Kadaba

ಕೊನೆಗೂ ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ► ಕಲ್ಲುಗುಡ್ಡೆ: ಅಕ್ರಮ ಕಟ್ಟಡದಲ್ಲಿನ ಮದ್ಯದಂಗಡಿ ಮುಚ್ಚಲು ಆದೇಶ

(ನ್ಯೂಸ್ ಕಡಬ) newskadaba.com ಕಡಬ, ಸೆ.22. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಸರಕಾರಿ ಸ್ಥಳದ ಅನಧಿಕೃತ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದ ಮದ್ಯದಂಗಡಿಗೆ ಇದೀಗ ಮೂರನೇ ಬಾರಿಗೆ ಅಬಕಾರಿ ಇಲಾಖಾ ಅಧಿಕಾರಿಗಳು ಬೀಗ ಜಡಿದಿದ್ದಾರೆ. ತೀವ್ರ ಆಕ್ಷೇಪಗಳ ನಡುವೆ ಇತ್ತೀಚೆಗೆ ಆರಂಭವಾಗಿದ್ದ ಮದ್ಯದಂಗಡಿಯನ್ನು ಹಲವು ಜಂಜಾಟಗಳ ನಡುವೆ ಜಿಲ್ಲಾಧಿಕಾರಿಗಳ ಆದೇಶದಂತೆ ಅಬಕಾರಿ ಅಧಿಕಾರಿಗಳು ಶುಕ್ರವಾರ ಬೀಗ ಜಡಿದಿದ್ದಾರೆ. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿ ಸೆ.11 ರಂದು ಮದ್ಯದಂಗಡಿ ಆರಂಭವಾಗಿರುವುದನ್ನು ವಿರೋಧಿಸಿ ಕಳೆದ ಭಾನುವಾರದಿಂದ ಈ ಭಾಗದ ಬಾರ್ ವಿರೋಧಿ ಹೋರಾಟ ಸಮಿತಿಯವರು […]

ಕೊನೆಗೂ ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ► ಕಲ್ಲುಗುಡ್ಡೆ: ಅಕ್ರಮ ಕಟ್ಟಡದಲ್ಲಿನ ಮದ್ಯದಂಗಡಿ ಮುಚ್ಚಲು ಆದೇಶ Read More »

ಕರಾವಳಿ

ಇಂಟರ್ನ್ಯಾಶನಲ್ ಪ್ರೀತಿ..!!! ► ನೇಪಾಳ ಯುವಕನೊಂದಿಗೆ ಉಡುಪಿ ಯುವತಿಯ ಮದುವೆ

(ನ್ಯೂಸ್ ಕಡಬ) newskadaba.com ಉಡುಪಿ,ಸೆ.22. ನೇಪಾಳದ ಯುವಕನೊಂದಿಗೆ ಉಡುಪಿಯ ಕೋಟ ಮಣೂರಿನ ಯುವತಿಯ ಮದುವೆಯು ಉಡುಪಿ ಜಿಲ್ಲೆಯ ಕುಂದಾಪುರದ ಕೋಟದಲ್ಲಿ ರಾಜಲಕ್ಷ್ಮೀ ಸಭಾಂಗಣದಲ್ಲಿ ನಡೆದಿದೆ. ಉಡುಪಿಯ ಕೋಟ ಮಣೂರಿನ ದಲಿತ ಸಮುದಾಯದ ಯುವತಿ ದೀಪಾ ಹಾಗೂ ನೇಪಾಳದ ಉಪೇನ್ ಡೈಮಾರಿ ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇದೀಗ ಇಬ್ಬರು ತಮ್ಮ ಕುಟುಂಬದ ಸಮ್ಮುಖದಲ್ಲೇ ಸತಿಪತಿಗಳಾಗಿದ್ದಾರೆ. ನೇಪಾಳದಿಂದ ಉಪೇನ್ ಕುಟುಂಬದಿಂದ ಸುಮಾರು 20 ಮಂದಿ ಮದುವೆಗೆ ಬಂದಿದ್ದರು. ಯುವಕನಿಂದ ಬಿಡಿಗಾಸೂ ಪಡೆಯದೆ ಯುವತಿಯೇ ತನ್ನೆಲ್ಲಾ ಮದುವೆ ಖರ್ಚುವೆಚ್ಚವನ್ನು ಹಾಕಿರುವುದು

