karnataka

ಕಾಡಾನೆ ದಾಳಿಗೆ ಸಾಕಾನೆ “ರಾಜೇಂದ್ರ” ಸಾವು.!

(ನ್ಯೂಸ್ ಕಡಬ) newskadaba.com ಮಡಿಕೇರಿ ಅ. 16: ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಕಾಡಾನೆ ದಾಳಿಯಿಂದ ಸಾಕಾನೆಯೊಂದು ಮೃತಪಟ್ಟಿದೆ. ರಾಜೇಂದ್ರ (56) ಹೆಸರಿನ ಗಂಡಾನೆ ಮೃತಪಟ್ಟಿದೆ.   ಮಂಗಳವಾರ ರಾತ್ರಿ ಈ ಆನೆಯನ್ನು ಮೇವಿಗಾಗಿ ಕಾಡಿಗೆ ಬಿಡಲಾಗಿತ್ತು. ಮರು ದಿನ ಬೆಳಿಗ್ಗೆ ಆನೆಯನ್ನು ಶಿಬಿರಕ್ಕೆ ಕರೆತರಲು ಮಾವುತ ಮತ್ತು ಕಾವಾಡಿಗರು ತೆರಳಿದಾಗ ಕಾಡಾನೆಯೊಂದಿಗೆ ಕಾದಾಟ ನಡೆಸಿದ ಆನೆಯ ಹೊಟ್ಟೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿತ್ತು. ಶಿಬಿರಕ್ಕೆ ಕರೆ ತಂದು ಚಿಕಿತ್ಸೆ ನೀಡಲಾಗಿತ್ತು. ಅದಕ್ಕೆ ಸ್ಪಂದಿಸದೆ ತೀವ್ರ ಅಸ್ವಸ್ಥಗೊಂಡ ಆನೆಯು […]

ಕಾಡಾನೆ ದಾಳಿಗೆ ಸಾಕಾನೆ “ರಾಜೇಂದ್ರ” ಸಾವು.! Read More »

ಕರಾವಳಿ, ಕರ್ನಾಟಕ

ಪತ್ತೂರು: ಹಿಂಬದಿ ಸವಾರರಿಗೂ ಇನ್ಮುಂದೆ ಹೆಲ್ಮೆಟ್‌ ಕಡ್ಡಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.16: ನ್ಯಾಯಾಲಯದ ಆದೇಶ ಹಾಗೂ ಮೇಲಾಧಿಕಾರಿಗಳ ನಿರ್ದೇಶದಂತೆ ಇನ್ನು ಮುಂದೆ ದ್ವಿಚಕ್ರ ವಾಹನಗಳಲ್ಲಿ ಸಹ ಸವಾರರಾಗಿ ಸಂಚರಿಸುವವರೂ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಸಂಚಾರ ಪೊಲೀಸ್‌ ಠಾಣಾ ಎಸ್.ಐ ತಿಳಿಸಿದ್ದಾರೆ.     ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವುದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಮತ್ತು ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಹೆಲ್ಮೆಟ್‌ ಧರಿಸದೇ ಸಂಚಾರಿಸುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು ಎಂದು ಸಂಚಾರಿ ಠಾಣಾ ಎಸ್‌.ಐ ರಾಮ ನಾಯ್ಕ

ಪತ್ತೂರು: ಹಿಂಬದಿ ಸವಾರರಿಗೂ ಇನ್ಮುಂದೆ ಹೆಲ್ಮೆಟ್‌ ಕಡ್ಡಾಯ Read More »

