karnataka

ಉಳ್ಳಾಲ: ವಾಚು, ಚಪ್ಪಲಿ, ಕನ್ನಡಕ, ಸೇತುವೆ ಮೇಲಿಟ್ಟು ► ಅಪರಿಚಿತ ವ್ಯಕ್ತಿ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಕಡಬ,ಅ12. ಅಪರಿಚಿತ ವ್ಯಕ್ತಿಯೊರ್ವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಉಳ್ಳಾಲ ಸಮೀಪ  ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿ ತನ್ನ ವಾಚು, ಚಪ್ಪಲಿ, ಕನ್ನಡಕ, ನೇತ್ರಾವತಿ ಸೇತುವೆಯ ಮೇಲಿಟ್ಟು ನದಿಗೆ ಹಾರಿದ್ದಾನೆ. ದಾರಿಯಲ್ಲಿ ಸಾಗುವ ವಾಹನ ಚಾಲಕರು ವ್ಯಕ್ತಿಯನ್ನು ತಡೆಯಲು ಮುಂದಾಗುತ್ತಿದ್ದಂತೆ ನದಿಗೆ ಹಾರಿದ್ದಾನೆ ಎನ್ನಲಾಗಿದೆ. ಈ ಕುರಿತು ಉಳ್ಳಾಲ ಠಾಣೆಗೆ ಮಾಹಿತಿ ನೀಡಲಾಗಿದ್ದು, ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಳ್ಳಾಲ: ವಾಚು, ಚಪ್ಪಲಿ, ಕನ್ನಡಕ, ಸೇತುವೆ ಮೇಲಿಟ್ಟು ► ಅಪರಿಚಿತ ವ್ಯಕ್ತಿ ಆತ್ಮಹತ್ಯೆಗೆ ಶರಣು Read More »

ಕರಾವಳಿ

ಬ್ಯಾಟರಿ ಕಳಚಿದ ಕೂಡಲೇ ರೆಡ್‌ಮೀ ಮೊಬೈಲ್ ಬ್ಲಾಸ್ಟ್ ..!!! ► ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

(ನ್ಯೂಸ್ ಕಡಬ) newskadaba.com ತುಮಕೂರು, ಅ.12. ಹೊಸ ರೆಡ್‌ಮೀ ಮೊಬೈಲೊಂದು ಇದ್ದಕಿದ್ದಂತೆ ಬ್ಲಾಸ್ಟ್ ಆದ ಘಟನೆ ನಗರದ ಟೌನ್‌ಹಾಲ್ ಸರ್ಕಲ್‌ ನಲ್ಲಿ ನಡೆದಿದೆ.‌ ಗ್ರಾಹಕರೊಬ್ಬರು ಹೊಸ ಮೊಬೈಲ್ ತೆಗೆದುಕೊಂಡು ಅದಕ್ಕೆ ಸ್ಕ್ರೀನ್ ಗಾರ್ಡ್ ಹಾಕಿಸುವ ಸಲುವಾಗಿ ಟೌನ್‌ಹಾಲ್ ಸರ್ಕಲ್‌ನಲ್ಲಿರುವ ಪ್ರದೀಪ್ ಎಂಬುವವರ ಮೊಬೈಲ್ ಶಾಪಿಗೆ ಬಂದಾಗ ಈ ಘಟನೆ ನಡೆದಿದೆ. ಮೊಬೈಲ್‌ನಲ್ಲಿದ್ದ ಬ್ಯಾಟರಿ ಕಳಚಿದ ಕೂಡಲೇ ಮೊಬೈಲ್ ಸ್ಫೋಟಗೊಂಡಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೆಡ್‌ಮೀ ಚೀನಾ ತಯಾರಿಕೆಯ ಮೊಬೈಲ್ ಆಗಿದ್ದು, ಈ ಹಿಂದೆಯೂ ಅನೇಕ ಬಾರಿ ಮೊಬೈಲ್ ಸ್ಪೋಟಗೊಂಡಿರುವ ಬಗ್ಗೆ

