karnataka

ಚುನಾವಣೆಯಲ್ಲಿ ಗೆಲ್ಲಲು ತನ್ನನ್ನೇ ತಾನೇ ಕಿಡ್ನ್ಯಾಪ್ ಮಾಡಿಕೊಳ್ಳಲು ಮುಂದಾದ ಜೆಡಿಎಸ್ ಅಭ್ಯರ್ಥಿ..!​

(ನ್ಯೂಸ್ ಕಡಬ)Newskadaba.com ಬೆಂಗಳೂರು ,ಮೇ.03 ಚುನಾವಣೆಯಲ್ಲಿ ಗೆಲ್ಲಲು ಜೆಡಿಎಸ್ ಅಭ್ಯರ್ಥಿ ತನ್ನನ್ನೇ ತಾನೇ ಅಪಹರಣ ಮಾಡಿಸಿಕೊಳ್ಳಲು ಮುಂದಾಗಿದ್ದ ಪ್ಲ್ಯಾನ್ ಬಹಿರಂಗಗೊಂಡಿದೆ. ಯಲಹಂಕ ಜೆಡಿಎಸ್​ ಅಭ್ಯರ್ಥಿ ಮುನೇಗೌಡ ಕಿಡ್ನ್ಯಾಪ್ ಸ್ಕೆಚ್​ ಬಹಿರಂಗಗೊಂಡಿದೆ. ಚುನಾವಣೆಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಮುನೇಗೌಡ ತನ್ನನ್ನು ತಾನೇ ಕಿಡ್ನ್ಯಾಪ್ ಮಾಡಿಕೊಳ್ಳಲು ಮುಂದಾಗಿದ್ದರು. ತಾನು ಕಿಡ್ನ್ಯಾಪ್ ಆಗಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಮೇಲೆ ಹಾಕಿ ಯಲಹಂಕ ಕ್ಷೇತ್ರದಲ್ಲಿ ಗಲಾಟೆ ಮಾಡಿಸಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.ಅಪಹರಣ, ಗಲಾಟೆ ಎಬ್ಬಿಸೋ ಬಗ್ಗೆ ನಡೆದ ಮಾತುಕತೆ ವಿಡಿಯೋ ಲೀಕ್ […]

ಚುನಾವಣೆಯಲ್ಲಿ ಗೆಲ್ಲಲು ತನ್ನನ್ನೇ ತಾನೇ ಕಿಡ್ನ್ಯಾಪ್ ಮಾಡಿಕೊಳ್ಳಲು ಮುಂದಾದ ಜೆಡಿಎಸ್ ಅಭ್ಯರ್ಥಿ..!​ Read More »

ಕರ್ನಾಟಕ

* ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅನಿವಾಸಿ ಭಾರತೀಯರಿಗೆ ಮತದಾನಕ್ಕೆ ಅವಕಾಶವಿಲ್ಲ..!​* ➤ ಹೈಕೋರ್ಟ್ ಆದೇಶ 

(ನ್ಯೂಸ್ ಕಡಬ)Newskadaba.com ಬೆಂಗಳೂರು ,ಮೇ..03 ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅನಿವಾಸಿ ಭಾರತೀಯರಿಗೆ ಅವರು ನೆಲೆಸಿದ ದೇಶಗಳಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕಳೆದ 15 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಶುಶ್ರೂಷಕರಾಗಿ ಕೆಲಸ ಮಾಡುತ್ತಿರುವ ಮತ್ತು ಸಾಗರೋತ್ತರ ಕನ್ನಡಿಗರ ಸಂಘದ ಜಂಟಿ ಕಾರ್ಯದರ್ಶಿ ಎಂ. ರವಿ ಅವರು ಸಲ್ಲಿಸಿದ್ದ ಪಿಎಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ

* ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅನಿವಾಸಿ ಭಾರತೀಯರಿಗೆ ಮತದಾನಕ್ಕೆ ಅವಕಾಶವಿಲ್ಲ..!​* ➤ ಹೈಕೋರ್ಟ್ ಆದೇಶ  Read More »

ಕರ್ನಾಟಕ

 ಮೇ 6ರಂದು ಚಿತ್ತಾಪುರದಲ್ಲಿ ಅಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆ ರದ್ದು.!​

