karnataka

ಶಾಲಾ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ..!

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 24.  ಶಾಲಾ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಪೂಜಿ ನಗರದಲ್ಲಿ ನಡೆದಿದೆ. 10ನೇ ತರಗತಿಯ ವಿದ್ಯಾರ್ಥಿನಿ ಅಲ್ ಫಹಾದ್ ಎಜುಕೇಶನ್ ಸೆಂಟರ್‌ನ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ವರದಿಯಾಗಿದೆ. ವಿದ್ಯಾರ್ಥಿನಿಯನ್ನು ಕೂಡಲೇ ಶಾಲಾ ಸಿಬ್ಬಂದಿ ವಿಕ್ಟೋರಿಯಾ ಆಸ್ಪತ್ರೆಗೆ ಮತ್ತು ನಂತರ ಜಯನಗರದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಕರೆದೊಯ್ದಿದ್ದಾರೆ. ಜಿಗಿಯುವ ಮುನ್ನ ಆಕೆ ತನ್ನ ಕ್ಲಾಸ್ ಮೇಟ್ ಗೆ ಹೇಳಿದ್ದಳು ಎನ್ನಲಾಗಿದೆ. ಆಕೆಯ […]

ಶಾಲಾ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ವೃದ್ಧ ಮಹಿಳೆಯನ್ನು 20 ಮೀಟರ್ ಎಳೆದೊಯ್ದು ಸರ ಕಳ್ಳತನ..!

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 24.  ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳನೊಬ್ಬ ವೃದ್ಧ ಮಹಿಳೆಯನ್ನು 20 ಮೀಟರ್ ವರೆಗೆ ಎಳೆದೊಯ್ದು ಸರಗಳ್ಳತನ ಮಾಡಿರು ಘಟನೆಯೊಂದು ನಗರದ ಕೆಂಗೇರಿಯಲ್ಲಿ ವರದಿಯಾಗಿದೆ. ಮುದ್ದಮ್ಮ (73) ಸರ ಕಳೆದುಕೊಂಡ ವೃದ್ಧ ಮಹಿಳೆಯಾಗಿದ್ದಾರೆ. ಘಟನೆಯಿಂದಾಗಿ ಮಹಿಳೆಯ ಎಡಗೈ ಮೂಳೆ ಮುರಿತಕ್ಕೊಳಗಾಗಿದ್ದು, ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಮುದ್ದಮ್ಮ ಅವರು ಮನೆಯ ಮುಂದೆ ವಾಕಿಂಗ್ ಮಾಡುತ್ತಿದ್ದಾಗ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಹೋಗಿದ್ದಾನೆ. ಈ ವೇಳೆ ಮಹಿಳೆ ವಿಳಾಸ ಹೇಳುತ್ತಿದ್ದಾಗ

ವೃದ್ಧ ಮಹಿಳೆಯನ್ನು 20 ಮೀಟರ್ ಎಳೆದೊಯ್ದು ಸರ ಕಳ್ಳತನ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪಾಲಿಕೆ ಹೊಸ ಮಾರ್ಗಸೂಚಿಗೆ ಪಿಜಿ ಮಾಲೀಕರ ವಿರೋಧ ಮರು ಪರಿಶೀಲಿಸುವಂತೆ ಮನವಿ  

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 24.  ನಗರದ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ಗೃಹಗಳನ್ನು ನಿಯಂತ್ರಿಸಲು ಬಿಬಿಎಂಪಿ ಹೊರಡಿಸಿದ್ದ ಹೊಸ ಮಾರ್ಗಸೂಚಿಗೆ ಪಿಜಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು, ಮರು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ. ಕೋರಮಂಗಲದ ಪಿಜಿ ವಸತಿಗೃಹದಲ್ಲಿ ಮಹಿಳೆಯೊಬ್ಬರ ಹತ್ಯೆ ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ, ಪಿಜಿಗಳಿಗೆ ಹೊಸ ಹಾಗೂ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಮಾರ್ಗಸೂಚಿಯಂತೆ ಹೊಸದಾಗಿ ಪಿಜೆ ತೆರೆಯಲು ಅಥವಾ ಪರವಾನಗಿ ಪರಿಷ್ಕರಣೆಗೆ ಈ ನಿಯಮಗಳ ಪಾಲನೆ ಕಡ್ಡಾಯವಾಗಿದೆ.    

