Kadaba

ಉಲ್ಲಾಳ ಬೀಚ್‍ನಲ್ಲಿ ಯೋಗ ಮತ್ತು ಸ್ವಚ್ಚತಾ ಅಭಿಯಾನ

(ನ್ಯೂಸ್ ಕಡಬ) newskadaba.com ಉಲ್ಲಾಳ ನ. 26: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಉಳ್ಳಾಲ ಘಟಕ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರರಕ್ಷಣಾ ಪಡೆಯ ಸಂಯುಕ್ತ ಆಶ್ರಯದಲ್ಲಿ ನ. 22 ರಂದು ಉಲ್ಲಾಳ ಬೀಚ್‍ನ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ಪ್ರಾಣಾಯಾಮ, ಯೋಗ ಶಿಬಿರ ಕಾರ್ಯಕ್ರಮವು ನಡೆಯಿತು. ನ.22 ರ ಭಾನುವಾರದಂದು ಉಳ್ಳಾಲ ಕಡಲತೀರದಲ್ಲಿ ಬೆಳಗ್ಗೆ 7.00 ರಿಂದ 8.30 ರವರೆಗೆ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಇವರ ನೇತೃತ್ವದಲ್ಲಿ ಪ್ರಾಣಾಯಾಮ ಮತ್ತು ಯೋಗ […]

ಉಲ್ಲಾಳ ಬೀಚ್‍ನಲ್ಲಿ ಯೋಗ ಮತ್ತು ಸ್ವಚ್ಚತಾ ಅಭಿಯಾನ Read More »

ಕರಾವಳಿ

ಶೌರ್ಯ ಪ್ರಶಸ್ತಿ ಪುರಸ್ಕೃತ ಕೊರೋನಾ ವಾರಿಯರ್‍ ಡಾ. ಪಿ.ಆರ್.ಎಸ್.ಚೇತನ್ ರವರಿಗೆ‌ ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು ನ. 26: ಕೋವಿಡ್ ಸಂದರ್ಭ ದೇಶದೆಲ್ಲೆಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ ,ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಪಡೆದ ಕೊರೋನಾ ವಾರಿಯರ್‍ಸ್ ಡಾ. ಪಿ.ಆರ್.ಎಸ್.ಚೇತನ್‌ರಿಗೆ ಮಂಗಳೂರಿನಲ್ಲಿ ಸನ್ಮಾನ ಮಾಡಲಾಯಿತು ಪ್ರಶಸ್ತಿಗಳ ಸರದಾರ ರಾಷ್ಟ್ರದ ಅತ್ಯೂನ್ನತ ಪ್ರಶಸ್ತಿಯಾದ ಶೌರ್ಯ ಪ್ರಶಸ್ತಿ ಪಡೆದ ಕೊರೋನಾ ವಾರಿಯರ್‍ಸ್ ಇವರಾಗಿದ್ದಾರೆ . ಕೊರೋನಾ ಸೈನಿಕ್ ಟಾಸ್ಕ್ ಫೋರ್‍ಸ್‌ನ ಚೆಯರ್ ಪರ್ಸನ್ ಹಾಗೂ ಕಮಂಡಿಗ್ (HQ & Ops ) ಸಿವಿಲ್ ಡಿಫೆನ್ಸ್‌ನ ಸಹಾಯಕ ಮುಖ್ಯ ಅಧಿಕಾರಿ ಲಯನ್.ಡಾ. ಪಿ.ಆರ್.ಎಸ್.ಚೇತನ್ ಅವರ

ಶೌರ್ಯ ಪ್ರಶಸ್ತಿ ಪುರಸ್ಕೃತ ಕೊರೋನಾ ವಾರಿಯರ್‍ ಡಾ. ಪಿ.ಆರ್.ಎಸ್.ಚೇತನ್ ರವರಿಗೆ‌ ಸನ್ಮಾನ Read More »

ಕರಾವಳಿ, ಕರ್ನಾಟಕ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಳಸಿ ಪೂಜೆ

(ನ್ಯೂಸ್ ಕಡಬ) newskadaba.com ಪುತ್ತೂರು ನ. 26: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ತುಳಸಿ ಪೂಜೆ ಕಾರ್ಯಕ್ರಮ ನಡೆಯಿತು.     ದೇವಳದ ಪ್ರಧಾನ ಅರ್ಚಕ ವಸಂತ ಕುಮಾರ್ ಕೆದಿಲಾಯ ಅವರ ನೇತೃತ್ವದಲ್ಲಿ ದೇವಳದ ಬೆಳಗ್ಗಿನ ಪೂಜೆ, ನಿತ್ಯ ಬಲಿ ಉತ್ಸವದ ಬಳಿಕ ದೇವಳದ ಒಳಾಂಗಣದಲ್ಲಿರುವ ಮಾವಿನ ಎಲೆ ಮತ್ತು ಹೂವಿನಿಂದ ಅಲಂಕೃತಗೊಂಡ ತುಳಸಿ ಕಟ್ಟೆಯಲ್ಲಿ ತುಳಸಿ ಪೂಜೆ ನಡೆಯಿತು. ತುಳಸಿಗೆ ಹಾಲು, ಪಂಚಾಮೃತ ಅಭಿಷೇಕ, ಸುವಸ್ತುಗಳ ಸಮರ್ಪಣೆ ಮಾಡಿ ಪೂಜೆ ಮಾಡಲಾಯಿತು. ಪೂಜಾ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಳಸಿ ಪೂಜೆ Read More »