ಇಂಟರ್ನ್ಯಾಶನಲ್ ಪ್ರೀತಿ..!!! ► ನೇಪಾಳ ಯುವಕನೊಂದಿಗೆ ಉಡುಪಿ ಯುವತಿಯ ಮದುವೆ Read More »

ಕರಾವಳಿ

ಉಡುಪಿ: ಹೋರಿಯನ್ನು ತಲ್ವಾರಿನಿಂದ ಕಡಿದ ದುಷ್ಕರ್ಮಿಗಳು ► ಚಿಂತಾಜನಕ ಸ್ಥಿತಿಯಲ್ಲಿದ್ದ ಮೂಕ ಪ್ರಾಣಿ ಗೋಶಾಲೆಗೆ

(ನ್ಯೂಸ್ ಕಡಬ) newskadaba.com ಉಡುಪಿ,ಸೆ.22. ಅಕ್ರಮ ಕಸಾಯಿಖಾನೆಗೆ ಸಾಗಿಸಲೆಂದು ಹೋರಿಯೊಂದನ್ನು ಟೆಂಪೋದೊಳಗೆ ತುಂಬಿಸುವಾಗ ಒದ್ದಾಡಿದ ಕಾರಣಕ್ಕಾಗಿ ತಲವಾರಿನಿಂದ ಕಡಿದು ತೀವ್ರ ಗಾಯಗೊಳಿಸಿದ ನೀಚ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ. ಮಣಿಪಾಲದ ಎಂ.ಐ.ಸಿ ಬಳಿ ಹೋರಿಯೊಂದು ಮಾರಕಾಯುಧಗಳಿಂದ ಕಡಿದ ರೀತಿಯಲ್ಲಿ ತೀವ್ರ ಸ್ವರೂಪದ ಗಾಯಗಳೊಂದಿಗೆ ಅಸ್ವಸ್ಥ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದನ್ನು ಕಂಡು ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಪರಿಸರದ ನಿವಾಸಿಗಳು ಹೋರಿಗೆ ಔಷಧೋಪಚಾರ ಮಾಡಿದ್ದಾರೆ. ಆದರೆ ಹೋರಿಯು ಚಿಂತಾಜನಕ ಸ್ಥಿತಿಗೆ ತಲುಪಿದಾಗ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ

ಉಡುಪಿ: ಹೋರಿಯನ್ನು ತಲ್ವಾರಿನಿಂದ ಕಡಿದ ದುಷ್ಕರ್ಮಿಗಳು ► ಚಿಂತಾಜನಕ ಸ್ಥಿತಿಯಲ್ಲಿದ್ದ ಮೂಕ ಪ್ರಾಣಿ ಗೋಶಾಲೆಗೆ Read More »

ಕರಾವಳಿ

ಕಿಡ್ನಾಪ್​ ಆಗಿದ್ದ ಐಟಿ ಅಧಿಕಾರಿ ಪುತ್ರ ► ಶವವಾಗಿ ಪತ್ತೆ…!!!

(ನ್ಯೂಸ್ ಕಡಬ) newskadaba.com ಬೆಂಗಳೂರು,ಸೆ.22. ವಾರದ ಹಿಂದೆ ಕಿಡ್ನಾಪ್​ ಆಗಿದ್ದ ಐಟಿ ಅಧಿಕಾರಿ ಪುತ್ರ ಶರತ್(19ವರ್ಷ) 8 ದಿನಗಳ ಬಳಿಕ ಶರತ್ ಶವವಾಗಿ ಪತ್ತೆಯಾಗಿದ್ದಾನೆ. ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ಶರತ್’ಗೆ ಸಂಬಂಧಿಸಿದಂತ ಕೆಲವೊಂದು ಶಾಕಿಂಗ್ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಕೊಲೆಯಾದ ಶರತ್ ನ ಅಕ್ಕನ ಪ್ರಿಯಕರನಾದ ವಿಶಾಲ್ ಎಂಬವನು ಶರತ್ ನ್ನು​ ಕಿಡ್ನಾಪ್​ ಮಾಡಿ ಕೊಲೆ ಮಾಡಿದ್ದಾನೆ. ಇನ್ನು ಶರತ್​ ಸಹ ಆರೋಪಿ ವಿಶಾಲ್’​ನ ತಂಗಿಯನ್ನು ಪ್ರೀತಿಸುತ್ತಿದ್ದ ವಿಷಯ ಪೊಲೀಸರಿಗೆ ವಿಚಾರಣೆ

