Kadaba

ಕಡಬ: ಮುಸ್ಲಿಂ ಧರ್ಮದ ಅವಹೇಳನ ಪ್ರಕರಣ ► ಆರೋಪಿಯ ಬಂಧನಕ್ಕೆ ಭಾನುವಾರ ಮಧ್ಯಾಹ್ನದ ಗಡುವು

(ನ್ಯೂಸ್ ಕಡಬ) newskadaba.com ಕಡಬ, ಅ.21. ಮುಸ್ಲಿಮರ ಪವಿತ್ರ ಸ್ಥಳವಾದ ಮಕ್ಕಾದ ಮಸೀದಿಯ ಮೇಲೆ ಹನುಮಂತನ ಭಾವಚಿತ್ರವನ್ನಿರಿಸಿ ಮುಸ್ಲಿಂ ಧರ್ಮವನ್ನು ಅವಹೇಳನ ನಡೆಸಲಾಗಿದೆಯೆಂದು ಆರೋಪಿಸಿ ಕಡಬದ ಪಂಚಾಯತ್ ಬಿಲ್ಡಿಂಗ್ ನಲ್ಲಿರುವ ಗಣೇಶ್ ಮೊಬೈಲ್ ಸೆಂಟರ್‌ನ ನೌಕರ ಪ್ರದೀಪ್ ಎಂಬವರ ಮೇಲೆ ಕಡಬದ ವಿವಿಧ ಮುಸ್ಲಿಂ ಸಂಘಟನೆಗಳ ವತಿಯಿಂದ ಕಡಬ ಪೊಲೀಸ್‌ ಠಾಣೆಗೆ ದೂರು ನೀಡಲಾಯಿತು. ಕಡಬ ಪರಿಸರದ ಎಲ್ಲಾ ಮಸೀದಿಗಳು, ಎಸ್ಕೆಎಸ್ಸೆಸ್ಸೆಫ್, ಎಸ್ಸೆಸ್ಸೆಫ್, ಪಿಎಫ್ಐ ಕಡಬ ವಲಯ ಮೊದಲಾದವುಗಳಿಂದ ಹಲವು ದೂರುಗಳನ್ನು ನೀಡಲಾಯಿತು. ಪ್ರದೀಪ್ ಕಾಬಾದ ಫೊಟೋವನ್ನು […]

ಕಡಬ: ಮುಸ್ಲಿಂ ಧರ್ಮದ ಅವಹೇಳನ ಪ್ರಕರಣ ► ಆರೋಪಿಯ ಬಂಧನಕ್ಕೆ ಭಾನುವಾರ ಮಧ್ಯಾಹ್ನದ ಗಡುವು Read More »

ಕರಾವಳಿ

ಉಪ್ಪಿನಂಗಡಿ: ಅಕ್ರಮ ಗೋಮಾಂಸ ಸಾಗಾಟ ಪತ್ತೆ ► ವಾಹನ ಸಹಿತ ಓರ್ವ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.21. ಸುಮಾರು 300 ಕೆ.ಜಿ. ಗೋಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಓರ್ವನನ್ನು ಬಂಧಿಸಿದ್ದು, ಇನ್ನೋರ್ವ ಪರಾರಿಯಾದ ಘಟನೆ ಶನಿವಾರದಂದು ನಡೆದಿದೆ. ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನದಲ್ಲಿ ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದಾಗ ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹೊಳೆನರಸೀಪುರದ ಆನಂದ ಎಂಬಾತನನ್ನು ಬಂಧಿಸಿ ವಾಹನ ಸಹಿತ ಗೋಮಾಂಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನೋರ್ವ ಆರೋಪಿ ಹಾಸನದ ನಾಗರಾಜ್ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಉಪ್ಪಿನಂಗಡಿ: ಅಕ್ರಮ ಗೋಮಾಂಸ ಸಾಗಾಟ ಪತ್ತೆ ► ವಾಹನ ಸಹಿತ ಓರ್ವ ವಶಕ್ಕೆ Read More »

