karnataka

ಮಲ್ಲೇಶ್ವರಂ ನಿವಾಸದಲ್ಲಿ ಸ್ಪಂದನಾ ರಾಘವೇಂದ್ರ ಅಂತಿಮ ದರ್ಶನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.09. ಕಳೆದರಡು ದಿನದ ಹಿಂದೆ ಥಾಯ್ಲೆಂಡ್‌ ನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಸ್ಯಾಂಡಲ್ ವುಡ್ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಪಾರ್ಥೀವ ಶರೀರ ತಡರಾತ್ರಿ ರಾತ್ರಿ ಬೆಂಗಳೂರಿಗೆ ತರಲಾಗಿದೆ ಎನ್ನಲಾಗಿದೆ. ಸ್ಪಂದನಾ ತವರು ಮನೆಯಾದ ಬಿ.ಕೆ ಶಿವರಾಮ್ ಅವರ ನಿವಾಸದಲ್ಲಿ ಸ್ಪಂದನಾ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸ್ಪಂದನಾ ಅವರ ಅಂತಿಮ ದರ್ಶನ ಪಡೆಯಲು ಕುಟುಂಬದ ಆಪ್ತರು, ಚಿತ್ರರಂಗ, ರಾಜಕೀಯ ವಲಯದ ಗಣ್ಯರು ಹಾಗೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಮಧ್ಯಾಹ್ನದ ಬಳಿಕ […]

ಮಲ್ಲೇಶ್ವರಂ ನಿವಾಸದಲ್ಲಿ ಸ್ಪಂದನಾ ರಾಘವೇಂದ್ರ ಅಂತಿಮ ದರ್ಶನ Read More »

ಕರ್ನಾಟಕ

ಕೃಷಿ ಸಚಿವರ ವಿರುದ್ಧ ಆರೋಪ- ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಸರಕಾರ ತೀರ್ಮಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 08. ಮಂಡ್ಯ ಜಿಲ್ಲೆ ಕೃಷಿ ಅಧಿಕಾರಿಗಳು ಕೃಷಿ ಸಚಿವರ ವಿರುದ್ಧ ಬರೆದಿದ್ದಾರೆ ಎನ್ನಲಾದ ಪತ್ರದ ಕುರಿತು CID ತನಿಖೆ ನಡೆಸಲು ತೀರ್ಮಾನಿಲಾಗಿದೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಜತೆ ಚರ್ಚೆ ನಡೆಸಿದ ಬಳಿಕ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಆದೇಶಿಸಿದ್ದಾರೆ ಎನ್ನಲಾಗಿದೆ. ಅದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ರಾಮನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಕುಮಾರ್ ಅವರು ಪತ್ರವನ್ನು ಅಧಿಕಾರಿಗಳು ಬರೆದಿಲ್ಲ ಎಂದು

ಕೃಷಿ ಸಚಿವರ ವಿರುದ್ಧ ಆರೋಪ- ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಸರಕಾರ ತೀರ್ಮಾನ Read More »

ಕರ್ನಾಟಕ

ಡೆಂಗ್ಯು ತಡೆಯಲು ಸಾರ್ವಜನಿಕರಿಗೆ ಮಾಹಿತಿ ಅಗತ್ಯ..! –  ಡಾ.ಆನಂದ್ ಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಆ.07. ಡೆಂಗ್ಯು ತಡೆಗಟ್ಟಲು ಅದರ ಬಗ್ಗೆ ವ್ಯಾಪಕ ವಾದ ಮಾಹಿತಿ ನೀಡುವ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ ಕೆ. ತಿಳಿಸಿದರು ಎಂದು ವರದಿ ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ರು ಕುಟುಂಬದ ಕಲ್ಯಾಣ ಇಲಾಖೆ ವತಿಯಿಂದ ಪತ್ರಿಕಾ ಭವನದ ಮುಂಭಾಗದಲ್ಲಿ ಡೆಂಗ್ಯು ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆ ಯಾದ್ಯಂತ ಸಂಚರಿಸಲು ನಿರ್ಮಿಸಲಾದ ಡೆಂಗ್ಯು ಜಾಗೃತಿ ರಥಕ್ಕೆ ಚಾಲನೆ ನೀಡಿ

ಡೆಂಗ್ಯು ತಡೆಯಲು ಸಾರ್ವಜನಿಕರಿಗೆ ಮಾಹಿತಿ ಅಗತ್ಯ..! –  ಡಾ.ಆನಂದ್ ಕೆ Read More »

