karnataka

ಗೋಕರ್ಣ : ಬೀಚಿನಲ್ಲಿ ಕೇರಳ ಮೂಲದ ವ್ಯಕ್ತಿ ಮೃತದೇಹ ಪತ್ತೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25: ಕುಡ್ಲೆ ಸಮುದ್ರ ತೀರದಲ್ಲಿ ಗುರುವಾರ ಕೇರಳ ಮೂಲದ ವ್ಯಕ್ತಿಯೋರ್ವದ ಶವ ಪತ್ತೆಯಾಗಿದೆ. ವಿಶ್ವನಾಥ್ ಮೋಹನದಾಸ್ (28) ಎಂದು ಗುರುತಿಸಲಾಗಿದೆ. ತಮ್ಮ ಮೂರು ಜನ ಸ್ನೇಹಿತರೊಂದಿಗೆ ನಾಲ್ಕು ದಿನದ ಹಿಂದೆ ಗೋಕರ್ಣಕ್ಕೆ ಬಂದಿದ್ದರು. ಖಾಸಗಿ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಮಾಡಿದ್ದರೆನ್ನೆಲಾಗಿದೆ. ವಿಶ್ವನಾಥ ಬುಧವಾರ ರಾತ್ರಿಯೇ ನೀರಿಗೆ ಇಳಿದಿದ್ದು ಗೆಳೆಯರ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ. ಗೋಕರ್ಣ ಪಿ.ಎಸ್.ಐ ನವೀನ್ ನಾಯ್ಕ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ […]

ಗೋಕರ್ಣ : ಬೀಚಿನಲ್ಲಿ ಕೇರಳ ಮೂಲದ ವ್ಯಕ್ತಿ ಮೃತದೇಹ ಪತ್ತೆ. Read More »

ಕರ್ನಾಟಕ

ಸಿನಿಮಾ‌ ನಿರ್ದೇಶಕ ಭರತ್ ಹಠಾತ್ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.25: ಕಂಠಿ, ಸಾಹೇಬ ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರತಿಭಾವಂತ ಯುವ ನಿರ್ದೇಶಕ ಎಸ್.ಭರತ್ ಹಠಾತ್ತನೆ ಸಾವಿಗೀಡಾಗಿದ್ದಾರೆ.   45 ವರ್ಷದ ಭರತ್‌ ಆರೋಗ್ಯ ಸಮಸ್ಯೆಯಿಂದಾಗಿ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.ಶ್ರೀಮುರಳಿ, ರಮ್ಯಾ ನಟಿಸಿದ್ದ ಕಂಠಿ ಸಿನಿಮಾವನ್ನು ನಿರ್ದೇಶಿಸಿದ್ದ ಭರತ್ ಆ ನಂತರ ಬಹು ವರ್ಷಗಳ ಬಿಡುವಿನ ಬಳಿಕ 2017 ರಲ್ಲಿ ಸಾಹೇಬ ಸಿನಿಮಾ ನಿರ್ದೇಶಿಸಿದ್ದರು. ಸಿನಿಮಾ ಒಂದನ್ನೇ ವೃತ್ತಿ ಮಾಡಿಕೊಂಡಿದ್ದ

ಸಿನಿಮಾ‌ ನಿರ್ದೇಶಕ ಭರತ್ ಹಠಾತ್ ನಿಧನ Read More »

ಕರ್ನಾಟಕ

ಉಜಿರೆ ಬಾಲಕನ ಅಪಹರಣ ಪ್ರಕರಣ ➤ ತನ್ನ ವ್ಯವಹಾರದಲ್ಲಿ ಯಾರಿಗೂ ಹಣ ಬಾಕಿಯಿಲ್ಲ , ಸುಳ್ಳು ಮಾಹಿತಿ ಹರಡದಂತೆ ಬಿಜಾಯ್ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25:ತನ್ನ ವ್ಯವಹಾರದಲ್ಲಿ ಯಾರಿಗೂ ಹಣ ಬಾಕಿಯಿಲ್ಲ. ಹಾಗೆಯೇ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಹರಡದಂತೆ ಅಪಹರಣಕೊಳಗಾಗಿದ್ದ ಉಜಿರೆಯ ಬಾಲಕನ ತಂದೆ ಬಿಜಾಯ್ ಮಾಧ್ಯಮಕ್ಕೆ ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜಾಯ್, ನಾನು ಕೋಟ್ಯಂತರ ರೂಪಾಯಿ ಸಾಲವನ್ನು ಪಾವತಿಸಬೇಕಾಗಿದೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಹರಡುತ್ತಿದೆ. ನಾನು ಯಾರಿಗಾದರೂ ಹಣ ನೀಡಲು ಬಾಕಿಯಿದೆ ಎಂದು ಅವರು ಸಾಕ್ಷಿ ಸಮೇತ ಪೊಲೀಸರಿಗೆ ಸಾಬೀತುಪಡಿಸಿದರೆ ನಾನು ಮೊತ್ತವನ್ನು ಅವರಿಗೆ ನೀಡಲು ಸಿದ್ದನಿದ್ದೇನೆ ಎಂದು ತಿಳಿಸಿದರು. ಬಿಟ್ ಕಾಯಿನ್

