karnataka

ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಭಾರತದ ಚಿಂಗಾರಿ ಆ್ಯಪ್ ಗೆ ಭಾರಿ ಬೇಡಿಕೆ ➤ ಗಂಟೆಗೆ 1 ಲಕ್ಷ ಡೌನ್ ಲೋಡ್

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.01: ಭಾರತದಲ್ಲಿ ಟಿಕ್ ಟಾಕ್ ನಿಷೇಧಗೊಂಡ ಬೆನ್ನಲ್ಲೇ, ಅದೇ ಮಾದರಿಯ ಭಾರತೀಯ ಆಪ್ ಗಳಿಗೆ ಬೇಡಿಕೆ ಹೆಚ್ಚಿದೆ. ಈ ಪೈಕಿ ಅತ್ಯಂತ ಲಾಭ ಪಡೆದಿರುವುದು ಬೆಂಗಳೂರು ಮೂಲದ ಯುವಕರು ಪ್ರಾರಂಭಿಸಿರುವ ಚಿಂಗಾರಿ ಆಪ್. ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಚಿಂಗಾರಿ ಆಪ್ ಡೌನ್ ಲೋಡ್ ಗೆ ಜನರು ಮುಗಿಬಿದ್ದಿದ್ದು ಪ್ರತಿ ಗಂಟೆಗೆ 1 ಲಕ್ಷ ಡೌನ್ ಲೋಡ್ ಹಾಗೂ 2 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಟಿಕ್ ಟಾಕ್ ನಿಷೇಧಕ್ಕೂ ಮುನ್ನವೇ ಚಿಂಗಾರಿ ಆಪ್ […]

ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಭಾರತದ ಚಿಂಗಾರಿ ಆ್ಯಪ್ ಗೆ ಭಾರಿ ಬೇಡಿಕೆ ➤ ಗಂಟೆಗೆ 1 ಲಕ್ಷ ಡೌನ್ ಲೋಡ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊಸ ಅತಿಥಿಯ ಆಗಮನ ➤ ಹೆಣ್ಣು ಮರಿಗೆ ಜನ್ಮ ನೀಡಿದ ‘ಲಕ್ಷ್ಮೀ’

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜು.01: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಹೌದು ಮಂಜುನಾಥನ ಸನ್ನಿಧಿ ಗೆ ಇಂದು ಪುಟ್ಟ, ಪುಟ್ಟ ಹೆಜ್ಜೆಯನಿಟ್ಟು, ಮುದ್ದಾದ ಪುಟ್ಟ ಲಕ್ಷ್ಮೀ ಆಗಮಿಸಿದ್ದಾಳೆ.ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ್ಮೀ ಹೆಸರಿನ ಆನೆ ಇಂದು ಮುಂಜಾನೆ ಹೆಣ್ಣು ಮರಿಗೆ ಜನ್ಮ ನೀಡಿದೆ.   ಮಾವುತರು ಆನೆ ಮರಿಗೆ ಉಪಚಾರ ನಡೆಸುತ್ತಿದ್ದು, ಆನೆ ಮರಿ ಆರೋಗ್ಯವಾಗಿದೆ ಎನ್ನಲಾಗಿದೆ. ಸಚಿವ ಆನಂದ್ ಸಿಂಗ್ ಅವರು ಧರ್ಮಸ್ಥಳಕ್ಕೆ ಈ ಆನೆಯನ್ನು ನೀಡಿದ್ದರು. ತುಂಟಾಟದಿಂದ ಧರ್ಮಸ್ಥಳದಲ್ಲಿ ಲಕ್ಷ್ಮೀ ಅಚ್ಚುಮೆಚ್ಚಾಗಿತ್ತು. ಧರ್ಮಸ್ಥಳದ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊಸ ಅತಿಥಿಯ ಆಗಮನ ➤ ಹೆಣ್ಣು ಮರಿಗೆ ಜನ್ಮ ನೀಡಿದ ‘ಲಕ್ಷ್ಮೀ’ Read More »

