karnataka

ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಸರಳ ಶ್ರೀಕೃಷ್ಣಾಷ್ಟಮಿ

(ನ್ಯೂಸ್ ಕಡಬ) newskadaba.com ಶ್ರೀ ಸುಬ್ರಹ್ಮಣ್ಯ, ಸೆ. 12. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ. 11 ರಂದು ಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ನಡೆಯಿತು. ಈ ಪ್ರಯುಕ್ತ ಕಾಶಿಕಟ್ಟೆಯಲ್ಲಿ ಅಷ್ಟಮಿ ದಿನ ಪೂಜಿಸಲ್ಪಡುವ ಕೃಷ್ಣನ ವಿಗ್ರಹವನ್ನು ಮೆರವಣಿಗೆ ಮೂಲಕ ದೇವಳಕ್ಕೆ ತಂದು ಬಳಿಕ ಮತ್ತೆ ಕಾಶಿಕಟ್ಟೆಗೆ ಮೆರವಣಿಗೆಯಲ್ಲಿ ಸಾಗಿಸಲಾಯಿತು. ಈ ವೇಳೆ ರಸ್ತೆಯುದ್ದಕ್ಕೂ ಮೊಸರು ಕುಡಿಕೆಗಳನ್ನು ಒಡೆದು ಕೃಷ್ಣಾ ಜನ್ಮಾಷ್ಟಮಿ ಆಚರಿಸಲಾಯಿತು. ಪುರೋಹಿತ ಸನತ್ ನೂರಿತ್ತಾಯ, ದೇವಳದ ನಾಗೇಶ್ ಎ.ವಿ ದಿನಕರ ಮತ್ತಿತರರು ಉಪಸ್ಥಿತರಿದ್ದರು. […]

ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಸರಳ ಶ್ರೀಕೃಷ್ಣಾಷ್ಟಮಿ Read More »

ಕರಾವಳಿ, ಕರ್ನಾಟಕ

ಏರೋ ಇಂಡಿಯಾ 2021 ವೆಬ್‌ಸೈಟ್‌ಗೆ ಸಚಿವ ರಾಜನಾಥ್‌ಸಿಂಗ್ ಚಾಲನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.12: ಬೆಂಗಳೂರಿನಲ್ಲಿ ಮುಂದಿನವರ್ಷ ಫೆಬ್ರವರಿ 3ರಿಂದ 7ರ ತನಕ ನಡೆಯಲಿರುವ ಏರೋ ಇಂಡಿಯಾ 2021ರ ವೆಬ್​ಸೈಟ್​ ( https://aeroindia.gov.in )ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಚಾಲನೆ ನೀಡಿದರು.     ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಇದು 13ನೇ ಆವೃತ್ತಿಯ ಪ್ರದರ್ಶನವಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಆನ್​ಲೈನ್ ಸೇವೆಗಳನ್ನೂ ಈ ವೆಬ್​ಸೈಟ್ ಮೂಲಕ ಪಡೆಯಬಹುದಾಗಿದೆ. ಪ್ರದರ್ಶಕರು ಈ ಸೈಟ್​ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು.

ಏರೋ ಇಂಡಿಯಾ 2021 ವೆಬ್‌ಸೈಟ್‌ಗೆ ಸಚಿವ ರಾಜನಾಥ್‌ಸಿಂಗ್ ಚಾಲನೆ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಮೂಡುಬಿದಿರೆ ತಹಸೀಲ್ದಾರ್ ಅನಿತಾಲಕ್ಷ್ಮೀ ವರ್ಗಾವಣೆ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಸೆ. 12 : ಕಳೆದ 14 ತಿಂಗಳುಗಳಿಂದ ಮೂಡುಬಿದಿರೆ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅನಿತಾಲಕ್ಷ್ಮೀ ಅವರು ಮೂಡುಬಿದಿರೆಯಿಂದ ಮಂಗಳೂರಿಗೆ ವರ್ಗಾವಣೆಗೊಂಡು ಚುನಾವಣೆ ವಿಭಾಗದ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಬಡವರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಮೂಡುಬಿದಿರೆ ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ್ದರು. ಅಕ್ರಮವಾಗಿ ನಡೆಯುತ್ತಿದ್ದ ಮರಳು ಮಾಫಿಯಾ ಮತ್ತು ಕೆಂಪು ಕಲ್ಲಿನ ಕೋರೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತಿದ್ದ ಅವರು ರಾಜಕರಣಿಗಳ ಕೆಂಗಣ್ಣಿಗೆ ಗುರಿಯಾಗಿ ಈ ಹಿಂದೆ ಎರಡು

