karnataka

ಸರ್ಕಾರಿ ಆಸ್ಪತ್ರೆಯ ಡ್ಯೂಟಿ ರೂಂನಲ್ಲೇ ವೈದ್ಯ ಆತ್ಮಹತ್ಯೆ    ➤ ಸ್ಥಳದಲ್ಲಿ ಡೆತ್ ನೋಟು ಪತ್ತೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.24. ಸರ್ಕಾರಿ ಆಸ್ಪತ್ರೆಯಲ್ಲೇ ವೈದ್ಯರೊಬ್ಬರು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರ ತಿಲಕ್​ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಾ.ಎಸ್.ರೇಣುಕಾನಂದ (43) ಆತ್ಮಹತ್ಯೆ ಮಾಡಿಕೊಂಡ ವೈದ್ಯರು. ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿದ್ದ ರೇಣುಕಾನಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತು ಅವರು ಆಸ್ಪತ್ರೆಯ ಡ್ಯೂಟಿ ರೂಮ್​ನಲ್ಲೇ ತಾಯಿಯ ಸೀರೆಯಿಂದ ಫ್ಯಾನ್​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

ಸರ್ಕಾರಿ ಆಸ್ಪತ್ರೆಯ ಡ್ಯೂಟಿ ರೂಂನಲ್ಲೇ ವೈದ್ಯ ಆತ್ಮಹತ್ಯೆ    ➤ ಸ್ಥಳದಲ್ಲಿ ಡೆತ್ ನೋಟು ಪತ್ತೆ Read More »

ಕರ್ನಾಟಕ

ಗುಮ್ಮಟ ನಗರಿಯಲ್ಲಿ ಅದ್ಧೂರಿ ರೋಡ್ ಶೋ ನಡೆಸಿದ ರಾಹುಲ್ ಗಾಂಧಿ..!

(ನ್ಯೂಸ್ ಕಡಬ)Newskadaba.com ವಿಜಯಪುರ,ಏ.24 ವಿಧಾನಸಭೆ ಚುನಾವಣೆ ಹಿನ್ನೆಲೆ ನಗರದಲ್ಲಿ ಸಂಜೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅದ್ಧೂರಿ ರೋಡ್ ಶೋ ನಡೆಸಿದರು. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಹಮ್ಮಿಕೊಂಡ ಬಸವಜಯಂತಿ ಉತ್ಸವದಲ್ಲಿ ಭಾಗಿಯಾದ ಬಳಿಕ ನಗರಕ್ಕೆ ಆಗಮಿಸಿದ ಅವರು, ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿಗೆ ಮುಂದಾದರು. ಶಿವಾಜಿ ವೃತ್ತದಿಂದ ಆರಂಭಗೊಂಡ ಬೃಹತ್ ರೋಡ್ ಶೋನಲ್ಲಿ ಸಹಸ್ರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೈಘೋಷ ಕೂಗುತ್ತ ಪಾಲ್ಗೊಂಡಿದ್ದರು.  

ಗುಮ್ಮಟ ನಗರಿಯಲ್ಲಿ ಅದ್ಧೂರಿ ರೋಡ್ ಶೋ ನಡೆಸಿದ ರಾಹುಲ್ ಗಾಂಧಿ..! Read More »

ಕರ್ನಾಟಕ

ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.24 ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಯಲಹಂಕದಲ್ಲಿರುವ ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ನಿವಾಸದಲ್ಲಿ ಪರಿಶೀಲನೆ ನಡೆಸಲಾಗಿದೆ.ಆದಾಯ ಮೀರಿ ಅಕ್ರಮ ಆಸ್ತಿಗಳಿಕೆ ಆರೋಪದ ದೂರು ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.      

ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು.! Read More »

ಕರ್ನಾಟಕ

ಬಸ್ ನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 1.95 ಲಕ್ಷ ರೂ. ನಗದು ವಶಕ್ಕೆ

(ನ್ಯೂಸ್ ಕಡಬ)newskadaba.com ಕೊಪ್ಪಳ, ಏ.24. ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಹೆದ್ದಾರಿ ವಿಧಾನಸಭೆ ಚುನಾವಣೆಯ ಸ್ಥಿರ ಚಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಸರಕಾರಿ ಬಸ್ ನಲ್ಲಿ ದಾಖಲೆ ರಹಿತವಾಗಿ ಸಾಗಿಸುತ್ತಿದ್ದ 1.95 ಲಕ್ಷ ರೂ. ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಕ್ಯಾದಿಗುಪ್ಪ ಹೆದ್ದಾರಿ ಕ್ರಾಸ್ ನಲ್ಲಿ ಚೆಕ್ ಪೋಸ್ಟ್ ಸಿಬ್ಬಂದಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ಘಟಕದ ಬಸ್ ಅನ್ನು (ಕೆಎ-37 ಎಫ್-0324) ತಡೆದು ತಪಾಸಣೆ ನಡೆಸಿದ್ದರು. ಬಸ್

