karnataka

ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಪುನರ್ ರಚನೆ;     16 ಸದಸ್ಯರ ನೇಮಕ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.27. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿರುವ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯನ್ನು 3 ವರ್ಷಗಳ ಅವಧಿಗೆ ಪುನರ್ ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎನ್ನಲಾಗಿದೆ. ಸಂರಕ್ಷಣಾ ವಿಶೇಷ ತಜ್ಞರು, ಜೀವಿಶಾಸ್ತ್ರಜ್ಞರು, ಪರಿಸರವಾದಿಗಳ ಕೋಟಾದಡಿಯಲ್ಲಿ ಸಚಿವರ, ಶಾಸಕರ ಮಕ್ಕಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಚಿವ ಎಂ.ಬಿ. ಪಾಟೀಲ್ ಪುತ್ರ ಧ್ರುವ್ ಎಂ ಪಾಟೀಲ್, ವಿನಯ್ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ಮಂಡಳಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ. ರಾಜ್ಯ ವನ್ಯಜೀವಿ ಮಂಡಳಿಗೆ ಸಿಎಂ ಅಧ್ಯಕ್ಷರಾಗಿರುತ್ತಾರೆ. ಅರಣ್ಯ ಸಚಿವರು […]

ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಪುನರ್ ರಚನೆ;     16 ಸದಸ್ಯರ ನೇಮಕ Read More »

ಕರ್ನಾಟಕ

ಡೆಂಗ್ಯೂ ಸೋಂಕಿದ್ದವರ ಮೇಲೆ 14 ದಿನಗಳ ನಿಗಾ ಕಡ್ಡಾಯ     ರಾಜ್ಯ ಸರ್ಕಾರ          

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.27. ಡೆಂಗ್ಯೂ ಸೋಂಕಿಗೊಳಗಾದವರ ಮೇಲೆ 14 ದಿನಗಳ ವರೆಗಿನ ನಿಗಾ ಕಡ್ಡಾಯ ಎಂದು ರಾಜ್ಯ ಸರ್ಕಾರ ಹೇಳಿದೆ. ಬೆಂಗಳೂರಿನ ಯಲಹಂಕದದಲ್ಲಿ ಡೆಂಗ್ಯೂ ಹಾಟ್ ಸ್ಪಾಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ಹೇಳಿದರು. ಇಂದು ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಸ್ಥಳೀಯ ಶಾಲೆಗಳಿಗೆ ತೆರಳಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಿದರು.                          

ಡೆಂಗ್ಯೂ ಸೋಂಕಿದ್ದವರ ಮೇಲೆ 14 ದಿನಗಳ ನಿಗಾ ಕಡ್ಡಾಯ     ರಾಜ್ಯ ಸರ್ಕಾರ           Read More »

ಕರ್ನಾಟಕ

130 ಕಿ ಮೀ ವೇಗದಲ್ಲಿ ಗಾಡಿ ಓಡಿಸಿದರೇ ಹುಷಾರ್ ಆಗಸ್ಟ್ 1ರಿಂದ ಬೀಳುತ್ತೆ FIR

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.27. ಯಾವುದೇ ಚಾಲಕರು 130 ಕಿಮೀ ವೇಗದಲ್ಲಿ ವಾಹನ ಓಡಿಸಿ ಸಿಕ್ಕಿಬಿದ್ದರೇ ಅಂಥವರ ವಿರುದ್ಧ ಆಗಸ್ಟ್ 1 ರಿಂದ ಎಫ್ ಐಆರ್ ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಅವರು, ಕರ್ನಾಟಕದಲ್ಲಿ ಎಲ್ಲಿಯಾದರೂ ಗಂಟೆಗೆ 130 ಕಿಮೀ ವೇಗದಲ್ಲಿ ಚಾಲನೆ ಮಾಡುವವರ ವಿರುದ್ಧ ಎಫ್‌ಐಆರ್‌ ಗಳನ್ನು ದಾಖಲು ಮಾಡಲಾಗುವುದು, ದುಡುಕಿನ ಮತ್ತು ಅಪಾಯಕಾರಿ