ಕರಾವಳಿ

ಮೂಡಬಿದಿರೆ: ವಿದ್ಯಾಗಮ ಯೋಜನೆಯಡಿ ಪಾಠ ಮಾಡುತ್ತಿದ್ದ ಶಿಕ್ಷಕಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಅ.16: ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ವಿದ್ಯಾಗಮ ಯೋಜನೆಯಡಿ ಪಾಠ ಮಾಡಲು ಮಕ್ಕಳ ಬಳಿಗೆ ಹೋಗುತ್ತಿದ್ದ ಮೂಡುಬಿದಿರೆ ಶಿಕ್ಷಕಿಯೊಬ್ಬರು ಇಂದು ಮೃತಪಟ್ಟಿದ್ದಾರೆ.     ವಿದ್ಯಾಗಮ ಯೋಜನೆಯಡಿ ಪಾಠ ಮಾಡಲು ಮಕ್ಕಳ ಬಳಿಗೆ ಹೋಗುತ್ತಿದ್ದ ಶಿಕ್ಷಕಿ ಪದ್ಮಾಕ್ಷಿ ಯವರಿಗೆ ಸೆ. 29 ರಂದು ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

ಮೂಡಬಿದಿರೆ: ವಿದ್ಯಾಗಮ ಯೋಜನೆಯಡಿ ಪಾಠ ಮಾಡುತ್ತಿದ್ದ ಶಿಕ್ಷಕಿ ಮೃತ್ಯು Read More »

ಕರಾವಳಿ

ತಲಕಾವೇರಿ: ಕಾವೇರಿ ತೀರ್ಥೋದ್ಭವʼಗೆ ಕ್ಷಣಗಣನೆ..!

(ನ್ಯೂಸ್ ಕಡಬ) newskadaba.com ತಲಕಾವೇರಿ, ಅ.16: ಕೊಡವರ ಕುಲದೇವತೆ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಲು ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಕೊರೋನಾ ಹಿನ್ನಲೆ ಈ ತೀರ್ಥೋದ್ಭವ ಜಾತ್ರೆಗೆ ಹೆಚ್ಚಿನ ಜನರು ಸೇರದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು, ಸರಳವಾಗಿ ಈ ಬಾರಿ ಕಾರ್ಯಕ್ರಮ ಆಚರಣೆ ಮಾಡಲು ಸೂಚನೆ ನೀಡಿದ್ದು, ಕೋವಿಡ್​ ಸುರಕ್ಷತೆ ಪಾಲಿಸುವುದು ಕಡ್ಡಾಯವಾಗಿದೆ. ತೀರ್ಥೋದ್ಭವದಲ್ಲಿ ಭಾಗಿಯಾಗುವ ಭಕ್ತರು ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್​ ಬಳಕೆ ಕಡ್ಡಾಯ. ತೀರ್ಥೋದ್ಭವಕ್ಕೆ ಈಗಾಗಲೇ ಎಲ್ಲಾ ಪೂಜಾ ವಿಧಿವಿಧಾನಗಳು ನಡೆಯುತ್ತಿವೆ.

ತಲಕಾವೇರಿ: ಕಾವೇರಿ ತೀರ್ಥೋದ್ಭವʼಗೆ ಕ್ಷಣಗಣನೆ..! Read More »

ಕರ್ನಾಟಕ

ಬೈಂದೂರು : ವೃತ್ತ ನಿರೀಕ್ಷಕರ ಜೀಪು ಚಾಲಕ ನಿಯಂತ್ರಣ ತಪ್ಪಿ ಪಲ್ಟಿ

(ನ್ಯೂಸ್ ಕಡಬ) newskadaba.com ವಿಟ್ಲ ಅ. 16: ಕಾರೊಂದನ್ನು ಫಾಲೋ ಮಾಡಲು ಹೋಗಿದ್ದ ಬೈಂದೂರು ವೃತ್ತ ನಿರೀಕ್ಷಕರ ಜೀಪು ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿ ವೃತ್ತ ನೀರಿಕ್ಷಕ ಸುರೇಶ್ ನಾಯ್ಕ್ ಮತ್ತು ಅವರ ಚಾಲಕ ಹೇಮ ರಾಜ್ ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.   ಗುರುವಾರ ತಡ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಒತ್ತಿನೆಣೆ ಬಳಿ ರಾತ್ರಿ ಗಸ್ತು ತಿರುಗುತ್ತಿರುವ ವೇಳೆ ಮಾರುತಿ ಓಮಿನಿ ಕಾರೊಂದು ವೃತ್ತ ನಿರೀಕ್ಷಕರ ಜೀಪನ್ನು ಕಂಡು ಅನುಮಾಸ್ಪದವಾಗಿ ವೇಗವಾಗಿ ಹೋಗಿದ್ದು, ಅದನ್ನು ಬೆನ್ನಟ್ಟಿಕೊಂಡು

