Kadaba

ಸ್ವ ಉದ್ಯಮದ ಮೂಲಕ ಆತ್ಮನಿರ್ಭಾರ್ ಭಾರತ ಚಿಂತನೆ ➤ ಖಾಲಿ ಜಾಗದಲ್ಲಿ ಭತ್ತ ನಾಟಿ ಮಾಡಿದ ಕುಸುಮಧರ್ ಕಾಂತಿಲ

(ನ್ಯೂಸ್ ಕಡಬ) newskadaba.com ಕಮಿಲ , ಜು.26: ಇತ್ತೀಚಿನ ದಿನಗಳಲ್ಲಿ ಯುವ ಜನರು ಹೆಚ್ಚಾಗಿ ಸ್ವ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಆದರೆ ಸರಿಯಾದ ಕಾರ್ಯತಂತ್ರ, ವಿಭಿನ್ನ ಆಲೋಚನೆಗಳಿಲ್ಲದೆ ಉದ್ಯಮದಲ್ಲಿ ನಷ್ಟವನ್ನೂ ಅನುಭವಿಸುತ್ತಾರೆ.   ಭಿನ್ನ ಆಲೋಚನೆ, ಕಠಿಣ ಪರಿಶ್ರಮದಿಂದ ಕೆಲಸ ಮಾಡಿದರೆ ಯಾವುದೇ ಕಾರ್ಯ ಯಶಸ್ಸಾಗುವುದು ನಿಶ್ಚಿತ. ಹೀಗೆ ವಿಭಿನ್ನವಾಗಿ ಯೋಚಿಸಿ ಹುಟ್ಟು ಕೃಷಿ ಚಟುವಟಿಕೆಯಲ್ಲಿ ಮುಂದಾಗಿದ್ದಾರೆ. ಹೌದು, ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಮಿಲ ಎಂಬ ಪುಟ್ಟ ಊರಿನವರು. ಸ್ವಾವಲಂಬಿ ಭಾರತ ನಿರ್ಭರ ಭಾರತ […]

ಸ್ವ ಉದ್ಯಮದ ಮೂಲಕ ಆತ್ಮನಿರ್ಭಾರ್ ಭಾರತ ಚಿಂತನೆ ➤ ಖಾಲಿ ಜಾಗದಲ್ಲಿ ಭತ್ತ ನಾಟಿ ಮಾಡಿದ ಕುಸುಮಧರ್ ಕಾಂತಿಲ Read More »

ಕರಾವಳಿ, ಕರ್ನಾಟಕ

ಕುಕ್ಕೆ ಸುಬ್ರಹ್ಮಣ್ಯ : ತಾರಕೇಶ್ವರಿ ಯು.ಎಸ್ ಅವರಿಗೆ ಡಾಕ್ಟರೇಟ್

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, ಜು.26:  ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾವಿದ್ಯಾಲಯ ಇಲ್ಲಿಯ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿರು ತಾರಕೇಶ್ವರಿ ಯು.ಎಸ್ ಇವರು ತಮ್ಮ ಅಧ್ಯಯನಕ್ಕಾಗಿ ಪ್ರತಿಷ್ಟಿತ ಡಾಕ್ಟರೇಟ್ ಪದವಿಯನ್ನ ಪಡೆದುಕೊಂಡಿದ್ದಾರೆ.   ‘ಕರಾವಳಿ ಕರ್ನಾಟಕದಲ್ಲಿ ಹಿಂದುತ್ವ ರಾಜಕಾರಣ ; ದಕ್ಷಿಣ ಕನ್ನಡದಲ್ಲಿ ಹಿಂದೂ ಸಂಘ ಸಂಸ್ಥೆಗಳ ವಿಸ್ತರಣೆ ಮತ್ತು ಹಿಂದುತ್ವ ಸಿದ್ದಾಂತ ಪ್ರಸರಣದ ಅಧ್ಯಯನ’ ಎಂಬ ವಿಷಯದ ಬಗ್ಗೆ ಡಾಕ್ಟರೇಟ್ ಪದವಿಯನ್ನ ಪಡೆದುಕೊಂಡಿದ್ದಾರೆ. ಇವರಿಗೆ ಮಂಗಳೂರು ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾದ್ಯಾಪಕರಾದ