ಕರಾವಳಿ

ಸಾಮಾಜಿಕ ಜಾಲತಾಣದಲ್ಲಿ ಕೋಮುಭಾವನೆ ಕೆರಳಿಸಿದ ಪ್ರಕರಣ ► ಕಡಬದ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು

(ನ್ಯೂಸ್ ಕಡಬ) newskadaba.com ಕಡಬ, ಅ.21. ಮುಸ್ಲಿಮರ ಪವಿತ್ರ ಸ್ಥಳವಾದ ಮಕ್ಕಾದ ಮಸೀದಿಯ ಮೇಲೆ ಹನುಮಂತನ ಭಾವಚಿತ್ರವನ್ನಿರಿಸಿ ಮುಸ್ಲಿಂ ಧರ್ಮವನ್ನು ಅವಹೇಳನ ನಡೆಸಲಾಗಿದೆಯೆಂದು ಕಡಬದ ಪಂಚಾಯತ್ ಬಿಲ್ಡಿಂಗ್ ನಲ್ಲಿರುವ ಗಣೇಶ್ ಮೊಬೈಲ್ ಅಂಗಡಿಯ ನೌಕರ ಪ್ರದೀಪ್ ಎಂಬವರ ಮೇಲೆ ಎಸ್ಕೆಎಸ್ಸೆಸ್ಸೆಫ್ ಕಡಬ ವಲಯದ ವತಿಯಿಂದ ಕಡಬ ಪೊಲೀಸ್‌ ಠಾಣೆಗೆ ದೂರು ನೀಡಲಾಯಿತು. ಪ್ರದೀಪ್ ಕಾಬಾದ ಫೊಟೋವನ್ನು ತಿರುಚಿ ತನ್ನ 9741469893 ಸಂಖ್ಯೆಯ ವಾಟ್ಸಪ್ ಪ್ರೊಫೈಲ್ ಫೊಟೊವನ್ನಾಗಿ ಉಪಯೋಗಿಸಿ ಮಕ್ಕಾವನ್ನು ಅವಮಾನಿಸುವ ಕೃತ್ಯವನ್ನು ಮಾಡಿದ್ದಲ್ಲದೆ ಮುಸ್ಲಿಮರ ಭಾವನೆಯನ್ನು ಕೆರಳಿಸುವಂತಹ

ಸಾಮಾಜಿಕ ಜಾಲತಾಣದಲ್ಲಿ ಕೋಮುಭಾವನೆ ಕೆರಳಿಸಿದ ಪ್ರಕರಣ ► ಕಡಬದ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು Read More »

ಕರಾವಳಿ

ಚಾಲಕನ ನಿಯಂತ್ರಣ ತಪ್ಪಿದ ಟೈಲ್ಸ್ ಲಾರಿ ► 11 ಜನರ ಮೃತ್ಯು, ಐವರು ಗಂಭೀರ

(ನ್ಯೂಸ್ ಕಡಬ) newskadaba.com ವಿಜಯಪುರ, ಅ.21. ಟೈಲ್ಸ್ ಲಾರಿ ಪಲ್ಟಿಯಾಗಿ 11 ಜನ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದ ಹೊರವಲಯದ ಸಾಂಗ್ಲಿಯ ಟಸ್ಗಾನ್-ಕವಾಥೆ ಮಹನ್ಕಾಲ್ ರಸ್ತೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ. ಮೃತ ದುರ್ದೈವಿಗಳನ್ನು ಮೂಲತಃ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಇಂದಿರಾಬಾಯಿ ನಿಂಬಾಳಕರ (30), ಪರಶುರಾಮ ಪೂಜಾರಿ (30), ಬಸಮ್ಮ ಪೂಜಾರಿ (25), ರೂಪೇಶ್ (25), ಸಂತೋಷ (19), ಅಶೋಕ್ ಬಿರಾದಾರ (50), ಲಕ್ಷ್ಮಿ ಬಾಯಿ ಮಾದರ (30), ಲಕ್ಷ್ಮಣ ಮಾದರ

