karnataka

ಯೋಧ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು,ಮೇ.09.ರಾಯಚೂರು ವಾರದ ರಜೆಯ ಮೇಲೆ ಮನೆಗೆ ಬಂದಿದ್ದ  ಯೋಧ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ಬುಧವಾರ ತಡರಾತ್ರಿ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದ ಶಿವಕುಮಾರ್‌ (34) ಮೃತ ಯೋಧನಾಗಿದ್ದು, ವಾರದ ರಜೆಯ ಮೇಲೆ ಮನೆಗೆ ಬಂದಿದ್ದರು. ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಶಿವಕುಮಾರ್‌ರವರು 15 ವರ್ಷಗಳಿಂದ ನಿರಂತರವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಶಿವಕುಮಾರ್‌ ಅವರಿಗೆ ಈ ಹಿಂದೆ 2 ಬಾರಿ ಹೃದಯಾಘಾತವಾಗಿತ್ತು ಎಂದು ತಿಳಿದು ಬಂದಿದೆ.

ಯೋಧ ಹೃದಯಾಘಾತದಿಂದ ನಿಧನ Read More »

ಕರ್ನಾಟಕ

ಅಗ್ನಿ ಅವಘಡಕ್ಕೆ ತುತ್ತಾದ 40 ಜನರಿದ್ದ ಬಸ್ ; ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com,ಬೆಂಗಳೂರು,ಮೇ.09. ತಮಿಳುನಾಡು ಗಡಿ ಭಾಗದ ಶೂಲಗಿರಿ ಸಮೀಪ ಬೆಂಗಳೂರಿನಿಂದ ತೆರಳಿದ್ದ ಖಾಸಗಿ ಬಸ್ಸೊಂದು ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಘಟನೆ ನಡೆದಿದೆ. ಬಸ್‌ನಲ್ಲಿ 40 ಮಂದಿ ಪ್ರಯಾಣಿಕರಿದ್ದು ಅದೃಷ್ಟವಷಾತ್‌ ಎಲ್ಲರೂ ಪಾರಾಗಿದ್ದಾರೆ.ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಪಕ್ಕದಲ್ಲಿ ಚಲಿಸುತ್ತಿದ್ದ ವಾಹನಗಳ ಚಾಲಕರು ತಿಳಿಸಿದ್ದು ಕೂಡಲೇ ಬಸ್‌ ನಿಲ್ಲಿಸಲಾಗಿದೆ. ಸಮಯಪ್ರಜ್ಞೆಯಿಂದಲಾಗಿ ಎಲ್ಲರೂ ನಿಮಿಷಗಳ ಒಳಗೆ ಬಸ್‌ನಿಂದ ಕೆಳಗಿಳಿದಿದ್ದಾರೆ. ಯಾರೊಬ್ಬರಿಗೂ ಗಾಯಗಳಾಗಿಲ್ಲ.ಬೆಳಗಿನ ಜಾವ ಘಟನೆ ಸಂಭವಿಸಿದ್ದು,ಬಸ್‌ ಸಂಪೂರ್ಣವಾಗಿ ಭಸ್ಮವಾಗಿದ್ದು, ಪ್ರಯಾಣಿಕರ ಲಗೇಜ್‌ಗಳೂ ಸಂಪೂರ್ಣವಾಗಿ ಸುಟ್ಟು ಹೋಗಿವೆ. ಶೂಲಗಿರಿ ಪೊಲೀಸರು ಸ್ಥಳಕ್ಕಾಗಮಿಸಿ

ಅಗ್ನಿ ಅವಘಡಕ್ಕೆ ತುತ್ತಾದ 40 ಜನರಿದ್ದ ಬಸ್ ; ತಪ್ಪಿದ ಭಾರೀ ಅನಾಹುತ Read More »