ಬೈಂದೂರು : ವೃತ್ತ ನಿರೀಕ್ಷಕರ ಜೀಪು ಚಾಲಕ ನಿಯಂತ್ರಣ ತಪ್ಪಿ ಪಲ್ಟಿ Read More »

ಕರಾವಳಿ, ಕರ್ನಾಟಕ

ಹಸುವನ್ನು ಬಿಡದ ಕಾಮುಕ ➤ ಸಿಸಿಟಿವಿಯಲ್ಲಿ ವ್ಯಕ್ತಿಯ ದುರ್ವರ್ತನೆ ಸೆರೆ

(ನ್ಯೂಸ್ ಕಡಬ) newskadaba.com ತಿರುವನಂತಪುರಂ ಅ. 16: ಹಸುವಿನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಈತ ಎರ್ನಾಕುಲಂ ಮೂಲದವನಾಗಿದ್ದು, ಕೋಯಿಕ್ಕೋಡ್ ನ ವಲಿಯವಯಾಲ್ ಮುಲ್ಲೆರಿಕುನುಮೆಲ್ ನಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ವಾಸವಿದ್ದ 12 ಮೈಲಿ ದೂರದಲ್ಲಿದ್ದ ಚಥಮಂಗಲಂ ಎಂಬವರ ಮನೆಯ ಹಸುವಿನ ಮೇಲೆ ಆರೋಪಿ ಈ ಕೃತ್ಯ ಎಸಗಿದ್ದಾನೆ. ರಾತ್ರಿ ಆರೋಪಿ  ಕೊಟ್ಟಿಗೆಯಿಂದ ಹಸುವನ್ನು ಬಿಚ್ಚಿಕೊಂಡು ಹೊರಗಡೆ ಕರೆದೊಯ್ಯುತ್ತಾನೆ. ಬಳಿಕ ಅದರ ಮೇಲೆ ಅಸಹಜ ಲೈಂಗಿಕ ಕ್ರಿಯೆ ಎಸಗುತ್ತಿದ್ದನು.

ಹಸುವನ್ನು ಬಿಡದ ಕಾಮುಕ ➤ ಸಿಸಿಟಿವಿಯಲ್ಲಿ ವ್ಯಕ್ತಿಯ ದುರ್ವರ್ತನೆ ಸೆರೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರಿನ ಬಾರ್‌ ಮಾಲೀಕ ಮನೀಷ್ ಶೆಟ್ಟಿ ಮೇಲೆ ಶೂಟೌಟ್

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 16: ಗುರುವಾರ ರಾತ್ರಿ ನಗರದ ರೆಸ್ಟ್ ಹೌಸ್ ಪಾರ್ಕ್ ರಸ್ತೆಯಲ್ಲಿ ಮಾಲೀಕನ ಮೇಲೆ ಶೂಟೌಟ್‌ ಮಾಡಲಾಗಿದೆ.ಡ್ಯುಯೆಟ್ ಬಾರ್ ಮಾಲೀಕನಾಗಿರುವ ಮನೀಷ್ ಮೇಲೆ ಎರಡು ಬೈಕಿನಲ್ಲಿ ಬಂದ ಮೂವರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.   ಮನೀಷ್‌ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ನಡೆದ ಸ್ಥಳದಲ್ಲಿ ಒಂದು ಡಿಯೋ ಬೈಕ್ ಬಿಟ್ಟು ಹೋಗಿದ್ದಾರೆ. ಪಬ್ ನಿಂದ ಇನ್ನೂರು ಮೀಟರ್ ದೂರದಲ್ಲಿ ಮತ್ತೊಂದು ಬೈಕ್ ಮತ್ತು ಡಬ್ಬಲ್ ಬ್ಯಾರಲ್ ಗನ್ ಎಸೆದು ಆರೋಪಿಗಳು

ಬೆಂಗಳೂರಿನ ಬಾರ್‌ ಮಾಲೀಕ ಮನೀಷ್ ಶೆಟ್ಟಿ ಮೇಲೆ ಶೂಟೌಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

PUBG ಗೆಳೆಯರಿಂದ ಬಾಲಕಿಯ ಅತ್ಯಾಚಾರ.!!