ಪಾಲಿಕೆ ಹೊಸ ಮಾರ್ಗಸೂಚಿಗೆ ಪಿಜಿ ಮಾಲೀಕರ ವಿರೋಧ ಮರು ಪರಿಶೀಲಿಸುವಂತೆ ಮನವಿ   Read More »

ಕರ್ನಾಟಕ

ದಕ್ಷಿಣ ಭಾರತದ ಮೊದಲ ಆದಿವಾಸಿ ಜ್ಞಾನ ಕೇಂದ್ರ ‘ಕಾನು’ ಆ.25 ರಂದು ಉದ್ಘಾಟನೆ

(ನ್ಯೂಸ್ ಕಡಬ) newskadaba.c0m ಮೈಸೂರು, ಆ. 24.  ದಕ್ಷಿಣ ಭಾರತದ ಮೊದಲ ಆದಿವಾಸಿ ಗ್ರಂಥಾಲಯ ‘ಕಾನು’ ಆಗಸ್ಟ್ 25 ರಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಉದ್ಘಾಟನೆಗೊಳ್ಳಲಿದೆ. ‘ಕಾನು’ ಎಂದರೆ ಸೋಲಿಗ ಭಾಷೆಯಲ್ಲಿ ನಿತ್ಯಹರಿದ್ವರ್ಣ ಕಾಡು ಎಂದರ್ಥ. ಇದು ದಕ್ಷಿಣ ಭಾರತದ ಮೊದಲ ಆದಿವಾಸಿ ಜ್ಞಾನ ಕೇಂದ್ರವಾಗಲಿದೆ ಎನ್ನಲಾಗಿದೆ. ದಕ್ಷಿಣ ಭಾರತದಲ್ಲಿ ಆದಿವಾಸಿಗಳಿಗೆ ಸಂಬಂಧಿಸಿದ ವಿವಿಧ ಅಂಶಗಳ ಸಂಶೋಧನೆಗೆ ಮೀಸಲಾದ ಯಾವುದೇ ಸಂಸ್ಥೆ ಇಲ್ಲ. ಬುಡಕಟ್ಟು ಸಮುದಾಯಗಳ ವಿದ್ವಾಂಸರು ಕಳೆದ ವರ್ಷ ಬಿಆರ್ ಹಿಲ್ಸ್ ನ ವೈದ್ಯಕೀಯ

ದಕ್ಷಿಣ ಭಾರತದ ಮೊದಲ ಆದಿವಾಸಿ ಜ್ಞಾನ ಕೇಂದ್ರ ‘ಕಾನು’ ಆ.25 ರಂದು ಉದ್ಘಾಟನೆ Read More »

ಕರ್ನಾಟಕ

ಸರ್ಕಾರಿ ಕಾಲೇಜಿನ 3.7 ಎಕರೆ ಜಮೀನು ಕುರುಬರ ಶಾಖೆಗೆ ಮಂಜೂರು ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ರೋಶ       

(ನ್ಯೂಸ್ ಕಡಬ) newskadaba.c0m ಕಲಬುರಗಿ, ಆ. 24.  ಸರ್ಕಾರಿ ಕಾಲೇಜಿಗೆ ಸೇರಿದ 3 ಎಕರೆ 7 ಗುಂಟೆ ಭೂಮಿಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲಬುರಗಿ ಶಾಖೆಗೆ ಮಂಜೂರು ಮಾಡಿರುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿವೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ವಿದ್ಯಾರ್ಥಿಗಳ ಭವಿಷ್ಯದ ಶೈಕ್ಷಣಿಕ ಹಿತದೃಷ್ಟಿಯಿಂದ ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಸರ್ಕಾರಿ ಕಾಲೇಜಿಗೆ ಸೇರಿದ ಜಮೀನನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲಬುರಗಿ ಶಾಖೆಗೆ ಮಂಜೂರು ಮಾಡುವಂತೆ ಪ್ರಸ್ತಾವೆ ಸಲ್ಲಿಕೆಯಾಗಿದ್ದು, ಈ