ಕುಕ್ಕೆ ಸುಬ್ರಹ್ಮಣ್ಯ : ತಾರಕೇಶ್ವರಿ ಯು.ಎಸ್ ಅವರಿಗೆ ಡಾಕ್ಟರೇಟ್ Read More »

ಕರಾವಳಿ, ಕರ್ನಾಟಕ

ಆನ್‍ಲೈನ್ ತರಗತಿ ಹಿನ್ನೆಲೆ – ಮೂಲ ಸೌಕರ್ಯ ಇಲ್ಲದೆ ಮಕ್ಕಳ ಪರದಾಟ

(ನ್ಯೂಸ್ ಕಡಬ) newskadaba.com , ಜು.25: ಕೊರೋನಾ ಹಿನ್ನಲೆ ಶಾಲಾ-ಕಾಲೇಜುಗಳು ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಆನ್‍ಲೈನ್ ಹಾಗೂ ಚಂದನ ವಾಹಿನಿಯಲ್ಲಿ ತರಗತಿಗಳು ಆರಂಭಗೊಂಡಿವೆ.     ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ನಿವಾಸಿಯಾದ ವರುಣ್, ಎಲ್ಲಾ ವಿದ್ಯಾರ್ಥಿಗಳಂತೆ ತಾನೂ ಕಲಿತು ತನ್ನ ಕುಟುಂಬಕ್ಕೆಆಸರೆಯಾಗಬೇಕು ಅನ್ನೋ ಹಂಬಲ. ಈ ಬಾಲಕನ ತಾಯಿ ಬೀಡಿ ಕಟ್ಟಿ ಕುಟುಂಬ ನಿರ್ವಹಿಸುತ್ತಿದ್ದಾರೆ. ತಂಗಿ 8 ನೇ ತರಗತಿಯಲ್ಲಿ ಓದ್ತಾ ಇದ್ದಾಳೆ. ಬಡತನದಲ್ಲಿ ಇರುವ ಇವರ ಮನೆಯಲ್ಲಿ ಆನ್ಲೈನ್

ಆನ್‍ಲೈನ್ ತರಗತಿ ಹಿನ್ನೆಲೆ – ಮೂಲ ಸೌಕರ್ಯ ಇಲ್ಲದೆ ಮಕ್ಕಳ ಪರದಾಟ Read More »

