿಒ ನಮಿತಾ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರು. ಸಿಬ್ಬಂದಿಗಳಾದ ರಾಜೇಂದ್ರ, […]

ಕೊೖಲ ಗ್ರಾ.ಪಂಚಾಯತ್ ► ಜಮಾಬಂದಿ ಸಭೆ Read More »

ಕರಾವಳಿ

ಏಣಿತಡ್ಕ ಶಿರಾಡಿ ದೈವಸ್ಥಾನಕ್ಕೆ ಶಾಸಕರ ಭೇಟಿ ► ಕಾಮಗಾರಿ ವೀಕ್ಷಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.11, ಕೊೖಲ ಗ್ರಾಮದ ಏಣಿತಡ್ಕ ಕಾಲೋನಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶಿರಾಡಿ ದೈವಸ್ಥಾನಕ್ಕೆ ಸುಳ್ಯ ಶಾಸಕ ಎಸ್.ಅಂಗಾರ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಇಲ್ಲಿನ ಬಿಜೆಪಿ ಮುಖಂಡ ಮಾತನಾಡಿ ಹಿಂದಿನ ಚುನಾವಣೆಯಲ್ಲಿ ಕಾರಣಿಕ ದೈವವಾದ ಏಣಿತಡ್ಕ ಶಿರಾಡಿ ದೈವಕ್ಕೆ ಶಾಸಕರ ಗೆಲುವಿಗೆ ಹರಕೆ ಹೇಳಲಾಗಿತ್ತು. ಜಿಲ್ಲೆಯಲ್ಲಿ ಎಲ್ಲಾ ಬಿಜೆಪಿ ಸಂಪೂರ್ಣ ನೆಕಚ್ಚಿದರೂ ಸುಳ್ಯ ಕ್ಷೇತ್ರದಲ್ಲಿ ಅಂಗಾರ ಅವರು ಶಾಸಕರಾಗಿ ಮತ್ತೆ ಆಯ್ಕೆಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ಶಾಸಕರು ಗೆಲ್ಲುವುದರೊಂದಿಗೆ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ

ಏಣಿತಡ್ಕ ಶಿರಾಡಿ ದೈವಸ್ಥಾನಕ್ಕೆ ಶಾಸಕರ ಭೇಟಿ ► ಕಾಮಗಾರಿ ವೀಕ್ಷಣೆ Read More »

ಕರಾವಳಿ

ಕೊಯಿಲ ಗ್ರಾಮ ಪಂಚಾಯತ್ ಸದಸ್ಯ ವಿಷ ಸೇವಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಸೆ.10. ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮ ಪಂಚಾಯತ್ ಸದಸ್ಯರೋರ್ವರು ಶುಕ್ರವಾರದಂದು ವಿಷ ಸೇವಿಸಿ‌ದ್ದು, ಶನಿವಾರ ರಾತ್ರಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೊಯಿಲ ಗ್ರಾಮ ಪಂಚಾಯತಿ ಸದಸ್ಯ, ವಳಕಡಮ ನಿವಾಸಿ ದಿ| ವೆಂಕಪ್ಪ ಕುಂಬಾರ ಎಂಬವರ ಪುತ್ರ ನಾಗೇಶ್ ಕುಂಬಾರ (30) ಎಂದು ಗುರುತಿಸಲಾಗಿದೆ. ಕೈ ಸಾಲದ ಬಾಧೆಯಿಂದ ಬಳಲುತ್ತಿದ್ದರೆನ್ನಲಾಗಿದ್ದು, ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿದೆ.

ಕೊಯಿಲ ಗ್ರಾಮ ಪಂಚಾಯತ್ ಸದಸ್ಯ ವಿಷ ಸೇವಿಸಿ ಆತ್ಮಹತ್ಯೆ Read More »

