Kadaba

ಐತ್ತೂರು: ಮಕ್ಕಳ ವಿಶೇಷ ಗ್ರಾಮ ಸಭೆ ► ಸಮಾಜದಲ್ಲಿನ ಹಾಗು ಹೋಗುಗಳನ್ನು ಜನಪ್ರತಿನಿಧಿಗಳ ಮುಂದಿಡುವ ಉತ್ತಮ ವೇದಿಕೆ- ವಿದ್ಯಾರ್ಥಿ ನಾಯಕ ಹಾರೀಶ್

(ನ್ಯೂಸ್ ಕಡಬ) newskadaba.com ಕಡಬ, ಅ.11. ಇಲ್ಲಿನ ಐತ್ತೂರು ಗ್ರಾ.ಪಂಚಾಯತ್ನಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಯು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಐತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕೆ ಅವರು, ಮಕ್ಕಳ ಗ್ರಾಮಸಭೆಗೆ ಹೆಚ್ಚಿನ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಭಾಗವಹಿಸುವ ಮೂಲಕ ಶಿಕ್ಷಣಕ್ಷೇತ್ರದ ಪ್ರಗತಿಗೆ ಒತ್ತು ನೀಡಬೇಕು ಅಷ್ಟೇ ಅಲ್ಲದೆ ಶಾಲಾ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಸದಸ್ಯರು ಕೂಡಾ, ಮಕ್ಕಳ ಗ್ರಾಮಸಭೆಯಲ್ಲಿ ಭಾಗವಹಿಸಿ ಮಕ್ಕಳ ಸಲಹೆ ಸೂಚನೆಗಳ ಕುರಿತು ಸ್ಥಳೀಯಾಡಳಿತ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಮಕ್ಕಳ […]

ಐತ್ತೂರು: ಮಕ್ಕಳ ವಿಶೇಷ ಗ್ರಾಮ ಸಭೆ ► ಸಮಾಜದಲ್ಲಿನ ಹಾಗು ಹೋಗುಗಳನ್ನು ಜನಪ್ರತಿನಿಧಿಗಳ ಮುಂದಿಡುವ ಉತ್ತಮ ವೇದಿಕೆ- ವಿದ್ಯಾರ್ಥಿ ನಾಯಕ ಹಾರೀಶ್ Read More »

ಕರಾವಳಿ

ಕಡಬ: ಟಾಸ್ಕ್‌ಪೋರ್ಸ್ ಸಮಿತಿ ರಚನೆಯಲ್ಲಿ ಅನ್ಯಾಯ ► ದಲಿತ ಮುಖಂಡರಿಂದ ಖಂಡನೆ

(ನ್ಯೂಸ್ ಕಡಬ) newskadaba.com ಕಡಬ, ಅ.11. ತಾಲೂಕು ಮಟ್ಟದಲ್ಲಿ ಅತಿಕ್ರಮಣ ಆಗಿರುವ ಡಿ.ಸಿ.ಮನ್ನಾ ಭೂಮಿಯನ್ನು ಗುರುತಿಸುವ ಬಗ್ಗೆ ರಚಿಸಲಾದ ತಾಲೂಕುವಾರು ಟಾಸ್ಕ್‌ಪೋರ್ಸ್ ಸಮಿತಿಯಲ್ಲಿ ರಾಜಕೀಯ ದುರುದ್ದೇಶ ಅಡಗಿದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಮುಖಂಡ ಗುರುವಪ್ಪ ಕಲ್ಲುಗುಡ್ಡೆ ಆರೋಪಿಸಿದ್ದಾರೆ. ನೂತನವಾಗಿ ರಚಿಸಿರುವ ಸಮಿತಿಯಲ್ಲಿ ಗಿರಿಧರ ನಾಯ್ಕ, ಪ್ರಹ್ಲಾದ್ 34ನೇ ನೆಕ್ಕಿಲಾಡಿ, ಸೋಮನಾಥ ರಾಮನಗರ, ಪವಿತ್ರಾ ಬಾಬು ಬಳಕ್ಕ ಆರ್ಯಾಪುರವರನ್ನು ನೇಮಿಸಲಾಗಿದೆ. ಆದರೆ ಇವರು ಯಾರು ದಲಿತ ಸಂಘಟನೆಯ ಕಾರ್ಯಕರ್ತರು ಆಗಿರುವುದಿಲ್ಲ. ಹಾಗಾಗಿ ಸಮಿತಿ ರಚನೆಯಲ್ಲಿ ರಾಜಕೀಯ