ಉಜಿರೆ ಬಾಲಕನ ಅಪಹರಣ ಪ್ರಕರಣ ➤ ತನ್ನ ವ್ಯವಹಾರದಲ್ಲಿ ಯಾರಿಗೂ ಹಣ ಬಾಕಿಯಿಲ್ಲ , ಸುಳ್ಳು ಮಾಹಿತಿ ಹರಡದಂತೆ ಬಿಜಾಯ್ ಮನವಿ Read More »

ಕರಾವಳಿ

ರಂಗತ್ತಮಲೆ :ನಿಯಂತ್ರಣ ತಪ್ಪಿ ತೋಟಕ್ಕೆ ಬಿದ್ದ ಜೀಪು

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.25: ಸುಳ್ಯದಿಂದ ಆಲೆಟ್ಟಿ ರಸ್ತೆ ಮೂಲಕ ರಂಗತ್ತಮಲೆಗೆ ಸಂಚರಿಸುತ್ತಿದ್ದ ಜೀಪು ಚಾಲಕನ ನಿಯಂತ್ರಣ ತಪ್ಪಿ ಆಲೆಟ್ಟಿ ರಾಧಾಕೃಷ್ಣ ರೈ ಯವರ ತೋಟಕ್ಕೆ ಬಿದ್ದ ಘಟನೆ ನಡೆದಿದೆ.   ಜೀಪಿನ ಚಾಲಕ ರವಿ ಸೇರಿ ೩ ಮಂದಿ ಪ್ರಯಾಣಿಕರು ಜೀಪಿನಲ್ಲಿದ್ದರು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸದೆ ಪ್ರಯಾಣಿಕರು ಪಾರಾಗಿದ್ದಾರೆ.

ರಂಗತ್ತಮಲೆ :ನಿಯಂತ್ರಣ ತಪ್ಪಿ ತೋಟಕ್ಕೆ ಬಿದ್ದ ಜೀಪು Read More »

ಕರಾವಳಿ

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಡಿ. 25 ರಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವು ಡಿಸೆಂಬರ್ 25 ರಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಧರಿಸಿ ಮತ್ತು ಸ್ಯಾನಿಟೈಸರನ್ನು ಕಡ್ಡಾಯವಾಗಿ ಬಳಸಿ ವೀಕ್ಷಿಸಬಹುದಾಗಿದೆ ಎಂದು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಡಿ. 25 ರಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯ Read More »

ಕರಾವಳಿ, ಕರ್ನಾಟಕ

ಕಡಬದಲ್ಲಿ ಸರಳವಾಗಿ ಕ್ರಿಸ್ ಮಸ್ ಸಂಭ್ರಮಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಡಿ.25: ವಿಶ್ವದೆಲ್ಲೆಡೆ ಇಂದು ಕ್ರಿಸ್ ಮಸ್ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ಜಗತ್ತಿಗೆ ಶಾಂತಿಮಂತ್ರ ಬೋಧಿಸಿದ ಯೇಸು ಕ್ರಿಸ್ತನ ಹುಟ್ಟುಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ.ಕಡಬ, ಕೋಡಿಂಬಾಳ ಕುಟ್ರುಪಾಡಿ ಕುಂತೂರು ನೆಲ್ಯಾಡಿ ಸೇರಿದಂತೆ ಬಹುತೇಕ ಎಲ್ಲ ಚರ್ಚ್‍ಗಳನ್ನು ವಿದ್ಯುತ್ ದೀಪ ಸಕ್ಷತ್ರಗಳಿಂದ ಅಲಂಕಾರಿಸಲಾಗಿದೆ. ಚರ್ಚ್ ಆವರಣದಲ್ಲಿ ಮತ್ತು ಕೈಸ್ತರ ಮನೆ ಆವರಣದಲ್ಲಿ ಆಕರ್ಷಕ ಗೋದಲಿಗಳನ್ನು ನಿರ್ಮಿಸಲಾಗಿತ್ತು. ಬಾಲಯೇಸು ಮೂರ್ತಿಯನ್ನು ಇಟ್ಟು, ದೇವರ ಸ್ತುತಿ, ಜೋಗುಳದ ಮೂಲಕ ಭಕ್ತರು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು

ಕಡಬದಲ್ಲಿ ಸರಳವಾಗಿ ಕ್ರಿಸ್ ಮಸ್ ಸಂಭ್ರಮಾಚರಣೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಬ್ರಿಟನ್ ನಿಂದ ಮತ್ತೆ 8 ಮಂದಿ ದ.ಕ. ಜಿಲ್ಲೆಗೆ ಆಗಮನ ➤ಇನ್ನುಂದೆ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಪರೀಕ್ಷೆಗೆ ಕಡ್ಡಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25: ಇಂಗ್ಲೆಂಡ್‌ನಲ್ಲಿ ರೂಪಾಂತರಿತ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಎಚ್ಚರವಹಿಸಲಾಗಿದ್ದು, ಬ್ರಿಟನ್ ನಿಂದ ಮತ್ತೆ ಎಂಟು ಮಂದಿ ದ.ಕ. ಜಿಲ್ಲೆಗೆ ಆಗಮಿಸಿದ್ದಾರೆ. ಈ ಎಲ್ಲರನ್ನೂ ಇದೀಗ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ‌ ನೀಡಿದೆ. ಈ ಎಂಟು ಮಂದಿಯ ವರದಿ ಮುಂದಿನ ಶುಕ್ರವಾರ ಬರಲಿದೆ. ಬ್ರಿಟನ್‌ನಿಂದ ಜಿಲ್ಲೆಗೆ ಆಗಮಿಸಿದ ಎಲ್ಲರ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ‌ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ. ಈ

