Kadaba

ವಿಶೇಷ ಪೊಲೀಸ್ ತಂಡದಿಂದ ಐವರು ಉಗ್ರರ ಅರೆಷ್ಟ್

(ನ್ಯೂಸ್ ಕಡಬ) newskadaba.com ದೆಹಲಿ , ಡಿ. 07:ದೆಹಲಿ ಪೊಲೀಸರ ವಿಶೇಷ ತಂಡ ಇಂದು ನಗರದ ಶಕಾರ್ ಪುರ ಪ್ರದೇಶದಲ್ಲಿ ಐವರು ಉಗ್ರರನ್ನು ಬಂಧಿಸಿದೆ. ಬಂಧಿತ ಐವರು ಉಗ್ರರ ಪೈಕಿ ಇಬ್ಬರು ಪಂಜಾಬ್ ಮೂಲದವರು, ಮೂವರು ಕಾಶ್ಮೀರದವರು ಎಂದು ತಿಳಿದುಬಂದಿದೆ. ಬಂಧಿತ ಐವರು ಖಲಿಸ್ತಾನ್ ನ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದ್ದು, ಅವರಿಂದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮಧ್ಯೆ, ಭಯೋತ್ಪಾದಕರ ಬಂಧನದ ಹಿನ್ನೆಲೆಯಲ್ಲಿ ನಗರ ಪೊಲೀಸರು ತೀವ್ರ ನಿಗಾ ವನ್ನು ತೀವ್ರಗೊಳಿಸಿದ್ದಾರೆ. ಇದಕ್ಕೂ ಮುನ್ನ […]

ವಿಶೇಷ ಪೊಲೀಸ್ ತಂಡದಿಂದ ಐವರು ಉಗ್ರರ ಅರೆಷ್ಟ್ Read More »

ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ :ಎರಡು ಕಾರುಗಳ ನಡುವೆ ಪರಸ್ಪರ ಢಿಕ್ಕಿ ➤ ಪ್ರಯಾಣಿಕರಿಗೆ ಗಾಯ,ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ನಿಡ್ಲೆ, ಡಿ. 07: ನಿಡ್ಲೆ ಕುದ್ರಾಯ ಸೇತುವೆ ಬಳಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರು ಗಾಯಗೊಂಡ ಘಟನೆ ಡಿ.7 ರ ಇಂದು ಮುಂಜಾನೆ ನಡೆದಿದೆ. ಧರ್ಮಸ್ಥಳದ ಪ್ರಯಾಣಿಕರು ಧರ್ಮಸ್ಥಳದಿಂದ ಕೊಕ್ಕಡದ ಕಡೆಗೆ ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೆಂಗಳೂರಿನಿಂದ ಧರ್ಮಸ್ಥಳ ಕಡೆಗೆ ಪ್ರಯಾಣಿಸುತ್ತಿದ್ದ ಸ್ಕೋಡಾ ವಾಹನ ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಎರಡೂ ವಾಹನಗಳಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದೆ. ಕೂಡಲೇ ಅವರನ್ನು ಉಜಿರೆ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ

ಬೆಳ್ತಂಗಡಿ :ಎರಡು ಕಾರುಗಳ ನಡುವೆ ಪರಸ್ಪರ ಢಿಕ್ಕಿ ➤ ಪ್ರಯಾಣಿಕರಿಗೆ ಗಾಯ,ಆಸ್ಪತ್ರೆಗೆ ದಾಖಲು Read More »

ಕರಾವಳಿ

ಹಳೆಯಂಗಡಿ ಬಳಿ ಟೆಂಪೋ ಡಿಕ್ಕಿ ಪ್ರಕರಣ ➤ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಮುಲ್ಕಿ, ಡಿ. 07: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಕೆನರಾ ಬ್ಯಾಂಕ್ ಬಳಿ ಕಳೆದ ದಿನ ಬೆಳಿಗ್ಗೆ ಟೆಂಪೋ ಡಿಕ್ಕಿ ಹೊಡೆದು ನಡೆದ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಹಳೆಯಂಗಡಿ ಬಸ್ ನಿಲ್ದಾಣ ಬಳಿಯ ನಿವಾಸಿಗಳಾದ ತಾಯಿ ಸುಖಲತಾ(44) ಅವರ ಮಗ ಚಿರಾಗ್(10) ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಉಡುಪಿ ಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಟೆಂಪೋ ಹಳೆಯಂಗಡಿ ಸಮೀಪಿಸುತ್ತಿದಂತೆಯೇ ಚಾಲಕನ ನಿಯಂತ್ರಣ ತಪ್ಪಿ ನಡೆದುಕೊಂಡು ಹೋಗುತ್ತಿದ್ದ ತಾಯಿ ಮತ್ತು ಮಗನಿಗೆ ಡಿಕ್ಕಿ ಹೊಡೆದು ಬಳಿಕ

