karnataka

ಕಲ್ಲಡ್ಕ: ಓಮ್ನಿ-ಬೈಕ್ ಅಪಘಾತ ➤ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಕಲ್ಲಡ್ಕ ನ. 23: ಕಳೆದ ದಿನ ರಾತ್ರಿ ಕಲ್ಲಡ್ಕ ಸಮೀಪದಲ್ಲಿ ನಡೆದ ಓಮ್ನಿ ಹಾಗೂ ಬೈಕ್ ಅಪಘಾತ ನಡೆದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರನಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಕಲ್ಲಡ್ಕ ಹಿಂದೂ ಸಂಘಟನೆ ಕಾರ್ಯಕರ್ತ ಯತಿರಾಜ್(30) ಎಂದು ಗುರುತಿಸಲಾಗಿದೆ.     ಕಳೆದ ದಿನ ರಾತ್ರಿ ಕ್ಲಡ್ಕ ಸಮೀಪದ ಕುದ್ರೆಬೆಟ್ಟುನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕರಿಯಾಗದೇ ಮೃತಪಟ್ಟಿದ್ದಾರೆ. ಇನ್ನು ಈ […]

ಕಲ್ಲಡ್ಕ: ಓಮ್ನಿ-ಬೈಕ್ ಅಪಘಾತ ➤ ಬೈಕ್ ಸವಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ಒಂಬತ್ತನೇ ಅಂತಸ್ತಿನಿಂದ ಬಿದ್ದು ಭದ್ರತಾ ಕಾವಲುಗಾರ ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ ನ. 23: ಉಳ್ಳಾಲ ಠಾಣಾ ವ್ಯಾಪ್ತಿಯ ನಗರಸಭೆ ಕಚೇರಿ ಬಳಿ ಇರುವ ಇನ್ ಪಾಲ ಬಹುಮಹಡಿ ಕಟ್ಟಡದಲ್ಲಿ ಭದ್ರತಾ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಒಂಬತ್ತನೇ ಅಂತಸ್ತಿನಿಂದ ಕಾಲು ಜಾರಿ ಕೆಳಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.     ಮೃತಪಟ್ಟ ವ್ಯಕ್ತಿಯನ್ನು ಚೆಂಬುಗುಡ್ಡೆ ನಿವಾಸಿ ಮುತ್ತುರಾಜ(55) ಎಂದು ಗುರುತಿಸಲಾಗಿದೆ. ಇವರು ಟ್ಯಾಂಕ್ ನಲ್ಲಿ ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ

ಉಳ್ಳಾಲ: ಒಂಬತ್ತನೇ ಅಂತಸ್ತಿನಿಂದ ಬಿದ್ದು ಭದ್ರತಾ ಕಾವಲುಗಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಹೆರಿಗೆ ಬಳಿಕ ತಾಯಿ, ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 23: ಹೆರಿಗೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಬಂಟ್ವಾಳ ಕಾಲೇಜು ರೋಡ್ ನಿವಾಸಿ ಭವಾನಿಶಂಕರ್ ಅವರ ಪತ್ನಿ ಕಾಜಲ್ ಶೆಟ್ಟಿ (25) ಮೃತಪಟ್ಟವರು. ಶನಿವಾರ ರಾತ್ರಿ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಹೆರಿಗೆಗೆಂದು ದಾಖಲಿಸಲಾಗಿತ್ತು. ಭಾನುವಾರ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಈ ವೇಳೆ ಮಗು ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಬಳಿಕ ತೀವ್ರ ರಕ್ತಸ್ರಾವದ ಹಿನ್ನೆಲೆಯಲ್ಲಿ ಮಹಿಳೆಯೂ ಗಂಭೀರ ಸ್ಥಿತಿಯಲ್ಲಿದ್ದರು. ರಾತ್ರಿ ವೇಳೆ ಮಹಿಳೆಯೂ ಮೃತಪಟ್ಟಿದ್ದಾರೆ.

