karavali

ಮಂಗಳೂರು ವಿವಿ ನೂತನ ಕುಲಸಚಿವರಾಗಿ ಮುಹಮ್ಮದ್ ನಯೀಮ್ ಮೊಮೀನ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 26. ಮಂಗಳೂರು ವಿಶ್ವವಿದ್ಯಾನಿಲಯದ 17 ನೇ ಕುಲಸಚಿವರಾಗಿ ಕೆ.ಎ.ಎಸ್ ಅಧಿಕಾರಿ ಮೊಹಮ್ಮದ್ ನಯೀಮ್ ಮೊಮಿನ್ ಅವರು ಮಂಗಳವಾರದಂದು ಅಧಿಕಾರ ವಹಿಸಿಕೊಂಡಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಇವರು, ಬೀದರ್ ಮತ್ತು ಹಾಸನ ಜಿಲ್ಲೆಗಳಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ವಿಧಾನ ಸೌಧದಲ್ಲಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಏಪ್ರಿಲ್, 2021ರಿಂದ ಕುಲಸಚಿವರಾಗಿದ್ದ ಡಾ. ಕಿಶೋರ್ ಕುಮಾರ್ ಸಿ.ಕೆ ನೂತನ ಕುಲಸಚಿವರಿಗೆ ಅಧಿಕಾರ ಹಸ್ತಾಂತರಿಸಿದರು. ಕುಲಪತಿ ಪ್ರೊ. ಜಯರಾಜ್ ಅಮೀನ್, […]

ಮಂಗಳೂರು ವಿವಿ ನೂತನ ಕುಲಸಚಿವರಾಗಿ ಮುಹಮ್ಮದ್ ನಯೀಮ್ ಮೊಮೀನ್ ಅಧಿಕಾರ ಸ್ವೀಕಾರ Read More »

ಕರಾವಳಿ

ಸಾಲ ಮರುಪಾವತಿಗೆ ಹಣ ತೆಗೆದು ಬ್ಯಾಂಕ್ ಗೆ ಹಾಕದೇ ವಂಚನೆ

(ನ್ಯೂಸ್ ಕಡಬ) newskadaba.com ಮಲ್ಪೆ, ಜು. 26. ಫೈನಾನ್ಸ್ ಹಣದ ಲೋನ್ ಆಫೀಸರ್ ಬ್ಯಾಂಕಿಗೆ ಪಾವತಿಸದೇ ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತ್ ಪೈನಾನ್ಸ್ ಇನ್‌ಕ್ಲ್ಸೂಷನ್ ಲಿಮಿಟೆಡ್ ಶಾಖೆಯ ಕಿದಿಯೂರು ಶಾಖೆಯಲ್ಲಿ ಲೋನ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿಲೀಪ್ ಎಸ್.ಎಸ್ ಬಡ ಮಹಿಳೆಯರು ಸಂಘದಿಂದ ಸಾಲವಾಗಿ ಪಡೆದುಕೊಂಡ ಹಣಕ್ಕೆ ಇನ್ನು ಹೆಚ್ಚಿನ ಸಾಲ ಕೊಡಿಸುವುದಾಗಿ ನಂಬಿಸಿ ಮುಂಗಡವಾಗಿ ಸಾಲ ಮರುಪಾವತಿ ಮಾಡುವಂತೆ ತಿಳಿಸಿದ್ದನು. 2021ರ ನ. 27ರಿಂದ 2023ರ ಜೂ. 23ರವರೆಗೆ

ಸಾಲ ಮರುಪಾವತಿಗೆ ಹಣ ತೆಗೆದು ಬ್ಯಾಂಕ್ ಗೆ ಹಾಕದೇ ವಂಚನೆ Read More »

ಕರಾವಳಿ, ಕ್ರೈಮ್ ನ್ಯೂಸ್

ಪ್ರಾಕೃತಿಕ ವಿಕೋಪದ ಸಮಸ್ಯೆಗೆ 24/7 ಕಂಟ್ರೋಲ್ ರೂಂ ತೆರೆದ ತಾಲೂಕು ಪಂಚಾಯತ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 26. ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ತಾಲೂಕು ಕಂಟ್ರೋಲ್ ರೂಮ್ 24/7 ಅನ್ನು ತೆರೆಯಲಾಗಿದೆ. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಕಂಟ್ರೋಲ್ ರೂಮ್ ಸಂಖ್ಯೆ: 0824-2204424 ಅನ್ನು ಸಂಪರ್ಕಿಸುವಂತೆ ಉಳ್ಳಾಲ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾಕೃತಿಕ ವಿಕೋಪದ ಸಮಸ್ಯೆಗೆ 24/7 ಕಂಟ್ರೋಲ್ ರೂಂ ತೆರೆದ ತಾಲೂಕು ಪಂಚಾಯತ್ Read More »

