ಪರಿಸರ ಮಾಲಿನ್ಯತಡೆಗಟ್ಟಲುಯುವಜನತೆ ಶಿಕ್ಷಣ ಸಂಸ್ಥೆಗಳ ಜೊತೆಗೆ ಸಂಶೋದನೆಯಲ್ಲಿಕೈಜೋಡಿಸಬೇಕು ➤ ಡಾ. ಎನ್ ವಿನಯ ಹೆಗ್ಡೆ
(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.24.ಪರಿಸರ ಮಾಲಿನ್ಯ ಇಂದಿನ ಸಮಯದಲ್ಲಿ ಮಾನವಜನಾಂಗಎದುರಿಸುತ್ತಿರುವಅತಿದೊಡ್ಡ ಸಮಸ್ಯೆಯಾಗಿದೆ. ಇದನ್ನುತಡೆಗಟ್ಟಲು ಇಂದಿನ ಯುವಜನತೆ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಶೋಧನೆಯಲ್ಲಿ ಕೈಜೋಡಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು, ಇಲ್ಲವೆಂದಾದಲ್ಲಿ ಮುಂದಿನ 50ರಿಂದ60 ವರ್ಷಗಳ ಅವಧಿಯಲ್ಲಿ ಮಾನವಜನಾಂಗ ಭೀಕರ ಪರಿಣಾಮವನ್ನುಎದುರಿಸಬೇಕಾಗಬಹುದುಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎನ್ ವಿನಯ್ ಹೆಗ್ಡೆ ತಿಳಿಸಿದರು. ಅವರುಎನ್‍ಐಟಿಕೆಯಕೆಮಿಕಲ್‍ಇಂಜಿನಿಯರಿಂಗ್ ವಿಭಾಗವು, ವಿದ್ಯಾಸಂಸ್ಥೆಯ ವಜ್ರ ಮಹೋತ್ಸವದ ಅಂಗವಾಗಿ ‘ಪರಿಸರಮಾಲಿನ್ಯತಡೆಗಟ್ಟುವಿಕೆ ಹಾಗೂ ನಿಯಂತ್ರಣ : ಭವಿಷ್ಯದದೃಷ್ಟಿಕೋನ’ ಎಂಬ ವಿಷಯದ ಬಗ್ಗೆ ಭಾರತ ಸರಕಾರದಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, […]