ಬಂಟ್ವಾಳ: ಹೆರಿಗೆ ಬಳಿಕ ತಾಯಿ, ಮಗು ಮೃತ್ಯು Read More »

ಕರಾವಳಿ

157 ಕಿ.ಮೀ ಸೈಕಲ್ ಯಾನ ಮಾಡಿದ ಕಲ್ಮಕಾರು ಯುವಕ

(ನ್ಯೂಸ್ ಕಡಬ) newskadaba.com ಸುಳ್ಯ ನ. 21: ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಕೊಪ್ಪಡ್ಕ ಸುಬ್ರಹ್ಮಣ್ಯ ಕೆ.ಜೆ ಎಂಬವರು 157 ಕಿ.ಮೀ ಸೈಕಲ್ ಯಾನ ಮಾಡಿದ್ದಾರೆ.     ಇವರು ಬೆಂಗಳೂರಿನ ಬೊಮ್ಮಸಂದ್ರದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿಯಾಗಿರುವ ಇವರು ಕೆಲಸದ ನಿಮಿತ್ತ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಬೇಕಾಗಿದ್ದು, ಸೋಲೊ ಸೈಕಲ್ ನಲ್ಲಿ ಬೆಳಗ್ಗಿನ ಜಾವ 4 ಗಂಟೆಗೆ ಪ್ರಯಾಣ ಪ್ರಾರಂಭಿಸಿ ಮೈಸೂರಿಗೆ ಸಂಜೆ 3.15ಕ್ಕೆ ತಲುಪಿದ್ದಾರೆ.    

157 ಕಿ.ಮೀ ಸೈಕಲ್ ಯಾನ ಮಾಡಿದ ಕಲ್ಮಕಾರು ಯುವಕ Read More »

ಕರಾವಳಿ

ಹಿಂದೂ ದೇವರ ನಿಂದನೆ ➤ ಹಿ.ಜಾ.ವೇದಿಕೆಯಿಂದ ವಿಟ್ಲ ಠಾಣೆಗೆ ದೂರು, ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು ನ. 21: ಕಂಬಳಬೆಟ್ಟುವಿನ ವ್ಯಕ್ತಿಯೊಬ್ಬರು ಹಿಂದೂ ದೇವಿ ದೇವತೆಗಳನ್ನು ಅವಹೇಳನ ಮಾಡುವ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಇದೀಗಾ ಈತನ ವಿರುದ್ಧ ಹಿಂದೂ ಜಾಗರಣಾ ವೇದಿಕೆ ವಿಟ್ಲ ಪೊಲೀಸರಿಗೆ ದೂರು ದಾಖಲಿಸಿದ್ದರು.   ಕುಂಬಳಬೆಟ್ಟುವಿನ ರಿಜ್ವಾನ್ ಎಂಬವರು ಹಿಂದೂ ದೇವರನ್ನು, ಹಿಂದೂ ಶಬ್ಧಗಳನ್ನು ಉಲ್ಲೇಖಿಸಿ ಅವಹೇಳನ ಮಾಡಿರುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು , ಈ ಕುರಿತು ಹಿಂದೂಜಾಗರಣಾ ವೇದಿಕೆಯ ವಿಟ್ಲ ತಾಲೂಕು ಕಾರ್ಯದರ್ಶಿ ಹರ್ಷೇಂದ್ರ ಅವರು ವಿಟ್ಲ ಪೊಲೀಸ್ ಠಾಣೆಗೆ

ಹಿಂದೂ ದೇವರ ನಿಂದನೆ ➤ ಹಿ.ಜಾ.ವೇದಿಕೆಯಿಂದ ವಿಟ್ಲ ಠಾಣೆಗೆ ದೂರು, ಆರೋಪಿಯ ಬಂಧನ Read More »

