Kadaba

ಕಟ್ಟಡ ನೆಲಸಮ ಪ್ರಕರಣ, ಕಂಗನಾಗೆ ಗೆಲುವು ➤ ಬಿಎಂಸಿಗೆ ಹೈಕೋರ್ಟ್‌ ಚಾಟಿ, ವಿಲನ್‌ಗಳಿಗೆ ಕಂಗನಾ ಧನ್ಯವಾದ

(ನ್ಯೂಸ್ ಕಡಬ) newskadaba.com ಮುಂಬೈ ನ. 27: ಬೃಹನ್‌ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ವಿರುದ್ಧದ ಕಾನೂನು ಹೋರಾಟದಲ್ಲಿ ಬಾಂಬೆ ಹೈಕೋರ್ಟ್‌ ನಟಿ ಕಂಗನಾ ರಾಣಾವತ್‌ ಪರವಾಗಿ ತೀರ್ಪು ನೀಡಿದ್ದು ಮಹಾರಾಷ್ಟ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕಂಗನಾ ರಣಾವತ್‌ ಅವರ ಕಟ್ಟಡವನ್ನು ಒಡೆದಿರುವ ಬಿಎಂಸಿ ಕ್ರಮ ದುರುದ್ದೇಶದಿಂದ ಕೂಡಿದೆ ಎಂದು ಹೇಳಿದ ಕೋರ್ಟ್‌ ಕಂಗನಾ ಸರ್ಕಾರದಿಂದ ಪರಿಹಾರ ಪಡೆಯಲು ಅರ್ಹರು ಎಂದು ಹೇಳಿದೆ. ನ್ಯಾ.ಎಸ್.ಜೆ.ಕಾತಾವಾಲ ಮತ್ತು ಆರ್.ಐ.ಚಾಗ್ಲಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ವ್ಯಕ್ತಿಯ ವಿರುದ್ಧ ಅಧಿಕಾರಿಗಳು ತೋಳ್ಬಲವನ್ನು ಪ್ರದರ್ಶಿಸುವುದನ್ನು ಒಪ್ಪಲಾಗದು. ಇದು […]

ಕಟ್ಟಡ ನೆಲಸಮ ಪ್ರಕರಣ, ಕಂಗನಾಗೆ ಗೆಲುವು ➤ ಬಿಎಂಸಿಗೆ ಹೈಕೋರ್ಟ್‌ ಚಾಟಿ, ವಿಲನ್‌ಗಳಿಗೆ ಕಂಗನಾ ಧನ್ಯವಾದ Read More »

ರಾಷ್ಟ್ರೀಯ ನ್ಯೂಸ್

ಉಡುಪಿ: ಯೋಗೀಶ್ವರ್ ಪರ ಡಿಸಿಎಂ ಅಶ್ವತ್ಥ ನಾರಾಯಣ್ ಬ್ಯಾಟಿಂಗ್

(ನ್ಯೂಸ್ ಕಡಬ) newskadaba.com ಉಡುಪಿ, ನ. 27: ಯೋಗೀಶ್ವರ್ ಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಉಡುಪಿಯಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ್ ಯೋಗೀಶ್ ಪರ ಬ್ಯಾಟಿಂಗ್ ಮಾಡಿದ್ದಾರೆ.ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಅನ್ನೋ ಒತ್ತಾಯ ಇದೆ ಎಂದು ಹೇಳಿರುವ ಡಿಸಿಎಂ, ಅವರು ಬಹಳಷ್ಟು ಜವಾಬ್ದಾರಿ ಹೊತ್ತು‌ ಕಾರ್ಯನಿರ್ವಹಿಸಿದ್ದಾರೆ.ಅವರಿಗೂ ಸಚಿವ ಸ್ಥಾನದ ಅಪೇಕ್ಷೆ ಇದೆ.ಅವರಿಗೆ ಸಚಿವ ಸ್ಥಾನ ಸಿಗಲಿ ಅನ್ನೋದು ನಮ್ಮ ಅಭಿಪ್ರಾಯ ಇದೆ ಎಂದು ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ,ಕೇಂದ್ರದ