ಸರ್ಕಾರಿ ಕಾಲೇಜಿನ 3.7 ಎಕರೆ ಜಮೀನು ಕುರುಬರ ಶಾಖೆಗೆ ಮಂಜೂರು ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ರೋಶ        Read More »

ಕರ್ನಾಟಕ

ಬೆಂಗಳೂರು- ತುಮಕೂರು ನಡುವೆ ಶೀಘ್ರದಲ್ಲೇ ದೈನಂದಿನ ರೈಲು ಸಂಚಾರ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ  

(ನ್ಯೂಸ್ ಕಡಬ) newskadaba.c0m ತುಮಕೂರು, ಆ. 24.  ಬೆಂಗಳೂರು-ತುಮಕೂರು ನಡುವೆ ಮೆಮು ದೈನಂದಿನ ರೈಲು ಸೇವೆಯನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಈ ರೈಲು ಸಂಚಾರದಿಂದ ವಿಶೇಷವಾಗಿ ಸಾವಿರಾರು ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ಮತ್ತು ಕಾರ್ಖಾನೆಯ ಉದ್ಯೋಗಿಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. ತುಮಕೂರು ನಿಲ್ದಾಣವನ್ನು ವಿಶ್ವ ದರ್ಜೆಯ ಟರ್ಮಿನಲ್ ಆಗಿ ಮೇಲ್ದರ್ಜೆಗೇರಿಸಲು ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ ಎಂದರು. ರಸ್ತೆ ಮತ್ತು ರೈಲು ಬಳಕೆದಾರರ

ಬೆಂಗಳೂರು- ತುಮಕೂರು ನಡುವೆ ಶೀಘ್ರದಲ್ಲೇ ದೈನಂದಿನ ರೈಲು ಸಂಚಾರ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ   Read More »

ಕರ್ನಾಟಕ

ರಾಜ್ಯಪಾಲರಿಂದ ಸರ್ಕಾರದ 6 ಮಸೂದೆ ರಿಜೆಕ್ಟ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 23. ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದ ಪರಿಣಾಮವೋ ಎಂಬಂತೆ ರಾಜ್ಯಪಾಲರು ಆಗಸ್ಟ್ ಮಾಸದಲ್ಲಿ ಆರು ಪ್ರಮುಖ ವಿಧೇಯಕಗಳನ್ನು ಹೆಚ್ಚಿನ ಮಾಹಿತಿ ಕೋರಿ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಈ  ಮೂಲಕ ಕಳೆದ ಜನವರಿಯಿಂದ ಇದುವರೆಗೂ ಒಟ್ಟು 11 ವಿಧೇಯಕಗಳನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದಂತಾಗಿದೆ. ಯಾವ ಮಸೂದೆ ಸರ್ಕಾರಕ್ಕೆ ವಾಪಸ್?  1 ಕರ್ನಾಟಕ ಸಾರ್ವಜನಿಕ ಪರೀಕ್ಷಾ(ಭ್ರಷ್ಟಾಚಾರ ತಡೆ) ವಿಧೇಯಕ 2 ಕರ್ನಾಟಕ ಧಾರ್ಮಿಕ ದತ್ತಿ (ತಿದ್ದುಪಡಿ) ವಿಧೇಯಕ 3

ರಾಜ್ಯಪಾಲರಿಂದ ಸರ್ಕಾರದ 6 ಮಸೂದೆ ರಿಜೆಕ್ಟ್..! Read More »

ಕರ್ನಾಟಕ

ಮೈಸೂರು:  ಹೋಟೆಲ್ ನಲ್ಲಿ ಸ್ಫೋಟಕ ಪತ್ತೆ  ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಯಿಂದ ಪರಿಶೀಲನೆ

(ನ್ಯೂಸ್ ಕಡಬ) newskadaba.c0m ಮೈಸೂರು, ಆ. 23.  ಸಾಂಸ್ಕೃತಿಕ ನಗರಿ ಮೈಸೂರು ವಿಶ್ವಪ್ರಸಿದ್ಧ ದಸರಾ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗೇಟ್ ಬಳಿಯ ಹೋಟೆಲ್ ​ವೊಂದರಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಅಪರಿಚಿತರು ನೀಲಿ ಬಣ್ಣದ ಪ್ಲಾಸ್ಟಿಕ್​ನಲ್ಲಿ ಸ್ಫೋಟಕ ವಸ್ತುಗಳನ್ನು ಇಟ್ಟು ಪರಾರಿಯಾಗಿದ್ದಾರೆ. ಈ ಸ್ಫೋಟಕ ವಸ್ತುಗಳನ್ನು ನೋಡಿದ ಹೋಟೆಲ್​ ಸಿಬ್ಬಂದಿ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿ,