ಬಸ್ ನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 1.95 ಲಕ್ಷ ರೂ. ನಗದು ವಶಕ್ಕೆ Read More »

ಕರ್ನಾಟಕ

ಕುಂದಾಪುರ: ಆನೆಗುಡ್ಡೆಯಲ್ಲಿ ಸರಣಿ ಅಪಘಾತ   ➤ ಓರ್ವ ಮೃತ್ಯು

(ನ್ಯೂಸ್ ಕಡಬ)newskadaba.com ಕುಂದಾಪುರ, ಏ.24. ರಾಷ್ಟ್ರೀಯ ಹೆದ್ದಾರಿ 66ರ ಕುಂಭಸಿಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಎದುರುಗಡೆ ಜೀಪು, ಸ್ಕೂಟಿ ಬೈಕ್ ಹಾಗೂ ಸೈಕಲ್ ನಡುವೆ ಸರಣಿ ಅಪಘಾತದಿಂದ ಸ್ಕೋಟಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ತೆಕ್ಕಟೆ ನಾಗರಾಜ್ ದೇವಾಡಿಗ ಎಂದು ಗುರುತಿಸಲಾಗಿದೆ. ಉಡುಪಿಯಿಂದ ಕುಂದಾಪುರ ಕಡೆಗೆ ಅತೀ ವೇಗ ಅಜಾಗ್ರತೆಯಿಂದ ಬಂದ ಜೀಪು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಸ್ಕೋಟಿಗೆ ಢಿಕ್ಕಿ ಹೊಡೆದು ಮುಂದೆ ಸಾಗಿ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು

ಕುಂದಾಪುರ: ಆನೆಗುಡ್ಡೆಯಲ್ಲಿ ಸರಣಿ ಅಪಘಾತ   ➤ ಓರ್ವ ಮೃತ್ಯು Read More »

ಕರಾವಳಿ, ಕರ್ನಾಟಕ

ಸಮಸ್ಯೆ ಹೇಳಿಕೊಂಡಿದಕ್ಕೆ ಯುವಕನಿಗೆ ಕಪಾಳಮೋಕ್ಷ ಮಾಡಿದ ಕಾಂಗ್ರೆಸ್ ನಾಯಕ.!   ➤ಎಂ.ಬಿ.ಪಾಟೀಲ್..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.24 ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಅವರು ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋವನ್ನು ಬಿಜೆಪಿ ಶೇರ್ ಮಾಡಿದೆ. ಕಾಂಗ್ರೆಸ್ ಗೂಂಡಾಗಿರಿಯನ್ನು ಟೀಕಿಸಿರುವ ಬಿಜೆಪಿ, ತನ್ನ ಕುಂದುಕೊರತೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಯುವಕನ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದೆ. ಗೂಂಡಾಗಿರಿ ಕಾಂಗ್ರೆಸ್ನ ಡಿಎನ್‌ಎಯಲ್ಲಿದೆ. ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ತಮ್ಮ ಕುಂದುಕೊರತೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಯುವಕನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ.    

ಸಮಸ್ಯೆ ಹೇಳಿಕೊಂಡಿದಕ್ಕೆ ಯುವಕನಿಗೆ ಕಪಾಳಮೋಕ್ಷ ಮಾಡಿದ ಕಾಂಗ್ರೆಸ್ ನಾಯಕ.!   ➤ಎಂ.ಬಿ.ಪಾಟೀಲ್..! Read More »

ಕರ್ನಾಟಕ

ಏ.24(ಇಂದು)  ನಾಮಪತ್ರ  ಹಿಂಪಡೆಯಲು ಕೊನೆ ದಿನ.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.24 ರಾಜ್ಯ ವಿಧಾನಸಭೆ ಚುನಾವಣೆ ನಾಮಪತ್ರ ವಾಪಸ್ ಪಡೆಯಲು ಇಂದೇ ಕೊನೆ ದಿನವಾಗಿದೆ. 3632 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. 502 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕರಿಸಲಾಗಿದೆ. 3130 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ. ಜೆಡಿಎಸ್ 211 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕೆಲವೆಡೆ ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಯಶಸ್ವಿಯಾಗಿದ್ದು, ನಾಮಪತ್ರ ವಾಪಸ್ ಪಡೆಯಲು ಒಪ್ಪಿಕೊಂಡಿದ್ದಾರೆ. ಇಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.      