ಕಡಬ: ಟಾಸ್ಕ್‌ಪೋರ್ಸ್ ಸಮಿತಿ ರಚನೆಯಲ್ಲಿ ಅನ್ಯಾಯ ► ದಲಿತ ಮುಖಂಡರಿಂದ ಖಂಡನೆ Read More »

ಕರಾವಳಿ

ವಾಣಿಜ್ಯ ಕಟ್ಟಡಕ್ಕೆ ಡೋರ್ ನಂಬ್ರ ನೀಡಲು ಬಿಳಿನೆಲೆ ಗ್ರಾ.ಪಂ.ನಿಂದ ವಿಳಂಬ ►ಅ.13 ಶುಕ್ರವಾರದಿಂದ ಪಂಚಾಯತ್ ಎದುರು ಸತ್ಯಾಗ್ರಹ: ತೋಮ್ಸನ್ ಕೆ.ಟಿ.

(ನ್ಯೂಸ್ ಕಡಬ) newskadaba.com .ಕಡಬ, ಅ.10. ಬಿಳಿನೆಲೆ ಗ್ರಾಮ ಪಂಚಾಯತಿಯ ನೆಟ್ಟಣ ಸಮೀಪದ ಮೇರೊಂಜಿ ಎಂಬಲ್ಲಿ ನಿರ್ಮಿಸಲಾದ ಕಟ್ಟಡಕ್ಕೆ ಗ್ರಾಮ ಪಂಚಾಯತಿಯಿಂದ ಡೋರ್ ನಂಬರ್ ನೀಡದೆ ಇರುವುದರಿಂದ ವಿದ್ಯುತ್ ಸಂಪರ್ಕಕ್ಕೆ ತೊಂದರೆ ಉಂಟಾಗಿದ್ದು, ಅಕ್ಟೋಬರ್ 12ರ ಗುರುವಾರದೊಳಗಡೆ ಡೋರ್ ನಂಬರ್ ನೀಡದೆ ಇದ್ದಲ್ಲಿ 13 ಶುಕ್ರವಾರದಿಂದ ಪಂಚಾಯತ್ ಎದುರುಗಡೆ ಸತ್ಯಾಗ್ರಹ ಮಾಡಲಿದ್ದೇನೆ ಎಂದು ಕಟ್ಟಡ ಮಾಲಕ ಥೋಮ್ಸನ್ ಕೆ.ಟಿ ಹೇಳಿದ್ದಾರೆ. ಅವರು ಮಂಗಳವಾರದಂದು ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಳಿನೆಲೆ ಗ್ರಾಮದ ಮೇರೊಂಜಿ ಎಂಬಲ್ಲಿರುವ ವರ್ಗ ಜಮೀನನ್ನು

ವಾಣಿಜ್ಯ ಕಟ್ಟಡಕ್ಕೆ ಡೋರ್ ನಂಬ್ರ ನೀಡಲು ಬಿಳಿನೆಲೆ ಗ್ರಾ.ಪಂ.ನಿಂದ ವಿಳಂಬ ►ಅ.13 ಶುಕ್ರವಾರದಿಂದ ಪಂಚಾಯತ್ ಎದುರು ಸತ್ಯಾಗ್ರಹ: ತೋಮ್ಸನ್ ಕೆ.ಟಿ. Read More »

ಕರಾವಳಿ

ಗಂಡನ ಮನೆಯವರ ಕಿರುಕುಳ ► ದೇವಿಯ ವಿಗ್ರಹಕ್ಕೆ ತ್ರಿಶೂಲದಿಂದ ಹೊಡೆದು ದೇವರ ಮೇಲೆ ಸೇಡು ತೀರಿಸಿಕೊಂಡ ಮಹಿಳೆ!