ಕಿಡ್ನಾಪ್​ ಆಗಿದ್ದ ಐಟಿ ಅಧಿಕಾರಿ ಪುತ್ರ ► ಶವವಾಗಿ ಪತ್ತೆ…!!! Read More »

ಕರ್ನಾಟಕ

ಚಿರತೆಗೆ ಕಾರು ಡಿಕ್ಕಿ, ಚಾಲಕ ಪರಾರಿ ► ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿರತೆ

(ನ್ಯೂಸ್ ಕಡಬ) newskadaba.com ಹಾಸನ,ಸೆ.22. ಕಾರು ಡಿಕ್ಕಿ ಹೊಡೆದ ಪರಿಣಾಮ ಚಿರತೆಯೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದ ಅರಸೀಕೆರೆ ತಾಲೂಕಿನ ಬಾಣಾವರ ಕೆರೆ ಬಳಿ ನಡೆದಿದೆ. ಕೆರೆ ಏರಿ ಮೇಲೆ ಬಂದ ಚಿರತೆಗೆ ಎದುರಿನಿಂದ ವೇಗವಾಗಿ ಬಂದ ಕಾರು ಏಕಾಏಕಿ ಡಿಕ್ಕಿ ಹೊಡೆದಿದೆ. ಘಟನೆ ಬಳಿಕ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಢಿಕ್ಕಿ ಹೊಡೆದ ಪರಿಣಾಮ ಚಿರತೆಯ ಮುಖಕ್ಕೆ ಗಂಭೀರವಾಗಿ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದೆ. ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಚಿರತೆಯನ್ನು ತಮ್ಮ ವಶಕ್ಕೆ ಪಡೆದು ಅರಸೀಕೆರೆ ಆಸ್ಪತ್ರೆಗೆ

ಚಿರತೆಗೆ ಕಾರು ಡಿಕ್ಕಿ, ಚಾಲಕ ಪರಾರಿ ► ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿರತೆ Read More »

ಕರಾವಳಿ

ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿ ”ಕಿಸ್ಸಿಂಗ್” ಸೀನ್..!!! ► ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ..!!!

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.22. ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿ ಪಡೆದ ಯಕ್ಷಗಾನ ಕಾರ್ಯಕ್ರಮ ಒಂದರಲ್ಲಿ ಇಬ್ಬರು ಕಲಾವಿದರು ಚುಂಬಿಸಿದ ದೃಶ್ಯ ಈಗ ವಿವಾದಕ್ಕೆ ಕಾರಣವಾಗಿದೆ. ಬಂಟ್ವಾಳ ತಾಲೂಕಿನ ವಗೆನಾಡು ಸುಬ್ರಾಯ ದೇವಸ್ಥಾನದಲ್ಲಿ ಕಳೆದ ಸೆ.16 ರಂದು ಯಕ್ಷಗಾನ ವೈಭವ ನಡೆದಿತ್ತು. ತೆಂಕುತಿಟ್ಟಿನ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಈ ಯಕ್ಷಗಾನ ನಾಟ್ಯ ವೈಭವಕ್ಕೆ ಭಾಗವತರಾಗಿದ್ದರು. ಈಗ ಶೃಂಗಾರ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿದೆ. ಕರಾವಳಿಯ ಹೆಮ್ಮೆಯ  ಸಂಸ್ಕೃತಿ  ಅಂತಾನೆ  ಕರೆಯಲ್ಪಡುವ

ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿ ”ಕಿಸ್ಸಿಂಗ್” ಸೀನ್..!!! ► ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ..!!! Read More »

ಕರಾವಳಿ

ಬೆಸ್ಟ್ ಟೀಚರ್ ಆಗಬೇಕೆಂದು ಬಯಸುವಿರಾ..??? ►ಹಾಗಾದರೆ ಈ ಲೇಖನ ಓದಿ..!!!