ಹಳೆಯಂಗಡಿ ಬಳಿ ಟೆಂಪೋ ಡಿಕ್ಕಿ ಪ್ರಕರಣ ➤ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಮಹಿಳೆ ಮೃತ್ಯು Read More »

ಕರಾವಳಿ

ಬಳ್ಪ: ತ್ರಿಶೂಲಿನೀ ದುರ್ಗಾಪರಮೇಶ್ವರಿ ಜಾತ್ರಾ ಆಮಂತ್ರಣ ಪತ್ರ, ಕ್ಯಾಲೆಂಡರ್ ಅನಾವರಣ

(ನ್ಯೂಸ್ ಕಡಬ) newskadaba.com ಬಲ್ಪ, ಡಿ. 07: ಬಳ್ಪದ ತ್ರಿಶೂಲಿನೀ ದುರ್ಗಾಪರಮೇಶ್ವರಿ ಜಾತ್ರಾ ಆಮಂತ್ರಣ ಪತ್ರ ಹಾಗೂ ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ಧಾರೆ. ಇತಿಹಾಸ ಪ್ರಸಿದ್ಧ ಶಿಲಾಮಯ ದೇಗುಲವಾದ ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಬಲ್ಪದ ತ್ರಿಶೂಲಿನೀ ದುರ್ಗಾಪರಮೇಶ್ವರಿ ಜಾತ್ರಾ ಆಮಂತ್ರಣ ಪತ್ರ ಹಾಗೂ ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ಧಾರೆ. ವಾರ್ಷಿಕ ಜಾತ್ರಾ ಮಹೋತ್ಸವವು ಜನವರಿ 6 ರಿಂದ ಜನವರಿ 10 ರ ವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಪಠೋಳಿ ಹರಿಯಪ್ಪ್ ಗೌಡ ಬಿಡುಗಡೆ ಗೊಳಿಸಿದ್ದಾರೆ.ಇನ್ನು 2021 ರ ಕ್ಯಾಲೆಂಡರ್ ನ್ನು

ಬಳ್ಪ: ತ್ರಿಶೂಲಿನೀ ದುರ್ಗಾಪರಮೇಶ್ವರಿ ಜಾತ್ರಾ ಆಮಂತ್ರಣ ಪತ್ರ, ಕ್ಯಾಲೆಂಡರ್ ಅನಾವರಣ Read More »

ಕರಾವಳಿ

ಕರ್ನಾಟಕವೇ ತಲೆತಗ್ಗಿವಂತ ಕೃತ್ಯ ➤ ಆಸ್ಪತ್ರೆಯಲ್ಲಿ ಬಾಲಕಿ ಮೇಲೆ ಗ್ಯಾಂಗ್ ರೇಪ್!

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಡಿ. 07: ಕೊರೊನಾ ಸೋಂಕಿತ ತಾಯಿಯ ಕಾಳಜಿಗಾಗಿ ಆಸ್ಪತ್ರೆಯಲ್ಲಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದುರ್ಘಟನೆ  ಶಿವಮೊಗ್ಗದಲ್ಲಿ ನಡೆದಿದೆ. ಶನಿವಾರ ರಾತ್ರಿ ಮೆಗ್ಗಾನ್ ಬೋಧನಾ ಆಸ್ಪತ್ರೆ ನಲ್ಲಿ ಅತ್ಯಾಚಾರ ಪ್ರಕರಣ ನಡೆದಿರುವುದು ವರದಿಯಾಗಿದ್ದು, ಆರೋಪಿಗಳಾದ ವಾರ್ಡ್‍ಬಾಯ್ ಮನೋಜ್, ಆತನ ಸ್ನೇಹಿತರಾದ ಪ್ರಜ್ವಲ್, ವಿನಯ್‍ನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಪೋಲೀಸರು ತನಿಖೆ ಮುಂದುವರೆಸಿದ್ದಾರೆ. ವಾರ್ಡ್ ಬಾಯ್ ಮನೋಜ್ ಪರಿಚಯವಾಗಿದ್ದು, ಆತ ಹೋಟೆಲ್‍ನಿಂದ ಬಾಲಕಿಗೆ ಊಟ, ಉಪಹಾರ ತಂದುಕೊಡುತ್ತಿದ್ದ.

