karnataka

ಕಡಬ: ಸರಸ್ವತೀ ವಿದ್ಯಾಲಯದಲ್ಲಿ ►ಕನ್ನಡ ರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ನ.1. 62ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಡಬದ ಸರಸ್ವತೀ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶ್ರೀಯುತ ಸತೀಶ್ ನಾಯ್ಕ್‌ ಕಡಬ ಇವರು ಧ್ವಜಾರೋಹಣಗೈದು ಕನ್ನಡ ರಾಜ್ಯೋತ್ಸವದ ಮಹತ್ವ ತಿಳಿಸಿದರು. ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಇವರು ಅಧ್ಯಕ್ಷೀಯ ಭಾಷಣ ಮಾಡಿದರು. ವೇದಿಕೆಯಲ್ಲಿ ಪ್ರಾಥಮಿಕ ವಿಭಾಗದ ಮುಖ್ಯ ಶ್ರೀಮಾನ್ ಶ್ರೀ ಮಾಧವ ಕೋಲ್ಪೆ ಹಾಗೂ ಪ್ರೌಢವಿಭಾಗದ ಮುಖ್ಯಮಾತಾಜಿ ಶೈಲಶ್ರೀ ಮಾತಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರರು ಭಾಗವಹಿಸಿದ್ದರು. ಶೈಲಶ್ರೀ […]

ಕಡಬ: ಸರಸ್ವತೀ ವಿದ್ಯಾಲಯದಲ್ಲಿ ►ಕನ್ನಡ ರಾಜ್ಯೋತ್ಸವ ಆಚರಣೆ Read More »

ಕರಾವಳಿ

ಮರ್ದಾಳ: 21ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ► ಕ್ರೀಡಾಕೂಟಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ನ.1. ಶ್ರೀವಿವೇಕಾನಂದ ಯುವಕ ಮಂಡಲ(ರಿ.) ಮರ್ದಾಳ ಇದರ ವತಿಯಿಂದ 21ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಪುರುಷರ 55ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಮತ್ತು ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಬುಧವಾರ ಮರ್ದಾಳ ಶ್ರೀಅಯ್ಯಪ್ಪ ಭಜನಾ ಮಂದಿರ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಗೇರು ನಿಗಮದ ನಿವೃತ್ತ ಮ್ಯಾನೇಜರ್ ಗಂಗಾಧರ ಗೌಡ ಪಂಜೋಡಿ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಪ್ರಗತಿಪರ ಕೃಷಿಕರಾದ ಪ್ರೇಮಸಾಗರ ಆಳ್ವ ಅತ್ಲಾಜೆ

ಮರ್ದಾಳ: 21ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ► ಕ್ರೀಡಾಕೂಟಕ್ಕೆ ಚಾಲನೆ Read More »

ಕರಾವಳಿ

ಕಡಬ: ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆಯಬೇಕಾದರೆ ಊರ ಜನರ ಸಹಕಾರ ಅಗತ್ಯ ►ಶಾಸಕ ಎಸ್‌. ಅಂಗಾರ

(ನ್ಯೂಸ್ ಕಡಬ) newskadaba.com ಕಡಬ, ನ.1. ಮರ್ದಾಳ- ಸುಬ್ರಹ್ಮಣ್ಯ ರಸ್ತೆಯ ಐತ್ತೂರು ಸಂಪರ್ಕಿಸುವ ಜಿ.ಪಂ. ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌. ಅಂಗಾರ ಅವರು ನೆರವೇರಿಸಿದರು. 3.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅಂಗಾರ ಅವರು, ಪ್ರಾಮಾಣಿಕ ಮನಸ್ಸಿನಿಂದ ಜನರು ನೀಡಿದ ಅವಕಾಶವನ್ನು ಉಪಯೋಗಿಸಿಕೊಂಡು ಜನಹಿತಕ್ಕಾಗಿ ಶ್ರಮಿಸುವ ಜನಪ್ರತಿನಿಧಿಗಳಿಗೆ ಜನರು ನಿಜವಾದ ಗೌರವವನ್ನು ಸಲ್ಲಿಸುತ್ತಾರೆ. ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕು. ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆಯಬೇಕಾದರೆ ಊರ

ಕಡಬ: ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆಯಬೇಕಾದರೆ ಊರ ಜನರ ಸಹಕಾರ ಅಗತ್ಯ ►ಶಾಸಕ ಎಸ್‌. ಅಂಗಾರ Read More »