ಕರಾವಳಿ

ಕಸ್ತೂರಿ ರಂಗನ್ ವರದಿ ➤ ಶಿರಾಡಿ ಗ್ರಾಮವನ್ನು ಕೈಬಿಡುವಂತೆ ಜಿಲ್ಲಾಧಿಕಾರಿಗೆ ಮನವಿ

(ನ್ಯೂಸ್ ಕಡಬ) newskadaba.com ಶಿರಾಡಿ ನ. 21: ಶಿರಾಡಿ ಗ್ರಾಮವನ್ನು ಕಸ್ತೂರಿ ರಂಗನ್ ವರದಿ ಪರಿಸರ ಸೂಕ್ಷ್ಮ ವಲಯ ಎಂಬ ಯೋಜನೆಯಿಂದ ಕೈಬಿಡಬೇಕೆಂದು ಒತ್ತಾಯಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಆಶ್ರಯದಲ್ಲಿ ಗ್ರಾಮಸ್ಥರು ಶಿರಾಡಿ ಗ್ರಾ.ಪಂ. ಮುಂದೆ ಇಂದು ಪ್ರತಿಭಟನೆ ನಡೆಸಿದ್ದಾರೆ.     2015 ರಲ್ಲಿಯೇ ನಡೆದ ವಿಶೇಷ ಗ್ರಾಮ ಸಭೆಯ ನಿರ್ಣಯವನ್ನೇ ಪರಿಗಣಿಸಿ ಈ ಯೋಜನೆಯಿಂದ ಶಿರಾಡಿ ಗ್ರಾಮವನ್ನು ಕೈಬಿಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಇದೀಗ ಗ್ರಾ.ಪಂ. ಆಡಳಿತಾಧಿಕಾರಿ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.  

ಕಸ್ತೂರಿ ರಂಗನ್ ವರದಿ ➤ ಶಿರಾಡಿ ಗ್ರಾಮವನ್ನು ಕೈಬಿಡುವಂತೆ ಜಿಲ್ಲಾಧಿಕಾರಿಗೆ ಮನವಿ Read More »

ಕರಾವಳಿ

ಮುರುಡೇಶ್ವರದಲ್ಲಿ ಜಾನುವಾರು ಕಳ್ಳತನ ಯತ್ನ ➤ ಓರ್ವನ ಬಂಧನ ,ನಾಲ್ವರು ಪರಾರಿ

(ನ್ಯೂಸ್ ಕಡಬ) newskadaba.com ಭಟ್ಕಳ ನ. 21:  ಮೇಯಲು ಬಿಟ್ಟ ಜಾನುವಾರುವೊಂದನ್ನು ಮರಕ್ಕೆ ಕಟ್ಟಿ ಹಾಕಿ, ರಾತ್ರಿ ವೇಳೆ ವಾಹನದಲ್ಲಿ ಕದ್ದೊಯ್ಯಲು ಯತ್ನಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲು ಯಶಸ್ವಿಯಾಗಿರುವ ಘಟನೆ ತಾಲೂಕಿನ ಮುರುಡೇಶ್ವರ ಕೈಕಿಣಿ ಮುಡಕೇರಿ ರೇಲ್ವೇ ಬಿಡ್ಜ್ ಹತ್ತಿರ ಗುರುವಾರ ರಾತ್ರಿ ನಡೆದಿದೆ. ಬಂಧಿತನನ್ನು ಮುರುಡೇಶ್ವರ ನ್ಯಾಶನಲ್ ಕಾಲೋನಿ 5ನೇ ಕ್ರಾಸ್ ನಿವಾಸಿ ಯಾಸೀನ್ ತಂದೆ ಇಸ್ಮಾಯಿಲ್ ದೊನ್ನಾ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಈ

ಮುರುಡೇಶ್ವರದಲ್ಲಿ ಜಾನುವಾರು ಕಳ್ಳತನ ಯತ್ನ ➤ ಓರ್ವನ ಬಂಧನ ,ನಾಲ್ವರು ಪರಾರಿ Read More »

