karnataka

ಅಸ್ಸಾಂ ರೈಫಲ್ಸ್ ಗೆ ಸುಳ್ಯದ ರಕ್ಷಿತಾ ಎಂ.ಬಿ. ಆಯ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 15. ತಾಲೂಕಿನಿಂದ ಕಳೆದ ಕೆಲವು ವರ್ಷಗಳಲ್ಲಿ ಹಲವು ಯುವತಿಯರು ದೇಶ ಸೇವೆಯ ಕಾಯಕಕ್ಕೆ ಸೇರಿಕೊಂಡಿದ್ದು, ಇದೀಗ ಐವರ್ನಾಡು ಗ್ರಾಮದ ರಕ್ಷಿತಾ ಎಂ.ಬಿ. ರವರು, ಮಿಲಿಟರಿ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ಪಾಸಾಗಿ ಅಸ್ಸಾಂ ರೈಫಲ್ಸ್‌ ಗೆ ಆಯ್ಕೆಯಾಗಿದ್ದಾರೆ. ಮೂಲತಃ ಧರ್ಮಸ್ಥಳ ಮೂಲದವರಾದ ರಕ್ಷಿತಾ ಎಂ.ಬಿ, ಭಾಸ್ಕರ ಗೌಡ ಮಡ್ತಿಲ ಹಾಗೂ ಮಮತಾ ದಂಪತಿಯ ಪುತ್ರಿ. ರಕ್ಷಿತಾ ಎಂ.ಬಿ 5ನೇ ತರಗತಿವರೆಗೆ ಐವರ್ನಾಡಿನ ಸರಕಾರಿ ಹಿರಿಯ ಪ್ರಾಥಮಿಕ […]

ಅಸ್ಸಾಂ ರೈಫಲ್ಸ್ ಗೆ ಸುಳ್ಯದ ರಕ್ಷಿತಾ ಎಂ.ಬಿ. ಆಯ್ಕೆ Read More »

ಕರಾವಳಿ, ಕರ್ನಾಟಕ

ಮದ್ಯ ಸೇವನೆಗೆ ಹಣ ನೀಡಿಲ್ಲವೆಂದು ಮಹಿಳೆಯ ಹತ್ಯೆ   ➤ ಆರೋಪಿ ಪೊಲೀಸ್ ಬಲೆಗೆ  

(ನ್ಯೂಸ್ ಕಡಬ) newskadaba.com ಮುಂಬೈ, ಡಿ. 15. ಮದ್ಯ ಸೇವನೆಗೆ ಹಣ ನೀಡಿಲ್ಲವೆಂದು ವ್ಯಕ್ತಿಯೋರ್ವ ನೆರೆಮನೆಯ ಮಹಿಳೆಯನ್ನು ಹತ್ಯೆಗೈದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ಸಂಭವಿಸಿದೆ. ಮೃತ ಮಹಿಳೆಯನ್ನು ವೈಶಾಲಿ ಮಸೂದ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ವೈಶಾಲಿ ಮಸೂದ್ ಅವರಿಂದ ಆಗಾಗ್ಗೆ ಹಣ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ಹಣ ನೀಡಲು ನಿರಾಕರಿಸಿದಾಗ ಆಕ್ರೋಶಗೊಂಡ ವ್ಯಕ್ತಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಮದ್ಯ ಸೇವನೆಗೆ ಹಣ ನೀಡಿಲ್ಲವೆಂದು ಮಹಿಳೆಯ ಹತ್ಯೆ   ➤ ಆರೋಪಿ ಪೊಲೀಸ್ ಬಲೆಗೆ   Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತುಮಕೂರು: ಬೋನಿಗೆ ಬಿದ್ದ ಚಿರತೆ ➤ ನಿಟ್ಟುಸಿರು ಬಿಟ್ಟ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ತುಮಕೂರು, ಡಿ.15. ಸುಮಾರು 1 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ವೀರಾಪುರ ಗ್ರಾಮದಲ್ಲಿ ಸಂಭವಿಸಿದೆ. ಕಳೆದ ಕೆಲ ದಿನಗಳಿಂದ ಚಿರತೆ ಹಾವಳಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಇದರಿಂದ ಹೊರಬರುವ ಉದ್ದೇಶದಿಂದ ಚಿರತೆ ಹಿಡಿಯಲು ಗ್ರಾಮದ ರಾಮೇಗೌಡ ಎಂಬವವರ ಜಮೀನಿನಲ್ಲಿ ಬೋನ್ ಇರಿಸಲಾಗಿತ್ತು. ಬೋನಿನೊಳಗೆ ಸತ್ತ ನಾಯಿಯನ್ನು ಇರಿಸಲಾಗಿದ್ದು, ನಾಯಿಯನ್ನು ನೋಡಿ ಬೋನಿನೊಳಗೆ ಬಂದ ಚಿರತೆ ಸೆರೆಯಾಗಿದೆ. ಇದರಿಂದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.    

