karnataka

“ಅನ್ನಭಾಗ್ಯ” ಯೋಜನೆ- 1 ಕೋಟಿ ಕುಟುಂಬಗಳಿಗೆ 566 ಕೋಟಿ ರೂ.ಹಣ ವರ್ಗಾವಣೆ; ಸಚಿವ ಮುನಿಯಪ್ಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 04. ಅನ್ನಭಾಗ್ಯ ಯೋಜನೆಯಡಿ ಈವರೆಗೆ 1 ಕೋಟಿ ಕುಟುಂಬಗಳಿಗೆ 566 ಕೋಟಿ ರೂ.ಹಣ ವರ್ಗಾವಣೆ ಮಾಡಲಾಗಿದೆ ಎಂದು ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಡಿ 5 ಕೆ.ಜಿ ಅಕ್ಕಿ ಮತ್ತು ಉಳಿದ 5 ಕೆ.ಜಿಗೆ ಪ್ರತಿ ಕೆ.ಜಿ ಅಕ್ಕಿಗೆ 34 ರೂ. ನಂತೆ ಒಟ್ಟು 170 ರೂ. ಗಳಂತೆ ಈವರೆಗೆ 1 ಕೋಟಿ ಕುಟುಂಬಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ […]

“ಅನ್ನಭಾಗ್ಯ” ಯೋಜನೆ- 1 ಕೋಟಿ ಕುಟುಂಬಗಳಿಗೆ 566 ಕೋಟಿ ರೂ.ಹಣ ವರ್ಗಾವಣೆ; ಸಚಿವ ಮುನಿಯಪ್ಪ Read More »

ಕರ್ನಾಟಕ

ಪ್ರತಿ ಕೆಜಿಗೆ 250ರ ಗಡಿದಾಟಿದ ‘ಕಿಚನ್ ಕ್ವೀನ್’ – ಗ್ರಾಹಕರ ಕೈಸುಡುತ್ತಿರುವ ಟೊಮ್ಯಾಟೊ

(ನ್ಯೂಸ್ ಕಡಬ) newskadaba.com ಬೆಂಗಳೂರು,ಆ. 04. ದಿನದಿಂದ ದಿನಕ್ಕೆ ದೇಶದಲ್ಲಿ ತರಕಾರಿಗಳ ಬೆಲೆ ಹೆಚ್ಚಾಗುತ್ತಿದೆ. ಈಗಾಗಲೇ ಗ್ರಾಹಕರ ಕೈಸುಟ್ಟಿರುವ ಟೊಮ್ಯಾಟೋ ಇದೀಗ ಪ್ರತಿ ಕೆಜಿಗೆ 250 ರುಪಾಯಿಗೆ ಮಾರಾಟವಾಗುತ್ತಿದೆ. ನಿನ್ನೆ ಮೊನ್ನೆ ಕೆಜೆಗೆ ಎರಡು ನೂರು ರೂಪಾಯಿ ಇದ್ದ ಟೊಮೇಟೊ ಈಗ 250 ರೂಪಾಯಿ ಆಗಿದ್ದು, ಜನರಿಗೆ ಟೊಮೇಟೊ ಮೇಲಿನ ಆಸೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಸದ್ಯಕ್ಕೆ ಟೊಮೆಟೊ ದರ 250 ಕ್ಕೆ ನಿಲ್ಲದೇ 300ರ ಗಡಿ ಕೂಡ ತಲುಪಬಹುದು ಎಂದು ಹೋಲ್ ಸೇಲ್ ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಪ್ರತಿ ಕೆಜಿಗೆ 250ರ ಗಡಿದಾಟಿದ ‘ಕಿಚನ್ ಕ್ವೀನ್’ – ಗ್ರಾಹಕರ ಕೈಸುಡುತ್ತಿರುವ ಟೊಮ್ಯಾಟೊ Read More »

ಕರ್ನಾಟಕ

ಬೆಳ್ತಂಗಡಿ: ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿ ಶಿಕ್ಷಕಿಗೆ ಬೆದರಿಕೆ – ಆರೋಪಿ ಅರೆಸ್ಟ್…!