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಅ.9. ಗಂಡ ಮತ್ತು ಆತನ ಮನೆಯವರ ಟಾರ್ಚರ್‍ನಿಂದಾಗಿ ರೊಚ್ಚಿಗೆದ್ದ ಮಹಿಳೆಯೊಬ್ಬರು  ದೇವಾಲಯದ ಗರ್ಭಗುಡಿಗೆ ನುಗ್ಗಿ ದೇವಿಯ ವಿಗ್ರಹದ ಮೇಲೆಯೇ ದಾಳಿ ಮಾಡಿದ ಘಟನೆ ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿರುವ ನಿಮಿಷಾಂಬಾ ದೇವಿಯ ದೇವಾಲಯದಲ್ಲಿ ಸೋಮವಾರ ನಡೆದಿದೆ. ನಿಮಿಷಾಂಬಾ ದೇವಿ ದೇವಾಲಯದಲ್ಲಿ ಎಂದಿನಂತೆ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ಮಹಿಳೆಯೊಬ್ಬರು ಏಕಾಏಕಿ ಗರ್ಭಗುಡಿಗೆ ನುಗ್ಗಿದ್ದಾರೆ. ಬಳಿಕ ದೇವಿಯ ತ್ರಿಶೂಲ ಕೈಗೆ ತೆಗೆದುಕೊಂಡು ದೇವಿಗೇ ಹೊಡೆದಿದ್ದಾರೆ. ಇವರನ್ನು ಹಿಡಿಯಲು ಹೋದ ಅರ್ಚಕರಿಗೆ ಹಾಗೂ ನೆರೆದಿರುವ ಭಕ್ತರಿಗೆ ತ್ರಿಶೂಲ

ಗಂಡನ ಮನೆಯವರ ಕಿರುಕುಳ ► ದೇವಿಯ ವಿಗ್ರಹಕ್ಕೆ ತ್ರಿಶೂಲದಿಂದ ಹೊಡೆದು ದೇವರ ಮೇಲೆ ಸೇಡು ತೀರಿಸಿಕೊಂಡ ಮಹಿಳೆ! Read More »

ಕರ್ನಾಟಕ

ಸಿ.ಪಿ.ಐ.ಎಂ ರಾಷ್ಟ್ರೀಯ ಜನಾಂದೋಲನ ಜಾಥಾಕ್ಕೆ ಕಡಬದಲ್ಲಿ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ,ಅ.9. ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ವತಿಯಿಂದ ಕೇಂದ್ರಸರಕಾರದ ಜನವಿರೋಧಿ ನೀತಿಗಳ ವಿರುದ್ಧ ದ.ಕ. ಹಾಗೂ ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ರಾಷ್ಟ್ರೀಯ ಜನಾಂದೋಲನ ಜಾಥಾಕ್ಕೆ ಕಡಬ ಪೇಟೆಯಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಜನಾಂದೋಲನ ಜಾಥಾಕ್ಕೆ ಚಾಲನೆ ನೀಡಿದ ಸಿಪಿಐ ದ.ಕ. ಹಾಗೂ ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿ ಬಡವರ ಸೇವಕ ಎಂದು ಹೇಳಿಕೊಂಡು ಅಧಿಕಾರ ಗಿಟ್ಟಿಸಿಕೊಂಡ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಬಡವರ ಬದುಕನ್ನು ಕಸಿದುಕೊಂಡಿದೆ. ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ತಲಾ

ಸಿ.ಪಿ.ಐ.ಎಂ ರಾಷ್ಟ್ರೀಯ ಜನಾಂದೋಲನ ಜಾಥಾಕ್ಕೆ ಕಡಬದಲ್ಲಿ ಚಾಲನೆ Read More »

ಕರಾವಳಿ

ಡಿಸೆಂಬರ್ ನಿಂದ “ಮುಖ್ಯಮಂತ್ರಿ ಅನಿಲ ಭಾಗ್ಯ” ಯೋಜನೆ ಜಾರಿ ► ಯಾರಿಗೆಲ್ಲ ಸಿಗಲಿದೆ ರಾಜ್ಯ ಸರಕಾರದ ಈ ಯೋಜನೆ..??

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.9. ಡಿಸೆಂಬರ್ ತಿಂಗಳಿನಿಂದ ಅನಿಲ ಭಾಗ್ಯ ಯೋಜನೆ ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಪ್ರಯೋಜನ ಪಡೆದವರನ್ನು ಹೊರತುಪಡಿಸಿ ಉಳಿದೆಲ್ಲಾ ಬಿಪಿಎಲ್ ಕಾರ್ಡುದಾರರು ಅನಿಲ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಅನಿಲ ಭಾಗ್ಯ ಯೋಜನೆ ಜಾರಿಗೆ ತರುವ ಬಗ್ಗೆ ತೀರ್ಮಾನಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜ್ಯದ 10 ಲಕ್ಷ ಬಿಪಿಎಲ್ ಕುಟುಂಬಕ್ಕೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಲು ಸರ್ಕಾರ