ಏ.24(ಇಂದು)  ನಾಮಪತ್ರ  ಹಿಂಪಡೆಯಲು ಕೊನೆ ದಿನ.! Read More »

ಕರ್ನಾಟಕ

ಬೆಳ್ತಂಗಡಿ: ಮಾಜಿ ಸಚಿವ ಕೆ.ಗಂಗಾಧರವರ ಮನೆಗೆ ಐಟಿ ದಾಳಿ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.24. ಮಾಜಿ ಸಚಿವರೂ, ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಗಂಗಾಧರ ಗೌಡ ಮತ್ತು ಮಗ ರಂಜನ್ ಗೌಡ ಅವರ ಮನೆಗಳಿಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟು ಮೂರು ಸ್ಥಳಗಳಿಗೆ ಇಂದು ಬೆಳಗ್ಗೆ ದಾಳಿ ಸಂಭವಿಸಿದೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಪಕ್ಕದಲ್ಲಿರುವ ಮನೆಯ ಮೇಲೆ, ಲಾಯಿದಲ್ಲಿರುವ ಪ್ರಸನ್ನ ಎಜುಕೇಶನ್ ಇನ್ಸಿಟ್ಯೂಷನ್ ಮತ್ತು ಇಂದಬೆಟ್ಟು ನಲ್ಲಿರುವ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ. ಇನೋವಾ ಕಾರಿನಲ್ಲಿ ಪೊಲೀಸರ ಜೊತೆ ಬಂದ ಐಟಿ

ಬೆಳ್ತಂಗಡಿ: ಮಾಜಿ ಸಚಿವ ಕೆ.ಗಂಗಾಧರವರ ಮನೆಗೆ ಐಟಿ ದಾಳಿ Read More »

ಕರಾವಳಿ

ಸುಫಾರಿ ಪಡೆದು ಕೊಲೆಗೆ ಹೊಂಚು ಹಾಕಿದ್ದ ಯುವಕ ಅಂದರ್..!

(ನ್ಯೂಸ್ ಕಡಬ)Newskadaba.com ಯಾದಗಿರಿ,ಏ.23  ಆ ಯುವಕ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ. ಆದ್ರೆ, ಹಣದ ಆಸೆಗೆ ಖತರ್ನಾಕ್ ಕೆಲಸ ಮಾಡಲು ಮುಂದಾಗಿದ್ದ. ಪೊಲೀಸರು ಚುನಾವಣೆ ಎಂದು ಲಾಡ್ಜ್​ಗಳನ್ನ ಪರಿಶೀಲನೆ ಮಾಡಲು ಹೋಗಿದ್ರು. ಇದೆ ವೇಳೆ ಆ ಯುವಕ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಯುವಕನ ಬಳಿಯಿರುವ ವಸ್ತುಗಳು ಹಾಗೂ ಯವಕ ಹೇಳಿದ ಮಾತಿಗೆ ಖುದ್ದು ಪೊಲೀಸರೆ ಶಾಕ್ ಆಗಿದ್ದರು.      

ಸುಫಾರಿ ಪಡೆದು ಕೊಲೆಗೆ ಹೊಂಚು ಹಾಕಿದ್ದ ಯುವಕ ಅಂದರ್..! Read More »

ಕರ್ನಾಟಕ

ಫೋನ್ ಪೇನಲ್ಲಿ ಲಂಚ ಪಡೆದ ಪಿಎಸ್ಐ ➤ ಪೊಲೀಸ್ ಕಾನಸ್ಟೇಬಲ್ ಲೋಕಾಯುಕ್ತ ಬಲೆಗೆ

(ನ್ಯೂಸ್ ಕಡಬ)newskadaba.com ದಾವಣಗೆರೆ, ಏ.23. ಕಾಣೆಯಾದ ಮಹಿಳೆಯನ್ನು ಪತ್ತೆ ಹಚ್ಚಿ ಮನೆಗೆ ಕಳುಹಿಸಲು 50 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಪಿಎಸ್ಐ ಹಾಗೂ ಪೊಲೀಸ್ ಕಾನಸ್ಟೇಬಲ್ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶಿವನಗೌಡ ಹಾಗೂ ಪೋಲಿಸ್ ಕಾನಸ್ಟೇಬಲ್ ಲಿಂಗರಾಜ್ ನಾಯ್ಕ ಲೋಕಾಯುಕ್ತ ಬಲೆಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಫೋನ್ ಪೇನಲ್ಲಿ ಲಂಚ ಪಡೆದ ಪಿಎಸ್ಐ ➤ ಪೊಲೀಸ್ ಕಾನಸ್ಟೇಬಲ್ ಲೋಕಾಯುಕ್ತ ಬಲೆಗೆ Read More »

ಕರ್ನಾಟಕ
Scroll to Top