(ನ್ಯೂಸ್ ಕಡಬ) newskadaba.com ಕಡಬ,ಸೆ.22. ಮುಂದಿನ ಜನಾಂಗದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ. ಇದು ಮಹತ್ವದ ಜವಾಬ್ದಾರಿಯುಳ್ಳ ಶಿಕ್ಷಕರಿಂದ ಮಾತ್ರ ಸಾಧ್ಯ. ಶಿಕ್ಷಕರಾಗಬೇಕೆಂದು ಬಯಸುವ ಪ್ರತಿಯೊಬ್ಬರೂ ಈ ಲೇಖನವನ್ನು ಓದಲೇ ಬೇಕು. ಯಾಕೆಂದರೆ ತಮ್ಮ ವೃತ್ತಿಜೀವನವನ್ನು ಯಶಸ್ವಿಯಾಗಿ ಆರಂಭಿಸುವಲ್ಲಿ ಇದು ಸಹಕಾರಿಯಾಗಲಿದೆ. ಅತಿದೊಡ್ಡ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಕ ವೃತ್ತಿಗೆ ಬೇಕಾದ ಪೂರ್ವ ಸಿದ್ಧತೆ ಮಾತ್ರ ಅತ್ಯಲ್ಪ. ಶಿಕ್ಷಕರು ತನ್ನ ವೃತ್ತಿ ಜೀವನದ ಆರಂಭದ ದಿನ ಉತ್ತಮ ಭಾವನೆ ಮೂಡಿಸುವುದರ ಜೊತೆಗೆ ಮಕ್ಕಳ ಜೊತೆ ಮಕ್ಕಳಾಗಿ

ಬೆಸ್ಟ್ ಟೀಚರ್ ಆಗಬೇಕೆಂದು ಬಯಸುವಿರಾ..??? ►ಹಾಗಾದರೆ ಈ ಲೇಖನ ಓದಿ..!!! Read More »

ವಿಶೇಷ ಲೇಖನಗಳು

ಸೆ.28ರಿಂದ ಅಕ್ಟೋಬರ್.2ರ ವರೆಗೆ ಬ್ಯಾಂಕ್ ವ್ಯವಹಾರ ಬಂದ್..!!!

(ನ್ಯೂಸ್ ಕಡಬ) newskadaba.com ಕಡಬ,ಸೆ.22, ಬ್ಯಾಂಕ್ ಖಾತೆಯಲ್ಲಿರುವ ಹಣ ಡ್ರಾ ಮಾಡಲು ಅಥವಾ ಡಿಪಾಸಿಟ್ ಮಾಡಲು ನೀವು ನಿರ್ಧರಿಸಿದ್ದರೆ ಅದನ್ನು ಈ ವಾರದಲ್ಲೇ ಮುಗಿಸುವುದು ಉತ್ತಮ ಯಾಕೆಂದರೆ ಮುಂದಿನ ವಾರದಿಂದ ಐದು ದಿನಗಳ ಕಾಲ ಬ್ಯಾಂಕ್ ಓಪನ್ ಇರುವುದಿಲ್ಲ. ಈ ಭಾರೀ ಗಾಂಧಿ ಜಯಂತಿ, ದಸರಾ ಹಬ್ಬ ಒಂದೇ ಸಾರಿ ಬಂದಿರುವುದರಿಂದ ಮುಂದಿನ ವಾರ ಸಾಲು ಸಾಲು ರಜೆಗಳು ಬಂದಿವೆ. ಬ್ಯಾಂಕ್ ಗಳು 5 ದಿನಗಳ ಕಾಲ ಸ್ಥಗಿತಗೊಳ್ಳಲಿದ್ದು ಕ್ಯಾಶ್ ಬಿಡಿಸಿಕೊಳ್ಳವರಿಗೆ, ಕ್ಯಾಶ್ ಕಟ್ಟೋರಿಗೆ ತೊಂದರೆ ಆಗುವ ಸಾಧ್ಯತೆ