ಮೈಸೂರು:  ಹೋಟೆಲ್ ನಲ್ಲಿ ಸ್ಫೋಟಕ ಪತ್ತೆ  ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಯಿಂದ ಪರಿಶೀಲನೆ Read More »

ಕರ್ನಾಟಕ

ವಿಮಾನ ನಿಲ್ದಾಣಕ್ಕೆ ನೀಡಿದ ಭೂಮಿಗೆ ಸಿಗದ ಪರಿಹಾರ      ಎಸಿ ಕಚೇರಿ ಪೀಠೋಪಕರಣ ವಶಪಡಿಸಿಕೊಂಡ ರೈತರು   

(ನ್ಯೂಸ್ ಕಡಬ) newskadaba.c0m ಬೆಳಗಾವಿ, ಆ. 23.  2008 ರಲ್ಲಿ ಬೆಳಗಾವಿ ವಿಮಾನ ನಿಲ್ದಾಣದ ವಿಸ್ತರಣೆಯ ಸಂದರ್ಭದಲ್ಲಿ ಜಮೀನು ಸ್ವಾಧೀನಪಡಿಸಿಕೊಂಡ ಹಲವಾರು ರೈತರು, ಸರ್ಕಾರವು ತಮ್ಮ ಬಾಕಿ ಮತ್ತು ಪರಿಹಾರವನ್ನು ಪಾವತಿಸದ ಕಾರಣ ಗುರುವಾರ ಸಹಾಯಕ ಆಯುಕ್ತರ ಕಚೇರಿಯಿಂದ ಎಲ್ಲಾ ಪೀಠೋಪಕರಣಗಳು, ಕಂಪ್ಯೂಟರ್‌ ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡರು. ಪ್ರತಿ ಎಕರೆ ಭೂಮಿಗೆ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ನ್ಯಾಯಾಲಯವು ಸರ್ಕಾರಕ್ಕೆ ಆದೇಶಿಸಿದೆ. ಆದರೆ ಸಂತ್ರಸ್ತ ರೈತರು 2011ರಲ್ಲಿ ತಮ್ಮ ಜಮೀನಿಗೆ ಹೆಚ್ಚಿನ ಪರಿಹಾರ

ವಿಮಾನ ನಿಲ್ದಾಣಕ್ಕೆ ನೀಡಿದ ಭೂಮಿಗೆ ಸಿಗದ ಪರಿಹಾರ      ಎಸಿ ಕಚೇರಿ ಪೀಠೋಪಕರಣ ವಶಪಡಿಸಿಕೊಂಡ ರೈತರು    Read More »

ಕರ್ನಾಟಕ

‘ಪಿಯುಸಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಉಚಿತವಾಗಿ ನೀಟ್ ತರಬೇತಿ’- ಸಚಿವ ಮಧು ಬಂಗಾರಪ್ಪ                              

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 23.  ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ 25 ಸಾವಿರ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ಉಚಿತವಾಗಿ ನೀಟ್ (NEET) ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವರ್ಷದಿಂದಲೇ ಉಚಿವಾಗಿ ನೀಟ್​ ತರಬೇತಿ ನೀಡಲಾಗುತ್ತದೆ. ತಜ್ಞರಿಂದ ರಾಜ್ಯದ 25 ಸಾವಿರ ಬಡ ಪಿಯು ವಿದ್ಯಾರ್ಥಿಗಳಿಗೆ ನೀಟ್ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ 12 ಕೋಟಿ ರೂಪಾಯಿ

‘ಪಿಯುಸಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಉಚಿತವಾಗಿ ನೀಟ್ ತರಬೇತಿ’- ಸಚಿವ ಮಧು ಬಂಗಾರಪ್ಪ                               Read More »

ಕರ್ನಾಟಕ
Scroll to Top