ಬ್ಯಾಟರಿ ಕಳಚಿದ ಕೂಡಲೇ ರೆಡ್‌ಮೀ ಮೊಬೈಲ್ ಬ್ಲಾಸ್ಟ್ ..!!! ► ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ Read More »

ಕರಾವಳಿ

ಲೋಕಸಭಾ ಚುನಾವಣಾ ವೇಳೆ ನೀತಿ ಸಂಹಿತೆ ಉಲ್ಲಂಘನೆ ► ಕೇಂದ್ರ ಸಚಿವ ಸದಾನಂದ ಗೌಡ ವಿರುದ್ಧದ ಎಫ್ಐಆರ್ ರದ್ದು.!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.12. 2014ರ ಲೋಕಸಭಾ ಚುನಾವಣಾ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಕೇಂದ್ರ ಸಚಿವ ಸದಾನಂದ ಗೌಡ ವಿರುದ್ಧ ಹಾಕಲಾಗಿದ್ದ ಎಫ್ಐಆರ್ ಅನ್ನು  ಹೈಕೋರ್ಟ್ ನ್ಯಾ. ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠದಿಂದ ರದ್ದುಗೊಳಿಸಿದೆ. ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ  ಜೆಎಂಎಫ್ ಸಿ ನ್ಯಾಯಾಲಯದಲ್ಲಿ  ಸದಾನಂದ ಗೌಡ ಅವರು ಅರ್ಜಿ ಸಲ್ಲಿಸಿದ್ದರು. ಚುನಾವಣೆ ಪ್ರಚಾರ ಅವಧಿ ಮುಗಿದ ಮೇಲೂ ಪ್ರಚಾರ ಮಾಡಿದರು ಎಂದು ಆರೋಪಿಸಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಫ್ಐಆರ್

ಲೋಕಸಭಾ ಚುನಾವಣಾ ವೇಳೆ ನೀತಿ ಸಂಹಿತೆ ಉಲ್ಲಂಘನೆ ► ಕೇಂದ್ರ ಸಚಿವ ಸದಾನಂದ ಗೌಡ ವಿರುದ್ಧದ ಎಫ್ಐಆರ್ ರದ್ದು.!! Read More »

ಕರಾವಳಿ

ಖರೀದಿಸಿದ ಎರಡೇ ತಿಂಗಳಲ್ಲಿ ಕೆಟ್ಟು ಹೋದ ಮಗನ ಹೊಸ ಬೈಕ್ ► ಶೋ ರೂಮ್ ಮುಂದೆ ವಿಷ ಕುಡಿದ ತಾಯಿ..!!!

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ.12. ಎರಡು ತಿಂಗಳ ಹಿಂದೆಯಷ್ಟೇ ಖರೀದಿಸಿದ ಮಗನ ಹೊಸ ಬೈಕನ್ನು ಎಕ್ಸ್ ಚೇಂಜ್ ಮಾಡಿಕೊಡಲು ಶೋ ರೂಮ್ ಸಿಬ್ಬಂದಿ ನಿರಾಕರಿಸಿದ್ದಕ್ಕಾಗಿ ಮನನೊಂದ ತಾಯಿಯು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಕಸ್ತೂರ್ ಬಾ ರಸ್ತೆಯ ಖಿವ್ ರಾಜ್ ಮೋಟರ್ಸ್ ಶೋ ರೂಮಿನಲ್ಲಿ ನಡೆದಿದೆ. ಸರೋಜಮ್ಮ ಆತ್ಮಹತ್ಯೆಗೆ ಯತ್ನಿಸಿದ ತಾಯಿ. ಸರೋಜಮ್ಮರ ಮಗ ಶ್ರೀಪಾದ ರಾಘವ್ ಎರಡು ತಿಂಗಳ ಹಿಂದೆ ಕಸ್ತೂರ್ ಬಾ ರಸ್ತೆಯ ಖಿವ್ ರಾಜ್ ಮೋಟರ್ಸ್ ಶೋ ರೂಮಿನಿಂದ ಡೋಮಿನರ್ 400 ಸಿಸಿ

