kapu

ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ➤ ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ)newskadaba.com ಕಾಪು, ಜು.18. ಕಟಪಾಡಿಯಲ್ಲಿ ಇಬ್ಬರು ಕಾರ್ಮಿಕರ ನಡುವಿನ ಗಲಾಟೆಯಾಗಿ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಕಾಪುವಿನಲ್ಲಿ ವರದಿಯಾಗಿದೆ. ಮೃತ ಕಾರ್ಮಿಕನನ್ನು ಒರಿಸ್ಸಾ ಮೂಲದ ಗಣೇಶ್ (50) ಎಂದು ಗುರುತಿಸಲಾಗಿದೆ. ಇವರು ಕಟಪಾಡಿ ಶಿರ್ವ ರಸ್ತೆ ಬಳಿಯಲ್ಲಿ ಕಟ್ಟಡ ಕಾಮಗಾರಿ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸದ ವಿಷಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರೂ ಹೊಡೆದಾಟ ನಡೆಸಿದ್ದು, ಈ ವೇಳೆ ಗಣೇಶ್ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ಅಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇನ್ನು […]

ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ➤ ಕೊಲೆಯಲ್ಲಿ ಅಂತ್ಯ Read More »

ಕರಾವಳಿ, ಕ್ರೈಮ್ ನ್ಯೂಸ್

ಗ್ರಾಹಕರ ಸೋಗಿನಲ್ಲಿ ಬಂದು ಮಾಲೀಕರಿಂದ 6 ಲಕ್ಷ ರೂ. ಕಳವು ➤ ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಕಾಪು, ಫೆ.24. ಗ್ರಾಹಕರ ಸೋಗಿನಲ್ಲಿ ಬಂದು ಮಾಲೀಕರಿಂದ 6 ಲಕ್ಷ ರೂ. ದೋಚಿದ ಆರೋಪಿಯನ್ನು ಕಾಪು ಪೊಲೀಸರು ಆಂಧ್ರಪ್ರದೇಶ ರಾಜ್ಯದ ಮದನಪಲ್ಲಿಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಆಂಧ್ರಪ್ರದೇಶದ ಸುನಿಲ್‌ (29) ಬಂಧಿತ ಆರೋಪಿ. ಕಾಪುವಿನ ಮಹಾಲಸಾ ಸ್ಟೋರ್ ಮಾಲಿಕರಾದ ರಾಘವೇಂದ್ರ ಕಿಣಿ ಅವರು ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಗ್ರಾಹಕನ ಸೋಗಿನಲ್ಲಿ ಬಂದು ಮಾಲಕರಿಂದ 6 ಲಕ್ಷ ಹಣ ದೋಚಿ ಪರಾರಿಯಾಗಿದ್ದ.

ಗ್ರಾಹಕರ ಸೋಗಿನಲ್ಲಿ ಬಂದು ಮಾಲೀಕರಿಂದ 6 ಲಕ್ಷ ರೂ. ಕಳವು ➤ ಆರೋಪಿ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಪು: ಶರತ್‌ ಶೆಟ್ಟಿ ಹತ್ಯೆ ಪ್ರಕರಣ   ➤  ದೈವದ ಮೊರೆ ಹೋದ ಕುಟುಂಬ.!

(ನ್ಯೂಸ್ ಕಡಬ)newskadaba.com ಕಾಪು, ಫೆ.13. ದುಷ್ಮರ್ಮಿಗಳಿಂದ ಹತ್ಯೆಗೊಳಗಾದ ಪಾಂಗಾಳ ಶರತ್‌ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಪೊಲೀಸರ ಕೈಗೆ ಸಿಲುಕಿಸುವಂತೆ ಶರತ್‌ ಶೆಟ್ಟಿ ಕುಟುಂಬದವರು ದೈವದ ಮೊರೆ ಹೋಗಿದ್ದಾರೆ. ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೇಮ ನಡೆದಿದ್ದು, ಅಲ್ಲಿ ಅವರು ತನ್ನ ಭಾವನ ಸಾವಿಗೆ ಕಾರಣರಾಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಡೆಸುತ್ತಿರುವ ಪ್ರಯತ್ನಕ್ಕೆ ದೈವ ಬಲವನ್ನು ಒದಗಿಸಿಕೊಟ್ಟು, ಅವರ ಬಂಧನವಾಗಿ ಕಠಿಣ ಶಿಕ್ಷೆ ದೊರಕುವಂತೆ ಅನುಗ್ರಹಿಸುವಂತೆ ಅವರು ದೈವದ ಮೊರೆ ಹೋಗಿದ್ದಾರೆ.