ಉಡುಪಿ: ಯೋಗೀಶ್ವರ್ ಪರ ಡಿಸಿಎಂ ಅಶ್ವತ್ಥ ನಾರಾಯಣ್ ಬ್ಯಾಟಿಂಗ್ Read More »

ಕರಾವಳಿ

ಮಂಗಳೂರು : ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 27: ಬಾಳೆಹೊನ್ನೂರಿನ ಕೆ.ಎಚ್ ಲತೀಫ್ ಎಂಬವರು (35) ಸೆಪ್ಟೆಂಬರ್ 13ರಿಂದ ಕಾಣೆಯಾಗಿದ್ದು,ಈ ಬಗ್ಗೆ ಪಣಂಬೂರು ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೃಢಕಾಯ ಶರೀರ ಹೊಂದಿದ್ದು, 5.6 ಅಡಿ ಎತ್ತರವಿದ್ದು, ಬಿಳಿ ಮೈಬಣ್ಣ ಹೊಂದಿದ್ದಾರೆ, ಕನ್ನಡ, ತುಳು, ಹಿಂದಿ, ಮಲಯಾಳಿ ತೆಲುಗು ಭಾಷೆ ಬಲ್ಲವರಾಗಿದ್ದಾರೆ.ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಪಣಂಬೂರು ಪೊಲೀಸ್‍ ಠಾಣೆದೂ.ಸಂ: 0824-2220530, 9480805355, 9480805331 ಅಥವಾಮಂಗಳೂರು ಕಂಟ್ರೋಲ್‍ರೂಮ್‍ದೂ.ಸಂ: 0824-2220800ಗೆ ಮಾಹಿತಿಯನ್ನು ನೀಡುವಂತೆ ಪಣಂಬೂರು ಪೊಲೀಸ್‍ ಠಾಣೆಯ ಸಬ್‍ ಇನ್ಸ್‍ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು : ವ್ಯಕ್ತಿ ನಾಪತ್ತೆ Read More »

ಕರಾವಳಿ

‘ಉಗ್ರ ಸಂಘಟನೆ ಲಷ್ಕರ್’ ಪರ ಬರಹ ➤ ಮಂಗಳೂರು ನಗರದಲ್ಲಿ ವಿ.ಹಿಂ.ಪ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 27: ನಿಷೇಧಿತ ಉಗ್ರ ಸಂಘಟನೆ ಪರ ನಗರದ ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಜೈಕಾರ ಹಾಗೂ ಸಂಘಪರಿವಾರಕ್ಕೆ ಎಚ್ಚರಿಕೆಯ ನೀಡಿದ ಗೋಡೆ ಬರಹದ ವಿರುದ್ಧ ವಿಶ್ವ ಹಿಂದೂ ಪರಿಷತ್ ನಗರದ ಮಲ್ಲಿಕಟ್ಟೆ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿತು. 50 ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ದೇಶ ವಿರೋಧಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.‌ ಈ ಸಂದರ್ಭ ವಿಹಿಂಪ ಮುಖಂಡ ಗೋಪಾಲ್ ಕುತ್ತಾರ್ ಮಾತನಾಡಿ, ಆರೋಪಿಗಳನ್ನ ಶೀಘ್ರವೇ ಬಂಧಿಸಿ, ಈ ದುಷ್ಕೃತ್ಯದ ಹಿಂದೆ ಇರೋ

‘ಉಗ್ರ ಸಂಘಟನೆ ಲಷ್ಕರ್’ ಪರ ಬರಹ ➤ ಮಂಗಳೂರು ನಗರದಲ್ಲಿ ವಿ.ಹಿಂ.ಪ ಪ್ರತಿಭಟನೆ Read More »

ಕರಾವಳಿ

ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 10 ಮಂದಿಯಲ್ಲಿ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಕಡಬ ನ. 27: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 10 ಮಂದಿಯಲ್ಲಿ ಕೋವಿಡ್ 19 ದೃಢಪಟ್ಟಿದೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ 50 ವರ್ಷದ ವ್ಯಕ್ತಿ, 22 ವರ್ಷದ ಯುವತಿಯಲ್ಲಿ ಕೊರೋನಾ ದೃಢಪಟ್ಟಿದೆ. ಇನ್ನು ಪುತ್ತೂರು ತಾಲೂಕಿನ ಮರೀಲ್ ನಿವಾಸಿ 53 ವರ್ಷದ ಮಹಿಳೆ, ಪುರುಷರಕಟ್ಟೆ ನಿವಾಸಿ 27 ವರ್ಷದ ಮಹಿಳೆ, ಮುಂಡೂರು ನಿವಾಸಿ 19 ವರ್ಷದ ಯುವಕ, ಒಳಮೊಗ್ರು ನಿವಾಸಿ 43 ವರ್ಷದ ಮಹಿಳೆ, 25 ವರ್ಷದ

ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 10 ಮಂದಿಯಲ್ಲಿ ಕೋವಿಡ್ ದೃಢ Read More »

ಕರಾವಳಿ

ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಘೋಷಣೆ

(ನ್ಯೂಸ್ ಕಡಬ) newskadaba.com ವಿಜಯನಗರ ನ. 27: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಅಸ್ತು ಎಂದಿದೆ. ಸಚಿವ ಸಂಪುಟ ಸಭೆಯಲ್ಲಿಂದು ಅಧಿಕೃತವಾಗಿ ಅನುಮೋದನೆ ಪಡೆದುಕೊಂಡ ಬಳಿಕ ವಿಜಯನಗರ 31ನೇ ಜಿಲ್ಲೆ ಎಂದು ಸಚಿವ ಮಾಧುಸ್ವಾಮಿ ಅವರು ಘೋಷಣೆ ಮಾಡಿದರು.       ಈ ಮೂಲಕ ಸಚಿವ ಆನಂದ್ ಸಿಂಗ್ ಅವರ ಬಹುಕಾಲದ ಬೇಡಿಕೆ ಕೊನೆಗೂ ಈಡೇರಿದೆ. ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆ ರಚನೆ, ರೂಪುರೇಷೆಗಳ

ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಘೋಷಣೆ Read More »

ಕರ್ನಾಟಕ

ಕುದುರೆ ರೇಸ್ ಜೂಜು ➤ ನಾಲ್ವರು ಆರೋಪಿಗಳು ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 27: ಸಿಸಿಬಿ ಪೊಲೀಸರು ಕುದುರೆ ರೇಸ್ ಜೂಜು ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ 20 ಲಕ್ಷ ರೂಪಾಯಿ ಹಾಗೂ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡ ಆರೋಪಿಗಳನ್ನು ವಿಜಯ ನಗರದ ಸತ್ಯನಾರಾಯಣ,ಕುಮಾರ, ಶ್ರೀಕಾಂತ್ ಹಾಗೂ ಶೇಷಾದ್ರಿಪುರಂ ನಿವಾಸಿ ಸಂದೀಪ್ ಎಂದು ಗುರುತಿಸಲಾಗಿದೆ.     ಆರ್ ಪಿ ಸಿ ಬಡಾವಣೆಯ ಮನೆಯೊಂದರಲ್ಲಿ ಬೆಟ್ಟಿಂಗ್ ಕಟ್ಟಿ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ 20 ಲಕ್ಷ ರೂ

ಕುದುರೆ ರೇಸ್ ಜೂಜು ➤ ನಾಲ್ವರು ಆರೋಪಿಗಳು ಖಾಕಿ ಬಲೆಗೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೋಡಿಂಬಾಳ: ಶಾಸಕ ಎಸ್ ಅಂಗಾರರವರಿಂದ ಮೂರಾಜೆ-ಪಟ್ನ-ಬೇರಿಕೆ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕೋಡಿಂಬಾಳ ನ. 27: ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ ರವರು ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಮೂರಾಜೆ-ಪಟ್ನ-ಬೇರಿಕೆ ಮೂಲಕ ಕೋಡಿಂಬಾಳ ಸಂಪರ್ಕಿಸುವ ರಸ್ತೆಯನ್ನು ಕಳೆದ ದಿನ ಉದ್ಘಾಟಿಸಿದರು. ಬಳಿಕ ಮಾತನಡಿದ ಶಾಸಕ ಎಸ್ ಅಂಗಾರ ರವರು ರಸ್ತೆ ಅಭಿವೃದ್ಧಿಗೆ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಇನ್ನಷ್ಟು ರಸ್ತೆಗಳು ಮೇಲ್ದರ್ಜೆರುವ ಮೂಲಕ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು. ಇನ್ನು