ರಾಷ್ಟ್ರೀಯ ನ್ಯೂಸ್

ಸೌರಾಷ್ಟ್ರ ಪ್ರೀಮಿಯರ್ ಲೀಗ್ ಆಡಲಿರುವ ಚೇತೇಶ್ವರ ಪೂಜಾರ

(ನ್ಯೂಸ್ ಕಡಬ) newskadaba.com ಕಡಬ,ಮೇ.09.ರಾಜ್‌ಕೋಟ್ ನಲ್ಲಿ ಮೇ14ರಿಂದ ಆರಂಭವಾಗಲಿರುವ ಮೊದಲ ಆವೃತ್ತಿ ಸೌರಾಷ್ಟ್ರ ಪ್ರೀಮಿಯರ್‌ ಲೀಗ್‌ನಲ್ಲಿ ಭಾರತ ಟೆಸ್ಟ್‌ ಕ್ರಿಕೆಟಿಗ ಚೇತೇಶ್ವರ ಪೂಜಾರ ಪಾಲ್ಗೊಳ್ಳಲಿದ್ದಾರೆ.ಸ್ವತಃ ಈ ವಿಷಯವನ್ನು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಬುಧವಾರ ಪ್ರಕಟಪಡಿಸಿದೆ. ಮೊದಲ ಆವೃತ್ತಿಯಲ್ಲಿ 5 ತಂಡಗಳು ಪಾಲ್ಗೊಳ್ಳಲಿದ್ದು, ಹೊಸ ಕೂಟ ಹೊಸ ಉತ್ಸಾಹ ತಂದಿದ್ದು ಎಲ್ಲಾ ಆಟಗಾರರು ಸಿಡಿಯಲು ರೆಡಿಯಾಗಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಬಾರಿ ಪೂಜಾರ ಇತ್ತೀಚಿಗೆ ಕೌಂಟಿ ಕ್ರಿಕೆಟ್ ಕೂಟದಲ್ಲಿ ಆಡಿದ್ದಾರೆ. ಪೂಜಾರ ಒಟ್ಟು 68 ಟೆಸ್ಟ್‌ ಕ್ರಿಕೆಟ್ ಪಂದ್ಯದಲ್ಲಿ

ಸೌರಾಷ್ಟ್ರ ಪ್ರೀಮಿಯರ್ ಲೀಗ್ ಆಡಲಿರುವ ಚೇತೇಶ್ವರ ಪೂಜಾರ Read More »

ಕ್ರೀಡಾ ನ್ಯೂಸ್

ಬಟ್ಟೆ ಶೋ ರೂಮ್ ನೊಳಗೆ ಅಗ್ನಿ ಅವಘಡ; ಐವರು ಕೆಲಸಗಾರರ ಸಾವು

(ನ್ಯೂಸ್ ಕಡಬ) newskadaba.com ಪುಣೆ,ಮೇ.09. ಪುಣೆಯ ಉರೂಲಿ ದೇವಾಚಿ ಗ್ರಾಮದಲ್ಲಿ ಗುರುವಾರ ಬಟ್ಟೆ ಶೋರೂಂನೊಳಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಐದು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ  ನಡೆದಿದೆ.ಇಂದು ಮುಂಜಾನೆ ರಾಜ್ ಯೋಗ್ ಸೀರೆ ಮಳಿಗೆಯೊಳಗೆ ಬೆಂಕಿ ಹತ್ತಿಕೊಂಡಿದ್ದು, ಕೆಲ ಹೊತ್ತಿನಲ್ಲಿ ಬೆಂಕಿ ಇತರೆಡೆಗೂ ಹಬ್ಬತೊಡಗಿತ್ತು. ಘಟನಾ ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನ ಹಾಗೂ 10 ನೀರಿನ ಟ್ಯಾಂಕರ್ ಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿವೆ ಎಂದು ವರದಿ ಹೇಳಿದೆ. ಸುಮಾರು ಎರಡು, ಮೂರು ಗಂಟೆಗಳ ಕಾಲ

ಬಟ್ಟೆ ಶೋ ರೂಮ್ ನೊಳಗೆ ಅಗ್ನಿ ಅವಘಡ; ಐವರು ಕೆಲಸಗಾರರ ಸಾವು Read More »

ರಾಷ್ಟ್ರೀಯ ನ್ಯೂಸ್

ನರೇಂದ್ರಮೋದಿ,ಯೋಗಿಯನ್ನು ಅಧಿಕಾರದಿಂದ ಇಳಿಸುವ ವರೆಗೆ ಎಸ್ ಪಿ – ಬಿಎಸ್ ಪಿ ಮೈತ್ರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.09. ಅಝಂಗಡ , ಎಸ್‌ಪಿ ನಾಯಕ ಅಖಿಲೇಶ್ ಯಾದವ್‌ ಅವರು ಕಣಕ್ಕಿಳಿದಿರುವ ಅಝಂಗಡದಲ್ಲಿ ಚು ನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಯಾವತಿ, ನೀವು ಎಷ್ಟೇ ಪ್ರಯತ್ನ ಪಟ್ಟರೂ ನಮ್ಮ ಮೈತ್ರಿಯನ್ನು ಮುರಿಯಲು ಸಾಧ್ಯವಿಲ್ಲ. ಸುಧೀರ್ಘ‌ ಹಾದಿಯಲ್ಲಿ ಮೈತ್ರಿ ಸಾಗಬೇಕಾಗಿದೆ.ನರೇಂದ್ರ ಮೋದಿ ಮತ್ತುಯೋಗಿ ಆದಿತ್ಯನಾಥ್‌ ಅವರನ್ನು ಅಧಿಕಾರದಿಂದ ಇಳಿಸುವವರೆಗೆ ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ಮುಂದುವರಿಯುತ್ತದೆ ಎಂದು ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಬುಧವಾರ ಹೇಳಿಕೆ ನೀಡಿದ್ದಾರೆ. ನಾವು ಮೈತ್ರಿಯನ್ನು ಕೇವಲ ಮೋದಿ ವಿರುದ್ಧ ಮಾಡಿಲ್ಲ. ಮೋದಿ ಅನುಯಾಯಿ

