karavali

crime, arrest, suspected

ಕೇರಳದಲ್ಲಿ ಅಜ್ಜ-ಅಜ್ಜಿಯ ಕೊಲೆ- ಆರೋಪಿ ಮಂಗಳೂರಿನಲ್ಲಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 25. ಕೇರಳದ ತ್ರಿಶೂರ್ ನಲ್ಲಿ ಅಜ್ಜ- ಅಜ್ಜಿಯ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು, ಚಿನ್ನಾಭರಣ ಮಾರಾಟ ಮಾಡುತ್ತಿದ್ದ ವೇಳೆ ಮಂಗಳೂರಿನಲ್ಲಿ ಬಂಧಿಸಲಾದ ಘಟನೆ ವರದಿಯಾಗಿದೆ. ಬಂಧಿತ ಆರೋಪಿಯನ್ನು ತ್ರಿಶೂರ್ ಜಿಲ್ಲೆಯ ವೈಲತ್ತೂರ್ ನಿವಾಸಿ ಅಹಮ್ಮದ್ ಅಕ್ಮಲ್ ಎಂದು ಗುರುತಿಸಲಾಗಿದೆ. ಈತ ತ್ರಿಶೂರ್ ಜಿಲ್ಲೆಯ ವಡೆಕ್ಕೆಕಾಡ್ ಎಂಬಲ್ಲಿ ಜುಲೈ 23ರಂದು ಅಜ್ಜ ಮತ್ತು ಅಜ್ಜಿಯನ್ನು ಕೊಲೆಮಾಡಿ ಅವರಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಮಂಗಳೂರಿಗೆ ಬಂದಿದ್ದ. ಸೋಮವಾರದಂದು ನಗರದ ಕಾರ್ ಸ್ಟ್ರೀಟ್ ಪರಿಸರದಲ್ಲಿ ಅನುಮಾನಾಸ್ಪದವಾಗಿ […]

ಕೇರಳದಲ್ಲಿ ಅಜ್ಜ-ಅಜ್ಜಿಯ ಕೊಲೆ- ಆರೋಪಿ ಮಂಗಳೂರಿನಲ್ಲಿ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿದ್ಯಾರ್ಥಿನಿಯರಿಂದ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ – ಸುಳ್ಳುಸುದ್ದಿ ಹರಡದಂತೆ ಎಸ್ಪಿ ಮನವಿ

(ನ್ಯೂಸ್ ಕಡಬ) newskadaba.com ಉಡುಪಿ, ಜು. 25. ಕೆಲ ದಿನಗಳ ಹಿಂದೆ ಇಲ್ಲಿನ ಖಾಸಗಿ ಕಾಲೇಜೊಂದರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಚಿತ್ರೀಕರಣ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಉಡುಪಿ ಎಸ್ ಪಿ ಅಕ್ಷಯ್ ಹಾಕೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಸಂಬಂಧಪಟ್ಟಂತೆ ಯಾವುದೇ ವಿಡಿಯೋ ನಮಗೆ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೂಡಾ ನಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ಸಾರ್ವಜನಿಕರು ಊಹಾಪೋಹದ ಮಾಹಿತಿಗಳನ್ನು ನಂಬಬಾರದು ಎಂದಿದ್ದಾರೆ.

ವಿದ್ಯಾರ್ಥಿನಿಯರಿಂದ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ – ಸುಳ್ಳುಸುದ್ದಿ ಹರಡದಂತೆ ಎಸ್ಪಿ ಮನವಿ Read More »

ಕರ್ನಾಟಕ

ದಡಾರ ರುಬೆಲ್ಲಾ ನಿರ್ಮೂಲನಾ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 25.  ಇಂದ್ರಧನುಷ್ ಮತ್ತು ದಡಾರ ರುಬೆಲ್ಲಾ ನಿರ್ಮೂಲನಾ ಕಾರ್ಯಕ್ರಮದ ನಗರ ಮಟ್ಟದ ಚಾಲನಾ ಸಮಿತಿ ಸಭೆಯು ಜು. 25ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ 2ನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಡಾರ ರುಬೆಲ್ಲಾ ನಿರ್ಮೂಲನಾ ಸಭೆ Read More »