ಮೂಡುಬಿದಿರೆ ತಹಸೀಲ್ದಾರ್ ಅನಿತಾಲಕ್ಷ್ಮೀ ವರ್ಗಾವಣೆ Read More »

ಕರಾವಳಿ, ಕರ್ನಾಟಕ

ಗುಂಡೀರ್ ಗುಡ್ಡೆಯಲ್ಲಿ ತಡೆಗೋಡೆ ಕುಸಿತ ➤ ಅಪಾಯದಂಚಿನಲ್ಲಿ ಮನೆಗಳು

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಸೆ. 12. ತೆಂಕಮಿಜಾರು ಗ್ರಾಮದ ಗುಂಡೀರ್ ಗುಡ್ಡೆಯಲ್ಲಿ ಮನೆಯೊಂದರ ಆವರಣಗೋಡೆ ಭಾರೀ ಮಳೆಗೆ ಕುಸಿದಿದ್ದು, ಎರಡು ಮನೆಗಳು ಅಪಾಯದಂಚಿನಲ್ಲಿದೆ.   ಮಯ್ಯದ್ದಿ ಅವರ ಜಾಗದ ಆವರಣಗೋಡೆ ಬಿದ್ದಿದ್ದು, ಪಕ್ಕದಲ್ಲಿರುವ ಸಿರಾಜುದ್ದೀನ್ ಎಂಬವರ ಮನೆ ಕೂಡ ಅಪಾಯದ ಅಂಚಿನಲ್ಲಿದೆ. ಮಳೆಯಿಂದ ಕೃಷಿ ಭೂಮಿಗೂ ಹಾನಿಯಾಗಿದೆ. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪೊಲೀಸ್ ಉಪನಿರೀಕ್ಷಕ ವಿನಾಯಕ, ಗ್ರಾಮಕರಣಿಕರಾದ ದೀಪಿಕಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.    

ಗುಂಡೀರ್ ಗುಡ್ಡೆಯಲ್ಲಿ ತಡೆಗೋಡೆ ಕುಸಿತ ➤ ಅಪಾಯದಂಚಿನಲ್ಲಿ ಮನೆಗಳು Read More »

ಕರಾವಳಿ, ಕರ್ನಾಟಕ

ಬಂಟ್ವಾಳ: ದೇವಿಪ್ರಸಾದ್‌ ಚಿಕ್ಮುಳಿ ಅವರಿಗೆ ಜೆಸಿಐ ಸಾಧನಾಶ್ರೀ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.12: ಜೆಸಿಐ ಪಂಜ ಪಂಚ ಶ್ರೀಯ ಕಾರ್ಯದರ್ಶಿ ಜೇಸಿ ದೇವಿಪ್ರಸಾದ್‌ ಚಿಕ್ಮುಳಿ ಅವರಿಗೆ ಭಾರತೀಯ ಜೇಸಿಸ್‌ ಆಶ್ರಯದಲ್ಲಿ ಭಾನುವಾರ ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಅದ್ವಿತೀಯ ಸಮ್ಮೇಳನದಲ್ಲಿ ಸಾಧನಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.     ಈ ಸಂದರ್ಭದಲ್ಲಿ ಜೆಸಿಐ ವಲಯ ಅಧ್ಯಕ್ಷ ಜೆಎಫ್‌ಪಿ ಕಾರ್ತಿಕೇಯ ಮಧ್ಯಸ್ಥ ನಿಕಟಪೂರ್ವ ಅಧ್ಯಕ್ಷರಾದ ಪಿಪಿಪಿ ಅಶೋಕ್‌ ಚುಂತಾರ್‌ ವಲಯ ಉಪಾಧ್ಯಕ್ಷ ಜೆಎಫ್‌ಪಿ ಪ್ರದೀಪ್‌ ಬಾಕಿಲ ವ್ಯವಹಾರ ವಿಭಾಗದ ನಿರ್ದೇಶಕ ಜೇಸಿ ರಾಜೇಶ್‌ ಪುಂಜಲಕಟ್ಟೆ, ಜೆಸಿಐ

ಬಂಟ್ವಾಳ: ದೇವಿಪ್ರಸಾದ್‌ ಚಿಕ್ಮುಳಿ ಅವರಿಗೆ ಜೆಸಿಐ ಸಾಧನಾಶ್ರೀ ಪ್ರಶಸ್ತಿ ಪ್ರದಾನ Read More »

ಕರಾವಳಿ, ಕರ್ನಾಟಕ

ಮಂಗಳೂರು : ಜಲಾವೃತ ಪ್ರದೇಶಗಳಿಗೆ ದ.ಕ ಜಿಲ್ಲಾಧಿಕಾರಿ ಭೇಟಿ.