ಕರಾವಳಿ

ಮೈಸೂರು: ಹೆಚ್‍ಡಿ ಕೋಟೆಯ ಜೆಡಿಎಸ್ ಶಾಸಕ ಚಿಕ್ಕಮಾದು ವಿಧಿವಶ

(ನ್ಯೂಸ್ ಕಡಬ) newskadaba.com ಮೈಸೂರು, ನ.1. ಕಳೆದ ಹಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಹೆಚ್‍ಡಿ ಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಚಿಕ್ಕಮಾದು ಅವರು ಬುಧವಾರ ನಸುಕಿನ ಜಾವ 2 ಗಂಟೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಳೆದ ಮೂರು ದಿನಗಳಿಂದ ಮೈಸೂರಿನ ಅರವಿಂದ ಆಸ್ಪತ್ರೆಯಲ್ಲಿ ಶಾಸಕ ಚಿಕ್ಕಮಾದು ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಶಾಸಕ ಚಿಕ್ಕಮಾದು ಅವರ ಪಾರ್ಥೀವ ಶರೀರವನ್ನು ಅರವಿಂದ ಆಸ್ಪತ್ರೆಯಿಂದ ಮೈಸೂರಿನ ವಿಜಯನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಮಾಜಿ ಸಂಸದ ವಿಶ್ವನಾಥ್, ಶಾಸಕರಾದ ಜಿ.ಟಿ.ದೇವೆಗೌಡ,

ಮೈಸೂರು: ಹೆಚ್‍ಡಿ ಕೋಟೆಯ ಜೆಡಿಎಸ್ ಶಾಸಕ ಚಿಕ್ಕಮಾದು ವಿಧಿವಶ Read More »

ಕರಾವಳಿ

ನೂಜಿಬಾಳ್ತಿಲ ಗ್ರಾ.ಪಂ.ಸಾಮಾನ್ಯ ಸಭೆ ► ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಗ್ರಾ.ಪಂ.ಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ನ.1. ನೂಜಿಬಾಳ್ತಿಲ-ರೆಂಜಿಲಾಡಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಬೇಕೆಂದು ದೇವಸ್ಥಾನ ಪ್ರಾರ್ಥನಾ ಮಂದಿರಗಳು, ಮಸೀದಿ ಚರ್ಚ್, ಸಂಘ ಸಂಸ್ಥೆಗಳು ಗ್ರಾಮಸ್ಥರು ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ ಸದಸ್ಯೆ ಪುಷ್ಪಲತಾ ಪೇರಡ್ಕರವರು ಗ್ರಾ.ಪಂ.ಆಡಳಿತ ಮಂಡಳಿ, ಗ್ರಾಮಸ್ಥರು ಸೇರಿಕೊಂಡು ಅಷ್ಟೊಂದು ಹೋರಾಟ ನಡೆಸಿದರು ಮದ್ಯದಂಗಡಿ 2,3 ಬಾರಿ ಬಂದ್ ಮಾಡಿಸಿದ್ದರೂ ಮತ್ತೇ ನ್ಯಾಯಾಲಯದಿಂದ ತಡೆ ತಂದು ತೆರೆಯಲಾಗಿದೆ. ಈ ಬಗ್ಗೆ ಗ್ರಾ.ಪಂ.ನಿಂದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದಲ್ಲದೆ ನ್ಯಾಯಾಲಯದಲ್ಲಿ ಸ್ಥಳೀಯ ಆಡಳಿತವಾಗಿರುವ

ನೂಜಿಬಾಳ್ತಿಲ ಗ್ರಾ.ಪಂ.ಸಾಮಾನ್ಯ ಸಭೆ ► ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಗ್ರಾ.ಪಂ.ಗೆ ಮನವಿ Read More »

ಕರಾವಳಿ

ಮಧುಮೇಹದ ಕ್ರೂರ ಲೀಲೆಗೆ ಸಿಲುಕಿ ಕಾಲು ಕಳೆದುಕೊಂಡ ಕೋಡಿಂಬಾಳದ ಹುಕ್ರಪ್ಪ ► ಈ ಬಡಕುಟುಂಬಕ್ಕೆ ಬೇಕಾಗಿದೆ ನೆರವಿನ ಹಸ್ತ