ಕರಾವಳಿ

ಜು.26ರಂದು ಜೋಕಟ್ಟೆ ಗ್ರಾಮ ಪಂಚಾಯತ್ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 25. ಜೋಕಟ್ಟೆ ಗ್ರಾಮ ಪಂಚಾಯತ್‍ನ 2023-24ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ನಾಳೆ (ಜು.26 ಬುಧವಾರ) ಬೆಳಿಗ್ಗೆ 11 ಗಂಟೆಗೆ ಜೋಕಟ್ಟೆ ವಿಜಯ ವಿಠಲ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜು.26ರಂದು ಜೋಕಟ್ಟೆ ಗ್ರಾಮ ಪಂಚಾಯತ್ ಸಭೆ Read More »

ಕರಾವಳಿ

ವಕೀಲರ ತರಬೇತಿ ಅವಧಿಯ ಶಿಷ್ಯವೇತನದ ಅರ್ಜಿ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 25. ಸಮಾಜ ಕಲ್ಯಾಣ ಇಲಾಖಾ ವತಿಯಿಂದ 2022-23ನೇ ಸಾಲಿಗೆ ಕಾನೂನು ಪದವೀಧರರು ಹಿರಿಯ ವಕೀಲರ ಬಳಿ ವೃತ್ತಿ ತರಬೇತಿ ಅವಧಿಯಲ್ಲಿ ಶಿಷ್ಯ ವೇತನಕ್ಕಾಗಿ ವೆಬ್‍ಸೈಟ್ www.sw.kar.nic.in ಮೂಲಕ ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಇದೇ ಜು. 31ರ ವರೆಗೆ ವಿಸ್ತರಿಸಲಾಗಿದೆ. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ ನಗರದ ಉರ್ವಸ್ಟೋರ್ಸ್‍ ನಲ್ಲಿರುವ ಜಿಲ್ಲಾ ಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಕೀಲರ ತರಬೇತಿ ಅವಧಿಯ ಶಿಷ್ಯವೇತನದ ಅರ್ಜಿ ಅವಧಿ ವಿಸ್ತರಣೆ Read More »

ಕರಾವಳಿ

ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 25. ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಲ್ಲಿ ಶಿಶಿಕ್ಷು ತರಬೇತಿ ಪಡೆಯಲು ಎಸ್.ಎಸ್.ಎಲ್.ಸಿ ಅಥವಾ ಐ.ಟಿ.ಐನ ಮೆಕ್ಯಾನಿಕ್ ಡಿಸೇಲ್, ಎಲೆಕ್ಟ್ರೀಷಿಯನ್, ಮಷಿನಿಷ್ಟ್, ಎಲೆಕ್ಟ್ರೋನಿಕ್ಸ್ ಮೆಕ್ಯಾನಿಕ್, ವೆಲ್ಡರ್, ಮೆಕ್ಯಾನಿಕ್ ಮೋಟರ್ ವೆಹಿಕಲ್, ಮೋಟಾರ್ ವೆಹಿಕಲ್ ಬಾಡಿ ಬಿಲ್ಡರ್, ಪ್ರೋಗ್ರಾಮಿಂಗ್ ಮತ್ತು ಸಿಸ್ಟಮ್ ಎಡ್ಮಿನಿಸ್ಟ್ರೇಟಿವ್ ಎಸಿಸ್ಟೆಂಟ್ ವೃತ್ತಿಗಳಲ್ಲಿ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆ. 25ರೊಳಗೆ ನಗರದ ಬಿಜೈನಲ್ಲಿರುವ ಕರಾರಸಾನಿ, ಮಂಗಳೂರು ವಿಭಾಗದ, ವಿಭಾಗೀಯ ಕಚೇರಿಗೆ ಅರ್ಜಿ ಸಲ್ಲಿಸಿ,

ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 25. ಆಗಸ್ಟ್ 15 ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿರುವ ಸ್ವಾತಂತ್ರ್ಯ ದಿನಾಚರಣೆಗೆ ಅಗತ್ಯವಿರುವ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳಬೇಕು, ಅದರಲ್ಲಿ  ಯಾವುದೇ ರೀತಿಯ ಅವ್ಯವಸ್ಥೆ ಆಗದಂತೆ, ಜಿಲ್ಲಾಡಳಿತಕ್ಕೆ ಮುಜುಗರ ಉಂಟಾಗದಂತೆ ಎಚ್ಚರಿಕಾ ಕ್ರಮವನ್ನು ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ತಿಳಿಸಿದರು. ಅವರು ಸೋಮವಾರದಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ಸಿದ್ದತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ವರ್ಷದಂತೆ

ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ

ವಿಮಾನ ದುರಂತದ ಅಣಕು ಕಾರ್ಯಾಚರಣೆ- ಸುರಕ್ಷತಾ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 25. ಅಣಕು ಕಾರ್ಯಚರಣೆಯಲ್ಲಿ ಯಾವುದೇ ರೀತಿಯ ಆಪತ್ತುಗಳು ಎದುರಾಗದಂತೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅವರು ಸೋಮವಾರದಂದು ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ತಿಂಗಳ 31ರಂದು ನಿಗದಿಪಡಿಸಲಾಗಿರುವ ವಿಮಾನ ದುರಂತದ ಜಂಟಿ ಅಣಕು ಪ್ರದರ್ಶನದ ಪೂರ್ವಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಡಳಿತ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಅದಾನಿ ವಿಮಾನ

ವಿಮಾನ ದುರಂತದ ಅಣಕು ಕಾರ್ಯಾಚರಣೆ- ಸುರಕ್ಷತಾ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ

ಇಂದು(ಜು. 25) ನಡೆಯಬೇಕಿದ್ದ ವಿವಿ ಪರೀಕ್ಷೆಗಳು ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 25. ದ.ಕ. ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದ ಹಿನ್ನೆಲೆಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಈ ನಡುವೆ ಇಂದು (ಜು.25) ನಡೆಯಬೇಕಿದ್ದ ಮಂಗಳೂರು ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಮುಂದೂಡಿದ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ಮರುನಿಗದಿಪಡಿಸಿ ಎಲ್ಲಾ ಸಂಯೋಜಿತ ಕಾಲೇಜುಗಳಿಗೆ ಶೀಘ್ರದಲ್ಲಿ ತಿಳಿಸಲಾಗುವುದು. ಈ ಹಿಂದೆ

ಇಂದು(ಜು. 25) ನಡೆಯಬೇಕಿದ್ದ ವಿವಿ ಪರೀಕ್ಷೆಗಳು ಮುಂದೂಡಿಕೆ Read More »

ಕರಾವಳಿ

ಬಸ್ ಹಾಗೂ ಕಾರು ನಡುವೆ ಅಪಘಾತ- ಕಾರು ಚಾಲಕ ಅದೃಷ್ಟವಶಾತ್ ಪಾರು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜು. 25. ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಮುಡಿಪು ಜಂಕ್ಷನ್ ನಲ್ಲಿ ಸೋಮವಾರದಂದು ರಾತ್ರಿ ವೇಳೆ ಸಂಭವಿಸಿದೆ. ಮಂಗಳೂರಿನಿಂದ ಬಿ.ಸಿ ರೋಡಿನತ್ತ ತೆರಳುತ್ತಿದ್ದ ಎನ್.ಎಸ್ ಟ್ರಾವೆಲ್ಸ್ ಬಸ್ಸು ಮುಡಿಪು ಜಂಕ್ಷನ ನಲ್ಲಿ ತಿರುಗುವ ಸಂದರ್ಭ, ಭಾರತಿ ಶಾಲೆ ಕಡೆಯಿಂದ ಬರುತ್ತಿದ್ದ ಝೆನ್ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಪರಿಣಾಮ ಬಸ್ಸು ಮುಂಭಾಗಕ್ಕೆ ಕಾರು ಒಳನುಗ್ಗಿದ್ದು, ಕಾರು ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ ಎನ್ನಲಾಗಿದೆ. ಮಂಗಳೂರು ದಕ್ಷಿಣ

ಬಸ್ ಹಾಗೂ ಕಾರು ನಡುವೆ ಅಪಘಾತ- ಕಾರು ಚಾಲಕ ಅದೃಷ್ಟವಶಾತ್ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top