ಕರಾವಳಿ

ಡ್ರಗ್ಸ್ ಜಾಲದ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಪೊಲೀಸ್ ಕಾನ್‌ಸ್ಟೇಬಲ್ ಅರೇಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 21:  ಡ್ರಗ್ ಜಾಲದ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಸದಾಶಿವನಗರ ಪೊಲೀಸ್‌ ಠಾಣೆಯ ಮುಖ್ಯ ಪೇದೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಭಾಕರ್ ಬಂಧಿತ ಆರೋಪಿ. ಸದಾಶಿವನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಇವರು, ಕೆ.ಜಿ.ನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ ಜಾಲ ಪ್ರಕರಣದ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದರು. ಡಾರ್ಕ್ ವೆಬ್ ತಾಣಗಳ ಮೂಲಕ ಹೈಡ್ರೋ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಕೊರಿಯರ್ ಮೂಲಕ ತರಿಸಿಕೊಂಡುಪಾರ್ಟಿ ಅಯೋಸುತ್ತಿದ್ದ ಸುನೀಶ್ ಹೆಗ್ಡೆ, ಹೇಮಂತ್, ದರ್ಶನ್ ಲಮಾಣಿ ಮತ್ತಿತರ ಆರೋಪಿಗಳು

ಡ್ರಗ್ಸ್ ಜಾಲದ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಪೊಲೀಸ್ ಕಾನ್‌ಸ್ಟೇಬಲ್ ಅರೇಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಜೆಪ್ಪು ಗುಜ್ಕರಕೆರೆಯಲ್ಲಿ ವೃದ್ದರೊಬ್ಬರ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 21: ನಗರದ ಜೆಪ್ಪು ಗುಜ್ಕರಕೆರೆಯಲ್ಲಿ ‌ಬೆಳಿಗ್ಗೆ ವೃದ್ದರೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ 86 ವರ್ಷದ ಸಂಜೀವ ಶೆಟ್ಟಿ ಎಂದು ಗುರುತಿಸಲಾಗಿದೆ.   ಕಳೆದ ದಿನ ಸಂಜೆಯಿಂದ ವ್ಯಕ್ತಿ ನಾಪತ್ತೆಯಾಗಿದ್ದರು.ಸ್ಥಳೀಯರು ಕೆರೆಯಿಂದ ವೃದ್ದರ ಮೃತದೇಹವನ್ನು ಮೇಲೆತ್ತಿದ್ದಾರೆ.ಇವರು ವೃತ್ತಿಯಲ್ಲಿ ಬಸ್ ಡ್ರೈವರ್ ಆಗಿದ್ದರು.ಕೆರೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಂಗಳೂರು: ಜೆಪ್ಪು ಗುಜ್ಕರಕೆರೆಯಲ್ಲಿ ವೃದ್ದರೊಬ್ಬರ ಮೃತದೇಹ ಪತ್ತೆ Read More »

ಕರಾವಳಿ

ತುಳು ಅಕಾಡೆಮಿಯಿಂದ ಸಿ.ಟಿ ರವಿಯವರಿಗೆ ಗೌರವಾರ್ಪಣೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 21: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿ ತಮ್ಮ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಿದ ಸಿ.ಟಿ. ರವಿ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್ ಅವರು ವಿಶೇಷವಾಗಿ ತುಳುನಾಡಿನ ಪರಂಪರೆಯ ಮುಟ್ಟಾಳೆ, ರೇಷ್ಮೆ ಶಾಲು, ಸಹಿತ ತುಳುನಾಡನ್ನು ಪ್ರತಿಬಿಂಬಿಸುವ ವಿಶೇಷ ಕಲಾಕೃತಿಯನ್ನು ನೀಡಿ ಸಾರ್ವತ್ರಿಕವಾಗಿ ಗೌರವಿಸಿದರು. ಬೆಂಗಳೂರಿನ ಕಲಾ ಗ್ರಾಮದ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಮಾತನಾಡಿದ ದಯಾನಂದ ಜಿ.

ತುಳು ಅಕಾಡೆಮಿಯಿಂದ ಸಿ.ಟಿ ರವಿಯವರಿಗೆ ಗೌರವಾರ್ಪಣೆ Read More »

ಕರಾವಳಿ
Scroll to Top