ಕರಾವಳಿ

ಸೌಜನ್ಯ ಪ್ರಕರಣದ ರಹಸ್ಯಗಳನ್ನ ಬಿಚ್ಚಿಟ್ಟರೆ ನನ್ನನ್ನು ಸಾಯಿಸಬಹುದು – ಶಾಸಕ ವಸಂತ ಬಂಗೇರ ಸ್ಫೋಟಕ ಹೇಳಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 07. ಧರ್ಮಸ್ಥಳದ ಸೌಜನ್ಯ ಹತ್ಯೆ ಬಗ್ಗೆ ಮಾತನಾಡಿದ ಮಾಜಿ ಕಾಂಗ್ರೆಸ್ ಶಾಸಕ ವಸಂತ ಬಂಗೇರ ‘ಸಿಬಿಐ ತನಿಖೆಯ ದಾರಿ ತಪ್ಪಿಸಲಾಗಿತ್ತು. ಪ್ರಕರಣದ ರಹಸ್ಯವನ್ನ ಬಿಚ್ಚಿಟ್ಟರೆ ನನ್ನನ್ನೂ ಸಾಯಿಸಬಹುದು’ ಎಂಬ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಖಾಕಿಯಾಗಲೀ, ಕಾವಿಯಾಗಲೀ ಅವರನ್ನೂ ತನಿಖೆ ಮಾಡುವ ಶಕ್ತಿ ನಮ್ಮಲ್ಲಿ ಇದೆ. ಸಮಯ ಬಂದಾಗ ಮಾತನಾಡುತ್ತೇನೆ. ಆಗ ನನ್ನನ್ನೂ ಸಾಯಿಸಿಬಿಡಬಹುದು. ಆದರೆ ಸಾಯುವ ಮೊದಲು ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.  

ಸೌಜನ್ಯ ಪ್ರಕರಣದ ರಹಸ್ಯಗಳನ್ನ ಬಿಚ್ಚಿಟ್ಟರೆ ನನ್ನನ್ನು ಸಾಯಿಸಬಹುದು – ಶಾಸಕ ವಸಂತ ಬಂಗೇರ ಸ್ಫೋಟಕ ಹೇಳಿಕೆ Read More »

ಕರಾವಳಿ

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ – ರೋಗಿಗಳ ಸ್ಥಳಾಂತರ

(ನ್ಯೂಸ್ ಕಡಬ)newskadaba.com ನವದೆಹಲಿ, ಆ.07. ರಾಷ್ಟ್ರ ರಾಜಧಾನಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಾರ್ಡ್‌ನಿಂದ ರೋಗಿಗಳನ್ನು ಶಿಫ್ಟ್ ಮಾಡಲಾಗಿದೆ ಎಂದು ವರದಿ ತಿಳಿದುಬಂದಿದೆ. ಮಧ್ಯಾಹ್ನ 11.45ಕ್ಕೆ ಈ ಘಟನೆ ಸಂಭವಿಸಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಆರು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸಿವೆ. ಎಂಡೋಸ್ಕೋಪಿ ನಡೆಸುವ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಸ್ಥಳ ಕಟ್ಟಡದ ಎರಡನೇ ಮಹಡಿಯಲ್ಲಿ ಎಮರ್ಜೆನ್ಸಿ ವಾರ್ಡ್ ಸಮೀಪದಲ್ಲೇ ಇತ್ತು. ಹೀಗಾಗಿ ಭಾರಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಅಲ್ಲಿದ್ದ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಯಿತು.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ – ರೋಗಿಗಳ ಸ್ಥಳಾಂತರ Read More »

ರಾಷ್ಟ್ರೀಯ ನ್ಯೂಸ್

ಆನ್‌ಲೈನ್ ಮಾರ್ಕೆಟಿಂಗ್ ಮೂಲಕವೇ ಬದುಕು ಕಟ್ಟಿಕೊಂಡ ಯುವ ಕೃಷಿಕರು

(ನ್ಯೂಸ್ ಕಡಬ)newskadaba.com ರಾಮನಗರ, ಆ.07. ಮಹಾಮಾರಿ ಕೊರೋನಾ ಲಾಕ್‌ ಡೌನ್ ಸಮಯದಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತ ಹಾಗೂ ಮಾರುಕಟ್ಟೆ ಸಮಸ್ಯೆಯಿಂದ ಬಳಲಿ ನಷ್ಟಕ್ಕೀಡಾದ ರೈತರೇ ಹೆಚ್ಚು. ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿದ ಯುವ ರೈತರೊಬ್ಬರು ಆನ್‌ಲೈನ್ ಮಾರ್ಕೆಟಿಂಗ್ ಮೂಲಕ ತಾನು ಬೆಳೆದ ಉತ್ಪನ್ನಗಳನ್ನೇ ಮಾರುವುದನ್ನು ಮುಂದುವರಿಸಿ ಮಾದರಿಯಾಗಿ ನಿಂತಿದ್ದಾರೆ. ನಂಜುಂಡಸ್ವಾಮಿ 2015ರಲ್ಲಿ ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ  6 ತಿಂಗಳ ಕಾಲ ಸುಸ್ಥಿರ ಕೃಷಿ ಅಧ್ಯಯನ ವಿಷಯದಲ್ಲಿ ತರಬೇತಿ ಪಡೆದು, ಬೆಂಗಳೂರಿನಲ್ಲಿಯೇ ಅರೆ ಕೃಷಿಕನಾಗಿ ಹಾಗೂ

ಆನ್‌ಲೈನ್ ಮಾರ್ಕೆಟಿಂಗ್ ಮೂಲಕವೇ ಬದುಕು ಕಟ್ಟಿಕೊಂಡ ಯುವ ಕೃಷಿಕರು Read More »

