ಮಣಿಪಾಲ: ಮನೆಯಂಗಳಕ್ಕೆ ಬಂದ ಚಿರತೆ

(ನ್ಯೂಸ್ ಕಡಬ)newskadaba.com ಉಡುಪಿ ಜು..27. ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ ಕಂಡು ಬಂದ ಘಟನೆ ಬೆಳಕಿಗೆ ಬಂದ ಬಳಿಕ ಸ್ಥಳೀಯ ರಲ್ಲಿ ಆತಂಕ ಮನೆ ಮಾಡಿದೆ ಎಂದು ವರದಿಯಾಗಿದೆ. ಮನೆಯ ಹೊರಭಾಗದಲ್ಲಿದ್ದ ನಾಯಿ ಬೊಗಳುತ್ತಿದ್ದನ್ನು ಗಮನಿಸಿದ ಮನೆ ಮಂದಿ ಬಾಗಿಲು ತೆರೆದಿರಲಿಲ್ಲ. ಕ್ರಮೇಣ ನಾಯಿ ಶಬ್ದ ಕೂಡಾ ಕೇಳಿ ಬಂದಿಲ್ಲ ಎನ್ನಲಾಗಿದೆ.

ಸಿಸಿಟಿವಿ ದೃಶ್ಯ ಗಳನ್ನು ಗಮನಿಸಿದಾಗ ಚಿರತೆ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ. ಸುಮಾರು 11.25 ರ ಸಮಯಕ್ಕೆ ಚಿರತೆ ಮನೆಯಂಗಳಕ್ಕೆ ಬಂದಿದ್ದು, ಚಿರತೆಯನ್ನು ಗಮನಿಸಿದ ನಾಯಿ ಬೊಬ್ಬೆ ಇಟ್ಟಿದೆ. ನಾಯಿಯನ್ನು ಅಟ್ಟಿಸಿಕೊಂಡು ಹೋದ ಚಿರತೆ ಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ವರದಿ ತಿಳಿಸಿದೆ.

 

 

Scroll to Top