130 ಕಿ ಮೀ ವೇಗದಲ್ಲಿ ಗಾಡಿ ಓಡಿಸಿದರೇ ಹುಷಾರ್ ಆಗಸ್ಟ್ 1ರಿಂದ ಬೀಳುತ್ತೆ FIR Read More »

ಕರ್ನಾಟಕ

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ 2.5 ಕೆಜಿ ಚಿನ್ನ ಕಳ್ಳ ಸಾಗಣೆ        ಆರೋಪಿಗಳಿಬ್ಬರು ಅರೆಸ್ಟ್     

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.27. ದುಬೈಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿದ ವಿಮಾನದ ಇಬ್ಬರು ಪ್ರಯಾಣಿಕರ ಬಳಿ 1,68,95,725 ರೂ. ಮೌಲ್ಯದ 2.5 ಕೆಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ದುಬೈಯಿಂದ ಕೆಐಎಗೆ ಬಂದ ಪ್ರಯಾಣಿಕರನ್ನು ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ಸ್ಕಾನಿಂಗ್ ಮಾಡಿ ತಪಾಸಣೆ ನಡೆಸುತ್ತಿದ್ದರು. ಈ ಇಬ್ಬರ ಬಟ್ಟೆಯಲ್ಲಿ ಲೋಹ ಬಚ್ಚಿಟ್ಟಿರುವುದು ಗೊತ್ತಾಗಿದೆ ಎನ್ನಲಾಗಿದೆ.                                                             

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ 2.5 ಕೆಜಿ ಚಿನ್ನ ಕಳ್ಳ ಸಾಗಣೆ        ಆರೋಪಿಗಳಿಬ್ಬರು ಅರೆಸ್ಟ್      Read More »

ಕರ್ನಾಟಕ

ಸುಬ್ರಹ್ಮಣ್ಯ ಬಳಿ ರೈಲು ಹಳಿ ಮೇಲೆ ಭೂಕುಸಿತ      ಪ್ರಯಾಣಿಕರಲ್ಲಿ ಆತಂಕ   

(ನ್ಯೂಸ್ ಕಡಬ)newskadaba.com ಸುಬ್ರಮಣ್ಯ, ಜ.27.  ಸುಬ್ರಹ್ಮಣ್ಯ ಸಮೀಪದ ರೈಲ್ವೆ ಹಳಿ ಮೇಲೆ ಸಂಜೆ 6:56 ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಮಣ್ಣಿನ ಸವಕಳಿ ಸಂಭವಿಸಿದ್ದು, ಹಲವು ರೈಲು ಸೇವೆಗಳನ್ನು ರದ್ದು ಪಡಿಸಲಾಗಿದೆ. ರದ್ದು ಪಡಿಸಲಾದ  ರೈಲು ಸೇವೆಗಳು ಈ ಕೆಳಗಿನಂತಿವೆ ರೈಲು ಸಂಖ್ಯೆ 16595 KSR ಬೆಂಗಳೂರು – ಕಾರವಾರ ಪಂಚಗಂಗಾ ಸೂಪರ್-ಫಾಸ್ಟ್ ಎಕ್ಸ್‌ಪ್ರೆಸ್, 26.07.2024 ರಂದು ಪ್ರಾರಂಭವಾಗುವ ರೈಲು ಸಂಚಾರ ರದ್ದು ಪಡಿಸಲಾಗಿದೆ. ರೈಲು ಸಂಖ್ಯೆ 16596 ಕಾರವಾರ – ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಸೂಪರ್-ಫಾಸ್ಟ್

ಸುಬ್ರಹ್ಮಣ್ಯ ಬಳಿ ರೈಲು ಹಳಿ ಮೇಲೆ ಭೂಕುಸಿತ      ಪ್ರಯಾಣಿಕರಲ್ಲಿ ಆತಂಕ    Read More »

ಕರಾವಳಿ

ಅಪ್ರಾಪ್ತ ಬಾಲಕಿಯ ಅತ್ಯಾಚಾರ 27 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್‌