(ನ್ಯೂಸ್ ಕಡಬ)Newskadaba.com ಕಲಬುರಗಿ,ಮೇ..03 ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಮಣಿಕಂಠ ರಾಠೋಡ ‌ಪರ ಮೇ 6ರಂದು ನಡೆಸಲು ಉದ್ದೇಶಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಲಾಗಿದೆ.ಈ ಕುರಿತು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರೌಡಿಶೀಟರ್ ಆಗಿರುವ, ಅಂಗನವಾಡಿ ಮಕ್ಕಳ ಹಾಲಿನ ಪೌಡರ್ ಕಳ್ಳತನ ಮಾಡಿದ ಅಪರಾಧ ಸಾಬೀತಾಗಿದ್ದರಿಂದ ಮಣಿಕಂಠ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಪ್ರಧಾನಿ ಅವರನ್ನು ಕರೆಸಿದರೆ ಪಕ್ಷಕ್ಕೆ ಮುಜುಗರವಾಗಬಹುದು ಎಂಬ ಆತಂಕದಿಂದ ಸಭೆಯನ್ನು ರದ್ದುಗೊಳಿಸಿದ್ದಾರೆ

 ಮೇ 6ರಂದು ಚಿತ್ತಾಪುರದಲ್ಲಿ ಅಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆ ರದ್ದು.!​ Read More »

ಕರ್ನಾಟಕ

ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ ಮಾಡುತ್ತಿದ್ದ ವೇಳೆ ಅರ್ಧಕ್ಕೆ ಎದ್ದು ಹೋದ BSY..!​

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ..03 ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ನಾಯಕರುಗಳು ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದು, ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಣಕ್ಕಿಳಿದಿರುವ ಕನಕಪುರ ಕ್ಷೇತ್ರದತ್ತ ಹೆಚ್ಚಿನ ಚಿತ್ತ ನೆಟ್ಟಿದ್ದಾರೆ. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.ವರುಣಾದ ಹೊಸಕೋಟೆಯಲ್ಲಿ ಬಹಿರಂಗ ಸಮಾವೇಶ ನಡೆದಿದ್ದು, ಅಮಿತ್ ಶಾ ಮಾತನಾಡುವಾಗಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವೇದಿಕೆಯಿಂದ ಇಳಿದು ಹೊರ ನಡೆದಿರುವ ಘಟನೆ ನಡೆದಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ ಮಾಡುತ್ತಿದ್ದ ವೇಳೆ ಅರ್ಧಕ್ಕೆ ಎದ್ದು ಹೋದ BSY..!​ Read More »

ಕರ್ನಾಟಕ

ಶಿಥಿಲಗೊಂಡ ಮನೆಯಲ್ಲಿ ಮತದಾನ ಮಾಡಿದ 104 ವರ್ಷದ ವೃದ್ಧೆ..!​ ➤ ಚರ್ಚೆಗೆ ಗ್ರಾಸವಾಯಿತು ಜಿಲ್ಲಾಧಿಕಾಯ ಫೇಸ್‌ಬುಕ್ ಪೋಸ್ಟ್.!​

(ನ್ಯೂಸ್ ಕಡಬ)Newskadaba.com ಮಡಿಕೇರಿ,ಮೇ..03  ಕೊಡಗು ಜಿಲ್ಲೆಯ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೇನು ಕುಸಿಯಬಹುದಾದ ಮನೆಯಲ್ಲಿ 104 ವರ್ಷದ ಮಹಿಳೆಯೊಬ್ಬರು ಮಂಗಳವಾರ ಮತದಾನ ಮಾಡಿದ್ದ ಚಿತ್ರವನ್ನು ಕೊಡಗು ಜಿಲ್ಲಾಧಿಕಾರಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ. ಕುಸಿಯುವ ಸ್ಥಿತಿಯಲ್ಲಿರುವ ತಮ್ಮ ಮನೆಯ ಹೊರಗೆ 104 ವರ್ಷದ ಕಾಳಮ್ಮ ಅವರು ಮತದಾನ ಮಾಡಿದ್ದರು. ಈ ಕುರಿತು ಜಿಲ್ಲಾಧಿಕಾರಿ ಅವರ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್ ಹಾಕಿದ ಕೇವಲ 5 ಗಂಟೆಯ ಅವಧಿಯಲ್ಲಿ 92ಕ್ಕೂ ಅಧಿಕ ಮಂದಿ ಕಾಮೆಂಟ್‌ ಮಾಡಿ

ಶಿಥಿಲಗೊಂಡ ಮನೆಯಲ್ಲಿ ಮತದಾನ ಮಾಡಿದ 104 ವರ್ಷದ ವೃದ್ಧೆ..!​ ➤ ಚರ್ಚೆಗೆ ಗ್ರಾಸವಾಯಿತು ಜಿಲ್ಲಾಧಿಕಾಯ ಫೇಸ್‌ಬುಕ್ ಪೋಸ್ಟ್.!​ Read More »