ಕರಾವಳಿ

ಮುರುಡೇಶ್ವರದಲ್ಲಿ ದೋಣಿಗಳ ಸ್ಥಳಾಂತರಕ್ಕೆ ವಿರೋಧ ➤ ಅಭಿವೃದ್ಧಿಪಡಿಸಲು ಸಹಕರಿಸುವಂತೆ ಅಧಿಕಾರಿಗಳಿಂದ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು ನ. 26:  ಪ್ರವಾಸಿ ತಾಣ ಮುರುಡೇಶ್ವರ ಸಮುದ್ರ ತೀರವನ್ನು ಅಭಿವೃದ್ಧಿ ಪಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ನಿರ್ಧಾರಕ್ಕೆ ಇಲ್ಲಿನ ಮೀನುಗಾರರ ವಿರೋಧ ಮುಂದುವರೆದಿದೆ. ಸಮುದ್ರ ಬೇಲೆಯ ಮೇಲೆ ನಿಲ್ಲಿಸಲಾಗಿರುವ ಮೀನುಗಾರಿಕಾ ದೋಣಿಗಳನ್ನು ಬದಿಗೆ ಸರಿಸಿ, ಅಂಗಡಿಗಳಿಗೆ ಅವಕಾಶ ಮಾಡಿಕೊಡುವ ಪ್ರಸ್ತಾಪಕ್ಕೆ ಮೀನುಗಾರರು ಒಪ್ಪುತ್ತಲೇ ಇಲ್ಲ.ವಿಶ್ವ ಪ್ರಸಿದ್ಧ ತಾಣವಾಗಿರುವ ಮುರುಡೇಶ್ವರವನ್ನು ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುತುವರ್ಜಿ ವಹಿಸಿ ಕಾರ್ಯಾಚರಣೆಗೆ ಇಳಿದಿದೆ. ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣದೊಂದಿಗೆ ಸಮುದ್ರ ತೀರದಲ್ಲಿಯೂ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು ಮುಂದಾಗಿದೆ ಮುರುಡೇಶ್ವರ

ಮುರುಡೇಶ್ವರದಲ್ಲಿ ದೋಣಿಗಳ ಸ್ಥಳಾಂತರಕ್ಕೆ ವಿರೋಧ ➤ ಅಭಿವೃದ್ಧಿಪಡಿಸಲು ಸಹಕರಿಸುವಂತೆ ಅಧಿಕಾರಿಗಳಿಂದ ಮನವಿ Read More »

ಕರಾವಳಿ, ಕರ್ನಾಟಕ

ಬಂಟ್ವಾಳ: ಅಕ್ರಮ ಮರ ಸಾಗಾಟ ಪತ್ತೆ

(ನ್ಯೂಸ್ ಕಡಬ) newskadaba.com ಬಂಟ್ವಾಳ ನ. 26: ಕಡೇ ಶಿವಾಲಯ ಗ್ರಾಮದ ಬುಡೋಳಿ ಎಂಬಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಬಂಟ್ವಾಳ ಅರಣ್ಯ ಇಲಾಖೆ ಸಿಬ್ಬಂದಿಗಳು ಪುತ್ತೂರು ವಲಯ ಅರಣ್ಯಾಧಿಕಾರಿಗಳ ಸಹಕಾರದೊಂದಿಗೆ ಪತ್ತೆ ಹಚ್ಚಿ ಲಾರಿ ಸಮೇತ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.     ಬಂಟ್ವಾಳ ವಲಯ ಅರಣ್ಯಾಧಿಕಾರಿಗಳಾದ ರಾಜೇಶ್ ಬಳೆಗಾರ, ಉಪವಲಯ ಅರಣ್ಯಾಧಿಕಾರಿಗಳಾದ ಪ್ರೀತಂ ಎಸ್, ಯಶೋಧರ, ಅರಣ್ಯ ರಕ್ಷಕರುಗಳಾದ ಲಕ್ಷ್ಮೀ ನಾರಾಯಣ. ಜಿತೇಶ್, ಸಿಬ್ಬಂದಿಗಳಾದ ಪ್ರವೀಣ್ ಕಲ್ಮಲೆ, ಭಾಸ್ಕರ, ಡಿ. ಜಯರಾಂ ಪಾಲ್ಗೊಂಡಿದ್ದರು.