ಕರಾವಳಿ

ಆಗಸ್ಟ್ ನಲ್ಲಿ ಸಿಹಿನೀರು ಮುತ್ತು ಕೃಷಿ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 26. ಮೀನುಗಾರಿಕೆ ಇಲಾಖೆ ವತಿಯಿಂದ 2023ರ ಆಗಸ್ಟ್ ಮಾಹೆಯ ಮೊದಲ ವಾರದಲ್ಲಿ ಸುಳ್ಯ ತಾಲೂಕಿನ ಐವರ್ನಾಡು ಪ್ರದೇಶದಲ್ಲಿ ಮೀನುಗಾರರಿಗೆ ಒಂದು ದಿನದ ಸಿಹಿನೀರು ಮುತ್ತು ಕೃಷಿ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಮೀನು ಕೃಷಿಕರು ಹಾಗೂ ಸಾರ್ವಜನಿಕರು ಪುತ್ತೂರು ತಾಲೂಕು ಪಂಚಾಯತ್ ಕಾರ್ಯಾಲಯದ ಒಂದನೇ ಮಹಡಿಯಲ್ಲಿರುವ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹೆಸರು ನೋಂದಾಯಿಸುವಂತೆ ಪುತ್ತೂರು ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ ನಲ್ಲಿ ಸಿಹಿನೀರು ಮುತ್ತು ಕೃಷಿ ತರಬೇತಿ Read More »

ಕರಾವಳಿ

ಮೇವು ಕತ್ತರಿಸುವ ಯಂತ್ರಕ್ಕೆ ಪಶುಪಾಲಕರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 26. 2 ಎಚ್.ಪಿ. ಮೇವು ಕತ್ತರಿಸುವ ಯಂತ್ರಕ್ಕೆ ಪಶುಪಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಪಶುವೈದ್ಯಾಧಿಕಾರಿ/ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಕಚೇರಿಯಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಇದೇ ಜು.30ರೊಳಗೆ ಅರ್ಜಿ ಸಲ್ಲಿಸುವಂತೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇವು ಕತ್ತರಿಸುವ ಯಂತ್ರಕ್ಕೆ ಪಶುಪಾಲಕರಿಂದ ಅರ್ಜಿ ಆಹ್ವಾನ Read More »

ಕರಾವಳಿ

ಅನಾರೋಗ್ಯದಿಂದ ಬಳಲುತ್ತಿದ್ದ ಗೃಹರಕ್ಷಕಿ ಜಯಂತಿಯವರ ಆರೋಗ್ಯ ವಿಚಾರಿಸಿದ ಡಾ.ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 26. ಅನಿಯಂತ್ರಿತ ಮಧುಮೇಹ ರೋಗದಿಂದಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಗೃಹ ರಕ್ಷಕಿ ಜಯಂತಿ ಅವರನ್ನು  ದ.ಕ ಜಿಲ್ಲಾ  ಗೃಹರಕ್ಷಕ ದಳದ ಸಮಾದೇಷ್ಟ ಡಾ ಮುರಲಿ ಮೋಹನ್ ಚೂಂತಾರು ಅವರು ವೆನ್ಲಾಕ್ ಆಸ್ಪತ್ರೆಯಲ್ಲಿ  ಮಂಗಳವಾರದಂದು ಭೇಟಿ ಮಾಡಿ ಸಾಂತ್ವನ ಹೇಳಿದರು.

ಅನಾರೋಗ್ಯದಿಂದ ಬಳಲುತ್ತಿದ್ದ ಗೃಹರಕ್ಷಕಿ ಜಯಂತಿಯವರ ಆರೋಗ್ಯ ವಿಚಾರಿಸಿದ ಡಾ.ಚೂಂತಾರು Read More »

ಕರಾವಳಿ

ನಿಡ್ಪಳ್ಳಿ ಗ್ರಾ.ಪಂ. ಉಪಚುನಾವಣಾ ಫಲಿತಾಂಶ ಪ್ರಕಟ- ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಅಭ್ಯರ್ಥಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 26. ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್ ಗಳ ಬ್ಬರು ಸದಸ್ಯರ ನಿಧನದಿಂದ ತೆರವಾಗಿರುವ ರಡು ಸ್ಥಾನಗಳಿಗೆ ಜು. 23ರಂದು ಚುನಾವಣೆ ನಡೆದಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದೆ. ಈ ಮೊದಲು ನಿಡ್ಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ಸದಸ್ಯರಾಗಿದ್ದ ಮುರಳೀಕೃಷ್ಣ ಭಟ್ ನಿಧನರಾದ ಹಿನ್ನೆಲೆ ಆ ಸ್ಥಾನ ತೆರವಾಗಿತ್ತು. ಪುತ್ತೂರು ತಾಲೂಕು ಕಛೇರಿಯಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಭಾರೀ ಪೈಪೋಟಿ ಹೊಂದಿದ್ದ ನಿಡ್ಪಳ್ಳಿ ಪಂಚಾಯತ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್