ತುಮಕೂರು: ಬೋನಿಗೆ ಬಿದ್ದ ಚಿರತೆ ➤ ನಿಟ್ಟುಸಿರು ಬಿಟ್ಟ ಸಾರ್ವಜನಿಕರು Read More »

ಕರ್ನಾಟಕ

ವಾಯುಭಾರ ಕುಸಿತ – ಭಾರಿ ಮಳೆಯಾಗುವ ಮುನ್ಸೂಚನೆ !!! 

 (ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.15   ಕೆಲದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಅಬ್ಬರಿಸುವ ಸೂಚನೆ ಗೋಚರಿಸಿದ್ದು, ಆಗ್ನೇಯ ಬಂಗಾಲಕೊಲ್ಲಿ ಸಮುದ್ರದಲ್ಲಿ ಚಂಡಮಾರುತ ಲಕ್ಷಣಗಳು ಗೋಚರಿಸಿದೆ ಎಂದು ವರದಿ ತಿಳಿಸಿದೆ. ವಾಯುಭಾರ ಕುಸಿತದ ವಾತಾವರಣನ ನಿರ್ಮಾಣವಾಗಲಿರುವ ಹಿನ್ನಲೆಯಲ್ಲಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಮೋಡ ಕವಿದ ವಾತಾವರಣ ಇರಲಿದ್ದು, ಹಗುರವಾದ ಮಳೆಯಾಗಲಿದೆ ಹಾಗೂ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ವಾಯುಭಾರ ಕುಸಿತ – ಭಾರಿ ಮಳೆಯಾಗುವ ಮುನ್ಸೂಚನೆ !!!  Read More »

ಕರ್ನಾಟಕ

ಕೊತ್ತಂಬರಿ ಸೊಪ್ಪಿನ ಜೊತೆ ಗಾಂಜಾ ಗಿಡದ ಬೆಳೆದ ಭೂಪ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಹನೂರು , ಡಿ 15 : ವ್ಯಕ್ತಿಯೋರ್ವ ಕೊತ್ತಂಬರಿ ಸೊಪ್ಪು ಬೆಳೆಯ ಜೊತೆ ಅಕ್ರಮವಾಗಿ ಗಾಂಜಾ ಗಿಡವನ್ನು ಬೆಳೆಸಿದ್ದ ಘಟನೆ ಚಿಕ್ಕಮಾಲಾಪುರ ಗ್ರಾಮದಲ್ಲಿ ಸಂಭವಿಸಿದೆ. ಬಂಧಿತನನ್ನು ಹನುಮೇಗೌಡ(40) ಎಂದು ಗುರುತಿಸಲಾಗಿದೆ. ಈತ ಚಿಕ್ಕಮಾಲಾಪುರ ಗ್ರಾಮದಲ್ಲಿರುವ ಸರೋಜಮ್ಮ ಕೋಂ ಲೇಟ್ ಬಸವಣ್ಣ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಕೊತ್ತಂಬರಿ ಸೊಪ್ಪುನ ಬೆಳೆಯ ಜೊತೆ ಅಕ್ರಮವಾಗಿ ಗಾಂಜಾ ಗಿಡವನ್ನು ಬೆಳೆಯುತ್ತಿದ್ದ ಅಬಕಾರಿ ಪೊಲೀಸ್ ಇನ್ ಸ್ಪೆಕ್ಟರ್ ಸುನೀಲ್ ನೇತೃತ್ವದ ತಂಡ ಈ ದಾಳಿ ನಡೆಸಿದೆ. ಆರೋಪಿಯನ್ನು ನ್ಯಾಯಾಂಗ 