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 12. ಕಳೆದ ಎರಡು ದಿನಗಳಿಂದ, ನಗರದಲ್ಲಿ ಸುರಿಯುತ್ತಿರುವ ಮಳೆಗೆ ನಗರದ ಹೊರವಲಯದಲ್ಲಿರುವ ಜಪ್ಪುನಮೊಗರು ಕಲ್ಲಾಪು ಎಕ್ಕೂರು ಪ್ರದೇಶಗಳಲ್ಲಿ ವಸತಿ ಸಮುಚ್ಚಯಗಳು ಜಲಾವೃತಗೊಂಡಿದೆ. ಈ ಪ್ರದೇಶಗಳಿಗೆ ದ,ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.     ನಗರದ ಹೊರವಲಯದಲ್ಲಿರುವ ಜಪ್ಪಿನಮೊಗರುವಿನಲ್ಲಿ ವಸತಿ ಸಮುಚ್ಚಯವೊಂದಕ್ಕೆ ನೀರು ನುಗ್ಗಿದೆ. ಪರಿಣಾಮ ಅಲ್ಲಿನ ಜನರು ನೀರಿನ ಮಧ್ಯೆಯೇ ಮನೆಯೊಳಗೆ ಕಾಲ ಕಳೆಯುವಂತಾಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳದಲ್ಲಿದ್ದು. ಅಪಾಯದ ಸೂಚನೆ

ಮಂಗಳೂರು : ಜಲಾವೃತ ಪ್ರದೇಶಗಳಿಗೆ ದ.ಕ ಜಿಲ್ಲಾಧಿಕಾರಿ ಭೇಟಿ. Read More »

ಕರಾವಳಿ, ಕರ್ನಾಟಕ

‘ಸಾರ್ವಜನಿಕ ಗ್ರಂಥಾಲಯ’ ತೆರೆಯಲು ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 12 :ನಾಳೆಯಿಂದ ‘ಸಾರ್ವಜನಿಕ ಗ್ರಂಥಾಲಯ’ ತೆರೆಯಲು ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನಾಳೆಯಿಂದ ಸಾರ್ವಜನಿಕ ಗ್ರಂಥಾಲಯಗಳು ಕಾರ್ಯನಿರ್ವಹಿಸಲಿದೆ. ಹೌದು, ಕಂಟೈನ್ ಮೆಂಟ್ ವಲಯ ಹೊರತುಪಡಿಸಿ ಇತರೆಡೆ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲು ಸರ್ಕಾರ ಆದೇಶ ಹೊರಡಿಸಿದೆ.   ಕೋವಿಡ್ ಸೋಂಕಿನ ಹಿನ್ನೆಲೆ ‘ಸಾರ್ವಜನಿಕ ಗ್ರಂಥಾಲಯವನ್ನು ಮುಚ್ಚಲಾಗಿತ್ತು.ಇದೀಗ ನಾಳೆಯಿಂದ ನಾಳೆಯಿಂದ ಸಾರ್ವಜನಿಕ ಗ್ರಂಥಾಲಯಗಳು ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಕೋವಿಡ್ ಸೋಂಕು ನಿಯಂತ್ರಿಸುವ ಸಂಬಂಧ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ

‘ಸಾರ್ವಜನಿಕ ಗ್ರಂಥಾಲಯ’ ತೆರೆಯಲು ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ Read More »

ಕರಾವಳಿ, ಕರ್ನಾಟಕ

ಮೊಸಳೆಯನ್ನು ಹಿಡಿದಿಟ್ಟುಕೊಂಡು ಹಣ ಮಾಡಲು ಪ್ಲಾನ್ ಮಾಡಿದ್ದ ಹಳ್ಳಿ ಜನರು ➤ ಗ್ರಾಮಸ್ಥರಿಗೆ ಬಿಸಿ ಮುಟ್ಟಿಸಿದ ಅರಣ್ಯ ಅಧಿಕಾರಿಗಳು.!

