ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 10 ಮಂದಿಯಲ್ಲಿ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಕಡಬ . 27: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 10 ಮಂದಿಯಲ್ಲಿ ಕೋವಿಡ್ 19 ದೃಢಪಟ್ಟಿದೆ.

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ 50 ವರ್ಷದ ವ್ಯಕ್ತಿ, 22 ವರ್ಷದ ಯುವತಿಯಲ್ಲಿ ಕೊರೋನಾ ದೃಢಪಟ್ಟಿದೆ. ಇನ್ನು ಪುತ್ತೂರು ತಾಲೂಕಿನ ಮರೀಲ್ ನಿವಾಸಿ 53 ವರ್ಷದ ಮಹಿಳೆ, ಪುರುಷರಕಟ್ಟೆ ನಿವಾಸಿ 27 ವರ್ಷದ ಮಹಿಳೆ, ಮುಂಡೂರು ನಿವಾಸಿ 19 ವರ್ಷದ ಯುವಕ, ಒಳಮೊಗ್ರು ನಿವಾಸಿ 43 ವರ್ಷದ ಮಹಿಳೆ, 25 ವರ್ಷದ ಯುವಕ, 23 ವರ್ಷದ ಯುವಕ, ಸರ್ವೆ ನಿವಾಸಿ 30 ವರ್ಷದ ವ್ಯಕ್ತಿ, ಬೆಟ್ಟಂಪಾಡಿ ನಿವಾಸಿ 28 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಪತ್ತೆಯಾಗಿದೆ.

 

Scroll to Top