ಕರಾವಳಿ, ಕರ್ನಾಟಕ

ಕೆ.ಸುಬ್ರಹ್ಮಣ್ಯ ರೈ ಮನೆ ಮೇಲೆ ಐಟಿ ದಾಳಿ..!​ ➤ 1 ಕೋಟಿ. ರೂ.ವಶಕ್ಕೆ!​*

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ..03  ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಐಟಿ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿ, ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದಾರೆ. ಐಟಿ ಅಧಿಕಾರಿಗಳು ಕೆ.ಸುಬ್ರಹ್ಮಣ್ಯ ರೈ ಎಂಬುವವರ ಮನೆಗೆ ದಾಳಿ ನಡೆಸಿ, ಅವರ ಮನೆಯಂಗಳದಲ್ಲಿದ್ದ ಗಿಡದಲ್ಲಿ ನೇತು ಹಾಕಿದ್ದ ಒಂದು ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಐಟಿ ದಾಳಿಗೆ ಒಳಗಾಗಿರುವ

ಕೆ.ಸುಬ್ರಹ್ಮಣ್ಯ ರೈ ಮನೆ ಮೇಲೆ ಐಟಿ ದಾಳಿ..!​ ➤ 1 ಕೋಟಿ. ರೂ.ವಶಕ್ಕೆ!​* Read More »

ಕರ್ನಾಟಕ

ಬಂಡಾಯ ಅಭ್ಯರ್ಥಿಗಳಿಗೆ ಬಿಗ್ ಶಾಕ್ ➤ ಕಾಂಗ್ರೆಸ್ ಪಕ್ಷದಿಂದ 24 ಅಭ್ಯರ್ಥಿಗಳು ಉಚ್ಚಾಟನೆ ..!​

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ..03 ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದಂತ ಅನೇಕ ಅಭ್ಯರ್ಥಿಗಳು ಬಂಡಾಯವೆದ್ದಿದ್ದರು. ಪಕ್ಷದ ವಿರುದ್ಧ ತೊಡೆ ತಟ್ಟಿ, ಬಂಡಾಯ ಅಭ್ಯರ್ಥಿಗಳಾಗಿ ಕೆಲವೆಡೆ ಸ್ಪರ್ಧಿಸಿದ್ದರು.ಅಂತವರಿಗೆ ಇಂದು ಕಾಂಗ್ರೆಸ್ ಪಕ್ಷದಿಂದ ಗೇಟ್ ಪಾಸ್ ನೀಡಿ, ಬಿಗ್ ಶಾಕ್ ನೀಡಲಾಗಿದೆ. ಈ ಕುರಿತಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಶಿಸ್ತುಪಾಲನಾ ಸಮಿತಿಯ ಅಧ್ಯಕ್ಷ ಕೆ.ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿರುವ 24 ಮಂದಿಯನ್ನು ಪಕ್ಷದ ಪ್ರಾಧಮಿಕ

ಬಂಡಾಯ ಅಭ್ಯರ್ಥಿಗಳಿಗೆ ಬಿಗ್ ಶಾಕ್ ➤ ಕಾಂಗ್ರೆಸ್ ಪಕ್ಷದಿಂದ 24 ಅಭ್ಯರ್ಥಿಗಳು ಉಚ್ಚಾಟನೆ ..!​ Read More »

ಕರ್ನಾಟಕ

ಬಿಜೆಪಿ ಸಮಾವೇಶದಲ್ಲಿ ಮಗನ ಮಾತುಗಳನ್ನು ಕೇಳಿ ಸಿಳ್ಳೆ ಹಾಕಿ ಸಂಭ್ರಮಿಸಿದ ತಂದೆ..!➤ ಸಚಿವ ಆನಂದ್​ ಸಿಂಗ್..!

(ನ್ಯೂಸ್ ಕಡಬ)Newskadaba.com ವಿಜಯನಗರ,ಮೇ..03 ವಿಜಯನಗರದ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಗನ ಮಾತುಗಳನ್ನು ಕೇಳಿ ಸಚಿವ ಆನಂದ್​ ಸಿಂಗ್​ ಸಿಳ್ಳೆ ಹಾಕಿ ಸಂಭ್ರಮಿಸಿದರು.ಹೊಸಪೇಟೆಯ ಪುನೀತ್ ರಾಜ್ ಕುಮಾರ್ ಮೈದಾನದಲ್ಲಿ ನಿನ್ನೆ ಬಿಜೆಪಿ ಸಮಾವೇಶ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆನಂದ್​ ಸಿಂಗ್​ ಪುತ್ರ ಸಿದ್ದಾರ್ಥ್​ ಸಿಂಗ್​ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಸಾಮಾನ್ಯ ಕಾರ್ಯಕರ್ತನಂತೆ ವೇದಿಕೆ ಮುಂಭಾಗದ ಕುರ್ಚಿಯಲ್ಲಿ ಕುಳಿತಿದ್ದ ಆನಂದ್​ ಸಿಂಗ್​ ಮಗನ ಮಾತುಗಳನ್ನು ಸಿಳ್ಳೆ ಹಾಕಿ ಸಂಭ್ರಮಿಸಿದೆ.          