(ನ್ಯೂಸ್ ಕಡಬ)newskadaba.com ಉಡುಪಿ, ಜು.27. ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದು, ಪ್ರಕರಣದ ವಿಚಾರಣೆ ವೇಳೆಗೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಡುಬಿದ್ರಿ ಪೊಲೀಸರು ಮಹತ್ವ ಕಾರ್ಯಚರಣೆ ನಡೆಸಿ 27 ವರ್ಷಗಳ ಬಳಿಕ ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಹುಡುಗಿ ದಿನಾಂಕ ಆಗಸ್ಟ್ 07 ರಂದು ಅವಳ ಮನೆಗೆ ಹೋಗುವಾಗ ದಾರಿ ತಪ್ಪಿ ಮಣಿಪಾಲದಲ್ಲಿ ನಿಂತಿದ್ದಾಗ ಆರೋಪಿ ಕುಂದಾಪುರದ ನಿವಾಸಿ ಜಮಾಲ್ ಎಂಬಾತನು ಮೋಟಾರು ಸೈಕಲಿನಲ್ಲಿ ಬಂದು ಹುಡುಗಿಯನ್ನು ಪುಸಲಾಯಿಸಿ ಮಣಿಪಾಲದ ಲಾಡ್ಜ್ ಒಂದರಲ್ಲಿ ರೂಂ ನಲ್ಲಿ ಸುಮಾರು 12

ಅಪ್ರಾಪ್ತ ಬಾಲಕಿಯ ಅತ್ಯಾಚಾರ 27 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್‌ Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ಆಟೋ ಚಾಲಕ ನಾಪತ್ತೆ ದೂರು ದಾಖಲು

(ನ್ಯೂಸ್ ಕಡಬ)newskadaba.com ಉಳ್ಳಾಲ, ಜು.27. ಆಟೋ ಚಾಲಕರೋರ್ವರು ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ. ನಾಪತ್ತೆಯಾದವರನ್ನು ಉಳ್ಳಾದ ಮಡ್ಯಾರ್ ನಿವಾಸಿ ಮೆಲ್ವಿನ್ ಮೋಂತೆರೋ (56) ಎಂದು ಗುರುತಿಸಲಾಗಿದೆ. ಕೋಟೆಕಾರಿನ ಖಾಸಗಿ ಶಾಲೆಯೊಂದರ ಬಳಿ ಬೆಳಗ್ಗೆ ರಿಕ್ಷಾ ಬಾಡಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದಾರೆನ್ನಲಾಗಿದೆ. ರಾತ್ರಿಯಾದರೂ ಮನೆಗೂ ವಾಪಸ್ ಬಾರದೆ ಇದ್ದಾಗ ಮನೆ ಮಂದಿ ಸಂಬಂಧಿಕರ ಬಳಿ ವಿಚಾರಿಸಿದಾಗಲೂ ಪತ್ತೆಯಾಗಿರಲಿಲ್ಲ ಎಂದು ವರದಿ ತಿಳಿಸಿದೆ.

ಉಳ್ಳಾಲ: ಆಟೋ ಚಾಲಕ ನಾಪತ್ತೆ ದೂರು ದಾಖಲು Read More »

ಕರಾವಳಿ

ಚಾರ್ಮಾಡಿ ಘಾಟ್‌ ನಲ್ಲಿ ಗುಡ್ಡ ಕುಸಿತ ಸಂಚಾರ ಸ್ಥಗಿತ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜು.27. ದಿನಗಳಿಂದ ಕೆಲವು ಸುರಿಯುತ್ತಿವ ಭಾರೀ ಮಳೆಗೆ ಚಾರ್ಮಾಡಿ ಘಾಟ್‌ ನಲ್ಲಿ ಗುಡ್ಡ ಕುಸಿದು ಟ್ರಾಫಿಕ್ ಜಾಮ್ ಉಂಟಾಗಿದ್ದ ಘಟನೆ ಸಂಭವಿಸಿದೆ ಎನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ 10ನೇ ತಿರುವಿನಲ್ಲಿ ಗುಡ್ಡ ಕುಸಿದಿದ್ದು ಚಾರ್ಮಾಡಿ ಘಾಟ್ನಿಂದ ಕೊಟ್ಟಿಗೆ ಹಾರದವರೆಗೂ ವಾಹನಗಳು ನಿಂತಲ್ಲೇ ನಿಂತಿದ್ದವು. ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ವರದಿ ತಿಳಿಸಿದೆ.