ಚಾಲಕನ ನಿಯಂತ್ರಣ ತಪ್ಪಿದ ಟೈಲ್ಸ್ ಲಾರಿ ► 11 ಜನರ ಮೃತ್ಯು, ಐವರು ಗಂಭೀರ Read More »

ಕರ್ನಾಟಕ

ವಿಟ್ಲದಲ್ಲೊಂದು ಹನಿಟ್ರ್ಯಾಪ್ ಪ್ರಕರಣ ► ಯುವಕನಿಗೆ ಹಲ್ಲೆಗೈದು ಕಾರು, ನಗದು, ಚಿನ್ನಾಭರಣ ದರೋಡೆ

(ನ್ಯೂಸ್ ಕಡಬ) newskadaba.com ವಿಟ್ಲ, ಅ.21. ಯುವಕನೋರ್ವನ ಮೇಲೆ ಹಲ್ಲೆ‌ ನಡೆಸಿ ಸ್ವತ್ತುಗಳನ್ನು ದರೋಡೆಗೈದ ಘಟನೆ ಶನಿವಾರ ಮುಂಜಾನೆ ವಿಟ್ಲ ಸಮೀಪದ ಕುಡ್ತಮೊಗೇರು ಎಂಬಲ್ಲಿ ನಡೆದಿದೆ. ಹನೀಫ್ ಎಂಬಾತನೇ ತಂಡದಿಂದ ಹಲ್ಲೆಗೊಳಗಾದ ಯುವಕ. ಕುಡ್ತಮೊಗೇರು ಫ್ಲ್ಯಾಟ್ ನಲ್ಲಿ ಮುಂಜಾನೆ ಮೂರು ಗಂಟೆ ಸುಮಾರಿಗೆ ತಂಡವೊಂದು ಹಲ್ಲೆ ನಡೆಸಿ ಹನೀಫ್ ಬಳಿಯಿದ್ದ ಸ್ವಿಫ್ಟ್ ಕಾರು, ಐದು ಪವನ್ ಚಿನ್ನಾಭರಣ ಹಾಗೂ ನಗದು ಹಣದೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾಗಿರುವ ಹನೀಫ್ ನನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಟ್ಲದಲ್ಲೊಂದು ಹನಿಟ್ರ್ಯಾಪ್ ಪ್ರಕರಣ ► ಯುವಕನಿಗೆ ಹಲ್ಲೆಗೈದು ಕಾರು, ನಗದು, ಚಿನ್ನಾಭರಣ ದರೋಡೆ Read More »

ಕರಾವಳಿ

ಕೊಂಬಾರು: ಮರಕ್ಕೆ ಢಿಕ್ಕಿ ಹೊಡೆದ ಕಾರು ► ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಅ.21. ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಎಂಬಲ್ಲಿ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡು, ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಬೆಂಗಳೂರು ಸುಂಕದಕಟ್ಟೆ ನಿವಾಸಿಗಳಿದ್ದ ತಂಡ ಧರ್ಮಸ್ಥಳ, ಸೌತಡ್ಕ ದೇವರ ದರ್ಶನ ಮುಗಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿನ ಮರಕ್ಕೆ ಢಿಕ್ಕಿ ಹೊಡೆದುದರಿಂದ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು

ಕೊಂಬಾರು: ಮರಕ್ಕೆ ಢಿಕ್ಕಿ ಹೊಡೆದ ಕಾರು ► ಇಬ್ಬರು ಗಂಭೀರ Read More »