ಡಿಸೆಂಬರ್ ನಿಂದ “ಮುಖ್ಯಮಂತ್ರಿ ಅನಿಲ ಭಾಗ್ಯ” ಯೋಜನೆ ಜಾರಿ ► ಯಾರಿಗೆಲ್ಲ ಸಿಗಲಿದೆ ರಾಜ್ಯ ಸರಕಾರದ ಈ ಯೋಜನೆ..?? Read More »

ಕರಾವಳಿ

ಜೇಸಿಐ ಕಡಬ ಕದಂಬದ ಕದಂಬೋತ್ಸವ  ► ಉದ್ಯಮಿ ಸಿ ಫಿಲಿಪ್ ಅವರಿಗೆ ಕದಂಬಶ್ರೀ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಕಡಬ,ಅ.9. ಜೇಸಿಐ ಕಡಬ ಕದಂಬದ ಕದಂಬೋತ್ಸವದಲ್ಲಿ ಕಡಬದ ಹಿರಿಯ ಉದ್ಯಮಿ ಸಿ ಫಿಲಿಪ್ ಅವರಿಗೆ ಕದಂಬಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಡಬದ ಅನುಗ್ರಹ ಸಭಾಭವನದಲ್ಲಿ ನಡೆದ ಕದಂಬೋತ್ಸವ ಕಾರ್ಯಕ್ರಮದಲ್ಲಿ ಫಿಲಿಪ್ ದಂಪತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭ ಜೇಸಿಐ ಕಡಬ ಕದಂಬ ಇದರ ಅಧ್ಯಕ್ಷ ತಸ್ಲಿಂ ಮರ್ದಾಳ, ಕಾರ್ಯದರ್ಶಿ ದಿವಾಕರ , ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ನಾಗರಾಜ ಎನ್ ಕೆ ಮೊದಲಾದವರು ಇದ್ದರು.

ಜೇಸಿಐ ಕಡಬ ಕದಂಬದ ಕದಂಬೋತ್ಸವ  ► ಉದ್ಯಮಿ ಸಿ ಫಿಲಿಪ್ ಅವರಿಗೆ ಕದಂಬಶ್ರೀ ಪ್ರಶಸ್ತಿ ಪ್ರದಾನ Read More »

ಕರಾವಳಿ

ಅ.18 ರಂದು: ಸಬಳೂರು ಶ್ರೀ ರಾಮ ಭಜನಾ ಮಂದಿರದಲ್ಲಿ ► ಸಾಮೂಹಿಕ ಗೋಪೂಜೆ, ದೀಪಾವಳಿ ಕ್ರೀಡೋತ್ಸವ

(ನ್ಯೂಸ್ ಕಡಬ) newskadaba.com ಕಡಬ,ಅ.9. ಪುತ್ತೂರು ತಾಲೂಕು ಕೊೖಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಅಕ್ಟೋಬರ್.18 ರಂದು ಶ್ರೀ ರಾಮ ಭಜನಾ ಮಂದಿರದಲ್ಲಿ ಸಾಮೂಹಿಕ ಗೋಪೂಜೆ, ದೀಪಾವಳಿ ಕ್ರೀಡೋತ್ಸವ, ಹಾಗೂ ಧಾರ್ಮಿಕ  ಸಭೆಯು ನಡೆಯಲಿದೆ. ಬೆಳಿಗ್ಗೆ ಸಾಮೂಹಿಕ ಗೋಪೂಜೆ ಬಳಿಕ ನಡೆಯುವ ಕ್ರೀಡಾಕೂಟಕ್ಕೆ ಪುತ್ತೂರು ಆದರ್ಶ ವಿವಿದ್ದೋದ್ದೇಶ ಸಹಕಾರಿ ಸಂಘದ ಮಹಾ ಪ್ರಬಂಧಕ ಪ್ರಶಾಂತ್ ಕುಮಾರ್ ರೈ ಬುಡಲೂರು ಚಾಲನೆ ನೀಡಲಿದ್ದಾರೆ. ಸಬಳೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ

ಅ.18 ರಂದು: ಸಬಳೂರು ಶ್ರೀ ರಾಮ ಭಜನಾ ಮಂದಿರದಲ್ಲಿ ► ಸಾಮೂಹಿಕ ಗೋಪೂಜೆ, ದೀಪಾವಳಿ ಕ್ರೀಡೋತ್ಸವ Read More »

ಕರಾವಳಿ

ವಿಧವೆಯರನ್ನು ವಿವಾಹವಾಗುವ ವ್ಯಕ್ತಿಗೆ ಸಿಗಲಿದೆ ► 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ..!!!