ಸೆ.28ರಿಂದ ಅಕ್ಟೋಬರ್.2ರ ವರೆಗೆ ಬ್ಯಾಂಕ್ ವ್ಯವಹಾರ ಬಂದ್..!!! Read More »

ಕರಾವಳಿ

ಪಾಕಿಸ್ತಾನದಲ್ಲಿ 4 ಬಾರಿ ಮನೆ ಬದಲಿಸಿದ ದಾವೂದ್ ಇಬ್ರಾಹಿಂ ► ಕಾರಣ ಯಾರು ಗೊತ್ತೆ…???

(ನ್ಯೂಸ್ ಕಡಬ) newskadaba.com ಮುಂಬೈ,ಸೆ.21. ಭೂಗತ ದೊರೆ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂಬ ಆಘಾತಕಾರಿ ಸತ್ಯ ಸಹೋದರ ಇಕ್ಬಾಲ್ ಕಸ್ಕರ್ ಬಾಯ್ಬಿಟ್ಟಿದ್ದಾನೆ. ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‍ನನ್ನು 8 ದಿನಗಳ ಕಾಲ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನ ವಿಚಾರಣೆ ವೇಳೆ ಹಲವಾರು ಸಂಗತಿಗಳು ಬಹಿರಂಗಗೊಂಡಿದೆ. ಡಿ ಕಂಪೆನಿ ಮುಖ್ಯಸ್ಥನಾದ ದಾವೂದ್ ಪಶ್ಚಿಮ ಮತ್ತು ಪೂರ್ವ ಆಫ್ರಿಕಾ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿದ್ದಾನೆಂದು ತಿಳಿಸಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಧಿಕಾರಕ್ಕೆ ಬಂದ ನಂತರ ದಾವೂದ್ ಪಾಕಿಸ್ತಾನದಲ್ಲಿ

ಪಾಕಿಸ್ತಾನದಲ್ಲಿ 4 ಬಾರಿ ಮನೆ ಬದಲಿಸಿದ ದಾವೂದ್ ಇಬ್ರಾಹಿಂ ► ಕಾರಣ ಯಾರು ಗೊತ್ತೆ…??? Read More »

ಕರ್ನಾಟಕ

80 ಜನರಿಗೆ ವಾಟ್ಸಪ್ ಸಂದೇಶ ಕಳುಹಿಸಿ ►18ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿಯ ಆತ್ಮಹತ್ಯೆ..!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.21.18ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಐಟಿಪಿಎಲ್ ಸಮೀಪದ ಪ್ರೆಸ್ಟೀಜ್ ಶಾಂತಿನಿಕೇತನ್‍ನಲ್ಲಿ ಗುರುವಾರ ನಡೆದಿದೆ. ಪೋಲ್ಲಾಸ್ ಚೌದರಿ(19) ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಪ್ರವೀಣ್ ಚೌದರಿ ಎಂಬುವವರ ಪುತ್ರನಾಗಿದ್ದು, ಬೆಂಗಳೂರು ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದ. ಪೋಲ್ಲಾಸ್ ಚೌದರಿ ತನ್ನ ತಂದೆ ಜೊತೆ ವೈಟ್‍ಫೀಲ್ಡ್ ಫೊರಂ ಬಳಿ ಇರುವ ಆದರ್ಶ ಪಾಮ್‍ಮೇಡ್ಸ್ ಖಾಸಗಿ ವಿಲ್ಲಾದಲ್ಲಿ ವಾಸವಿದ್ದ. ಬುಧವಾರ ರಾತ್ರಿ ಪೋಲ್ಲಾಸ್ ಚೌದರಿ ತನ್ನ ಖಾಸಗಿ ವಿಲ್ಲಾದಿಂದ

80 ಜನರಿಗೆ ವಾಟ್ಸಪ್ ಸಂದೇಶ ಕಳುಹಿಸಿ ►18ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿಯ ಆತ್ಮಹತ್ಯೆ..!!! Read More »

ಕರ್ನಾಟಕ
Scroll to Top