ಕೊತ್ತಂಬರಿ ಸೊಪ್ಪಿನ ಜೊತೆ ಗಾಂಜಾ ಗಿಡದ ಬೆಳೆದ ಭೂಪ ➤ ಆರೋಪಿಯ ಬಂಧನ Read More »

ಕರ್ನಾಟಕ

ನಕಲಿ ದಾಖಲೆ ಸೃಷ್ಟಿಸಿ 1.25 ಕೋಟಿ ವಂಚನೆ ➤ ಮಗಳ ವಿರುದ್ದ ದೂರು ದಾಖಲಿಸಿದ ತಾಯಿ  

 (ನ್ಯೂಸ್ ಕಡಬ) newskadaba.com  ಮಂಗಳೂರು, ಡಿ. 15. ನಕಲಿ ದಾಖಲೆ ಸೃಷ್ಟಿಸಿ ತಾಯಿಗೆ, ಮಗಳು ಮತ್ತು ಆಕೆಯ ಸ್ನೇಹಿತೆ ಸೇರಿ 1.25 ಕೋಟಿ ರೂಪಾಯಿ ವಂಚಿಸಿದ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ಈ ಕುರಿತು ತಾಯಿ ರೀಟಾ ಪೇರಿಸ್‌ ದೂರು ನೀಡಿದ್ದು ಅವರ ಪುತ್ರಿ ನಿಕಿತಾ ಪೇರಿಸ್‌ ಮತ್ತು ಗೋಡ್ವಿನ್‌ ಫೆರ್ನಾಂಡಿಸ್‌ ಆರೋಪಿಗಳಾಗಿದ್ದಾರೆ. ದೂರಿನ ಪ್ರಕಾರ ರೀಟಾ ಪೇರಿಸ್‌ ಮತ್ತು ಅವರ ಪುತ್ರ ಅಮಿತ್‌ ಪೇರಿಸ್‌ ವಿದೇಶದಲ್ಲಿ ನೆಲೆಸಿದ್ದು, ರೀಟಾ ಪೇರಿಸ್‌ ಅವರ ಪುತ್ರಿ ನಿಕಿತಾ ಪೇರಿಸ್‌ ಮುದರಂಗಡಿಯ

ನಕಲಿ ದಾಖಲೆ ಸೃಷ್ಟಿಸಿ 1.25 ಕೋಟಿ ವಂಚನೆ ➤ ಮಗಳ ವಿರುದ್ದ ದೂರು ದಾಖಲಿಸಿದ ತಾಯಿ   Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ‘ನಮ್ಮ ಕ್ಲಿನಿಕ್’ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಮಂಗಳೂರು , ಡಿ 15 : ರಾಜ್ಯ ಸರ್ಕಾರ ನೂತನವಾಗಿ ಆರಂಭಿಸಿರುವ ‘ನಮ್ಮ ಕ್ಲಿನಿಕ್’ ನ್ನು ದ.ಕ. ಜಿಲ್ಲೆಯ 12 ಕಡೆ ನಿರ್ಮಾಣ ಮಾಡಲಾಗಿದೆ. ಮಂಗಳೂರು ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲೂ ನಮ್ಮ ಕ್ಲಿನಿಕ್ ನ್ನು ತೆರೆಯಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಸೂಟರ್ಪೇಟೆಯ 6ನೇ ಆಡ್ಡ ರಸ್ತೆಯಲ್ಲಿರುವ ಸಮಾಜ ಭವನದಲ್ಲಿ ನಮ್ಮ ಕ್ಲಿನಿಕ್ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಪಂ ಸಿಇಒ ಡಾ. ಕುಮಾರ್, ಆರೋಗ್ಯದ ಬಲವರ್ಧನೆಗೆ, ಮನೆಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ‘ನಮ್ಮ ಕ್ಲಿನಿಕ್’ ಲೋಕಾರ್ಪಣೆ Read More »