ನರೇಂದ್ರಮೋದಿ,ಯೋಗಿಯನ್ನು ಅಧಿಕಾರದಿಂದ ಇಳಿಸುವ ವರೆಗೆ ಎಸ್ ಪಿ – ಬಿಎಸ್ ಪಿ ಮೈತ್ರಿ Read More »

ರಾಷ್ಟ್ರೀಯ ನ್ಯೂಸ್

ಅತಿಥಿ ಉಪನ್ಯಾಸಕರ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.09. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇದರ ಅಧೀನದಲ್ಲಿ ನಡೆಸಲ್ಪಡುವ ಸರಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು, ದೇರಳಕಟ್ಟೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇಲ್ಲಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವ ಸಲುವಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.  ಅರ್ಜಿಯನ್ನು ಮೇ 20 ರೊಳಗೆ ಇತ್ತೀಚಿನ ಒಂದು ಭಾವಚಿತ್ರ (ಪಾಸ್‍ಪೋರ್ಟ್ ಸೈಜ್) ದೊಂದಿಗೆ ಪ್ರಾಂಶುಪಾಲರು, ಸರಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ದೇರಳಕಟ್ಟೆ

ಅತಿಥಿ ಉಪನ್ಯಾಸಕರ ನೇಮಕ Read More »

ಕರಾವಳಿ

ಭಾರತೀಯ ವಾಯುಪಡೆ ಇಸ್ರೇಲ್ ನಿರ್ಮಿತ ನೂತನ ಅವತರಣಿಕೆಯ(ಶ್ರೇಣಿ) ಬಂಕರ್ ಬಸ್ಟರ್ ಸ್ಪೈಸ್-2000 ಬಾಂಬ್ ಅನ್ನು ಖರೀದಿಸಲು ಚಿಂತನೆ

( ನ್ಯೂಸ್ ಕಡಬ)  ಮೇ 8, ಹೊಸದಿಲ್ಲಿ: ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಶ್ ಎ ಮೊಹಮ್ಮದ್ ಉಗ್ರರ ಅಡಗುತಾಣದ ಮೇಲೆ ವೈಮಾನಿಕ ದಾಳಿ ನಡೆಸಿ ಯಶಸ್ವಿಯಾದ ಬಳಿಕ ಇದೀಗ ಭಾರತೀಯ ವಾಯುಪಡೆ ಇಸ್ರೇಲ್ ನಿರ್ಮಿತ ನೂತನ ಅವತರಣಿಕೆಯ(ಶ್ರೇಣಿ) ಬಂಕರ್ ಬಸ್ಟರ್ ಸ್ಪೈಸ್-2000 ಬಾಂಬ್ ಅನ್ನು ಖರೀದಿಸಲು ಚಿಂತನೆ ನಡೆಸಿದೆ ಎಂದು ವರದಿ ತಿಳಿಸಿದೆ.ನೂತನ ಅವತರಣಿಕೆಯ ಸ್ಪೈಸ್-2000 ಬಾಂಬ್ ಬಳಸುವುದರಿಂದ ಶತ್ರುಗಳ ಅಡಗುತಾಣ, ಕಟ್ಟಡಗಳನ್ನು ಕೆಲವು ಸೆಕೆಂಡುಗಳಲ್ಲಿ ಧ್ವಂಸಗೊಳಿಸಬಹುದಾಗಿದೆ. ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಶ್ ಉಗ್ರರ ಅಡಗುತಾಣದ ಮೇಲೆ ವಾಯುಪಡೆ

ಭಾರತೀಯ ವಾಯುಪಡೆ ಇಸ್ರೇಲ್ ನಿರ್ಮಿತ ನೂತನ ಅವತರಣಿಕೆಯ(ಶ್ರೇಣಿ) ಬಂಕರ್ ಬಸ್ಟರ್ ಸ್ಪೈಸ್-2000 ಬಾಂಬ್ ಅನ್ನು ಖರೀದಿಸಲು ಚಿಂತನೆ Read More »