(ನ್ಯೂಸ್ ಕಡಬ) newskadaba.com ಭೋಪಾಲ್, ಅ.9. 45ಕ್ಕಿಂತ ಕಡಿಮೆ ವಯಸ್ಸಿನ ವಿಧವೆಯನ್ನು ಪುನರ್‌ ವಿವಾಹವಾಗುವ ವ್ಯಕ್ತಿಗೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವ ಹೊಸ ಯೋಜನೆಯೊಂದನ್ನು ಮಧ್ಯ ಪ್ರದೇಶ ಸರ್ಕಾರ ರೂಪಿಸಿದೆ. ವಿಧವೆಯರ ಬಾಳು ಬಂಗಾರವಾಗಲಿ ಎಂಬ ಉದ್ಧೇಶದೊಂದಿಗೆ ಈ ಯೋಜನೆಯನ್ನು ತರಲಾಗಿದೆ. ಇದು ದೇಶದಲ್ಲಿಯೇ ಮೊದಲ ಪ್ರಯತ್ನವಾಗಿದ್ದು, ಈ ಯೋಜನೆ ಅನುಷ್ಠಾನಗೊಂಡು ಬಳಿಕ ಪ್ರತಿ ವರ್ಷ ಒಂದು ಸಾವಿರ ವಿಧವೆಯರ ಬಾಳು ಬೆಳಗಲಿದೆ ಎಂದು ಸರಕಾರ ವಿಶ್ವಾಸ ವ್ಯಕ್ತಪಡಿಸಿದೆ. ವಿಧವಾ ಪುನರ್‌ ವಿವಾಹ ಪ್ರೋತ್ಸಾಹಿಸುವ ನೀತಿಯನ್ನು ರಚಿಸುವಂತೆ ಜುಲೈ ತಿಂಗಳಲ್ಲಿ

ವಿಧವೆಯರನ್ನು ವಿವಾಹವಾಗುವ ವ್ಯಕ್ತಿಗೆ ಸಿಗಲಿದೆ ► 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ..!!! Read More »

ಕರ್ನಾಟಕ

ಮಂಗಳೂರು: ವಾಲಿಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ತಂಡಗಳ ಮಧ್ಯೆ ಮಾರಾಮಾರಿ

 (ನ್ಯೂಸ್ ಕಡಬ) newskadaba.com ಮಂಗಳೂರು, ಅ.9. ವಾಲಿಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ಬಜಾಲ್ ಪರಿಸರದ ಪಕ್ಕಲಡ್ಕ ಎಂಬಲ್ಲಿ ಆದಿತ್ಯವಾರ ಸಂಜೆ ನಡೆದಿದೆ. ಡಿವೈಎಫ್‍ಐ ವತಿಯಿಂದ ಭಾನುವಾರ ಸೀಮಿತ ತಂಡಗಳ ವಾಲಿಬಾಲ್ ಪಂದ್ಯ ನಡೆಯುತ್ತಿತ್ತು. ಸಂಜೆ ಹೊತ್ತಿಗೆ ಫೈನಲ್ ಪಂದ್ಯ ನಡೆಯುತ್ತಿದ್ದಾಗ ಒಮ್ಮಿಂದೊಮ್ಮೆಲೆ ಹೊಡೆದಾಟ ನಡೆದಿದೆ. ವಾಲಿಬಾಲ್ ನೋಡಲು ಬಂದಿದ್ದ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ವಾಲಿಬಾಲ್ ತಂಡಕ್ಕೂ ಇದಕ್ಕೂ ಸಂಬಂಧವಿಲ್ಲ, ವೈಯಕ್ತಿಕ ದ್ವೇಷದಿಂದ ಈ ಹೊಡೆದಾಟ ನಡೆದಿದೆ

ಮಂಗಳೂರು: ವಾಲಿಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ತಂಡಗಳ ಮಧ್ಯೆ ಮಾರಾಮಾರಿ Read More »

ಕರಾವಳಿ
Scroll to Top