ಬಿಜೆಪಿ ಸಮಾವೇಶದಲ್ಲಿ ಮಗನ ಮಾತುಗಳನ್ನು ಕೇಳಿ ಸಿಳ್ಳೆ ಹಾಕಿ ಸಂಭ್ರಮಿಸಿದ ತಂದೆ..!➤ ಸಚಿವ ಆನಂದ್​ ಸಿಂಗ್..! Read More »

ಕರ್ನಾಟಕ

*ಬಿಜೆಪಿಗೆ ಸಂಪೂರ್ಣ ಬೆಂಬಲ ಎಂದು ಹೇಳಿ ಕೊನೆಯ ಕ್ಷಣದಲ್ಲಿ ಕೈಕೊಟ್ಟ ರೆಬೆಲ್​ ಲೇಡಿ..! ➤ ಸುಮಲತಾ ಅಂಬರೀಷ್​ 

(ನ್ಯೂಸ್ ಕಡಬ)Newskadaba.com ಮಂಡ್ಯ,ಮೇ..03  ಸ್ವಾಭಿಮಾನಿ ಸಂಸದೆ ಎಂದು ಹೇಳಿಕೊಳ್ಳುವ ಸುಮಲತಾ ಅಂಬರೀಷ್​ ಅವರ ದ್ವಂದ್ವ ನಿಲುವು ಇದೀಗ ಬಯಲಾಗಿದೆ. ಬಿಜೆಪಿಗೆ ಬೆಂಬಲ ಅಂತ ಹೇಳಿದ್ದರೂ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿಲ್ಲ. ಋಣ ಸಂದಾಯ ನೆಪದಲ್ಲಿ ಬಿಜೆಪಿ ಅಭ್ಯರ್ಥಿಗೆ ರೆಬೆಲ್​ ಲೇಡಿ ಕೈ ಕೊಟ್ಟಿದ್ದಾರೆ. ಮೇಲುಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬದಲು ರೈತ ಸಂಘದ ಅಭ್ಯರ್ಥಿ ಅಭ್ಯರ್ಥಿ ದರ್ಶನ್ ಪುಟ್ಟಣಯ್ಯಗೆ ಸುಮಲತಾ ಬೆಂಬಲ ಘೋಷಣೆ ಮಾಡಿದ್ದಾರೆ. ಇತ್ತ ಸುಮಲತಾ ಅವರ ಬೆಂಬಲದ ನಿರೀಕ್ಷೆಯಲ್ಲಿದ್ದ ಬಿಜೆಪಿ ಅಭ್ಯರ್ಥಿಗೆ ಶಾಕ್ ಆಗಿದೆ. ಬಿಜೆಪಿ

*ಬಿಜೆಪಿಗೆ ಸಂಪೂರ್ಣ ಬೆಂಬಲ ಎಂದು ಹೇಳಿ ಕೊನೆಯ ಕ್ಷಣದಲ್ಲಿ ಕೈಕೊಟ್ಟ ರೆಬೆಲ್​ ಲೇಡಿ..! ➤ ಸುಮಲತಾ ಅಂಬರೀಷ್​  Read More »

ಕರ್ನಾಟಕ

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ➤ ಮೇ.10ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.03  ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 10ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.ಎಲ್ಲಾ ಕೇಂದ್ರ, ರಾಜ್ಯ ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶಾಲಾ, ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಈ ರಜೆ ತುರ್ತು ಸೇವೆಗಳಿಗೆ ಅನ್ವಯವಾಗುವುದಿಲ್ಲ.ಮತದಾನ ದಿನವಾದ ಮೇ 10 ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಈ ರಜೆ ಸೌಲಭ್ಯ ತುರ್ತು ಸೇವೆಗಳಿಗೆ ಅನ್ವಯವಾಗುವುದಿಲ್ಲ. ಅಂದು ಮತ ಚಲಾಯಿಸಲು ಅನುಕೂಲವಾಗುವಂತೆ ಕೇಂದ್ರ, ರಾಜ್ಯ ಸರ್ಕಾರಿ ಕಚೇರಿ, ಶಾಲೆ, ಕಾಲೇಜು, ವಿವಿಧ ಸಂಘ-ಸಂಸ್ಥೆ, ಅನುದಾನಿತ,

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ➤ ಮೇ.10ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ..! Read More »

ಕರ್ನಾಟಕ
Scroll to Top