ರಾಷ್ಟ್ರೀಯ ನ್ಯೂಸ್

ಚೌಕೀದಾರ್ ಚೋರ್ ಹೈ ಹೇಳಿಕೆ : ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಉನ್ನತ ನ್ಯಾಯ ಪೀಠದ ಮುಂದೆ ಕ್ಷಮೆಯಾಚನೆ

( ನ್ಯೂಸ್ ಕಡಬ)  ಮೇ 8, ನವದೆಹಲಿ : ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ಚೌಕೀದಾರ್ ಚೋರ್ ಹೈ ಎಂದು ಹೇಳಿದೆ ಎಂಬುದಾಗಿ ತಾನು ತಪ್ಪಾಗಿ ಹೇಳಿರುವುದಕ್ಕೆ ಬುಧವಾರ ಸುಪ್ರೀಂ ಕೋರ್ಟಿನಲ್ಲಿ ನಿಶ್ಶರ್ತ ಕ್ಷಮೆ ಯಾಚಿಸಿದರು.ಮಾತ್ರವಲ್ಲದೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ತನ್ನ ವಿರುದ್ಧ ದಾಖಲಿಸಿರುವ ಕೋರ್ಟ್ ನಿಂದನೆಯ ಕ್ರಿಮಿನಲ್ ಪ್ರಕರಣವನ್ನು ಕೊನೆಗೊಳಿಸಬೇಕೆಂದೂ ರಾಹುಲ್ ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟಿಗೆ ಇಂದು ರಾಹುಲ್ ಗಾಂಧಿ ಸಲ್ಲಿಸಿದ ಮೂರು ಪುಟಗಳ ಹೊಸ

ಚೌಕೀದಾರ್ ಚೋರ್ ಹೈ ಹೇಳಿಕೆ : ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಉನ್ನತ ನ್ಯಾಯ ಪೀಠದ ಮುಂದೆ ಕ್ಷಮೆಯಾಚನೆ Read More »

ರಾಷ್ಟ್ರೀಯ ನ್ಯೂಸ್

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ – ವಾರ್ಷಿಕೋತ್ಸವ

ಮಂಗಳೂರು ಮೇ 6 ( ನ್ಯೂಸ್ ಕಡಬ) newskadaba.com,) :-ಕರ್ನಾಟಕ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪು) ಕದ್ರಿಹಿಲ್ಸ್, ಮಂಗಳೂರು ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಮೇ 10 ರಂದು ಪೂರ್ವಾಹ್ನ 9.30 ಗಂಟೆಗೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪರಿಶ್ರಮ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಬಿ.ಹೆಚ್.ನಾರಾಯಣಪ್ಪ\ರವರು ಮಾಡಲಿದ್ದಾರೆ. ಅಧ್ಯಕ್ಷತೆ ಪ್ರಾಂಶುಪಾಲರು ಉಪನಿರ್ದೇಶಕರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪು), ಗಿರಿಧರ್ ಸಾಲಿಯಾನ್ ವಹಿಸಲಿದ್ದಾರೆ

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ – ವಾರ್ಷಿಕೋತ್ಸವ Read More »

ಕರಾವಳಿ

ಪೊಲೀಸ್ ಕಾನ್‍ಸ್ಟೇಬಲ್ ನಾಪತ್ತೆ

ಮಂಗಳೂರು ಮೇ 6( ನ್ಯೂಸ್ ಕಡಬ) newskadaba.com,) :- ಎನ್‍ಎಮ್‍ಪಿಟಿಯ ಸಿಐಎಸ್‍ಎಫ್ ಯುನಿಟಿಯಲ್ಲಿ ಕರ್ತವ್ಯದಲ್ಲಿದ್ದ ಆಂಧ್ರ ಪ್ರದೇಶ ಮೂಲದ ವಿ ಪ್ರತಾಪ್ ಎಂಬವರು ಕಾಣೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣೆ ದಾಖಲಾಗಿದೆ.ಕಾಣೆಯಾದ ವ್ಯಕ್ತಿಯ ಚಹರೆ ಇಂತಿವೆ: ವಯುಸ್ಸು 28 ವರ್ಷ, ನೀಲಿ ಬಣ್ಣದ ಉದ್ದ ತೋಳಿನ ಟೀ-ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಎತದತರ 176 ಸೇಂ.ಮಿ, ತೂಕ 78 ಕೆ.ಜಿ, ಮಾತನಾಡುವ ಭಾಷೆ ತೆಲುಗು, ಹಿಂದಿ, ಇಂಗ್ಲೀಷ್, ಗೋಧಿ ಮೈ ಬಣ್ಣ, ದುಂಡು

ಪೊಲೀಸ್ ಕಾನ್‍ಸ್ಟೇಬಲ್ ನಾಪತ್ತೆ Read More »

ಕರಾವಳಿ
Scroll to Top