ಬಂಟ್ವಾಳ: ಅಕ್ರಮ ಮರ ಸಾಗಾಟ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ➤ ರೌಡಿಶೀಟರ್ ಓರ್ವನ ಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 26: ಕಳೆದ ದಿನ ರಾತ್ರಿ  ರೌಡಿಶೀಟರ್‌ ಓರ್ವನನ್ನು ಭೀಕರವಾಗಿ ಹತ್ಯೆಗೈದ  ಘಟನೆ ಬೊಕ್ಕಪಟ್ಟಣದ ಕರ್ನಲ್‌ ಗಾರ್ಡನ್‌ ಒಳಗಡೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಇಂದ್ರಜೀತ್‌ (29)  ಎಂದು ಗುರುತಿಸಲಾಗಿದೆ.     ಈತ ರೌಡಿಶೀಟರ್‌ ಎಂದು ತಿಳಿದು ಬಂದಿದ್ದು, ಕಳೆದ ರಾತ್ರಿ ಈತನು ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು ಅಲ್ಲಿ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ. ರಾತ್ರಿ ಸುಮಾರು 2 ಗಂಟೆಗೆ ಕರ್ನಲ್‌ ಗಾರ್ಡನ್‌ ಬಳಿ ಈತನ ಹತ್ಯೆಗೈಯಲಾಗಿದೆ ಹಾಗೂ

ಮಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ➤ ರೌಡಿಶೀಟರ್ ಓರ್ವನ ಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಸುರತ್ಕಲ್ ಗಣೇಶಪುರ ವೃತ್ತಕ್ಕೆ ಕಾರು ಡಿಕ್ಕಿ ➤ ಅಪಾಯದಿಂದ ಪಾರಾದ ಚಾಲಕ

(ನ್ಯೂಸ್ ಕಡಬ) newskadaba.com ಮಂಗಳೂರು ನ. 26: ಸುರತ್ಕಲ್ ಬಳಿಯ ಕಾಟಿಪಳ್ಳ ಗಣೇಶಪುರ ವೃತ್ತಕ್ಕೆ ಬುಧವಾರ ತಡರಾತ್ರಿ ಕಾರು ಡಿಕ್ಕಿಯಾಗಿದೆ. ಪರಿಣಾಮ ಕಾರಿನ ಚಾಲಕನಿಗೆ ಗಾಯಾವಾಗಿದೆ. ಇತ್ತಿಚೇಗೆ ಮಂಗಳೂರಿನಲ್ಲಿ ಒಂದರ ಮೆಲೊಂದು ಅಪಘಾತಗಳು ಸಂಭವಿಸುತ್ತಲೆಯಿದೆ. ರಸ್ತೆಗಳಲ್ಲಿನ ತಿರುವುಗಳು, ಇಕ್ಕಾಟದ ಇಕ್ಕೆಲಗಳಿಂದ ಅಪಘಾತಗಳು ಹೆಚ್ಚುತಿದೆ.   ಕಾರು ಸುರತ್ಕಲ್ ನಿಂದ ಗಣೇಶಪುರ ಸರ್ಕಲ್ ಮೂಲಕ ಕಾಟಿಪಳ್ಳ ಕಡೆಗೆ ಚಲಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಗಣೇಶಪುರ ಸರ್ಕಲ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ವೃತ್ತಕ್ಕೆ ಹಾನಿಯಾಗಿದ್ದು, ಕಾರಿನ ಒಂದು ಭಾಗ ಜಖಂಗೊಂಡಿದೆ.

ಸುರತ್ಕಲ್ ಗಣೇಶಪುರ ವೃತ್ತಕ್ಕೆ ಕಾರು ಡಿಕ್ಕಿ ➤ ಅಪಾಯದಿಂದ ಪಾರಾದ ಚಾಲಕ Read More »

ಕರಾವಳಿ

ಉಡುಪಿ: ಸಚಿವ ಮಾಧುಸ್ವಾಮಿ ಶ್ರೀ ಕೃಷ್ಣಮಠಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಉಡುಪಿ ನ. 26: ಶ್ರೀಕೃಷ್ಣ ಮಠಕ್ಕೆ ಕಾನೂನು ಮತ್ತು ಸಂಸದೀಯ ಸಚಿವ ಜೆ.ಪಿ.ಮಾಧುಸ್ವಾಮಿ ಕಳೆದ ದಿನ ಭೇಟಿ ನೀಡಿದರು. ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸಿದ ಸಚಿವರು, ದೇವರ ದರ್ಶನ ಪಡೆದು ಪುರೋಹಿತ ಲಕ್ಷ್ಮೀಶಾಚಾರ್ಯ ಅವರಿಂದ ಪ್ರಸಾದ ಸ್ವೀಕರಿಸಿದರು.   ಸಚಿವರ ಭೇಟಿ ವೇಳೆ ಶಾಸಕ ಕೆ.ರಘುಪತಿ ಭಟ್,ವ್ಯವಸ್ಥಾಪಕ ಗೋವಿಂದ್ರಾಜ್ , ಪಿಆರ್ ಒ ಶ್ರೀಶ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.  