ಕರಾವಳಿ

APL ಪಡಿತರ ಕಾರ್ಡನ್ನು BPL ಆಗಿ ಬದಲಾಯಿಸಲು ಹೋಗಿ ವಂಚಿತರಾದ ► ಎಂಡೋ ಸತ್ರಸ್ತ ಕುಟುಂಬಗಳು

(ನ್ಯೂಸ್ ಕಡಬ) newskadaba.com ಕಡಬ,ಸೆ.06, ಜಿಲ್ಲಾಧಿಕಾರಿಗಳ ಆದೇಶದಂತೆ ಎಂಡೋ ಸಂತ್ರಸ್ತರ ಕೆಲವು ಕುಟುಂಬಗಳು ತಮ್ಮ ಎ.ಪಿಎಲ್ ಪಡಿತರ ಚೀಟಿಯನ್ನು ಬಿಪಿಎಲ್ ಕಾರ್ಡಾಗಿ ಬದಲಾಯಿಸಲು ಹೋಗಿ ಅತ್ತ ಎಪಿಎಲ್ ಇಲ್ಲ ಇತ್ತ ಬಿಪಿಎಲ್ ಪಡಿತರ ಚೀಟಿ  ಕೂಡಾ ಇಲ್ಲದಂತ ಸಂಕಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕೆಲವು ಎಂಡೋ ಸಂತ್ರಸ್ತರ ಕುಟುಂಬದವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ನಿವೇದನೆ ಮಾಡಿಕೊಂಡ ಬಳಿಕ ಅವರ ಉತ್ತರಕ್ಕಾಗಿ ಕಾಯುತ್ತಿದ್ದಾರೆ. ಮೂರು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ

APL ಪಡಿತರ ಕಾರ್ಡನ್ನು BPL ಆಗಿ ಬದಲಾಯಿಸಲು ಹೋಗಿ ವಂಚಿತರಾದ ► ಎಂಡೋ ಸತ್ರಸ್ತ ಕುಟುಂಬಗಳು Read More »

ಕರಾವಳಿ

ವಳಕಡಮದಲ್ಲಿ ಅಕ್ರಮ ಮದ್ಯಮಾರಾಟ ► ಅಂಗಡಿ ಮಾಲಿಕನ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ,ಸೆ.02, ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕಿನ ಕೊೖಲ ಗ್ರಾಮದ ವಳಕಡಮ ಮೂರಾಜೆ ಎಂಬಲ್ಲಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಧ್ಯಪಾನಕ್ಕೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಯಲ್ಲಿ ಅಂಗಡಿ ಮಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ಕಡಬ ಎಸ್.ಐ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿ ವರ್ಗ ವಳಕಡಮದಲ್ಲಿ ಅಕ್ರಮ ಮದ್ಯಮಾರಾಟವಾಗುತ್ತಿದೆ ಎನ್ನುವ ಖಚಿತ ಮಾಹಿತಿ ಆಧಾರದಲ್ಲಿ ಮೇಲೆ ಧಾಳಿ ನಡೆಸಲು ಹೋದ ಸಂದರ್ಭದಲ್ಲಿ ಊರಾಜೆ ಗಣೇಶ ಎಂಬವರ ಅಂಗಡಿಯಲ್ಲಿ ವ್ಯಕ್ತಿಯೊಬ್ಬರು ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿದೆ. ಪೋಲೀಸರು ದಾಳಿ ನಡೆಸುತ್ತಿದ್ದಂತೆ

ವಳಕಡಮದಲ್ಲಿ ಅಕ್ರಮ ಮದ್ಯಮಾರಾಟ ► ಅಂಗಡಿ ಮಾಲಿಕನ ವಿರುದ್ಧ ಪ್ರಕರಣ ದಾಖಲು Read More »

ಕರಾವಳಿ

ಶ್ರೀ ಮಹಾಗಣಪತಿ ಸೇವಾ ಸಮಿತಿ► ಕೊೖಲ-ರಾಮಕುಂಜ ಗಣೇಶೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಆ.30, ಶ್ರೀ ಮಹಾಗಣಪತಿ ಸೇವಾ ಸಮಿತಿ ಕೊೖಲ-ರಾಮಕುಂಜ ವತಿಯಿಂದ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ರಾಮಕುಂಜ ಗಣೇಶನಗರ ಶ್ರೀ ಮಹಾಗಣಪತಿ ಓಂ ಕ್ರೀಡಾಂಗಣದ ದಿ.ಆರ್ವಾರ ಸುಬ್ಬಣ್ಣ ಶೆಟ್ಟಿ ನಿರ್ಮಿತ ಶ್ರೀ ಮಹಾಗಣಪತಿ ಕಟ್ಟೆಯಲ್ಲಿ ನಡೆಯಿತು. ಶುಕ್ರವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಉಷ:ಕಾಲ ಪೂಜೆ ನಡೆಯಿತು. ಬಳಿಕ ದ್ವಾದಶ ನಾಳಿಕೇಳ ಗಣಯಾಗ ನಡೆಯಿತು. ಶಾರದನಗರ ಶ್ರೀ ಶಾರದಾಂಬ ಭಜನಾ ಮಂಡಳಿ ಮತ್ತು ಕುಂಡಾಜೆ ಶ್ರೀ ನಾಗಬ್ರಹ್ಮ ಭಜನಾ