(ನ್ಯೂಸ್ ಕಡಬ) newskadaba.com ಲಖನೌ, ಸೆ.12: ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಸಳೆ ಸಂರಕ್ಷಿತ ಪ್ರಾಣಿ ಎಂಬುದು ಗೊತ್ತಿರುವ ವಿಚಾರವೇ. ಆದರೆ ಒಂದಿಷ್ಟು ಹಳ್ಳಿ ಜನರಿಗೆ ಈ ವಿಚಾರ ಗೊತ್ತಿಲ್ಲ ಅನ್ನೋದಕ್ಕೆ ಲಖನೌನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಮೊಸಳೆಯನ್ನು ಹಿಡಿದಿಟ್ಟುಕೊಂಡ ಹಣ ಮಾಡಲು ಪ್ಲಾನ್ ಮಾಡಿದ್ದ ಹಳ್ಳಿ ಜನರಿಗೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಬುದ್ದಿ ಕಲಿಸಿದ್ದಾರೆ.     ಹೌದು, ಉತ್ತರ ಪ್ರದೇಶದ ಭಾಗದಲ್ಲಿ ಮಾನ್ಸೂನ್ ಮಳೆ ಸುರಿದಿದೆ. ಮಳೆಯಿಂದ ಪ್ರವಾಹ ಉಂಟಾಗಿದೆ. ಈ ವೇಳೆ ಮೊಸಳೆಯೊಂದು ಕೊಚ್ಚಿಕೊಂಡು

ಮೊಸಳೆಯನ್ನು ಹಿಡಿದಿಟ್ಟುಕೊಂಡು ಹಣ ಮಾಡಲು ಪ್ಲಾನ್ ಮಾಡಿದ್ದ ಹಳ್ಳಿ ಜನರು ➤ ಗ್ರಾಮಸ್ಥರಿಗೆ ಬಿಸಿ ಮುಟ್ಟಿಸಿದ ಅರಣ್ಯ ಅಧಿಕಾರಿಗಳು.! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ

ಸುಬ್ರಹ್ಮಣ್ಯ : ಹೊಲಿಗೆ ತರಬೇತಿ ಶಿಬಿರ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.11. ಕುಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮತ್ತು ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಹೊಲಿಗೆ ತರಬೇತಿ ಶಿಬಿರ ಇಂದು ಉದ್ಘಾಟನೆ ಮಾಡಲಾಯಿತು.   ಸಂಪುಟ ನರಸಿಂಹ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ ರವರು ರಿಬ್ಬನ್ ಕಟ್ ಮಾಡುವ ಮೂಲಕ ಹೊಲಿಗೆ ಯಂತ್ರಗಳನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಆಡಳಿತ ಅಧಿಕಾರಿ, ವಲಯ ಮೇಲ್ವಿಚಾರಕಾರು, ಜಿಲ್ಲಾ ನಿರ್ದೇಶಕರು, ಪಂಚಾಯತ್ ಅಭಿವೃದ್ದಿ ಅದಿಕಾರಿ ಸೇರಿದಂತೆ ಆನೇಕ ಗಣ್ಯರು

ಸುಬ್ರಹ್ಮಣ್ಯ : ಹೊಲಿಗೆ ತರಬೇತಿ ಶಿಬಿರ ಉದ್ಘಾಟನೆ Read More »

ಕರಾವಳಿ, ಕರ್ನಾಟಕ

SSLCಯಲ್ಲಿ ಹೆಚ್ಚು ಅಂಕ ಗಳಿಸಿದ ಋತ್ವಿಕ್ ಎನ್.ಬಿ ಗೆ ಪಿಲ್ಯ ಫ್ಯಾಷನ್ನಲ್ಲಿ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ರಲ್ಲಿ 612 ಅಂಕ ಗಳಿಸಿದ ಸಾಧಕ ವಿದ್ಯಾರ್ಥಿ ಋತ್ವಿಕ್ ಎನ್.ಬಿ. ಹಾಗೂ ಪೋಷಕರಾದ ನಾರಾಯಣ ಗೌಡ, ಸುಂದರಿಯವರನ್ನು ಪಿಲ್ಯ ಫ್ಯಾಷನ್ ವತಿಯಿಂದ ಕಡಬ ತಾಲೂಕು ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ರವರು ಪಿಲ್ಯ ಫ್ಯಾಷನ್ ನಲ್ಲಿ ಶಾಲು ಹೊದಿಸಿ ಫಲಪುಷ್ಪ , ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.     ಈ ಸಂದರ್ಭದಲ್ಲಿ ಸುದ್ದಿ ಬಿಡುಗಡೆ ವರದಿಗಾರ ಖಾದರ್ ಸಾಹೇಬ್ ಕಲ್ಲುಗುಡ್ಡೆ, ವಿಜಯ ಸ್ವೀಟ್ಸ್ ಮಾಲಕ

SSLCಯಲ್ಲಿ ಹೆಚ್ಚು ಅಂಕ ಗಳಿಸಿದ ಋತ್ವಿಕ್ ಎನ್.ಬಿ ಗೆ ಪಿಲ್ಯ ಫ್ಯಾಷನ್ನಲ್ಲಿ ಸನ್ಮಾನ Read More »

ಕರಾವಳಿ, ಕರ್ನಾಟಕ
Scroll to Top