ಖರೀದಿಸಿದ ಎರಡೇ ತಿಂಗಳಲ್ಲಿ ಕೆಟ್ಟು ಹೋದ ಮಗನ ಹೊಸ ಬೈಕ್ ► ಶೋ ರೂಮ್ ಮುಂದೆ ವಿಷ ಕುಡಿದ ತಾಯಿ..!!! Read More »

ಕರ್ನಾಟಕ

ರಾಜ್ಯಸರಕಾರದ ಹಿಂದೂ ವಿರೋಧಿ ದೋರಣೆಯನ್ನು ಖಂಡಿಸಿ ► ತಾಲೂಕಿನಾದ್ಯಂತ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.11. ರಾಜ್ಯ ಸರಕಾರದ ಹಿಂದು ವಿರೋಧಿ ದೋರಣೆಯನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆ, ವಿಶ್ವಹಿಂದು ಪರಿಷತ್ ಬಜರಂಗಳದ ವತಿಯಿಂದ ಬುಧವಾರ ಪುತ್ತೂರು ತಾಲೂಕಿನಾದ್ಯಂತ ಏಕಕಾಲದಲ್ಲಿ ಪ್ರತಿಭಟನೆ ನಡೆಯಿತು. ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕಾವು, ಕುಂಬ್ರ, ಬೆಟ್ಟಂಪಾಡಿ, ಕಬಕ, ಸವಣೂರು, ಕಾಣಿಯೂರು, ಪುರುಷರಕಟ್ಟೆ, ಕೋಡಿಂಬಾಡಿ, ಉಪ್ಪಿನಂಗಡಿ, ಆಲಂಕಾರು, ಕಡಬ ಹಾಗೂ ನೆಲ್ಯಾಡಿಯಲ್ಲಿ ಹಿಂದೂ ಜಾಗರಣಾ ವೇದಿಕೆ, ವಿಶ್ವಹಿಂದು ಪರಿಷತ್ ಬಜರಂಗಳದ ಪ್ರತಿಭಟನೆ ನಡೆಸಿದರು. ಪುತ್ತೂರು ಬಸ್ ನಿಲ್ದಾಣದ ಬಳಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬಜರಂಗದಳ ಜಿಲ್ಲಾ ಗೋರಕ್ಷ

ರಾಜ್ಯಸರಕಾರದ ಹಿಂದೂ ವಿರೋಧಿ ದೋರಣೆಯನ್ನು ಖಂಡಿಸಿ ► ತಾಲೂಕಿನಾದ್ಯಂತ ಪ್ರತಿಭಟನೆ Read More »

ಕರಾವಳಿ

ರಾತ್ರಿ ಬಸ್ಸಲ್ಲಿ ಅಕ್ರಮವಾಗಿ 34 ಕೆಜಿ ಚಿನ್ನ ಸಾಗಾಟ…! ► 6 ಮಂದಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.12. ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ 34 ಕೆಜಿ ಚಿನ್ನವನ್ನು ಬಸ್ ನಲ್ಲಿ ಸಾಗಿಸುತ್ತಿದ್ದ ತಂಡವನ್ನು ಕೇರಳದ ಅಬಕಾರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಚಿನ್ನ ಹಾಗೂ ಮಾದಕ ವಸ್ತು ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಕೇರಳ ವಯನಾಡಿನ ಅಬಕಾರಿ ಗುಪ್ತ ದಳದ ಪೊಲೀಸರು 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕರ್ನಾಟಕದಿಂದ ಕೇರಳಕ್ಕೆ ತೆರಳುತ್ತಿದ್ದ ಬಸ್ಸನ್ನು ತಪಾಸಣೆ ನಡೆಸಿದ ವೇಳೆ 4 ಬ್ಯಾಗ್ ಗಳಲ್ಲಿ 34 ಕೆಜಿ

