ತೊಕ್ಕೊಟ್ಟು : ಬದಲಿ ರಸ್ತೆಯಲ್ಲೂ ಅಪಘಾತ ➤ ಬಸ್ಸಿನ ಅಡಿಗೆ ಬಿದ್ದ ಬುಲೆಟ್
(ನ್ಯೂಸ್ ಕಡಬ) newskadaba.com ತೊಕ್ಕೊಟ್ಟು ಅ. 30: ತೊಕ್ಕೊಟ್ಟು ಕಾಪಿಕಾಡಿನ ತಿರುವಿನಲ್ಲಿ ಮತ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ನ ಅಡಿಗೆ ಬುಲೆಟ್ ಬಿದ್ದ ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದಾರೆ. ಉಳ್ಳಾಲಕ್ಕೆ ತಿರುಗುತ್ತಿದ್ದ ಖಾಸಗಿ ಬಸ್ಸಿನಡಿಗೆ ಬುಲೆಟ್ ಬಿದಿದ್ದೆ. ಅದೃಷ್ಟವಶಾತ್ ಬುಲೆಟ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಇದೇ ಸ್ಥಳದಲ್ಲಿ ಅಪಘಾತ ನಡೆದು ನವದಂಪತಿ ಸಾವನ್ನಪ್ಪಿದ್ದರು. ಆದ್ದರಿಂದ ಬದಲಿ ರಸ್ತೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿಪರ್ಯಾಸವೆಂದರೆ ಪರ್ಯಾಯ ರಸ್ತೆ ಮಾಡಿದರು ಅಲ್ಲಿಯು ಅಪಘಾತ ತಪ್ಪಿಲ್ಲ.
ತೊಕ್ಕೊಟ್ಟು : ಬದಲಿ ರಸ್ತೆಯಲ್ಲೂ ಅಪಘಾತ ➤ ಬಸ್ಸಿನ ಅಡಿಗೆ ಬಿದ್ದ ಬುಲೆಟ್ Read More »
ಕರಾವಳಿ, ಕರ್ನಾಟಕ