ಉಡುಪಿ: ಸಚಿವ ಮಾಧುಸ್ವಾಮಿ ಶ್ರೀ ಕೃಷ್ಣಮಠಕ್ಕೆ ಭೇಟಿ Read More »

ಕರಾವಳಿ, ಕರ್ನಾಟಕ

ಮಾಜಿ ಫುಟ್ ಬಾಲ್ ಆಟಗಾರ ಡಿಗೊ ಮರುಡೋನಾ ನಿಧನ

(ನ್ಯೂಸ್ ಕಡಬ) newskadaba.com  ನ. 26: ಫುಟ್ ಬಾಲ್ ದಂತಕಥೆ ಎಂದೇ ಪ್ರಸಿದ್ಧಿ ಪಡೆದಿರುವ ಅರ್ಜೆಂಟೀನಾ ದೇಶದ ಮಾಜಿ ಆಟಗಾರ ಡಿಗೊ ಮರುಡೋನಾ ರವರು ಹಲವು ವರ್ಷಗಳಿಂದ ಅಸೌಖ್ಯದಿಂದ ಅವರು ಕಳೆದ ದಿನ ಹೃದಯಾಘಾತದಿಂದ ನಿಧನರಾಗಿದ್ದಾರೆ.     ಅರ್ಜೆಂಟೀನಾ ರಾಷ್ಟ್ರೀಯ ಫುಟ್ ಬಾಲ್ ತಂಡಕ್ಕೆ ತಮ್ಮ ಹದಿನಾರನೇ ವಯಸ್ಸಿನಲ್ಲಿ, ಹಂಗೇರಿ ದೇಶದ ವಿರುದ್ಧ ಆಡುವುದರ ಮೂಲಕ ಪಾದಾರ್ಪಣೆ ಮಾಡಿದರು. ಆ ಬಳಿಕ ಅವರು ದೇಶದ ತಂಡದಲ್ಲಿ ಸ್ಥಾನ ಪಡೆದರು. 15 ನೇ ವಯಸ್ಸಿನ ಮೆರೆಡೋನ ಅರ್ಜೆಂಟಿನೋಸ್

ಮಾಜಿ ಫುಟ್ ಬಾಲ್ ಆಟಗಾರ ಡಿಗೊ ಮರುಡೋನಾ ನಿಧನ Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ಅಶ್ಲೀಲ ಫೋಟೊ ವೈರಲ್ ಬೆದರಿಕೆ ➤ ಕಿಲಾಡಿ ಆರೋಪಿಗಳಿಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು ನ. 25: ಫೇಸ್ಬುಕ್ ನಲ್ಲಿ ಮಹಿಳೆಯರ ಹೆಸರಿನಲ್ಲಿ ಖಾತೆ ತೆರೆದು ನಗರದ ಕೆಪಿಟಿಯ ವ್ಯಕ್ತಿಯನ್ನು ವಂಚಿಸಿದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಸಾಕ್ಷಿ ರಾಜ್ ಹೆಸರಿನಲ್ಲಿ ಖಾತೆ ತೆರೆದ ಆರೋಪಿಗಳು ಕೆಪಿಟಿ ಯ ರಾಜೇಶ್ ಎಂಬವರಿಗೆ ಮೆಸೇಜ್ ಮಾಡಿ ಮಹಿಳೆಯ ಅಶ್ಲೀಲ ಫೋಟೊಗಳನ್ನು ರವಾನಿಸಿದ್ದರು. ಅಲ್ಲದೆ, ರಾಜೇಶ್ ಅವರಲ್ಲೂ ತಮ್ಮ ಅಶ್ಲೀಲ ಫೋಟೊ ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಮಹಿಳೆಯೇ ಇರಬೇಕೆಂದು ನಂಬಿ ರಾಜೇಶ್ ತನ್ನ ಅಶ್ಲೀಲ ಫೋಟೊಗಳನ್ನೂ ಫೇಸ್ಬುಕ್ ಮೆಸೆಂಜರ್ ಮೂಲಕ ರವಾನಿಸಿದ್ದಾರೆ.

ಮಂಗಳೂರು: ಅಶ್ಲೀಲ ಫೋಟೊ ವೈರಲ್ ಬೆದರಿಕೆ ➤ ಕಿಲಾಡಿ ಆರೋಪಿಗಳಿಗೆ ನ್ಯಾಯಾಂಗ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top