ರಾತ್ರಿ ಬಸ್ಸಲ್ಲಿ ಅಕ್ರಮವಾಗಿ 34 ಕೆಜಿ ಚಿನ್ನ ಸಾಗಾಟ…! ► 6 ಮಂದಿ ಪೊಲೀಸ್ ವಶಕ್ಕೆ Read More »

ಕರಾವಳಿ

ಲಾರಿ ಹರಿದು ಯುವಕ ದಾರುಣ ಮೃತ್ಯು ► ಮೃತನ ವಾಹನದಲ್ಲಿ ಗಾಂಜ ಪತ್ತೆ..!!!

(ನ್ಯೂಸ್ ಕಡಬ) newskadaba.com ಉಳ್ಳಾಲ ,ಅ.12. ವೇಗವಾಗಿ ಬಂದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ  ದ್ವಿಚಕ್ರ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ತೊಕ್ಕಟಿನಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೃತ ಯುವಕನ್ನು ಬೆಳ್ತಂಗಡಿ ಮೂಲದ ಸಲೀಂ(30) ಕೇ.ಸಿ.ರೋಡ್ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದ ಸ್ಟಾಂಡ್ ಹಾಕಿ ವಾಹನ ಚಲಿಸಿದ್ದೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗ್ತಿದೆ. ಮೃತನ ದ್ವಿಚಕ್ರ ವಾಹನದಲ್ಲಿ ಎರಡು ಪ್ಯಾಕೆಟ್ ಗಾಂಜ ಪತ್ತೆಯಾಗಿದ್ದು ಈತ ಗಾಂಜ ಸೇವಿಸಿ ವಾಹನ ಚಲಾಯಿಸಿದ್ದಾನೆಯೇ ಎಂಬುದು ಇನ್ನು ನಿಖರವಾಗಿ ತಿಳಿದು ಬಂದಿಲ್ಲ.

ಲಾರಿ ಹರಿದು ಯುವಕ ದಾರುಣ ಮೃತ್ಯು ► ಮೃತನ ವಾಹನದಲ್ಲಿ ಗಾಂಜ ಪತ್ತೆ..!!! Read More »

ಕರಾವಳಿ

ಉಳ್ಳಾಲ: ಬಿಜೆಪಿ ಕಾರ್ಯಕರ್ತ ಝುಬೈರ್ ಕೊಲೆ ಪ್ರಕರಣ ► ಆರೋಪಿಗಳ ಬಂಧನ

 (ನ್ಯೂಸ್ ಕಡಬ) newskadaba.com ಮಂಗಳೂರು, ಅ.12. ಬಿಜೆಪಿ ಕಾರ್ಯಕರ್ತ ಝುಬೈರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಹೈಲ್, ನಿಜಾಮುದ್ದೀನ್, ಮಹಮ್ಮದ್ ಮುಸ್ತಫಾ, ತಾಜುದ್ದೀನ್ ಮತ್ತು ಆಸಿಫ್ ಬಂಧಿತ ಆರೋಪಿಗಳಾಗಿದ್ದು, ಹಳೇ ದ್ವೇಷದಿಂದ ಝುಬೈರ್ ನನ್ನು ಕೊಲೆ ಮಾಡಲಾಗಿದೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಕೊಲೆಗೆ ಸಂಚು ರೂಪಿಸಿದ್ದ ಇನ್ನೂ ಮೂವರು ಆರೋಪಿಗಳಿಗೆ ಶೋಧ ನಡೆಯುತ್ತಿದೆ. ರೌಡಿಸಂ ಮಟ್ಟ ಹಾಕಲು ಎರಡು ತಂಡಗಳ ರಚನೆಯಾಗಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಮಟ್ಟ ಹಾಕಲಿದ್ದೇವೆ ಎಂದು ಪೊಲೀಸ್ ಕಮಿಷನರ್ ಟಿ.ಆರ್