ಕರ್ನಾಟಕ

ಹೆತ್ತ ತಾಯಿಯ ಮನೆಗೆ ಕನ್ನ ಹಾಕಿದ ಪಾಪಿ ಮಗ        ➤ ಆರೋಪಿಯ ಬಂಧನ                                

(ನ್ಯೂಸ್ ಕಡಬ) newskadaba.com   ಹೆತ್ತ ತಾಯಿಯ ಮನೆಗೆ ಕನ್ನ ಹಾಕಿದ ಮಗನನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಆರೋಪಿಯನ್ನು ಗಿರೀಶ್ ಅಲಿಯಾಸ್ ಸುಣ್ಣ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ನಡೆಸಿದ ಕೃತ್ಯ ನಿಜವೆಂದು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.          

ಹೆತ್ತ ತಾಯಿಯ ಮನೆಗೆ ಕನ್ನ ಹಾಕಿದ ಪಾಪಿ ಮಗ        ➤ ಆರೋಪಿಯ ಬಂಧನ                                 Read More »

ಕರ್ನಾಟಕ, ಕ್ರೈಮ್ ನ್ಯೂಸ್

5, 8ನೇ ತರಗತಿಗೆ ಪೂರಕ ಪರೀಕ್ಷೆ ; ಆದೇಶ ಹಿಂಪಡೆದ ಶಿಕ್ಷಣ ಇಲಾಖೆ

(ನ್ಯೂಸ್ ಕಡಬ) newskadaba.com  ಬೆಂಗಳೂರು ,ಡಿ.15 : ಮೌಲ್ಯಾಂಕನ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಹಿಂಪಡೆದುಕೊಂಡಿದೆ. ಈ ಹಿಂದೆ ಮಾಡಿದ ಆದೇಶ ಪ್ರಕಾರ ಮೌಲ್ಯಾಂಕನ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಜೂನ್ ಹಾಗೂ ಜುಲೈ ತಿಂಗಳ ಅಂತ್ಯದಲ್ಲಿ ಪರಿಹಾರ ಬೋಧನೆ ಮಾಡಿ ಎರಡು ಪೂರಕ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿಯೇ ನಡೆಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗೊಳಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ, ಸದ್ಯ ಪರೀಕ್ಷೆ

5, 8ನೇ ತರಗತಿಗೆ ಪೂರಕ ಪರೀಕ್ಷೆ ; ಆದೇಶ ಹಿಂಪಡೆದ ಶಿಕ್ಷಣ ಇಲಾಖೆ Read More »

ಕರ್ನಾಟಕ

ರೈಲ್ವೇ ಬ್ರಿಡ್ಜ್  ಬಳಿ ಮಹಿಳೆಯ ಸರ ಕಳ್ಳತನ     ➤ ಪರಾರಿಯಾಗಿದ್ದ ಆರೋಪಿಯ ಬಂಧನ     

(ನ್ಯೂಸ್ ಕಡಬ) newskadaba.com   ವಿಟ್ಲ, ಡಿ.15  ರೈಲ್ವೇ ಬ್ರಿಡ್ಜ್  ಬಳಿ ಮಹಿಳೆಯ ಸರ ಕಿತ್ತು ಪರಾರಿಯಾದ ಘಟನೆಗೆ ಸಂಬಂಧಿಸಿದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿರಾಗಿದ್ದಾರೆಂದು ತಿಳಿದುಬಂದಿದೆ. ಬಂಧಿತ ಆರೋಪಿಯನ್ನು ರಮೇಶ್ ಎಂದು ಗುರುತಿಸಲಾಗಿದೆ. ಮಹಿಳೆಯೊಬ್ಬರು ಪುತ್ತೂರಿನಿಂದ ಬಂದು ಮಿತ್ತೂರಿನಲ್ಲಿ ಬಸ್ಸಿನಿಂದ ಇಳಿದು ಕೋಲ್ಪೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿ ಸರ ಎಳೆದುಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      

ರೈಲ್ವೇ ಬ್ರಿಡ್ಜ್  ಬಳಿ ಮಹಿಳೆಯ ಸರ ಕಳ್ಳತನ     ➤ ಪರಾರಿಯಾಗಿದ್ದ ಆರೋಪಿಯ ಬಂಧನ      Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top