ಕರಾವಳಿ, ಕರ್ನಾಟಕ

ಕೌಶಾಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಭೇತಿ ಕೇಂದ್ರದ ಶಂಕು ಸ್ಥಾಪನೆ

(ನ್ಯೂಸ್ ಕಡಬ) newskadaba.com ಕಡಬ, ಜು.01. ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಅಂಗ ಸಂಸ್ಥೆಯಾದ ಹೋಯಿಗೆಬಝಾರ್ ನಲ್ಲಿರುವ ತಾಂತ್ರಿಕ ವಿಭಾಗದ ಆವರಣದಲ್ಲಿ ಮೀನುಗಾರಿಕೆಯಲ್ಲಿ ಕೌಶಾಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಭೇತಿ ಕೇಂದ್ರದ ಶಂಕು ಸ್ಥಾಪನೆಯನ್ನು ಮಂಗಳವಾರ ಮಾಡಲಾಯಿತು. ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ದ.ಕ. ಜಿಲ್ಲೆಯ ಉಸ್ಥುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಕೊರೋನ ಸಂದರ್ಭದಲ್ಲಿ ಹೊರದೇಶದಲ್ಲಿರುವ ಕನ್ನಡಿಗರು ಸ್ವದೇಶಕ್ಕೆ ಉದ್ಯೋಗವಿಲ್ಲದೇ ಹಿಂತಿರುಗುತ್ತಿರುವ ಈ ಸಮಯದಲ್ಲಿ ನಿರುದ್ಯೋಗಿಗಳಿಗೆ ಪರ್ಯಾಯ

ಕೌಶಾಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಭೇತಿ ಕೇಂದ್ರದ ಶಂಕು ಸ್ಥಾಪನೆ Read More »

ಕರಾವಳಿ

ಮಂಗಳೂರು ಕೊರೊನಾಘತಾ 16ನೇ ಬಲಿ

(ನ್ಯೂಸ್ ಕಡಬ) newskadaba.com.ಮಂಗಳೂರು, ಜು.1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಜೋರಾಗುತ್ತಿದೆ. ಸಮುದಾಯಕ್ಕೆ ಹರಡುತ್ತಿದೆ ಎಂಬ ಊಹೆಗಳಿಗೆ ಪೂರಕವೆಂಬಂತೆ ಕೊರೊನಾಗೆ ಮತ್ತೊಂದು ಬಲಿಯಾಗಿದೆ, ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾಗೆ ಬಲಯಾದವರ ಸಂಖ್ಯೆ 16ಕ್ಕೆ ಏರಿದೆ.ಮಂಗಳೂರಿನ ಬೆಂಗ್ರೆ ನಿವಾಸಿಯಾಗಿದ್ದ ಪುರುಷ ಸೋಂಕು ಪೀಡಿತ ವ್ಯಕ್ತಿ ಡಯಾಬಿಟಿಸ್ ಮತ್ತು ನ್ಯುಮೋನಿಯಾ ರೋಗದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇನ್ನೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ

ಮಂಗಳೂರು ಕೊರೊನಾಘತಾ 16ನೇ ಬಲಿ Read More »

ಕರಾವಳಿ

ಕರಾವಳಿಯಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ

(ನ್ಯೂಸ್ ಕಡಬ) newskadaba.com ಕರಾವಳಿ ,ಜು.01: ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಏಳುತ್ತಿರುವುದರಿಂದ ಇನ್ನೂ 5 ದಿನಗಳ ಕಾಲ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.    ದಕ್ಷಿಣ ಕನ್ನಡ,ಉಡುಪಿ, ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು, ತುಮಕೂರು, ಧಾರವಾಡ,ಶಿವಮೊಗ್ಗ, ಸೇರಿದಂತೆ 15 ಜಿಲ್ಲೆಗಳಲ್ಲಿ ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.  

ಕರಾವಳಿಯಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ Read More »

ಕರಾವಳಿ, ಕರ್ನಾಟಕ

ಧರ್ಮಸ್ಥಳ ಯೋಜನೆ ವತಿಯಿಂದ ಕಾನ್ಸರ್ ಪೀಡಿತರಿಗೆ ಧನಸಹಾಯ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಜು.01., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಾನ್ಸರ್ ಪೀಡಿತರಿಗೆ ಧನಸಹಾಯವನ್ನು ಸೋಮವಾರ ವಿತರಿಸಲಾಯಿತು. ಉಡುಪಿ ಪ್ರಾದೇಶಿಕ ಕಛೇರಿ ಯೋಜನಾಧಿಕಾರಿ ಸುರೇಂದ್ರ ಅವರು ಯೋಜನೆಯಿಂದ ಮಂಜೂರಾದ ಧನಸಹಾಯ ಚೆಕ್‍ನ್ನು ಫಲಾನುಭವಿಗಳಾದ ಕೊಣಾಜೆ ಗ್ರಾಮದ ಈಶ್ವರ ಗೌಡ ಹಾಗೂ ಲಿಂಗಪ್ಪ ಗೌಡ, ಕೊಂಬಾರು ಗ್ರಾಮದ ಯೋಜನೆಯ ಸದಸ್ಯ ಆನಂದ ಗೌಡರ ಪತ್ನಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಯೋಜನಾಧಿಕಾರಿ ಜನಾರ್ಧನ ಎಸ್., ವಲಯ ಮೇಲ್ವಿಚಾರಕರಾದ ಧರ್ಣಪ್ಪ ಗೌಡ, ಒಕ್ಕೂಟ ಅಧ್ಯಕ್ಷ

ಧರ್ಮಸ್ಥಳ ಯೋಜನೆ ವತಿಯಿಂದ ಕಾನ್ಸರ್ ಪೀಡಿತರಿಗೆ ಧನಸಹಾಯ ವಿತರಣೆ Read More »

ಕರಾವಳಿ

ನೂಜಿಬಾಳ್ತಿಲ ಗ್ರಾ.ಪಂ. ಆಡಳಿತಾಧಿಕಾರಿ ಭರತ್ ಬಿ.ಎಂ. ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಕಡಬ, ಜು .01. ನೂಜಿಬಾಳ್ತಿಲ ಗ್ರಾ.ಪಂ. ಆಡಳಿತಾವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಪುತ್ತೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಭರತ್ ಬಿ.ಎಂ. ಅವರು ಸೋಮವಾರ ನಿರ್ಗಮನ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಅವರಿಂದ ಅಧಿಕಾರ ವಹಿಸಿಕೊಂಡರು. ಗ್ರಾ.ಪಂ. ಸದಸ್ಯ ತೋಮಸ್ ಕೆ.ಜೆ., ಸಿಬಂದಿಗಳು ಉಪಸ್ಥಿತರಿದ್ದರು. ಪಿಡಿಒ ಆನಂದ ಎ. ಸ್ವಾಗತಿಸಿ, ಧನರಾಜ್ ವಂದಿಸಿದರು.

ನೂಜಿಬಾಳ್ತಿಲ ಗ್ರಾ.ಪಂ. ಆಡಳಿತಾಧಿಕಾರಿ ಭರತ್ ಬಿ.ಎಂ. ಅಧಿಕಾರ ಸ್ವೀಕಾರ Read More »