ಶ್ರೀ ಮಹಾಗಣಪತಿ ಸೇವಾ ಸಮಿತಿ► ಕೊೖಲ-ರಾಮಕುಂಜ ಗಣೇಶೋತ್ಸವ Read More »

ಕರಾವಳಿ

ಪೆರಿಯಡ್ಕದಲ್ಲಿ ಯಕ್ಷಗಾನ ನಾಟ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಆ. 29, ಕೊೖಲ-ಗೋಕುಲನಗರ ಯಕ್ಷನಂದನ ಕಲಾಸಂಘದ ವತಿಯಿಂದ ನಡೆಸಲ್ಪಡುವ ಯಕ್ಷಗಾನ ನಾಟ್ಯ ತರಬೇತಿ ಕಾರ್ಯಕ್ರಮ ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಇತ್ತೀಚೆಗೆ ಉದ್ಘಾಟನೆಯಾಯಿತು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ ಎಸ್ ಉದ್ಘಾಟಿಸಿ ಮಾತನಾಡಿ, ಯಕ್ಷಗಾನದಲ್ಲಿ ಕರಾವಳಿಯ ಇತಿಹಾಸ ಅಭಿವ್ಯಕ್ತಗೊಳ್ಳುತ್ತದೆ. ವಿದ್ಯಾರ್ಥಿಯ ಪ್ರತಿಭೆಯನ್ನು ಹೊರಹಾಕಲು ಯಕ್ಷಗಾನದಲ್ಲಿ ಅವಕಾಶವಿದೆ. ಆ ನಿಟ್ಟಿನಲ್ಲಿ ಪೋಷಕರೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಯಕ್ಷಗಾನವನ್ನು ಮತ್ತಷ್ಟು ಬೆಳೆಸಲು ವಿದ್ಯಾರ್ಥಿಗಳು ಒಲವು ತೋರಿಸಬೇಕು ಎಂದು ಹೇಳಿದರು. ನಾಟ್ಯಗುರುಗಳಾದ

ಪೆರಿಯಡ್ಕದಲ್ಲಿ ಯಕ್ಷಗಾನ ನಾಟ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ Read More »

ಕರಾವಳಿ

ಮಲೆನಾಡು ಗಿಡ್ಡ ತಳಿ ರಾಸುಗಳ ಸಂರಕ್ಷಣೆ ► ಕೊೖಲದಲ್ಲಿ ಗೋಕುಲ ಗ್ರಾಮ ಅನುಷ್ಠಾನಕ್ಕೆ ಮುನ್ನುಡಿ

(ನ್ಯೂಸ್ ಕಡಬ) newskadaba.com ಕಡಬ, ಆ.25, ಪಾಳುಬಿದ್ದಿದ್ದ ಕೊೖಲ ಪಶು ಸಂಗೋಪನ ಕ್ಷೇತ್ರ ಕಳೆದ ನಾಲ್ಕೈದು ವರ್ಷದಳಿಂದ ಹಲವಾರು ಕಾರಣಗಳಿಗಾಗಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಹೆಸರು ಮಾಡುತ್ತಿದೆ. ಡಿ.ವಿ.ಸದಾನಂದ ಗೌಡರು ಇಲ್ಲಿಗೆ ಪಶುವೈದ್ಯಕೀಯ ಕಾಲೇಜು ಘೋಷಣೆ ಮಾಡಿ ಈಗ ಸಿದ್ದರಾಮಯ್ಯ ಕಾಲದಲ್ಲಿ ಅದು ಅನುಷ್ಠಾನವಾಗುತ್ತಿರುವುದು ಒಂದೆಡೆಯಾದರೆ ಇತ್ತ ಕೇಂದ್ರ ಸರಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮಲೆನಾಡು ಗಿಡ್ಡ ತಳಿ ರಾಸುಗಳ ಸಂರಕ್ಷಣೆಗಾಗಿ ಕ್ಷೇತ್ರದಲ್ಲಿ ಗೋಕುಲ ಗ್ರಾಮ ಅನುಷ್ಠಾನ ಮಾಡಲು ಮುನ್ನುಡಿ ಬರೆಯಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ

ಮಲೆನಾಡು ಗಿಡ್ಡ ತಳಿ ರಾಸುಗಳ ಸಂರಕ್ಷಣೆ ► ಕೊೖಲದಲ್ಲಿ ಗೋಕುಲ ಗ್ರಾಮ ಅನುಷ್ಠಾನಕ್ಕೆ ಮುನ್ನುಡಿ Read More »

ಕರಾವಳಿ

ಕೊಯಿಲ: ಜೀಪು – ಕಾರು ಢಿಕ್ಕಿ ► ಆರು ಮಂದಿಗೆ ಗಾಯ, ಜೀಪು ಪಲ್ಟಿ

(ನ್ಯೂಸ್ ಕಡಬ) newskadaba.com ಕೊಯಿಲ, ಆ.20. ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಯಿಲ ಫಾರಂ ಬಳಿ ಜೀಪು ಹಾಗೂ ಸ್ವಿಫ್ಟ್ ಕಾರು ನಡುವೆ ಢಿಕ್ಕಿ ಸಂಭವಿಸಿ ಆರು ಮಂದಿ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಅಪಘಾತದಲ್ಲಿ ಎರಡೂ ವಾಹನಗಳಲ್ಲಿದ್ದ ಆರು ಪ್ರಯಾಣಿಕರು ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ‌ ರಭಸಕ್ಕೆ ಜೀಪು ಪಲ್ಟಿಯಾಗಿದ್ದು, ರಸ್ತೆಗಡ್ಡವಾಗಿ ಬಿದ್ದಿದೆ.

ಕೊಯಿಲ: ಜೀಪು – ಕಾರು ಢಿಕ್ಕಿ ► ಆರು ಮಂದಿಗೆ ಗಾಯ, ಜೀಪು ಪಲ್ಟಿ Read More »

ಕರಾವಳಿ

ಏಣಿತಡ್ಕ(1) ಅಂಗನವಾಡಿ ಕಾರ್ಯಕರ್ತೆ ವೇದಾವತಿ ಪಿ.ಎಸ್. ರವರಿಗೆ ರಾಜ್ಯ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಕಡಬ, ಜೂ.22. ಎಳೆಯ ಮಕ್ಕಳಿಗೆ ಪುರ್ವ ಪ್ರಾಥಮಿಕ ಶಿಕ್ಷಣದ ಅರಿವು ಮೂಡಿಸುವುದು ಅಂಗನವಾಡಿ ಕೇಂದ್ರ. ಮಕ್ಕಳನ್ನು ಬೆಳೆಸುವ ಸಂದರ್ಭದಲ್ಲಿ ತಾಯಂದಿರ ಪಾತ್ರದಷ್ಟೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಜವಾಬ್ದಾರಿ ಬಹಳ ಮಹತ್ತರವಾದುದು. ಇಂತಹ ಪರಿಶ್ರಮದ ಕೆಲಸವನ್ನು ಗುರುತಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊೖಲ ಗ್ರಾಮದ ಏಣಿತಡ್ಕ (1) ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವೇದಾವತಿ ಅವರಿಗೆ 2016-17 ಸಾಲಿನ ರಾಜ್ಯ ಅತ್ಯುತ್ತಮ ಕಾರ್ಯಕರ್ತೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ. ಅಂಗನವಾಡಿ ಕೇಂದ್ರದ ಸ್ವಚ್ಚತೆ,

ಏಣಿತಡ್ಕ(1) ಅಂಗನವಾಡಿ ಕಾರ್ಯಕರ್ತೆ ವೇದಾವತಿ ಪಿ.ಎಸ್. ರವರಿಗೆ ರಾಜ್ಯ ಪ್ರಶಸ್ತಿ Read More »

ಕರಾವಳಿ
Scroll to Top