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಆ.04. ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿ ಶಿಕ್ಷಕಿಯೊಬ್ಬರನ್ನು ಬೆದರಿಸಿ ಒಂದು ಲಕ್ಷ ರೂ. ವಸೂಲಿಗೈದಿದ್ದ ಆರೋಪಿಯೊಬ್ಬನನ್ನು ವೇಣೂರು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಸೆರೆ ಹಿಡಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವತ್ಥ್ ಹೆಬ್ಬಾರ್ (23) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ನಿವಾಸಿ, ಪೆರೋಡಿತ್ತಾಯಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿ ಎಂಬವರಿಗೆ ಮೂರು ಲಕ್ಷ ರೂ. ನೀಡುವಂತೆ ಟೆಲಿಗ್ರಾಂ ನಕಲಿ ಖಾತೆಯ ಮೂಲಕ ವ್ಯಕ್ತಿಯೋರ್ವ

ಬೆಳ್ತಂಗಡಿ: ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿ ಶಿಕ್ಷಕಿಗೆ ಬೆದರಿಕೆ – ಆರೋಪಿ ಅರೆಸ್ಟ್…! Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಮಸೂದ್ ಹತ್ಯೆ ಪ್ರಕರಣ – ಓರ್ವನಿಗೆ ಜಾಮೀನು ಮಂಜೂರು

(ನ್ಯೂಸ್ ಕಡಬ)newskadaba.com ಸುಳ್ಯ, ಆ.04. ಮಸೂದ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯೋರ್ವನಿಗೆ ಜಾಮೀನು ಸಿಕ್ಕಿದೆ ಎಂದು ತಿಳಿದುಬಂದಿದೆ. 8ನೇ ಆರೋಪಿಯಾಗಿರುವ ಭಾಸ್ಕರ್ ಕೆ.ಎಂ.ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿರುವ ಬಗ್ಗೆ ವರದಿಯಾಗಿದೆ. ಪ್ರಕರಣದ 8ನೇ ಆರೋಪಿಯಾಗಿರುವ ಭಾಸ್ಕರ ಕೆ.ಎಂ. ಜಾಮೀನು ಕೋರಿ ವಕೀಲರ ಮೂಲಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿದ್ದು ಆ.3 ರಂದು ಷರತ್ತುಬದ್ಧ ಜಾಮೀನು ಮಂಜೂರು ಗೊಳಿಸಿರುವುದಾಗಿ ತಿಳಿದು ಬಂದಿದೆ. 2022ರಲ್ಲಿ ಕಳಂಜದಲ್ಲಿ 8 ಮಂದಿ ಗೂಂಡಾಗಳ ತಂಡ ಮಸೂದ್ ಗೆ ಗಂಭೀರವಾಗಿ ಹಲ್ಲೆ

ಸುಳ್ಯ: ಮಸೂದ್ ಹತ್ಯೆ ಪ್ರಕರಣ – ಓರ್ವನಿಗೆ ಜಾಮೀನು ಮಂಜೂರು Read More »

ಕರಾವಳಿ, ಕ್ರೈಮ್ ನ್ಯೂಸ್

ಮಕ್ಕಳನ್ನು ಕೊಂದು ದಂಪತಿಗಳಿಬ್ಬರು ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.04. ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಂಧ್ರ ಮೂಲದ ವೀರಾರ್ಜುನ ವಿಜಯ್ (31), ಪತ್ನಿ ಹೇಮಾವತಿ(29)ಅವರು ಇಬ್ಬರು ಮಕ್ಕಳಾದ ಮೋಕ್ಷಾ, ಸೃಷ್ಟಿಯನ್ನು ಕೊಲೆ ಮಾಡಿ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಪಾರ್ಟ್ಮೆಂಟ್ ಒಂದರಲ್ಲಿ ಈ ಘಟನೆ ಸಂಭವಿಸಿದ್ದು, ಮೃತ ವೀರಾರ್ಜುನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಕಾಡುಗೋಡಿ ಠಾಣಾ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ

ಮಕ್ಕಳನ್ನು ಕೊಂದು ದಂಪತಿಗಳಿಬ್ಬರು ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಖರ್ಚಿಗೆ ಹಣ ಕೊಡಲಿಲ್ಲವೆಂದು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಉಳ್ಳಾಲ, ಆ.04. ಮನೆಯವರು ಖರ್ಚಿಗೆ ಹಣ ಕೊಡಲಿಲ್ಲವೆಂದು ಮನನೊಂದು ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಭಾಸ್ಕರ್ ಪೂಜಾರಿ ಮತ್ತು ಧಾಕ್ಷಾಯಿಣಿ ಎಂಬವರ ಪುತ್ರ ಸುಶಾಂತ್(17)ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಪ್ರಥಮ ಪಿಯುಸಿಯನ್ನು ಮುಗಿಸಿದ್ದ ಸುಶಾಂತ್ ಗೆ ಡಿಪ್ಲೊಮಾಗೆ ಸೇರಿಸಲಾಗಿತ್ತು. 500ರೂ. ಕೊಟ್ಟು ಕಾಲೇಜಿಗೆ ಕಳುಹಿಸಿದ್ದು, ಮತ್ತೆ ಕಾಲೇಜಿಗೆ ಹೋಗುವಾಗ ಖರ್ಚಿಗೆ ರೂ. 500 ಕೊಡುವಂತೆ ಕೇಳಿದಾಗ ನೀಡಿರಲಿಲ್ಲ. ಇದರಿಂದ ಕೋಪದಲ್ಲಿ ಮನೆಯಲ್ಲಿದ್ದ ಸುಶಾಂತ್ ಕೋಣೆಯೊಳಗೆ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ

ಖರ್ಚಿಗೆ ಹಣ ಕೊಡಲಿಲ್ಲವೆಂದು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ – ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಆ.04. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಯುವಕನೋರ್ವನ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಗ್ರಾಮ ಪಂಚಾಯತ್ ಸದಸ್ಯೆ ಜುಬೈದಾ ಅವರ ಮಗ ನರಿಕೊಂಬು ನಿವಾಸಿ ರಿಕ್ಷಾ ಚಾಲಕ ಅಬುಬಕ್ಕರ್ ಸಿದ್ದೀಕ್ ಎಂಬಾತ ಕಿರುಕುಳ ನೀಡಿದ್ದಾನೆ ಎಂದು ಬಾಲಕಿಯ ತಂದೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ ಎನ್ನಲಾಗಿದೆ. ಮೆಲ್ಕಾರ್ ಮಹಿಳಾ ಕಾಲೇಜಿನಿಂದ ಮನೆಗೆ ಹೋಗಲು ರಸ್ತೆ ಬದಿಯಲ್ಲಿ ಬಸ್ ಗಾಗಿ ಕಾಯುತ್ತಾ ನಿಂತಿದ್ದ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ – ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಇಚ್ಲಂಪಾಡಿ: ಕಾಡಾನೆ ದಾಳಿ ಪ್ರದೇಶಕ್ಕೆ ಕಾಂಗ್ರೆಸ್ ಮುಖಂಡರ ಭೇಟಿ; ಪರಿಶೀಲನೆ

(ನ್ಯೂಸ್ ಕಡಬ)newskadaba.com  ನೆಲ್ಯಾಡಿ, ಆ.03. ಕೆಲ ದಿನದ ಹಿಂದೆ ಆನೆ ದಾಳಿಯಿಂದ ಹಾನಿಗೊಂಡ ಇಚ್ಲಂಪಾಡಿಯ ಗುಂಡಿಕಂಡ, ಬಿಜೇರು, ನಡುಮನೆ ಕ್ರಾಸ್ ಪ್ರದೇಶಕ್ಕೆ ಕೆಪಿಸಿಸಿ ಸಂಯೋಜಕ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ಜಿ. ಕೃಷ್ಣಪ್ಪರವರ ನೇತೃತ್ವದಲ್ಲಿ ಕಾಂಗ್ರೇಸ್ ಮುಖಂಡರ ನಿಯೋಗವೊಂದು ಪರಿಶೀಲನೆ ನಡೆಸಿದೆ ಎನ್ನಲಾಗಿದೆ. ಕಾಡಾನೆ ದಾಳಿಯಿಂದ ಆಗಿರುವ ನಷ್ಟದ ಕುರಿತಂತೆ  ವಲಯಾರಣ್ಯಧಿಕಾರಿಯವರಿಂದ ಮಾಹಿತಿ ಪಡೆದುಕೊಂಡ ಜಿ.ಕೃಷ್ಣಪ್ಪ, ಪರಿಹಾರ ಒದಗಿಸಿ ಕೊಡುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.  