ಕರಾವಳಿ

ಅಪಘಾತ ತಡೆಯಲು ರಾಜ್ಯ ಸರ್ಕಾರದ ಚಿಂತನೆ ► 100 ಸಿಸಿ ವಾಹನಗಳಲ್ಲಿ ಹಿಂಬದಿಯಲ್ಲಿ ಸವಾರಿ ಮಾಡುವಂತಿಲ್ಲ..!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.21. 100 ಸಿಸಿ ವಾಹನಗಳಿಗೆ ಅನ್ವಯವಾಗುವಂತೆ ಹಿಂಬದಿ ಸವಾರರನ್ನು ನಿರ್ಬಂಧಿಸಲು ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರಿನಲ್ಲಿ ಗುಂಡಿಗಳಿಗೆ ಬಿದ್ದು ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹಿಂಬದಿ ಕುಳಿತಿದ್ದ ಮಕ್ಕಳು ಸಾವನ್ನಪ್ಪಿರೋ ಪ್ರಕರಣಗಳು ಹೆಚ್ಚಾಗಿ ದಾಖಲಾಗಿರುವ ಹಿನ್ನಲೆಯಲ್ಲಿ ಸಾವು ನೋವು ತಪ್ಪಿಸಲು ರಾಜ್ಯ ಸರ್ಕಾರ  ಹೊಸ ಆದೇಶ ತರಲು ನಿರ್ಧರಿಸಿದೆ.  ಈ ಕುರಿತು ಹೈಕೋರ್ಟ್ ಗೆ ಸರ್ಕಾರ ಈಗಾಗಲೇ ಅಫಿಡವಿಟ್ ಸಲ್ಲಿಸಿದ್ದು ಒಂದು ವಾರದೊಳಗೆ ಅಧಿಕೃತ ಆದೇಶ ಹೊರ

ಅಪಘಾತ ತಡೆಯಲು ರಾಜ್ಯ ಸರ್ಕಾರದ ಚಿಂತನೆ ► 100 ಸಿಸಿ ವಾಹನಗಳಲ್ಲಿ ಹಿಂಬದಿಯಲ್ಲಿ ಸವಾರಿ ಮಾಡುವಂತಿಲ್ಲ..!!! Read More »

ಕರಾವಳಿ

ಪಟಾಕಿ ಅವಾಂತರ..!!! ► ಬಾಲಕನ 2 ಕಣ್ಣು ಹಾಗೂ ಕೈ ಕಾಲುಗಳಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಅ.18. ಬಾಲಕನೊಬ್ಬ ಪಟಾಕಿ ಸಿಡಿಸುವ ವೇಳೆ ಗಂಭೀರವಾಗಿ ಗಾಯಗೊಂಡ ಘಟನೆ ಬಳ್ಳಾರಿಯ ಬೆಂಗಳೂರು ರಸ್ತೆಯ ನಾಲ್ ಕಮಾನ್ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ. 11 ವರ್ಷದ ಬಾಲಕ ನರಸಿಂಹ ಪಟಾಕಿ ಸಿಡಿಸುವ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಏಕಕಾಲಕ್ಕೆ ಸಾಕಷ್ಟು ಪಟಾಕಿಗಳನ್ನು ಒಟ್ಟಾಗಿ ಸೇರಿಸಿ ಸಿಡಿಸುವ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆಯಲ್ಲಿ ಬಾಲಕ ನರಸಿಂಹನ 2 ಕಣ್ಣು ಹಾಗೂ ಕೈ ಕಾಲುಗಳು ಸಾಕಷ್ಟು ಸುಟ್ಟಿದ್ದು, ಗಾಯಾಳು ಬಾಲಕನನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಷಣಾರ್ಧದಲ್ಲೆ ಘಟನೆ

ಪಟಾಕಿ ಅವಾಂತರ..!!! ► ಬಾಲಕನ 2 ಕಣ್ಣು ಹಾಗೂ ಕೈ ಕಾಲುಗಳಿಗೆ ಗಂಭೀರ ಗಾಯ Read More »

