ಸುರತ್ಕಲ್ ಗಣೇಶಪುರ ವೃತ್ತಕ್ಕೆ ಕಾರು ಡಿಕ್ಕಿ ➤ ಅಪಾಯದಿಂದ ಪಾರಾದ ಚಾಲಕ

(ನ್ಯೂಸ್ ಕಡಬ) newskadaba.com ಮಂಗಳೂರು . 26: ಸುರತ್ಕಲ್ ಬಳಿಯ ಕಾಟಿಪಳ್ಳ ಗಣೇಶಪುರ ವೃತ್ತಕ್ಕೆ ಬುಧವಾರ ತಡರಾತ್ರಿ ಕಾರು ಡಿಕ್ಕಿಯಾಗಿದೆ. ಪರಿಣಾಮ ಕಾರಿನ ಚಾಲಕನಿಗೆ ಗಾಯಾವಾಗಿದೆ. ಇತ್ತಿಚೇಗೆ ಮಂಗಳೂರಿನಲ್ಲಿ ಒಂದರ ಮೆಲೊಂದು ಅಪಘಾತಗಳು ಸಂಭವಿಸುತ್ತಲೆಯಿದೆ. ರಸ್ತೆಗಳಲ್ಲಿನ ತಿರುವುಗಳು, ಇಕ್ಕಾಟದ ಇಕ್ಕೆಲಗಳಿಂದ ಅಪಘಾತಗಳು ಹೆಚ್ಚುತಿದೆ.

 

ಕಾರು ಸುರತ್ಕಲ್ ನಿಂದ ಗಣೇಶಪುರ ಸರ್ಕಲ್ ಮೂಲಕ ಕಾಟಿಪಳ್ಳ ಕಡೆಗೆ ಚಲಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಗಣೇಶಪುರ ಸರ್ಕಲ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ವೃತ್ತಕ್ಕೆ ಹಾನಿಯಾಗಿದ್ದು, ಕಾರಿನ ಒಂದು ಭಾಗ ಜಖಂಗೊಂಡಿದೆ. ಕಾರಿನ ಚಾಲಕನಿಗೆ ಗಾಯಾಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಇನ್ನು ಘಟನಾ ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

Scroll to Top