ಕರ್ನಾಟಕ

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ – ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಆ.07. ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 1.50 ಲಕ್ಷ ರೂ. ದಂಡ ವಿಧಿಸಿ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಪ್ರಧಾನ ನ್ಯಾಯಾಲಯದ ಎಫ್‌ಟಿಎಸ್‌ಸಿ(ತ್ವರಿತ ವಿಶೇಷ ನ್ಯಾಯಾಲಯ)-2(ಪೋಕ್ಸ)ರ ನ್ಯಾಯಾಧೀಶರ ತೀರ್ಪು ನೀಡಿದೆ. ಶಿವಮೊಗ್ಗ ನಗರದ 27 ವರ್ಷದ ವ್ಯಕ್ತಿ ಶಿಕ್ಷೆಗೆ ಒಳಗಾದ ಆರೋಪಿ ಎಂದು ತಿಳಿದುಬಂದಿದೆ. ಕಳೆದ ವರ್ಷ 2022ರಲ್ಲಿ 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ . ಈ ಬಗ್ಗೆ

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ – ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಸ್‌ ಗಾಗಿ ಕಾದು ನಿಂತಿದ್ದವರಿಗೆ ಕಾರು ಢಿಕ್ಕಿ –  ಇಬ್ಬರು‌ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಹಾವೇರಿ, ಆ.07. ವೇಗವಾಗಿ ಚಲಿಸುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ನೀರಲಗಿ ಗ್ರಾಮದ ವಿರೂಪಾಕ್ಷಪ್ಪ ಕಾಳಿ (60) ಮತ್ತು ಚಿದಾನಂದ ಶೇರವಾಡ (55) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಹೊನ್ನಾಪುರ ಗ್ರಾಮದ ಬಸನಗೌಡ ಶಿವನಗೌಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಗ್ಗಾವಿ ಪಟ್ಟಣಕ್ಕೆ ತೆರಳಲು ನೀರಲಗಿ ಬಳಿ ಹೆದ್ದಾರಿ ಬದಿ ನಿಂತಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಚಿದಾನಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು  ಸರಿಯಾದ

ಬಸ್‌ ಗಾಗಿ ಕಾದು ನಿಂತಿದ್ದವರಿಗೆ ಕಾರು ಢಿಕ್ಕಿ –  ಇಬ್ಬರು‌ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

’ಪಬ್ ಜಿ’ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಕಲಬುರಗಿ, ಆ.07. ಇಲ್ಲೊಬ್ಬ ವಿದ್ಯಾರ್ಥಿ ಆನ್ಲೈ್ನ್‍ ಗೇಮ್ಗೆಳಲ್ಲಿ ಲೀನನಾಗಿ ಹಣ ಕಟ್ಟಿ ಪಬ್ಜಿ್ ಆಟವಾಡುತ್ತಿದ್ದ. ಕೊನೆಗೆ ಈತ ಸಾಲ ತೀರಿಸಲಾಗದೇ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಮೂಲತಃ ಬೆಟ್ಟಿಂಗ್‍ ಆಟವಲ್ಲ. ಈ ಆಟದಲ್ಲಿ ಕೆಲ ವಿಶಿಷ್ಟ ವರ್ಚ್ಯುವಲ್ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ. ಇದರಿಂದ ಆಟಗಾರ ಬಹಳ ಶಕ್ತಿಶಾಲಿ ಎಂಬ ಸಂದೇಶ ಇತರ ಆಟಗಾರರಿಗೆ ಸಿಗುತ್ತದೆ. ಅಂತಹ ವಸ್ತುಗಳನ್ನು ಖರೀದಿಸಲು ಈ ಯುವಕ ಸಾಲವನ್ನು ಮಾಡಿದ್ದು, ಮೃತ ಯುವಕನನ್ನು ಪ್ರವೀಣ್ ಪಾಟೀಲ್(20) ಎಂದು ಗುರುತಿಸಲಾಗಿದೆ. ಈತ ನೇಣು

’ಪಬ್ ಜಿ’ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಯುವಕನಿಂದ ಅನುಚಿತ ವರ್ತನೆ – ದೂರು ದಾಖಲು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಆ.07. ಮನೆಯ ಕೋಣೆಯಲ್ಲಿ ಕಿಟಕಿಯ ಬಳಿ ಕುಳಿತು ಓದುತ್ತಿರುವಾಗ ವೇಳೆ ಆರೋಪಿಯೋರ್ವ ಮನೆಯ ಹೊರಗೆ ನಿಂತು ಕಿಟಕಿಯ ಮೂಲಕ ಮೈಗೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ ಘಟನೆ ವರದಿಯಾಗಿದೆ. ಆರೋಪಿಯು ಕೆಲವು ಸಮಯಗಳಿಂದ ದೂರದಾರರನ್ನು ಪ್ರೀತಿಸುವುದಾಗಿ ಹೇಳುತ್ತಾ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದು, ಕಿಟಕಿಯ ಮೂಲಕ ಮೈಗೆ ಕೈಹಾಕಿ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಈ ಕುರಿತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕನಿಂದ ಅನುಚಿತ ವರ್ತನೆ – ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top