(ನ್ಯೂಸ್ ಕಡಬ) newskadaba.com ಭೋಪಾಲ್, ಅ. 16:  ಆನ್‌ಲೈನ್‌ನಲ್ಲಿ ಪಬ್‌ಜಿ ಆಡುವಾಗ ಪರಿಚಿತರಾದ ಮೂವರು ವ್ಯಕ್ತಿಗಳು 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.     ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಮಧ್ಯಪ್ರದೇಶದ ಭೋಪಾಲದ ರಂಭಾನಗರ ಪ್ರದೇಶದ ನಿವಾಸಿಗಳಾಗಿದ್ದು 18-19 ವರ್ಷದವರಾಗಿದ್ದಾರೆ. ಆನ್‌ಲೈನ್‌ನಲ್ಲಿ ಪಬ್‌ಜಿ ಆಡುವಾಗ ಬಾಲಕಿಯ ಪರಿಚಯವಾಗಿತ್ತು. ಸೆಪ್ಟಂಬರ್‌ನಲ್ಲಿ ಬಾಲಕಿಯನ್ನು ಪುಸಲಾಯಿಸಿ ರಂಭಾನಗರಕ್ಕೆ ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ,

PUBG ಗೆಳೆಯರಿಂದ ಬಾಲಕಿಯ ಅತ್ಯಾಚಾರ.!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯದಲ್ಲಿ ಮುಂದಿನ ತಿಂಗಳು ಪಿಯು,ಡಿಗ್ರಿ ಕಾಲೇಜು ಓಪನ್.!

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 16: ರಾಜ್ಯದಲ್ಲಿ ನವೆಂಬರ್ ತಿಂಗಳಲ್ಲಿ ಪಿಯು, ಡಿಗ್ರಿ ಕಾಲೇಜು ಪುನಾರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.   ಈ ಕುರಿತು ಸುಳಿವು ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎಸ್. ಅಶ್ವತ್ಥನಾರಾಯಣ್, ನಮ್ಮ ಸರ್ಕಾರ ನೀಟ್, ಸಿಇಟಿ ಮತ್ತು ಇತರ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ ಮತ್ತು ಆ ಎಲ್ಲಾ ವಿಶ್ವಾಸದಿಂದ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಕಾಲೇಜುಗಳನ್ನು ಸಹ ತೆರೆಯುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.

ರಾಜ್ಯದಲ್ಲಿ ಮುಂದಿನ ತಿಂಗಳು ಪಿಯು,ಡಿಗ್ರಿ ಕಾಲೇಜು ಓಪನ್.! Read More »

ಕರಾವಳಿ

ಪುತ್ತೂರು, ಕಡಬದಲ್ಲಿ ಇಂದು 15 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಅ.15: ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ 15 ಮಂದಿಯಲ್ಲಿ ಕೊರೋನಾ ದೃಢಗೊಂಡಿದೆ.     ಕಡಬ ತಾಲೂಕಿನ ಆತೂರಿನ 3 ವರ್ಷದ ಹೆಣ್ಣು ಮಗು, ಬಿಳಿನೆಲೆಯ 70 ವರ್ಷದ ಮಹಿಳೆ, 75 ವರ್ಷದ ವ್ಯಕ್ತಿ, ಕುಂತೂರಿನ 19 ವರ್ಷದ ಯುವತಿಯಲ್ಲಿ ಕೊರೋನಾ ಪತ್ತೆಯಾಗಿದೆ.  

ಪುತ್ತೂರು, ಕಡಬದಲ್ಲಿ ಇಂದು 15 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ Read More »

ಕರಾವಳಿ
Scroll to Top