karnataka

ಮಂಗಳೂರು: ಬಾವಿಗೆ ಬಿದ್ದ ಸ್ಕೂಟರ್ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 05. ಸ್ಕೂಟರ್ ಸವಾರ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಪಕ್ಕಲಡ್ಕ ಸಮೀಪದ ಬಜಾಲ್ ಎಂಬಲ್ಲಿ ನಡೆದಿದೆ. ಮೃತ ಸವಾರನನ್ನು ಎಮ್ಮೆಕೆರೆಯ ಅಜತ್ (22) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಬಜಾಲ್ ನ ಎತ್ತರದ ಪ್ರದೇಶದಲ್ಲಿ ತನ್ನ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿರುವ ಬಾವಿಯ ಆವರಣಕ್ಕೆ ಢಿಕ್ಕಿ ಹೊಡೆದು ಸವಾರ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಮಂಗಳೂರು: ಬಾವಿಗೆ ಬಿದ್ದ ಸ್ಕೂಟರ್ ➤ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ದಿಢೀರ್ ದಾಳಿ ➤ ಓರ್ವ ಸಿಬ್ಬಂದಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 05. ತಹಶೀಲ್ದಾರ್ ಕಛೇರಿಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದ್ವಿತೀಯ ದರ್ಜೆ ಸಹಾಯಕ ಸಿಬ್ಬಂದಿಯೋರ್ವರನ್ನು ರೆಡ್‌ ಹ್ಯಾಂಡ್ ‌ಆಗಿ ಬಂಧಿಸಿದ ಘಟನೆ ಮಂಗಳವಾರ ನಡೆದಿದೆ. ಬಂಧಿತ ಆರೋಪಿಯನ್ನು ರಫೀಕ್ ಅಬ್ದುಲ್(42) ಎಂದು ಗುರುತಿಸಲಾಗಿದೆ. ಕಚೇರಿಯ ಕೆಲಸ‌‌ಕ್ಕೆಂದು 40 ಸಾವಿರ ರೂ.‌ ಲಂಚದ ಬೇಡಿಕೆ ಇಟ್ಟಿದ್ದ ಎಂಬ ಆರೋಪದಡಿ ವ್ಯಕ್ತಿಯೋರ್ವರು ಎಸಿಬಿ ಕಚೇರಿಗೆ‌ ನೀಡಿದ್ದ ದೂರಿನಂತೆ ಸಿಬ್ಬಂದಿ ನಗದು ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ವಶಕ್ಕೆ

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ದಿಢೀರ್ ದಾಳಿ ➤ ಓರ್ವ ಸಿಬ್ಬಂದಿ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜ.7ರಂದು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 05. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹೆಚ್ಚಾದ ಹಿನ್ನೆಲೆ ರಾಜ್ಯದ ವಿವಿಧೆಡೆ ತುಂತುರು ಮಳೆಯಾಗುತ್ತಿದ್ದು , ಜ.9ರ ವರೆಗೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಜ. 7ಕ್ಕೆ 64.5 ಮಿ.ಮೀನಿಂದ 115.5 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೋ ಅಲರ್ಟ್’ಘೋಷಿಸಲಾಗಿದೆ. ಸೋಮವಾರದ ವರದಿಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ

ಜ.7ರಂದು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ Read More »

ಕರಾವಳಿ, ಕರ್ನಾಟಕ

ಉಡುಪಿ: ವೃತ್ತನಿರೀಕ್ಷಕರ ಹೆಸರಿನಲ್ಲಿ ನಕಲಿ ಫೇಸ್-ಬುಕ್ ಖಾತೆ ➤ ಹಣ ಕಳುಹಿಸುವಂತೆ ಸಂದೇಶ ರವಾನೆ

(ನ್ಯೂಸ್ ಕಡಬ) newskadaba.com ಉಡುಪಿ, ಜ. 05. ಅಪರಿಚಿತ ವ್ಯಕ್ತಿಯೋರ್ವ ಉಡುಪಿ ವೃತ್ತ ನಿರೀಕ್ಷಕರ ಹೆಸರಿನಲ್ಲಿ ನಕಲಿ ಫೇಸ್‌ ಬುಕ್ ಖಾತೆಯನ್ನು ರಚಿಸಿ ಅವರ ಸ್ನೇಹಿತರಲ್ಲಿ ಹಣ ಕಳುಹಿಸುವಂತೆ ಸಂದೇಶ ರವಾನೆ ಮಾಡಿದ ಘಟನೆ ನಡೆದಿದೆ.   ಈ ಕುರಿತು ಮಾಹಿತಿ ತಿಳಿದ ವೃತ್ತ ನಿರೀಕ್ಷಕ ಮಂಜುನಾಥ್ ಅವರು ಉಡುಪಿಯ ಸಿಇಎನ್, ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಡುಪಿ: ವೃತ್ತನಿರೀಕ್ಷಕರ ಹೆಸರಿನಲ್ಲಿ ನಕಲಿ ಫೇಸ್-ಬುಕ್ ಖಾತೆ ➤ ಹಣ ಕಳುಹಿಸುವಂತೆ ಸಂದೇಶ ರವಾನೆ Read More »