ಇಚ್ಲಂಪಾಡಿ: ಕಾಡಾನೆ ದಾಳಿ ಪ್ರದೇಶಕ್ಕೆ ಕಾಂಗ್ರೆಸ್ ಮುಖಂಡರ ಭೇಟಿ; ಪರಿಶೀಲನೆ Read More »

ಕರಾವಳಿ

ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಬಸ್

(ನ್ಯೂಸ್ ಕಡಬ)newskadaba.com ಸಾಗರ, ಆ.03. ವಿದ್ಯುತ್‌ ಕಂಬಕ್ಕೆ ಖಾಸಗಿ ಬಸ್‌ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿನಿಯರಿಗೆ ಕರೆಂಟ್‌ ಶಾಕ್‌ ತಗುಲಿದ ಘಟನೆ ನಡೆದಿದೆ. ಹೊಳೆ ಬಾಗಿಲಿನಿಂದ ಸಾಗರಕ್ಕೆ ಬರುತ್ತಿದ್ದ ಖಾಸಗಿ ಬಸ್‌ ಚಾಲಕ ಎದುರಿನಲ್ಲಿ ಬರುತ್ತಿದ್ದ ಬೈಕ್‌ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ರಸ್ತೆ ಪಕ್ಕಕ್ಕೆ ಬಸ್‌ ಚಲಾಯಿಸಿದ್ದಾರೆ. ಈ ವೇಳೆ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್‌ ತಂತಿ ಬಸ್‌ ಮೇಲೆ ಬಿದ್ದು ಬಸ್‌ನಲ್ಲಿ ವಿದ್ಯುತ್‌ ಪ್ರವಹಿಸಿದ್ದರಿಂದ ಇಬ್ಬರು ವಿದ್ಯಾರ್ಥಿನಿಯರು ಪ್ರಜ್ಞೆ ಕಳೆದುಕೊಂಡಿದ್ದಾರೆ. ತಕ್ಷಣ

ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಬಸ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಳೆ ವಿಮೆ ಪ್ರೀಮಿಯಂ ಪಾವತಿಸಿದವರಿಗೆ ಆ. 14 ರವರೆಗೆ ದಾಖಲೆ ಸಲ್ಲಿಕೆಗೆ ಅವಕಾಶ !

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಆ.03. ಬೆಳೆ ವಿಮೆ ಯೋಜನೆಯ ಪ್ರೀಮಿಯಂ ಮೊತ್ತವನ್ನು ಸಹಕಾರಿ ಸಂಘ ಹಾಗೂ ಬ್ಯಾಂಕ್‌ಗಳಲ್ಲಿ ಪಾವತಿಸಿರುವ ರೈತರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಆ.14ರವರೆಗೆ ಅವಕಾಶ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. ಈ ಬಾರಿ ಪ್ರೀಮಿಯಂ ಪಾವತಿಗೆ ಫ್ರೂಟ್ಸ್‌ ಐಡಿ ಕಡ್ಡಾಯವಾಗಿದ್ದು, ಇದನ್ನು ಪಡೆಯಲು ರೈತರು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ವಿರಳ ಕಾಲಾವಕಾಶದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ವಿಫಲರಾದ ರೈತರ ಅನುಕೂಲಕ್ಕಾಗಿ ದಾಖಲೆಗಳನ್ನು ಸಲ್ಲಿಸುವುದಕ್ಕೆ ಈಗ ಕಾಲಾವಕಾಶ ಕಲ್ಪಿಸಲಾಗಿದೆ.

ಬೆಳೆ ವಿಮೆ ಪ್ರೀಮಿಯಂ ಪಾವತಿಸಿದವರಿಗೆ ಆ. 14 ರವರೆಗೆ ದಾಖಲೆ ಸಲ್ಲಿಕೆಗೆ ಅವಕಾಶ ! Read More »

ಕರಾವಳಿ
Scroll to Top