ಮಂಗಳೂರು: ಬ್ರಿಟನ್ ನಿಂದ ಮತ್ತೆ 8 ಮಂದಿ ದ.ಕ. ಜಿಲ್ಲೆಗೆ ಆಗಮನ ➤ಇನ್ನುಂದೆ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಪರೀಕ್ಷೆಗೆ ಕಡ್ಡಾಯ Read More »

ಕರಾವಳಿ

ಶಾಸಕ ಖಾದರ್ ಕಾರು ಹಿಂಬಾಲಿಸಿದಾತನ ಬಂಧಿಸಿ ಬಿಡುಗಡೆ.!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25: ಶಾಸಕ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರನ್ನು ಅಪರಿಚಿತರು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ. ಬೋಳೂರು ನಿವಾಸಿ ಅನೀಸ್ ಪೂಜಾರಿ (28) ವಿಚಾರಣೆಗೊಳಗಾಗಿ ಬಿಡುಗಡೆಯಾದ ಯುವಕ. ಈತ ಬೋಳೂರು ವಾರ್ಡ್‌ನ ಕಾಂಗ್ರೆಸ್‌ನ ಕಾರ್ಯಕರ್ತೆಯೊಬ್ಬರ ಮಗ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಆತನಿಂದ‌ಮುಚ್ಚಳಿಗೆ ಬರೆಸಿ ಬಿಡುಗಡೆ ಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.ಶಾಸಕ ಯು.ಟಿ. ಖಾದರ್ ಬುಧವಾರ ಸಂಜೆ ದೇರಳಕಟ್ಟೆಯಲ್ಲಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳಲು ಮಂಗಳೂರು ವಿಮಾನ

ಶಾಸಕ ಖಾದರ್ ಕಾರು ಹಿಂಬಾಲಿಸಿದಾತನ ಬಂಧಿಸಿ ಬಿಡುಗಡೆ.! Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಸರಗೋಡು: ಡಿವೈಎಫ್ಐ ಕಾರ್ಯಕರ್ತನ ಕೊಲೆ ಪ್ರಕರಣ ➤ಮೂವರ ವಿರುದ್ಧ ಕೇಸ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ.25: ಡಿವೈಎಫ್ಐ ಕಾರ್ಯಕರ್ತ ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಯೂತ್ ಲೀಗ್ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯೂತ್ ಲೀಗ್ ಕಾರ್ಯಕರ್ತರಾದ ಇರ್ಷಾದ್, ಹಸನ್, ಇಸ್ಹಾಕ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೃತ್ಯಕ್ಕೆ ರಾಜಕೀಯ ದ್ವೇಷ ಕಾರಣ ಎಂದು ಪೊಲೀಸರು ಶಂಕಿಸಿದ್ದು, ಕಣ್ಣೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ಚಂದ್ರ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ವೇಳೆ ಇರ್ಷಾದ್ ಎಂಬಾತನಿಗೂ ಗಾಯವಾಗಿದ್ದು, ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ

ಕಾಸರಗೋಡು: ಡಿವೈಎಫ್ಐ ಕಾರ್ಯಕರ್ತನ ಕೊಲೆ ಪ್ರಕರಣ ➤ಮೂವರ ವಿರುದ್ಧ ಕೇಸ್ Read More »

ಕರಾವಳಿ

ಮಂಗಳೂರು :ಮದುವೆ ಪ್ರಪೋಸ್, ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25: ಸಾಮಾಜಿಕ ಜಾಲತಾಣ ಫೇಸ್ ಬುಕ್ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುವುದಲ್ಲದೆ, ಮದುವೆ ಪ್ರಸ್ತಾಪ, ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಕುರುಬನಹಳ್ಳಿ ನಿವಾಸಿ ಪರಮೇಶ್ವರಪ್ಪ ರಂಗಪ್ಪ (23) ಬಂಧಿತ ಆರೋಪಿ. ಮ್ಯಾಟ್ರೊಮೊನಿಯಲ್ ನಲ್ಲಿ ಆರೋಪಿಯು ತಾನು ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ಎಂಬುದಾಗಿ ಬಿಂಬಿಸಿದ್ದ.ಈತ 20 ನಕಲಿ ಖಾತೆ ಸೃಷ್ಟಿಸಿ ಸರ್ಕಾರಿ ಇಲಾಖೆಗಳ ಉತ್ತಮ ದರ್ಜೆಯ

ಮಂಗಳೂರು :ಮದುವೆ ಪ್ರಪೋಸ್, ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top