ಕಾಪು: ಶರತ್‌ ಶೆಟ್ಟಿ ಹತ್ಯೆ ಪ್ರಕರಣ   ➤  ದೈವದ ಮೊರೆ ಹೋದ ಕುಟುಂಬ.! Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಪು: ಚೂರಿಯಿಂದ ಇರಿದು ವ್ಯಕ್ತಿಯೋರ್ವನ ಬರ್ಬರ ಹತ್ಯೆ

(ನ್ಯೂಸ್ ಕಡಬ)newskadaba.com ಕಾಪು, ಫೆ.06. ಚೂರಿಯಿಂದ ಇರಿದು ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಪಾಂಗಾಳದಲ್ಲಿ ನಡೆದಿದೆ. ಪಾಂಗಾಳ ಮಂಡೇಡಿ ನಿವಾಸಿ ಶರತ್ ಶೆಟ್ಟಿ(39) ಹತ್ಯೆಗೀಡಾದ ವ್ಯಕ್ತಿ ಎನ್ನಲಾಗಿದೆ. ಪಾಂಗಾಳ ಶ್ರೀ ಜನಾರ್ದನ ದೇವಸ್ಥಾನದ ಬಳಿ ಅವರ ಮೇಲೆ ಚೂರಿಯಿಂದ ಇರಿಯಲಾಗಿದೆ . ಘಟನೆಯಲ್ಲಿ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಕಾಪು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾಪು: ಚೂರಿಯಿಂದ ಇರಿದು ವ್ಯಕ್ತಿಯೋರ್ವನ ಬರ್ಬರ ಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್
Crime

ಉಡುಪಿ: ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ ➤ ಇಬ್ಬರು ಆರೋಪಿಗಳು ಪರಾರಿ

(ನ್ಯೂಸ್ ಕಡಬ)newskadaba.com ಕಾಪು, ಜ.09. ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿನ ಅಕ್ರಮ ಕಸಾಯಿ ಖಾನೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿಗೆ ತಲುಪಿ ಅಲ್ಲಿನ ಫ್ಯಾಕ್ಟರಿಯ ಸಮೀಪ ಮರೆಯಲ್ಲಿ ನಿಂತು ನೋಡಿದಾಗಿ ಹಿಂಭಾಗದ ಹಾದಿಯಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ದನದ ಮಾಂಸವನ್ನು ಕಟಾವು ಮಾಡುತ್ತಿರುವುದು ಕಮಡುಬಂದಿದೆ ಎನ್ನಲಾಗಿದೆ. ಈ ವೇಳೆ ಮೊಹಮ್ಮದ್ ಆರೀಫ್ ಹಾಗೂ ಇನ್ನೋರ್ವ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಸುಮಾರು 200

ಉಡುಪಿ: ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ ➤ ಇಬ್ಬರು ಆರೋಪಿಗಳು ಪರಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮೀನುಗಾರಿಕೆಗೆ ತೆರಳಿದ್ದ ಬೋಟ್ ಬಂಡೆಗೆ ಢಿಕ್ಕಿ ➤ ಐವರು ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ) newskadaba.com ಕಾಪು, ಜ. 06. ಕಾಪುವಿನಿಂದ ಎಂಟು ಮೈಲಿ ನಾಟಿಕಲ್ ದೂರದ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ವೊಂದು ಬಂಡೆಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿರುವ ಘಟನೆ ಕಾಪುವಿನಲ್ಲಿ ವರದಿಯಾಗಿದೆ. ಘಟನೆಯ ವೇಳೆ ಬೋಟ್ ನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟ್ ಸಿಬ್ಬಂದಿ ರಕ್ಷಿಸಿದ್ದಾರೆ ಎನ್ನಲಾಗಿದೆ. ಬಾಡನಿಡಿಯೂರಿನ ಭಾಸ್ಕರ್ ಎಂ. ಪುತ್ರನ್ ಎಂಬವರ ಮಾಲಿಕತ್ವದ “ಸ್ವರ್ಣಗೈರಿ” ಬೋಟ್ ಮಲ್ಪೆ ಬಂದರ್ ನಿಂದ ಮೀನುಗಾರಿಕೆಗೆ ತೆರಳಿತ್ತು ಎಂದು ತಿಳಿದುಬಂದಿದೆ. ಬಂಡೆಗೆ ಡಿಕ್ಕಿ ಹೊಡೆದು ಅಪಘಾತಕ್ಕಿಡಾಗಿ ಬೋಟ್ ನ ಒಳಗೆ

ಮೀನುಗಾರಿಕೆಗೆ ತೆರಳಿದ್ದ ಬೋಟ್ ಬಂಡೆಗೆ ಢಿಕ್ಕಿ ➤ ಐವರು ಮೀನುಗಾರರ ರಕ್ಷಣೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top