ಕರ್ನಾಟಕವೇ ತಲೆತಗ್ಗಿವಂತ ಕೃತ್ಯ ➤ ಆಸ್ಪತ್ರೆಯಲ್ಲಿ ಬಾಲಕಿ ಮೇಲೆ ಗ್ಯಾಂಗ್ ರೇಪ್! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬದ ಯಶೋದಾ ಸೂಪರ್ ಶಾಪ್ ನಲ್ಲಿ ದೀಪಾವಳಿ ಲಕ್ಕೀ ಕೂಪನ್ ಡ್ರಾ ➤ ಈ 250 ಅದೃಷ್ಟಶಾಲಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ..?

(ನ್ಯೂಸ್ ಕಡಬ) newskadaba.com ಕಡಬ, ಡಿ.07. ದೀಪಾವಳಿ ಪ್ರಯುಕ್ತ ಕಡಬದ ಯಶೋದಾ ಜನರಲ್ ಸ್ಟೋರ್ ನಲ್ಲಿ ಆಯೋಜಿಸಲಾಗಿದ್ದ ಲಕ್ಕೀ ಕೂಪನ್ ಡ್ರಾ ಕಾರ್ಯಕ್ರಮವು ಭಾನುವಾರದಂದು ನಡೆಯಿತು. ಕಾರ್ಯಕ್ರಮವನ್ನು ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ಎನ್.ಕೆ. ನಡೆಸಿಕೊಟ್ಟರು. ನಿವೃತ್ತ ಸೈನಿಕ ಗಂಗಾಧರ್ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಗ್ರಾಮ ಪಂಚಾಯತ್ ಸದಸ್ಯರಾದ ಸೈಮನ್ ಸಿ.ಜೆ., ಆದಂ ಕುಂಡೋಳಿ, ಸಿ.ಎ.ಬ್ಯಾಂಕ್ ನಿರ್ದೇಶಕ ಸತೀಶ್ ನಾಯಕ್, ಕಡಬ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ವಿಜಯ

ಕಡಬದ ಯಶೋದಾ ಸೂಪರ್ ಶಾಪ್ ನಲ್ಲಿ ದೀಪಾವಳಿ ಲಕ್ಕೀ ಕೂಪನ್ ಡ್ರಾ ➤ ಈ 250 ಅದೃಷ್ಟಶಾಲಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ..? Read More »

ಕರಾವಳಿ

ಅರಂತೋಡು: ಅಕ್ರಮ ಮರಳು ಅಡ್ಡೆಗೆ ಪೊಲೀಸ್ ದಾಳಿ ➤ ಮರಳು ಸಹಿತ ಟಿಪ್ಪರ್ ವಶಕ್ಕೆ

(ನ್ಯೂಸ್ ಕಡಬ) newskadaba.com ಅರಂತೋಡು, ಡಿ. 06: ಅಕ್ರಮ ಮರಳು ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಮರಳು ಸಹಿತ ಟಿಪ್ಪರನ್ನು ವಶಕ್ಕೆ ಪಡೆದ ಘಟನೆ ಅರಂತೋಡಿನಲ್ಲಿನಡೆದಿದೆ.     ಅರಂತೋಡು ಗ್ರಾಮದ ಬಿಳಿಯಾರು ಎಂಬಲ್ಲಿ ಹೊಳೆಯಿಂದ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದ ಸ್ಥಳಕ್ಕೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಮರಳು ಸಹಿತ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಲಕಿದು ಬಂದಿದೆ.  

ಅರಂತೋಡು: ಅಕ್ರಮ ಮರಳು ಅಡ್ಡೆಗೆ ಪೊಲೀಸ್ ದಾಳಿ ➤ ಮರಳು ಸಹಿತ ಟಿಪ್ಪರ್ ವಶಕ್ಕೆ Read More »

ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ: ಆಶ್ಲೇಷ ಪೂಜೆಗಾಗಿ ಹರಿದು ಬಂದ ಭಕ್ತಸಾಗರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ. 06: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ನಕ್ಷತ್ರ ದಿನವಾದ ಇಂದು ಆಶ್ಲೇಷ ಪೂಜೆ ನೆರವೇರಿಸಲು ಹೆಚ್ಚಿನ ಜನ ಸಂಖ್ಯೆ ಕಂಡುಬಂದಿದ್ದು, ದೇವಾಲಯದ ಸುತ್ತಮುತ್ತ ಜನ ಸಾಗರ ಹರಿದು ಬಂದಿರುವುದು ಕಂಡು ಬಂದಿದೆ.     ದೇವಾಲಯದ ಹೊರಾಂಗಣದಲ್ಲಿ ರಶೀದಿಗಾಗಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಸೀಮಿತ ಸಂಖ್ಯೆಯಲ್ಲಿ ಸೇವಾ ರಶೀದಿ ವಿತರಿಸುವ ಕಾರಣ ದೂರದಿಂದ ಬಂದ ಭಕ್ತರಿಗೆ ರಶೀದಿ ಸಿಗದೇ ಸೇವಾ ಕೌಂಟರ್ ಸಿಬ್ಬಂದಿಗಳ ಜೊತೆ ವಾಗ್ವಾದವಾದ ಘಟನೆ ನಡೆದಿದೆ.

ಕುಕ್ಕೆ ಸುಬ್ರಹ್ಮಣ್ಯ: ಆಶ್ಲೇಷ ಪೂಜೆಗಾಗಿ ಹರಿದು ಬಂದ ಭಕ್ತಸಾಗರ Read More »

ಕರಾವಳಿ

ಕಡಬ: ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ ಪೊಲೀಸರು ➤ ಅಂಗಡಿ ಮಾಲಕ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಡಿ. 06: ಕಡಬ ಪೇಟೆಯಲ್ಲಿ ಮಾಸ್ಕ್ ಧರಿಸದವರ ವಿರುದ್ಧ ಕಾರ್ಯಾಚರಣೆ ನಡೆಸಿದ ಎಸ್.ಐ ಹಾಗೂ ಸಿಬ್ಬಂದಿಗಳು ಹಲವರಿಗೆ ದಂಡ ವಿಧಿಸಿದ್ದಾರೆ.     ಕಡಬ ಕಾಲೇಜು ಕ್ರಾಸ್ ಬಳಿ ಅಂಗಡಿ ಮಾಲಕರೋರ್ವರು ಮಾಸ್ಕ್ ಧರಿಸದೆ ಇದ್ದು, ಈ ಬಗ್ಗೆ ದಂಡ ಹಾಕಲು ಮುಂದಾದಾಗ ಅಂಗಡಿ ಮಾಲಕರು ಎಸ್.ಐ ಜತೆ ದುರ್ವರ್ತನೆ ತೋರಿದರೆಂಬ ಆರೋಪದಲ್ಲಿ ಎಸ್.ಐ ಅವರು ಅಂಗಡಿ ಮಾಲಕ ಹಬೀಬುಲ್ಲಾ ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದು, ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಕಡಬ: ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ ಪೊಲೀಸರು ➤ ಅಂಗಡಿ ಮಾಲಕ ಪೊಲೀಸ್ ವಶಕ್ಕೆ Read More »

ಕರಾವಳಿ

ಮಂಗಳೂರು: ಲಾರಿ ಮತ್ತು ಸ್ಕೂಟರ್ ಢಿಕ್ಕಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 06: ಲಾರಿ ಹಾಗೂ ಸ್ಕೂಟರ್‌ ನಡುವೆ ಅಪಘಾತ ಸಂಭವಿಸಿದ್ದು ಸ್ಕೂಟರ್‌ ಸವಾರ ಹಾಗೂ ಸಹಸವಾರರಿಗೆ ಗಂಭೀರ ಗಾಯಗಳಾಗಿದ್ದು,  ರಾ.ಹೆ 66 ರ ತಲಪಾಡಿ ಉಚ್ಚಿಲ ಬಳಿ ನಡೆದಿದೆ.     ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಕೇರಳ ಮೂಲದವರಾಗಿದ್ದು, ಒಬ್ಬರು ಮಂಜೇಶ್ವರ ನಿವಾಸಿ ಪ್ರದೀಪ್ ಎಂದು ಗುರುತಿಸಲಾಗಿದೆ. ಇನ್ನು ಘಟನೆಯ ಬಗ್ಗೆ ನಾಗುರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಂಗಳೂರು: ಲಾರಿ ಮತ್ತು ಸ್ಕೂಟರ್ ಢಿಕ್ಕಿ ➤ ಇಬ್ಬರಿಗೆ ಗಾಯ Read More »

ಕರಾವಳಿ
Scroll to Top