ಕರಾವಳಿ, ಕರ್ನಾಟಕ

ಕಾಸರಗೋಡು: ಆಟೋ ರಿಕ್ಷಾ ಮಗುಚಿ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 04. ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಮಗುವೊಂದು ಮೃತಪಟ್ಟ ಘಟನೆ ಇಂದು ಸಂಜೆ ಬಂದ್ಯೋಡು- ಪೆರ್ಮುದೆ ರಸ್ತೆಯ ಮೀಪಿರಿ ಎಂಬಲ್ಲಿ ನಡೆದಿದೆ.   ಮೃತಪಟ್ಟ ಮಗುವನ್ನು ಕಯ್ಯಾರ್ ಪಿಲಿಯಂದೂರಿನ ರಿಜ್ವಾನ್ ಎಂದು ಗುರುತಿಸಲಾಗಿದೆ. ತಾಯಿ ಹಾಗೂ ಮಗು ಬಂದ್ಯೋಡು ಕಡೆಗೆ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಆಟೋ ರಿಕ್ಷಾದ ಟಯರ್ ಕಳಚಿದ ಪರಿಣಾಮ ಆಟೋ ಮಗುಚಿ ಬಿದ್ದಿದ್ದು ಗಂಭೀರ ಗಾಯಗೊಂಡ ಮಗು ಮೃತಪಟ್ಟಿದೆ. ತಾಯಿ ಫಾಯಿಸಾ ಮತ್ತು

ಕಾಸರಗೋಡು: ಆಟೋ ರಿಕ್ಷಾ ಮಗುಚಿ ಮಗು ಮೃತ್ಯು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಕ್ರಮ 1.47 ಕೋಟಿ ನೇಪಾಳ ಕರೆನ್ಸಿ ಹೊಂದಿದ್ದ ಆರೋಪ ➤ ಭಾರತದ ನಾಗರಿಕ ನೇಪಾಳದಲ್ಲಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಠ್ಮಂಡು, ಜ. 04. ಅಕ್ರಮವಾಗಿ ನೇಪಾಳದ ಕರೆನ್ಸಿ ಆರೋಪದಡಿಯಲ್ಲಿ ಭಾರತೀಯ ನಾಗರಿಕ ಸೇರಿದಂತೆ ಇಬ್ಬರು ಆರೋಪಿಗಳನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಭಾರತದ ಗೋರಖ್ ಪುರದ ನಿವಾಸಿ ಅಮಿತ್ ಕುಮಾರ್ ಗುಪ್ತಾ (30) ಹಾಗೂ ಕಪಿಲವಸ್ತು ಜಿಲ್ಲೆಯ ಸಂಗಮ್ ತರು (22) ಎಂದು ಗುರುತಿಸಲಾಗಿದೆ. ಪ್ರತಿನಿತ್ಯದಂತೆ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಇಬ್ಬರು ಪ್ರಯಾಣಿಕರಿದ್ದ ಕಾರಿನಲ್ಲಿ ಸುಮಾರು 1.47 ಕೋಟಿ ನೇಪಾಳ ಕರೆನ್ಸಿ ಪತ್ತೆಯಾಗಿದ್ದು, ಇದನ್ನು ಮೂರು ಚೀಲದಲ್ಲಿ ತುಂಬಿ ಕಾರಿನಲ್ಲಿ

ಅಕ್ರಮ 1.47 ಕೋಟಿ ನೇಪಾಳ ಕರೆನ್ಸಿ ಹೊಂದಿದ್ದ ಆರೋಪ ➤ ಭಾರತದ ನಾಗರಿಕ ನೇಪಾಳದಲ್ಲಿ ಅರೆಸ್ಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಲಂಚ ಪಡೆಯುತ್ತಿದ್ದ ಭೂಮಾಪಕ ಅಧಿಕಾರಿ ಎಸಿಬಿ ಬಲೆಗೆ

(ನ್ಯೂಸ್ ಕಡಬ) newskadaba.com ಮೈಸೂರು, ಜ. 04.  ಲಂಚ ಪಡೆಯುತ್ತಿದ್ದಾಗ ಭೂಮಾಪಕ ಅಧಿಕಾರಿ ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ಮೈಸೂರು ತಾಲ್ಲೂಕು ಕಚೇರಿಯಲ್ಲಿ ನಡೆದಿದೆ.   ಜಮೀನು ಸರ್ವೇ ಮಾಡಿಕೊಡಲು 8 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಭೂಮಾಪನಾ ಇಲಾಖೆಯ ಸರ್ವೆಯರ್‌ ಹನುಮಂತರಾಯಪ್ಪ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಎಸಿಬಿ ಎಸ್‌.ಪಿ ಡಾ.ಸುಮ್ ಡಿ ಪನೇಕರ್ ಮಾರ್ಗದರ್ಶನದಂತೆ ಡಿಎಸ್‌.ಪಿ ಎಚ್. ಪರಶುರಾಮಪ್ಪ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದೆ.

