ಹದಗೆಟ್ಟ ಕಲ್ಲಾಜೆ – ಅಂತಿಬೆಟ್ಟು ರಸ್ತೆಗೆ ಊರವರಿಂದಲೇ ಕಾಯಕಲ್ಪ ► ಸಡಕ್ ರಸ್ತೆಗೆ ಕಾದು ಸುಸ್ತಾಗಿ ಕೊನೆಗೆ ಶ್ರಮದಾನದ ಮೊರೆ ಹೋದ ಗ್ರಾಮಸ್ಥರು
(ನ್ಯೂಸ್ ಕಡಬ) newskadaba.com ಕಡಬ, ಜೂ.17. ಮರ್ದಾಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಅಂತಿಬೆಟ್ಟು ಮಾರ್ಗವಾಗಿ ಕೋರಿಯಾರ್ ಮೂಲಕ ಕೋಡಿಂಬಾಳ ಸೇರಬೇಕಾದ ಗ್ರಾಮ ಸಡಕ್ ರಸ್ತೆಯು ಮಂಜೂರಾಗಿ ವರ್ಷಗಳೇ ಕಳೆದರೂ ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಈ ಭಾಗದ ಗ್ರಾಮಸ್ಥರೆಲ್ಲ ಸೇರಿಕೊಂಡು ಕೆಸರುಮಯ, ಹೊಂಡ, ಗುಂಡಿಗಳಿಂದ ಕೂಡಿದ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ ಘಟನೆ ಭಾನುವಾರದಂದು ನಡೆದಿದೆ. ಕಲ್ಲಾಜೆಯಿಂದ ಅಂತಿಬೆಟ್ಟುವರೆಗಿನ ಸುಮಾರು ೫೦ಕ್ಕೂ ಮೆಲ್ಪಟ್ಟ ಗ್ರಾಮಸ್ಥರು ಒಟ್ಟಾಗಿ ಬೆಳಿಗ್ಗೆಯಿಂದ ಸಂಜೆಯ ತನಕ ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ಥಿಗೊಳಿಸಿದ್ದಾರೆ. […]