ಕರಾವಳಿ

ಕೈಕಾಲು ಕಟ್ಟಿದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ನೀರಿನಲ್ಲಿ ಪತ್ತೆ ► ಕೊಲೆ ಶಂಕೆ

(ನ್ಯೂಸ್ ಕಡಬ) newskadaba.com ಮಂಡ್ಯ, ಅ.18. ಜಿಲ್ಲೆಯ ಪಾಂಡವಪುರದ ವಿಶ್ವೇಶ್ವರಯ್ಯ ನಾಲೆಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ತೇಲಿ ಬಂದಿರೋ ಘಟನೆ ಬೆಳಕಿಗೆ ಬಂದಿದೆ. ಈ ಅಪರಿಚಿತ ವ್ಯಕ್ತಿಗೆ ಸುಮಾರು 42 ವರ್ಷ ಪ್ರಾಯವಾಗಿರಬಹುದು ಎಂದು ಅಂದಾಜಿಸಲಾಗಿದೆ. ವ್ಯಕ್ತಿಯ ಕೈಕಾಲುಗಳನ್ನು ಕಟ್ಟಿದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ನಾಲೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ನಾಲೆಯಲ್ಲಿ ವ್ಯಕ್ತಿಯ ಮೃತದೇಹ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.  

ಕೈಕಾಲು ಕಟ್ಟಿದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ನೀರಿನಲ್ಲಿ ಪತ್ತೆ ► ಕೊಲೆ ಶಂಕೆ Read More »

ಕರಾವಳಿ

ದಂತ ಕುಳಿಗೂ ಬಂತು ಬಹ್ಮಾಸ್ತ್ರ ► ಡಾ| ಮುರಲೀ ಮೋಹನ್ ಚೂಂತಾರು ಅವರ ವಿಶೇಷ ಲೇಖನ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಅ.18. ಬಹಳಷ್ಟು ವರ್ಷಗಳಿಂದ ದಂತ ಕುಳಿ ಅಥವಾ ಆಡುಭಾಷೆಯಲ್ಲಿ ಹೇಳುವುದಾದರೆ ಹಲ್ಲಿನಲ್ಲಿ ಹುಳುಕಾಗುವುದು ಎಂಬುದು ದಂತ ವೈದ್ಯರಿಗೆ ಕಬ್ಬಿಣದ ಕಡಲೆಯಾಗಿಯೇ ಉಳಿದಿತ್ತು. ಯಾವ ನೋವಾದರೂ ಸಹಿಸಬಹುದು ಹಲ್ಲು ನೋವಿನ ಸಹವಾಸವೇ ಬೇಡ ಎಂಬುದು ಹಲ್ಲು ನೋವಿನಿಂದ ಬಳಲಿದವರ ಮನದಾಳದ ಮಾತು. ನೋವಿನ ಚರಿತ್ರೆಯನ್ನು ಅವಲೋಕಿಸಿದಾಗ ಹೆರಿಗೆ ನೋವಿನ ನಂತರದ ಸ್ಥಾನ ಹಲ್ಲುನೋವಿಗೆ ಅನಾಯಾಸವಾಗಿ ಯಾವತ್ತೂ ಸಿಗುತ್ತದೆ. ಒಮ್ಮೆ ಹಲ್ಲು ಹುಳುಕಾದರೆ ಮುಗಿಯಿತು, ಯಾವತ್ತೂ ತಲೆನೋವು. ಯಾವಾಗ ಹಲ್ಲು ನೋವು ಬರುತ್ತದೆ ಎಂಬುದನ್ನು

ದಂತ ಕುಳಿಗೂ ಬಂತು ಬಹ್ಮಾಸ್ತ್ರ ► ಡಾ| ಮುರಲೀ ಮೋಹನ್ ಚೂಂತಾರು ಅವರ ವಿಶೇಷ ಲೇಖನ Read More »

ವಿಶೇಷ ಲೇಖನಗಳು
Scroll to Top