karnataka

ಮುಂಗಾರಿಗೂ ಮುನ್ನವೇ ರಾಜ್ಯದಲ್ಲಿ ವರುಣನ ಅಬ್ಬರ ➤`ಯೆಲ್ಲೋ ಅಲರ್ಟ್’; ಹವಾಮಾನ ಇಲಾಖೆ ಮುನ್ಸೂಚನೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮೇ ,30. ರಾಜ್ಯದಲ್ಲಿ ಮುಂಗಾರಿಗೂ ಮುನ್ನವೇ ವರುಣನ ಅಬ್ಬರ ಜೋರಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ ಎಂದು ವರದಿ ಪ್ರಕಟಣೆ ತಿಳಿಸಿದೆ. ಇನ್ನೂ 3 ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ ಎನ್ನಲಾಗಿದೆ.    

ಮುಂಗಾರಿಗೂ ಮುನ್ನವೇ ರಾಜ್ಯದಲ್ಲಿ ವರುಣನ ಅಬ್ಬರ ➤`ಯೆಲ್ಲೋ ಅಲರ್ಟ್’; ಹವಾಮಾನ ಇಲಾಖೆ ಮುನ್ಸೂಚನೆ Read More »

ಕರ್ನಾಟಕ

ರಾಜ್ಯದ ಜನತೆಗೆ ಶಾಕ್ ನೀಡಿದ ಇಂಧನ ಇಲಾಖೆ ➤ಕರೆಂಟ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್.!

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.30 ಕರೆಂಟ್ ಬಿಲ್ ಕಟ್ಟದ ಜನತೆಗೆ ಇಂಧನ ಇಲಾಖೆ ಶಾಕ್ ನೀಡಿದ್ದು, ಕರೆಂಟ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್ ಮಾಡುವಂತೆ ಎಲ್ಲಾ ಎಸ್ಕಾಂಗಳಿಗೆ ಖಡಕ್ ಸೂಚನೆ ನೀಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗೃಹಜ್ಯೋತಿ ಯೋಜನೆ ಇನ್ನೂ ಜಾರಿಯಾಗಿಲ್ಲ.ಆದರೆ ಜನರು ಕರೆಂಟ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಕರೆಂಟ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್ ಮಾಡುವಂತೆ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿದೆ.      

ರಾಜ್ಯದ ಜನತೆಗೆ ಶಾಕ್ ನೀಡಿದ ಇಂಧನ ಇಲಾಖೆ ➤ಕರೆಂಟ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್.! Read More »

ಕರ್ನಾಟಕ

FIR ರದ್ದುಪಡಿಸಲು ಹೈಕೋರ್ಟ್ ಮೆಟ್ಟಿಲೇರಿದ ಅಶ್ವತ್ಥ ನಾರಾಯಣ

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.30 “ಉರಿಗೌಡ-ನಂಜೇಗೌಡರು ಟಿಪ್ಪುವನ್ನು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು” ಎಂಬ ಬಿಜೆಪಿ ನಾಯಕ, ಮಾಜಿ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಹೇಳಿಕೆ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಇದೀಗ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಕೋರಿ ಮಾಜಿ ಸಚಿವ ಹಾಗೂ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಶಾಸಕ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

FIR ರದ್ದುಪಡಿಸಲು ಹೈಕೋರ್ಟ್ ಮೆಟ್ಟಿಲೇರಿದ ಅಶ್ವತ್ಥ ನಾರಾಯಣ Read More »

ಕರ್ನಾಟಕ

ಸಂಪ್‌ನಲ್ಲಿ ಉದ್ಯಮಿ ಪುತ್ರನ ಮೃತದೇಹ ಪತ್ತೆ.!