ನಿಡ್ಪಳ್ಳಿ ಗ್ರಾ.ಪಂ. ಉಪಚುನಾವಣಾ ಫಲಿತಾಂಶ ಪ್ರಕಟ- ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಅಭ್ಯರ್ಥಿ Read More »

ಕರಾವಳಿ

ಗ್ರಾ.ಪಂ. ಉಪಚುನಾವಣಾ ಫಲಿತಾಂಶ ಪ್ರಕಟ- ಗೆದ್ದುಬೀಗಿದ ಪುತ್ತಿಲ ಪರಿವಾರ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 26. ಆರ್ಯಾಪು ಗ್ರಾ.ಪಂ.ನ ಆರ್ಯಾಪು ವಾರ್ಡ್-2 ಕ್ಕೆ ನಡೆದ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ 499 ಮತಗಳನ್ನು ಪಡೆದು ಜಯಭೇರಿಯಾಗಿದ್ದಾರೆ. ವಾರ್ಡ್-2ರ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸದಸ್ಯ ರುಕ್ಕಯ್ಯ ಮೂಲ್ಯರವರ ರವರ ನಿಧನದಿಂದ ತೆರವಾದ ಸ್ಥಾನಕ್ಕೆ ಜು. 23ರಂದು ಉಪ ಚುನಾವಣೆ ನಡೆದಿತ್ತು. ಅದರಲ್ಲಿ ಒಟ್ಟು 1,237 ಮತಗಳ ಪೈಕಿ 999 ಮತಗಳು ಚಲಾವಣೆಯಾಗಿದೆ. ಪುತ್ತಿಲ ಪರಿವಾರದ ಬೆಂಬಲಿತ

ಗ್ರಾ.ಪಂ. ಉಪಚುನಾವಣಾ ಫಲಿತಾಂಶ ಪ್ರಕಟ- ಗೆದ್ದುಬೀಗಿದ ಪುತ್ತಿಲ ಪರಿವಾರ Read More »

ಕರಾವಳಿ

ನೆಲ್ಯಾಡಿ: ಕೆಟ್ಟುನಿಂತಿದ್ದ ಕ್ಯಾಂಟರ್ ಗೆ ಬೈಕ್ ಢಿಕ್ಕಿ – ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು. 25. ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದಿ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಣ್ಣಂಪಾಡಿ ಎಂಬಲ್ಲಿ ನಡೆದಿದೆ. ಮೃತ ಬೈಕ್ ಸವಾರನನ್ನು ನೆಲ್ಯಾಡಿ ಮೊರಂಕಳ ನಿವಾಸಿ ಇಕ್ಬಾಲ್ ಎಂದು ಗುರುತಿಸಲಾಗಿದೆ. ಮೃತ ಇಕ್ಬಾಲ್ ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸಣ್ಣಂಪಾಡಿ ಸಮೀಪ ಕೆಟ್ಟು ನಿಂತಿದ್ದ ಪಾರ್ಸೆಲ್ ಸಾಗಾಟದ ವಾಹನಕ್ಕೆ ಹಿಂದಿನಿಂದ ಢಿಕ್ಕಿ

ನೆಲ್ಯಾಡಿ: ಕೆಟ್ಟುನಿಂತಿದ್ದ ಕ್ಯಾಂಟರ್ ಗೆ ಬೈಕ್ ಢಿಕ್ಕಿ – ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮುಂದುವರಿದ ವರುಣನ ಆರ್ಭಟ- ನಾಳೆಯೂ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 25. ಭಾರೀ‌ ಮಳೆಯ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ನಾಳೆ(ಜು. 26) ಎಲ್ಲಾ ಶಾಲಾ ಕಾಲೇಜುಗಳಿಗೆ ಹಾಗೂ ರಜೆ ಘೋಷಿಸಲಾಗಿದೆ.

ಮುಂದುವರಿದ ವರುಣನ ಆರ್ಭಟ- ನಾಳೆಯೂ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ Read More »

ಕರಾವಳಿ
Scroll to Top