ಕರಾವಳಿ

ತೆಂಕಿಲ : ಬೃಹತ್ ಗಾತ್ರದ ಮಾವಿನ ಮರ ಬಿದ್ದು ಅಪಾರ ಹಾನಿ

(ನ್ಯೂಸ್ ಕಡಬ) newskadaba.com ತೆಂಕಿಲ ,ಜೂ.30:  ತೆಂಕಿಲ ಕೊಟ್ಟಿಬೆಟ್ಟು ಎಂಬಲ್ಲಿ ಸೋಮವಾರ ಸಂಜೆ ವೇಳೆ ಭಾರಿ ಗಾತ್ರದ ಮಾವಿನ ಮರವೊಂದು  ಬುಡ ಸಹಿತ ಮುರಿದು ಬಿದ್ದು, ದೈವದ ಕಟ್ಟೆಯ ಕಾಂಪೌಂಡ್ ಹಾಗೂ ಮನೆಗೆ ಹಾನಿಯಾಗಿದ್ದು ಜೊತೆಗೆ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಕಾರು ಸಂಪೂರ್ಣ ಜಖಂಗೊಂಡಿರುವ ಘಟನೆ ಸೋಮವಾರದಂದು ನಡೆದಿದೆ. ತೆಂಕಿಲ ಕೊಟ್ಟಿಬೆಟ್ಟು ಎಂಬಲ್ಲಿರುವ ಪುರುಷೋತ್ತಮ ನಾಯ್ಕ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಇವರ ಮನೆ ಬಳಿ ಕೊಟ್ಟಿಬೆಟ್ಟು ಕುಟುಂಬದ ತರವಾಡಿನ ಗುಳಿಗ ಹಾಗೂ ಬೈರವ ದೈವದ

ತೆಂಕಿಲ : ಬೃಹತ್ ಗಾತ್ರದ ಮಾವಿನ ಮರ ಬಿದ್ದು ಅಪಾರ ಹಾನಿ Read More »

ಕರಾವಳಿ, ಕರ್ನಾಟಕ

ಕೊಂಬಾರು :ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ,ಜೂ.30:  ಕೊಂಬಾರು ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಆದಿತ್ಯವಾರದಂದು ನಡೆಯಿತು.   ಗ್ರಾಮ ಪಂಚಯತ್ ಅಧ್ಯಕ್ಷರಾದ ಅಜಿತ್ ಎಸ್.ರವರು ಕಟ್ಟಡ ಉದ್ಘಾಟಿಸಿದರು. ತಾ. ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಢಾರಿ, ಕಡಬ ಕ್ಷೇತ್ರದ ಜಿ. ಪಂ ಸದಸ್ಯ ಪಿ.ಪಿ ವರ್ಗೀಸ್, ಕೋ- ಆರ್ಡಿನೇಟರ್, ಕಟ್ಟಡ ನಿರ್ಮಾಣಕ್ಕೆ ಸಮಾಗ್ರಿ ಸರಬರಾಜುದಾರರು, ಗ್ರಾಮ

ಕೊಂಬಾರು :ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನೆ Read More »

ಕರಾವಳಿ, ಕರ್ನಾಟಕ

ಸುಳ್ಯ ರೈತ ಕಾಯಿದೆ ವಿರೋಧಿಸಿ ರೈತ ಸಂಘದ ಪ್ರತಿಭಟನೆ ➤ ಸಂಸತ್‍ಗೆ ಮುತ್ತಿಗೆ ಹಾಕುದಾಗಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com.ಸುಳ್ಯ,ಜೂ.30: ಭೂ ಸುಧಾರಣಾ ಕಾಯಿದೆ ತಿದ್ದುಪಡಿ, ಎಪಿಎಂಸಿ. ಕಾಯಿದೆ, ವಿದ್ಯುತ್ ವಿತರಣೆಯನ್ನು ಖಾಸಗೀಕರಣ ಗೊಳಿಸುವುದು ಮತ್ತು ಸಹಕಾರಿ ಬ್ಯಾಂಕ್‍ಗಳನ್ನು ಆರ್‍ಬಿಐ ವ್ಯಾಪ್ತಿಗೆ ತರುವ ಕೇಂದ್ರ ಹಾಗೂ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆ ಸೋಮವಾರದಂದು ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯದರ್ಶಿ ರವಿಕಿರಣ ಪುನಚ ಇಂದಿನ ದಿನದಲ್ಲಿ ಸರಕಾರಗಳು ರೈತ ವಿರೋಧಿ ನೀತಿಯನ್ನು ಮಾಡುತ್ತಿದೆ

ಸುಳ್ಯ ರೈತ ಕಾಯಿದೆ ವಿರೋಧಿಸಿ ರೈತ ಸಂಘದ ಪ್ರತಿಭಟನೆ ➤ ಸಂಸತ್‍ಗೆ ಮುತ್ತಿಗೆ ಹಾಕುದಾಗಿ ಎಚ್ಚರಿಕೆ Read More »

ಕರ್ನಾಟಕ
Scroll to Top