(ನ್ಯೂಸ್ ಕಡಬ) newskadaba.com ಕಡಬ, ನ.1. ಕೂಲಿ ಕೆಲಸ ಮಾಡಿ ಬಡಕುಟುಂಬಕ್ಕೆ ಆಧಾರವಾಗಿದ್ದ ಜೀವವೊಂದು ಮಧುಮೇಹಕ್ಕೆ ತುತ್ತಾಗಿ ಕಾಲನ್ನು ಮಣಿಗಂಟಿನಿಂದ ಕತ್ತರಿಸಿ ಕಳೆದ ಒಂದು ವರ್ಷದಿಂದ ಕುಳಿತ್ತಲ್ಲೆ ದಿನ ಕಳೆಯುವ ಪರಿಸ್ಥಿತಿಯಿದ್ದು ಕುಟುಂಬವು ಸಂಕಷ್ಟದಲ್ಲಿದೆ. ಕಡಬ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಮಜ್ಜಗುಡ್ಡೆ ದಿ. ಮಾಯಿಲಪ್ಪ ಎಂಬವರ ಪುತ್ರ ಹುಕ್ರಪ್ಪ (56ವ) ಮಧುಮೇಹದ ಕ್ರೂರ ಲೀಲೆಗೆ ಸಿಲುಕಿದವರು. ಇವರು ಸುಮಾರು 25ವರ್ಷಗಳಿಂದ ಕಡಬದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಲಿಕಾರ್ಮಿಕನಾಗಿದ್ದು ಗಾರೆ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಗಾರೆ

ಮಧುಮೇಹದ ಕ್ರೂರ ಲೀಲೆಗೆ ಸಿಲುಕಿ ಕಾಲು ಕಳೆದುಕೊಂಡ ಕೋಡಿಂಬಾಳದ ಹುಕ್ರಪ್ಪ ► ಈ ಬಡಕುಟುಂಬಕ್ಕೆ ಬೇಕಾಗಿದೆ ನೆರವಿನ ಹಸ್ತ Read More »

ಕರಾವಳಿ

ಜಾರ್ಖಂಡ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾಟಕ್ಕೆ ► ಹೊಸ್ಮಠದ ಹುಸೇನ್ ಅಝ್ಮಾಲ್ ಆಯ್ಕೆ 

(ನ್ಯೂಸ್ ಕಡಬ) newskadaba.com ಕಡಬ, ನ.01. ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳ ಕ್ರೀಡಾಕೂಟ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ 29ನೇ ರಾಷ್ಟ್ರೀಯ ಸಬ್ ಜ್ಯೂನಿಯರ್ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಕಡಬ ಸೈಂಟ್ ಜೋಕಿಮ್ಸ್‌ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಹುಸೇನ್ ಅಝ್ಮಾಲ್ ಆಯ್ಕೆಯಾಗಿದ್ದಾರೆ. ಇವರು ನವೆಂಬರ್ 4ರಿಂದ 7ರವರೆಗೆ ಜಾರ್ಖಂಡ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುವ ದ.ಕ. ಜಿಲ್ಲೆಯ ಏಕೈಕ ಕ್ರೀಡಾಪಟುವಾಗಿದ್ದಾರೆ. ಇವರಿಗೆ ಕಡಬ

ಜಾರ್ಖಂಡ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾಟಕ್ಕೆ ► ಹೊಸ್ಮಠದ ಹುಸೇನ್ ಅಝ್ಮಾಲ್ ಆಯ್ಕೆ  Read More »

ಕ್ರೀಡಾ ನ್ಯೂಸ್

ಕರ್ನಾಟಕ ರಾಜ್ಯದ ಮೊದಲ ಮಹಿಳಾ ಡಿಜಿ-ಐಜಿಪಿಯಾಗಿ ► ನೀಲಮಣಿ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.31.  ಪೊಲೀಸ್ ಮಹಾ ನಿರ್ದೇಶಕರ ಹುದ್ದೆಗೆ ನೀಲಮಣಿ ರಾಜು ಆಯ್ಕೆ ಆಗಿದ್ದು, ಈ ಮೂಲಕ ಕರ್ನಾಟಕ ರಾಜ್ಯದ  ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೂತನ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಮೂವರು ಹಿರಿಯ ಅಧಿಕಾರಿಗಳ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಕೊನೆಗೂ ಮಹಿಳಾ ಅಧಿಕಾರಿಯೊಬ್ಬರು  ಡಿಜಿ-ಐಜಿಪಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಕರ್ನಾಟಕದ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಆಯ್ಕೆಯಾಗಿರುವ ನೀಲಮಣಿ ಎನ್.ರಾಜು 1983ರ ಬ್ಯಾಚ್​’​ನ ಐಪಿಎಸ್​ ಅಧಿಕಾರಿಯಾಗಿದ್ದು,  23 ವರ್ಷಗಳ ಕಾಲ ಕೇಂದ್ರ

ಕರ್ನಾಟಕ ರಾಜ್ಯದ ಮೊದಲ ಮಹಿಳಾ ಡಿಜಿ-ಐಜಿಪಿಯಾಗಿ ► ನೀಲಮಣಿ ಆಯ್ಕೆ Read More »

ಕರಾವಳಿ

ಮಕ್ಕಳಿಗೆ ತಿನಸುಗಳನ್ನು ನೀಡುವಾಗ ಎಚ್ಚರ…!!! ►ಬೆಳ್ತಂಗಡಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಮಗು ಮೃತ್ಯು..!!!  