ಕೋಡಿಂಬಾಳ: ಶಾಸಕ ಎಸ್ ಅಂಗಾರರವರಿಂದ ಮೂರಾಜೆ-ಪಟ್ನ-ಬೇರಿಕೆ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ Read More »

ಕರಾವಳಿ

ಅರಬ್ಬೀ ಸಮುದ್ರದಲ್ಲಿ MiG-29K ವಿಮಾನ ಪತನ

(ನ್ಯೂಸ್ ಕಡಬ) newskadaba.com ನವದೆಹಲಿ ನ. 27: ಕಳೆದ ದಿನ 5 ಗಂಟೆ ಸುಮಾರಿಗೆ ಅರಬ್ಬಿ ಸಮುದ್ರದ ಬಳಿ ಹಾರಾಟ ನಡೆಸುತ್ತಿದ್ದ MiG-29K ತರಬೇತಿ ವಿಮಾನ ಅಪಘಾತಕ್ಕೀಡಾಗಿದೆ ಅಂತ ಭಾರತೀಯ ನೌಕಾ ಪಡೆ ತಿಳಿಸಿದೆ.   ಘಟನೆ ವೇಳೆ ಓರ್ವ ಪೈಲಟ್​ನನ್ನು ರಕ್ಷಿಸಲಾಗಿದ್ದು, ಮತ್ತೋರ್ವ ಪೈಲಟ್​ಗಾಗಿ ಏರ್​​ ಹಾಗೂ ಸರ್ಫೇಸ್​ ಘಟಕದಿಂದ ಹುಟುಕಾಟ ನಡೆಸಲಾಗ್ತಿದೆ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ. ಕಳೆದ ಒಂದು ವರ್ಷದಲ್ಲಿ ಮಿಗ್ 29ಏಯ ಮೂರನೇ ಅಪಘಾತ ಪ್ರಕರಣ ಇದಾಗಿದೆ. ಕಳೆದ ನವೆಂಬರ್

ಅರಬ್ಬೀ ಸಮುದ್ರದಲ್ಲಿ MiG-29K ವಿಮಾನ ಪತನ Read More »

ರಾಷ್ಟ್ರೀಯ ನ್ಯೂಸ್

ಅಮಾನುಷವಾಗಿ ಜಾನುವಾರು ಸಾಗಾಟ ➤ ಐದು ದನಗಳ ರಕ್ಷಣೆ,ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ ನ. 27: ಅಮಾನುಷ ರೀತಿಯಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಓಮ್ನಿ ಕಾರನ್ನು ಮೂಡುಬಿದಿರೆ ಪೊಲೀಸರು ಗುರುವಾರ ಬೆಳಗ್ಗೆ ತಡೆದಿದ್ದು, ಐದು ದನಗಳನ್ನು ರಕ್ಷಿಸಿದ್ದು, ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.   ಕಾರ್ಕಳ ಕಡೆಯಿಂದ ಮೂಡುಬಿದಿರೆ ಮಾರ್ಗವಾಗಿ ಬೆಳ್ತಂಗಡಿ ಕಡೆಗೆ ಹಿಂಸಾತ್ಮಕವಾಗಿ ದನಗಳನ್ನು ತುಂಬಿಸಿ ಅತೀ ವೇಗವಾಗಿ ಹೋಗುತ್ತಿದ್ದ ಓಮ್ನಿ ಕಾರನ್ನು ಪೊಲೀಸರು ಅನುಮಾನಗೊಂಡು ಪೇಟೆಯ ಬಜಾಜ್ ಶೋರೂಂ ಬಳಿಯ ಅಡ್ಡರಸ್ತೆಯಲ್ಲಿ ತಡೆದಿದ್ದಾರೆ. ಕಾರು ನಿಲ್ಲಿಸಿ ಚಾಲಕ ಸಹಿತ ಇಬ್ಬರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಅಮಾನುಷವಾಗಿ ಜಾನುವಾರು ಸಾಗಾಟ ➤ ಐದು ದನಗಳ ರಕ್ಷಣೆ,ಆರೋಪಿಗಳು ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top