ಉಳ್ಳಾಲ: ಬಿಜೆಪಿ ಕಾರ್ಯಕರ್ತ ಝುಬೈರ್ ಕೊಲೆ ಪ್ರಕರಣ ► ಆರೋಪಿಗಳ ಬಂಧನ Read More »

ಕರಾವಳಿ

ಗಡಿಯಾರ: ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು- ಶ್ರೀಮತಿ ಶಕುಂತಲಾ ಶೆಟ್ಟಿ

(ನ್ಯೂಸ್ ಕಡಬ) newskadaba.com ಮಂಗಳೂರು,ಅ.12. ಇತ್ತಿಫಾಕ್ ಮೀಲಾದ್ ಕಮಿಟಿ ಜೋಗಿಬೆಟ್ಟು, ಗಡಿಯಾರ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ನಾಟೆಕಲ್, ಮಂಗಳೂರು ಇದರ ಸಹಯೋಗದೊಂದಿಗೆ  ಉಚಿತ ವೈದ್ಯಕೀಯ ಶಿಬಿರವು ಗಡಿಯಾರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ  ಇತ್ತೀಚೆಗೆ ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕಿ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶ್ರೀಮತಿ ಶಕುಂತಲಾ ಶೆಟ್ಟಿ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಮಾಜದಲ್ಲಿನ ಬಡ-ನಿರ್ಗತಿಕರ ಆರೋಗ್ಯವನ್ನು ಕಾಪಾಡುವಲ್ಲಿ ಯುವಕರು ಸಂಘಟಿತರಾಗಿ ಉಚಿತ ವೈದ್ಯಕೀಯ ಶಿಬಿರ ನಡೆಸುವುದರೊಂದಿಗೆ, ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ

ಗಡಿಯಾರ: ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು- ಶ್ರೀಮತಿ ಶಕುಂತಲಾ ಶೆಟ್ಟಿ Read More »

ಕರಾವಳಿ

ಕಲ್ಲಂತ್ತಡ್ಕ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ ► ಉತ್ತಮ ಪೌಷ್ಟಿಕ ಆಹಾರಕ್ಕೆ ಬಹುಮಾನ

(ನ್ಯೂಸ್ ಕಡಬ) newskadaba.com ಕಡಬ,ಅ.12. ಇಲ್ಲಿನ  ಕಲ್ಲಂತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕಾ ಆಹಾರ ಸಪ್ತಾಹ ಹಾಗೂ ಮಾತೃಪೂರ್ಣ ಯೋಜನೆ ಇತ್ತೀಚೆಗೆ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಡಬ ವಲಯ ಮೇಲ್ವಿಚಾರಕಿ ಹೇಮಾರಾಮದಾಸ್ ಮಾತೃಪೂರ್ಣ ಯೋಜನೆ ಹಾಗೂ ಪೌಷ್ಟಿಕಾ ಆಹಾರದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ, ಕಿ.ಆರೋಗ್ಯ ಸಹಾಯಕಿ ಬಿ.ಬಿ.ಅನ್ನಮ್ಮ, ಆಶಾಕಾರ್ಯಕರ್ತೆ ನಿತ್ಯಾಲತಾ ಹಾಗೂ ಹಿರಿಯ ನಾಗರಿಕ ಮಹಿಳೆ ಅರುಣಾ ಸೇರಿದಂತೆ ಸ್ರೀಶಕ್ತಿ ಸದಸ್ಯೆಯರು. ಗರ್ಭಿಣಿಯರು , ಬಾಣಂತಿಯರು, ಕಿಶೋರಿಯರು,

ಕಲ್ಲಂತ್ತಡ್ಕ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ ► ಉತ್ತಮ ಪೌಷ್ಟಿಕ ಆಹಾರಕ್ಕೆ ಬಹುಮಾನ Read More »

ಕರಾವಳಿ
Scroll to Top