(ನ್ಯೂಸ್ ಕಡಬ)newskadaba.com ಮೈಸೂರು,ಮೇ.29 ಉದ್ಯಮಿಯೊಬ್ಬರ ಪುತ್ರನ ಶವ ವಿಜಯನಗರ ವಾಟರ್ ಟ್ಯಾಂಕ್ ಬಳಿಯ ನಿರ್ಮಾಣ ಹಂತದ ಕಟ್ಟಡದ ಸಂಪ್ನಲ್ಲಿ ಪತ್ತೆಯಾಗಿದೆ.ಮೃತರನ್ನು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಸೆನ್ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಕೆ.ಎಂ. ಚೆರಿಯನ್ ಅವರ ಪುತ್ರ ಕ್ರಿಸ್ಟೋ ಚೆರಿಯನ್ (35) ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದ ಪೊಲೀಸರು ಶ್ವಾನದಳ, ವಿಧಿವಿಜ್ಞಾನ ತಜ್ಞರ ತಂಡದ ಜೊತೆಗೆ ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಹೊರತೆಗೆದಿದ್ದಾರೆ. ಪೋಷಕರು ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.  

ಸಂಪ್‌ನಲ್ಲಿ ಉದ್ಯಮಿ ಪುತ್ರನ ಮೃತದೇಹ ಪತ್ತೆ.! Read More »

ಕರ್ನಾಟಕ

ಟ್ರೆಕ್ಕಿಂಗ್  ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ.!

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ,ಮೇ.29  ಮೂಡಿಗೆರೆ ರಾಣಿಝರಿ ಫಾಲ್ಸ್ ನಿಂದ ಇಳಿದು ಟ್ರಕ್ಕಿಂಗ್ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.ಎರ್ಮಾಯಿ ಫಾಲ್ಸ್ ಸಮೀಪ ಅರಣ್ಯ ಪ್ರದೇಶದಲ್ಲಿ ಆತನನ್ನು ಪತ್ತೆಹಚ್ವಿರುವ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸೇರಿ ಪತ್ತೆ ಹಚ್ಚಿದ್ದಾರೆ. ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರ ಮೂಲದ ಟೆಕ್ಕಿ ಪರೇಶ್ ಕಿಶಾನ್ ಲಾಲ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಈತರಾಣಿ ಝರಿ ಫಾಲ್ಸ್ ಗೆ ತೆರಳಿ ಅಲ್ಲಿಂದ ಟ್ರಕ್ಕಿಂಗ್ ತೆರಳಿದ್ದ. ಇದೀಗ ಪತ್ತೆಯಾದ ಆತನನ್ನು ಬಾಳೂರು

ಟ್ರೆಕ್ಕಿಂಗ್  ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ.! Read More »

ಕರ್ನಾಟಕ

ಲಾರಿ ಮತ್ತು ಕಾರು ನಡುವೆ ಅಪಘಾತ ➤ 6 ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಕೊಪ್ಪಳ, ಮೇ.29. ಲಾರಿ ಮತ್ತು ಕಾರು ನಡುವೆ ಅಪಘಾತ ಉಂಟಾಗಿದ್ದು, ಸ್ಥಳದಲ್ಲಿಯೇ ಆರು ಮಂದಿ ಮೃತಪಟ್ಟ ಘಟನೆ ನಡೆದಿದೆ. ಕಾರಿನ ಟೈರ್​ ಸ್ಫೋಟಗೊಂಡು ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರು ಮೃತಪಟ್ಟಿದ್ದಾರೆ. ರಾಜಪ್ಪ ಬನಗೋಡಿ, ರಾಘವೇಂದ್ರ, ಅಕ್ಷಯ ಶಿವಶರಣ, ಜಯಶ್ರೀ, ರಾಖಿ ಮತ್ತು ರಶ್ಮಿಕಾ ಮೃತರು ಎಂದು ಗುರುತಿಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.  

ಲಾರಿ ಮತ್ತು ಕಾರು ನಡುವೆ ಅಪಘಾತ ➤ 6 ಮಂದಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು.!

(ನ್ಯೂಸ್ ಕಡಬ)newskadaba.comಚಿಕ್ಕಮಗಳೂರು,ಮೇ.29 ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕುಂಟಿನಮಡು ಗ್ರಾಮದ ಕೆರೆಯಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಒಂದೇ ಕುಟುಂಬದ ಇಬ್ಬರು ಬಾಲಕರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಸಹೋದರರ ಮಕ್ಕಳಾಗಿರುವ ಯಶವಂತ(10), ರೋಹಿತ್(6) ಮೃತಪಟ್ಟವರು.ಸಮೀಪದ ಕೆರೆ ಬಳಿ ಹೋಗಿದ್ದ ಬಾಲಕರು ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮಕ್ಕಳ ಮೃತದೇಹ ಕಂಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.  

ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು.! Read More »

ಕರ್ನಾಟಕ

‘ಕೊಟ್ಟ ಮಾತಿನಂತೆ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಗೊಳಿಸುತ್ತೇವೆ’ ➤ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.29. ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 1ರಂದು ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಈ ಬಗ್ಗೆ ಚರ್ಚೆ ನಡೆಸುತ್ತೇವೆ. ನಮ್ಮದು ಜವಾಬ್ದಾರಿಯುತ ಸರ್ಕಾರ, ನಾವು ಈ ಯೋಜನೆಯನ್ನು ಕ್ರಮಬದ್ಧವಾಗಿ ಜಾರಿ ಮಾಡುತ್ತೇವೆ ಎಂದರು.  

‘ಕೊಟ್ಟ ಮಾತಿನಂತೆ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಗೊಳಿಸುತ್ತೇವೆ’ ➤ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ Read More »

ಕರ್ನಾಟಕ

ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣ➤6 ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.29 ನಗರದ ಚೌಡೇಶ್ವರಿನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರವಿ ಅಲಿಯಾಸ್ ಮತ್ತಿ ರವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಲಗ್ಗೆರೆ ಸಮೀಪದ ಚೌಡೇಶ್ವರಿ ನಗರದ ಹಳ್ಳಿ ರುಚಿ ಹೋಟೆಲ್ ಮುಂಭಾಗ ರವಿ ಅಲಿಯಾಸ್ ಮತ್ತಿ ರವಿಯನ್ನು ದುರ್ಷರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು.ಈ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ನಂದಿನಿ ಲೇಔಟ್ ಠಾಣೆ ಪೊಲೀಸರು, ಮಂಜ, ಸ್ಪಾಟ್ ನಾಗ, ಗೋಪಿ ಸೇರಿ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ.  

ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣ➤6 ಆರೋಪಿಗಳು ಅರೆಸ್ಟ್ Read More »

ಕರ್ನಾಟಕ

ರೈಲಿನಡಿ ಸಿಲುಕಿ ಮೃತಪಟ್ಟ ಕಾರ್ಮಿಕ.!

(ನ್ಯೂಸ್ ಕಡಬ)newskadaba.com ರಾಯಚೂರು,ಮೇ.29 ರಾಯಚೂರಿನಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ರೈಲು ಅಪಘಾತ ಸಂಭವಿಸಿ ವ್ಯಕ್ತಿಯ ರುಂಡ ಮುಂಡ ಬೇರ್ಪಟ್ಟ ಭೀಕರ ಘಟನೆ ನಡೆದಿದೆ.ಮೃತನನ್ನು ನಾಗರಾಜ್ (32) ಎಂದು ಗುರುತಿಸಲಾಗಿದೆ. ರಾಯಚೂರಿನ ಶಕ್ತಿನಗರದ ಆರ್ ಟಿ ಪಿಎಸ್ ವಿದ್ಯುತ್ ಕೇಂದ್ರದಲ್ಲಿ ಘಟನೆ ನಡೆದಿದೆ. ಕಲ್ಲಿದ್ದಲ್ಲು ಸ್ಯಾಂಪಲ್ ತೆಗೆಯುವ ಕೆಲಸ ಮಾಡುತ್ತಿದ್ದ ಇವರು ಆಕಸ್ಮಿಕವಾಗಿ ರೈಲಿನಡಿಗೆ ಸಿಲುಕಿದ್ದಾರೆ ಎನ್ನಲಾಗಿದೆ. ರೈಲು ಕುತ್ತಿಗೆ ಮೇಲೆ ಹರಿದ ಪರಿಣಾಮ ರುಂಡ ಹಾಗೂ ಮುಂಡ ಬೇರ್ಪಟ್ಟು ಮೃತಪಟ್ಟಿದ್ದಾರೆ ಎನ್ನಲಾಗಿದೆ.  

ರೈಲಿನಡಿ ಸಿಲುಕಿ ಮೃತಪಟ್ಟ ಕಾರ್ಮಿಕ.! Read More »

ಕರ್ನಾಟಕ
Scroll to Top