ಚಾರ್ಮಾಡಿ ಘಾಟ್‌ ನಲ್ಲಿ ಗುಡ್ಡ ಕುಸಿತ ಸಂಚಾರ ಸ್ಥಗಿತ Read More »

ಕರಾವಳಿ

ಮಣಿಪಾಲ: ಮನೆಯಂಗಳಕ್ಕೆ ಬಂದ ಚಿರತೆ

(ನ್ಯೂಸ್ ಕಡಬ)newskadaba.com ಉಡುಪಿ ಜು..27. ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ ಕಂಡು ಬಂದ ಘಟನೆ ಬೆಳಕಿಗೆ ಬಂದ ಬಳಿಕ ಸ್ಥಳೀಯ ರಲ್ಲಿ ಆತಂಕ ಮನೆ ಮಾಡಿದೆ ಎಂದು ವರದಿಯಾಗಿದೆ. ಮನೆಯ ಹೊರಭಾಗದಲ್ಲಿದ್ದ ನಾಯಿ ಬೊಗಳುತ್ತಿದ್ದನ್ನು ಗಮನಿಸಿದ ಮನೆ ಮಂದಿ ಬಾಗಿಲು ತೆರೆದಿರಲಿಲ್ಲ. ಕ್ರಮೇಣ ನಾಯಿ ಶಬ್ದ ಕೂಡಾ ಕೇಳಿ ಬಂದಿಲ್ಲ ಎನ್ನಲಾಗಿದೆ. ಸಿಸಿಟಿವಿ ದೃಶ್ಯ ಗಳನ್ನು ಗಮನಿಸಿದಾಗ ಚಿರತೆ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ. ಸುಮಾರು 11.25 ರ ಸಮಯಕ್ಕೆ ಚಿರತೆ ಮನೆಯಂಗಳಕ್ಕೆ ಬಂದಿದ್ದು, ಚಿರತೆಯನ್ನು ಗಮನಿಸಿದ

ಮಣಿಪಾಲ: ಮನೆಯಂಗಳಕ್ಕೆ ಬಂದ ಚಿರತೆ Read More »

ಕರಾವಳಿ

ಬೆಳ್ತಂಗಡಿ: ಭಾರೀ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ವ್ಯಾಪಕ ಹಾನಿ ಜನಜೀವನ ಅಸ್ತವ್ಯಸ್ತ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜು.26. ವಿವಿಧೆಡೆ ಭಾರೀ ಗಾಳಿ- ಮಳೆಗೆ ಪರಿಣಾಮ ವ್ಯಾಪಕ ಹಾನಿಯಾಗಿದ್ದು, ನಾಗರಿಕರು ಸಮಸ್ಯೆಗೆ ಸಿಲುಕಿದ್ದಾರೆ. ಅಣಿಯೂರಿನಿಂದ ನೆರಿಯ ಗ್ರಾಮ ಪಂಚಾಯತ್ ವರೆಗೆ ರಸ್ತೆ ಬದಿಯಲ್ಲಿದ್ದ ಮರಗಳು ಧರೆಗೆ ಉರುಳಿವೆ. ಪೆರಿಯಡ್ಕ ರಸ್ತೆಯಲ್ಲೂ ಐದಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ. ವಿವಿಧೆಡೆ ಮರಗಳು ಮುರಿದು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಪ್ರಾಥಮಿಕ ಮಾಹಿತಿಯಂತೆ ಸುಮಾರು ೪೦ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆರಿಯ ಒಂದೇ ಗ್ರಾಮದಲ್ಲಿ ಉರುಳಿಬಿದ್ದಿವೆ. ಇದರಿಂದ ನೆರಿಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲೂ ವಿದ್ಯುತ್ ಸಂಪರ್ಕ

ಬೆಳ್ತಂಗಡಿ: ಭಾರೀ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ವ್ಯಾಪಕ ಹಾನಿ ಜನಜೀವನ ಅಸ್ತವ್ಯಸ್ತ Read More »

ಕರಾವಳಿ
Scroll to Top