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ , ಅ.31. ಗಂಟಲಲ್ಲಿ ಚಕ್ಕುಲಿ ಸಿಲುಕಿ ಒಂದು ವರ್ಷದ ಪುಟ್ಟ ಮಗುವೊಂದು ಮೃತಪಟ್ಟ ಆಘಾತಕಾರಿ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ನಡೆದಿದೆ. ಮೃತ  ಮಗುವನ್ನು ಅರುಷ್( 1 ವರ್ಷ) ಎಂದು ಗುರುತಿಸಲಾಗಿದ್ದು,  ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ನಿವಾಸಿ ವಿಠಲ ಎಂಬವರ ಮಗ ಎನ್ನಲಾಗಿದೆ. ಮಗ ಅರುಷ್ ಗೆ ಪೋಷಕರು ತಿನ್ನಲು ಚಕ್ಕುಲಿ ತುಂಡೊಂದನ್ನು ನೀಡಿದ್ದರು. ಏನೂ ಅರಿಯದ ಮುಗ್ಧ ಕಂದಮ್ಮನ ಗಂಟಲಿನಲ್ಲಿ ಚಕ್ಕುಲಿ ತುಂಡು ಸಿಲುಕಿದ ಪರಿಣಾಮ ಮಗುವಿಗೆ ಉಸಿರಾಡಲು ಕಷ್ಟವಾಗಿತ್ತು.

ಮಕ್ಕಳಿಗೆ ತಿನಸುಗಳನ್ನು ನೀಡುವಾಗ ಎಚ್ಚರ…!!! ►ಬೆಳ್ತಂಗಡಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಮಗು ಮೃತ್ಯು..!!!   Read More »

ಕರಾವಳಿ

ನಂದಿನಿ ಹಾಲಿನ ವಾಹನ ಡಿಕ್ಕಿ► ನೂರಾರು ಹಾಲಿನ ಪ್ಯಾಕೆಟ್ ಮಣ್ಣುಪಾಲು…!!!

(ನ್ಯೂಸ್ ಕಡಬ) newskadaba.com ಮಂಡ್ಯ, ಅ.31. ನಂದಿನಿ ಹಾಲಿನ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಸೇತುವೆಗೆ ಡಿಕ್ಕಿ ಹೊಡೆದು ಉರುಳಿಬಿದ್ದ ಘಟನೆ ನಾಗಮಂಗಲ ತಾಲೂಕಿನ ಕಾಚೇನಹಳ್ಳಿ ಬಳಿ ಮಂಗಳವಾರ ಮುಂಜಾನೆ ನಡೆದಿದೆ. ವಾಹನ ಉರುಳಿ ಬಿದ್ದ ಪರಿಣಾಮ ನಂದಿನಿ ಹಾಲಿನ ನೂರಾರು ಪ್ಯಾಕೆಟ್ ಹಳ್ಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು, ಕೆಲವೊಂದು ಹಾಲಿನ ಪ್ಯಾಕೆಟ್ ಒಡೆದು ಹೋಗಿ ಹಾಲು ಮಣ್ಣು ಪಾಲಾಗಿದೆ. ಚೆನ್ನಾಗಿರುವ ಹಾಲಿನ ಪ್ಯಾಕೆಟ್ ಗಳನ್ನು ಬೇರೊಂದು ವಾಹನದಲ್ಲಿ ಬೆಳ್ಳೂರಿಗೆ ಸಾಗಿಸಲಾಗಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಒಂದಷ್ಟು ಸಣ್ಣಪುಟ್ಟ ಗಾಯಗಳಾಗಿದ್ದು,

ನಂದಿನಿ ಹಾಲಿನ ವಾಹನ ಡಿಕ್ಕಿ► ನೂರಾರು ಹಾಲಿನ ಪ್ಯಾಕೆಟ್ ಮಣ್ಣುಪಾಲು…!!! Read More »

ಕರಾವಳಿ
Scroll to Top