ಲಂಚ ಪಡೆಯುತ್ತಿದ್ದ ಭೂಮಾಪಕ ಅಧಿಕಾರಿ ಎಸಿಬಿ ಬಲೆಗೆ Read More »

ಕರ್ನಾಟಕ

ಮಂಗಳೂರು: ಫಲ್ಗುಣಿ ನದಿಯಲ್ಲಿ ನವಜಾತ ಶಿಶುವಿನ‌ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 03, ನವಜಾತ ಶಿಶುವಿನ ಮೃತದೇಹವೊಂದು ಫಲ್ಗುಣಿ ನದಿಯಲ್ಲಿ ತೇಲುತ್ತಿದ್ದುದನ್ನು ಕಂಡ ಮೀನುಗಾರರು ಈ ಕುರಿತು ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೀನುಗಾರಿಕೆಯಿಂದ ಮರಳುತ್ತಿದ್ದ ಮೀನುಗಾರರಿಗೆ ನದಿಯು ಸಮುದ್ರವನ್ನು ಸೇರುವ ತೋಟ ಬೆಂಗ್ರೆಯಲ್ಲಿ ಮಗುವಿನ ಮೃತದೇಹ ಕಂಡುಬಂದಿದ್ದು, ಮೃತದೇಹವನ್ನು ಮೇಲಕ್ಕೆತ್ತಿದ ಮೀನುಗಾರರು ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಫಲ್ಗುಣಿ ನದಿಯಲ್ಲಿ ನವಜಾತ ಶಿಶುವಿನ‌ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಡಿವೈಎಫ್‌ಐ ಕಾರ್ಯಕರ್ತನ ಹತ್ಯೆ ಪ್ರಕರಣ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ.27: ಡಿವೈಎಫ್‌ಐ ಕಾರ್ಯಕರ್ತ ಕಲ್ಲೂರಾವಿ ಹಳೆ ಕಡಪ್ಪುರದ ಅಬ್ದುಲ್ ರಹಮಾನ್ (30) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ತನಿಖಾ ತಂಡ ಬಂಧಿಸಿದೆ. ಬಂಧಿತರನ್ನು ಇರ್ಷಾದ್, ಹಸನ್ ಹಾಗೂ ಆಶೀರ್ ಎಂದು ಗುರುತಿಸಲಾಗಿದೆ. ಮೂವರು ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘರ್ಷಣೆ ಸಂದರ್ಭದಲ್ಲಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಇರ್ಷಾದ್‌ನನ್ನು ಶುಕ್ರವಾರ ಬೆಳಗ್ಗೆ ಕಾಸರಗೋಡಿಗೆ ಕರೆತರಲಾಯಿತು. ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಧೀಶರ ಮುಂದೆ

ಡಿವೈಎಫ್‌ಐ ಕಾರ್ಯಕರ್ತನ ಹತ್ಯೆ ಪ್ರಕರಣ ➤ ಮೂವರ ಬಂಧನ Read More »

ಕರ್ನಾಟಕ

ವಿದ್ಯುತ್ ಶಾಕ್ ತಗುಲಿ 11 ವರ್ಷದ ಬಾಲಕ ಮೃತ್ಯು.!

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ.27: ವಿದ್ಯುತ್ ಶಾಕ್ ತಗುಲಿ 11 ವರ್ಷದ ಬಾಲಕ ಮೃತಪಟ್ಟ ಘಟನೆ ಶನಿವಾರ ಸಂಜೆ ನಗರ ಹೊರವಲಯದ ಅಣಂಗೂರುನಲ್ಲಿ ನಡೆದಿದೆ. ಅಣಂಗೂರು ಗ್ರೀನ್ ಪಾರ್ಕ್ ಪ್ಲಾಟ್‌ನ ತ್ವಾಹಿರ್ ಬಾನುರವರ ಪುತ್ರ ಮುಹಮ್ಮದ್ ಇಬುಹಾ ಮೃತಪಟ್ಟ ಬಾಲಕ. ಆಟವಾಡುತ್ತಿದ್ದ ಬಾಲಕ ಸಮೀಪದ ಅಂಗಡಿಯೊಂದರ ಗ್ರಿಲ್ಸ್ ಸ್ಪರ್ಶಿಸಿದಾಗ ಈ ಘಟನೆ ನಡೆದಿದೆ.ಗ್ರಿಲ್ಸ್‌ಗೆ ವಿದ್ಯುತ್ ಪ್ರವಹಿಸುತ್ತಿತ್ತು ಎನ್ನಲಾಗಿದೆ. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯುತ್ ಶಾಕ್ ತಗುಲಿ 11 ವರ್ಷದ ಬಾಲಕ ಮೃತ್ಯು.! Read More »

ಕರ್ನಾಟಕ
Scroll to Top