ಕರಾವಳಿ, ಕರ್ನಾಟಕ

ಸ್ವ ಉದ್ಯೋಗದಿಂದ ಯಶಸ್ವಿ ಕಂಡ ಸಹೋದರರು ➤ ಇತರರಿಗೆ ಮಾದರಿಯಾದ ಸವಣೂರಿನ ಯುವಕರು

(ನ್ಯೂಸ್ ಕಡಬ) newskadaba.com ಪುತ್ತೂರು, ಜು.25: ಇತ್ತೀಚಿನ ದಿನಗಳಲ್ಲಿ ಯುವ ಜನರು ಹೆಚ್ಚಾಗಿ ಸ್ವ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಆದರೆ ಸರಿಯಾದ ಕಾರ್ಯತಂತ್ರ, ವಿಭಿನ್ನ ಆಲೋಚನೆಗಳಿಲ್ಲದೆ ಉದ್ಯಮದಲ್ಲಿ ನಷ್ಟವನ್ನೂ ಅನುಭವಿಸುತ್ತಾರೆ. ಸ್ವ ಉದ್ಯೋಗದಲ್ಲೂ ಇನ್ನೊಬ್ಬರ ಅನುಕರಣೆಯೇ ಈ ನಷ್ಟಕ್ಕೆ ಕಾರಣ ಎನ್ನಬಹುದಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಟ್ಟ ಗ್ರಾಮವೊಂದರ ಸಹೋದರರಿಬ್ಬರು ತಮ್ಮ ಸ್ವ ಉದ್ಯೋಗದ ಮೂಲಕ ಹೆಸರುವಾಸಿಯಾಗಿದ್ದಾರೆ. ಕೋಟಿಗಟ್ಟಲೆ ಬಂಡವಾಳ ಹಾಕಿ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ತಯಾರಾಗುವಂತಹ ಪರಿಕರಗಳನ್ನು ತಮ್ಮ ಮನೆಯಲ್ಲೇ ತಯಾರಿಸುವಲ್ಲಿ ಈ

ಸ್ವ ಉದ್ಯೋಗದಿಂದ ಯಶಸ್ವಿ ಕಂಡ ಸಹೋದರರು ➤ ಇತರರಿಗೆ ಮಾದರಿಯಾದ ಸವಣೂರಿನ ಯುವಕರು Read More »

ಕರಾವಳಿ, ಕರ್ನಾಟಕ

ರಾಜ್ಯದಲ್ಲಿ ಕೊರೋನಾ ಭೀತಿ ನಡುವೆ ಬಾಲ್ಯ ವಿವಾಹದ‌ ಸದ್ಧು ➤ 2 ತಿಂಗಳಲ್ಲಿ 17 ಮದುವೆಗೆ ತಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.25:  ಕೊರೋನಾ ಭೀತಿ ನಡುವೆಯೇ ರಾಜ್ಯದಲ್ಲಿ ಬಾಲ್ಯ ವಿವಾಹ ಸದ್ದು ಮಾಡುತ್ತಿದೆ. ಹೌದು ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸದ್ದಿಲ್ಲದೇ ಬಾಲ್ಯ ವಿವಾಹಗಳು ನಡೆಯುತ್ತಿವೆ. ಕೊರೋನಾ‌ ಭೀತಿ ನಡುವೆ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು  ಪೋಷಕರು ಮುಂದಾಗುತ್ತಿದ್ದಾರೆ. ಅದೂ ಹಳ್ಳಿಗಳಲ್ಲೇ ಹೆಚ್ಚು ಬಾಲ್ಯ ವಿವಾಹದ ಸಿದ್ದತೆ ಮಾಡಿಕೊಳ್ಳಲಾಗ್ತಿದೆ ಎಂದು ವನಿತಾ ಸಹಾವಾಣಿಯಿಂದ ಆತಂಕದ ಮಾಹಿತಿ ಬೆಳಕಿಗೆ ಬಂದಿದೆ.       ಹೀಗೆ ತುಮಕೂರು, ಚನ್ನಪಟ್ಟಣ, ಹಾಸನ, ಬೆಂಗಳೂರು  ಗ್ರಾಮಾಂತರ, ಮಂಡ್ಯ

ರಾಜ್ಯದಲ್ಲಿ ಕೊರೋನಾ ಭೀತಿ ನಡುವೆ ಬಾಲ್ಯ ವಿವಾಹದ‌ ಸದ್ಧು ➤ 2 ತಿಂಗಳಲ್ಲಿ 17 ಮದುವೆಗೆ ತಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ : ನೇಣಿಗೆ ಶರಣಾದ 25ರ ಯುವಕ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು.25: ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಕುರುಡೇಲು ಮನೆಯ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಯುವಕನನ್ನು ಕುರುಡೇಲು ಅಣ್ಣಿ ಗೌಡರ ಪುತ್ರ ಸನತ್ (25) ಎಂದು ಗುರುತಿಸಲಾಗಿದೆ.   ತನ್ನ ಮನೆಯ ಸಮೀಪವಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಗೆ ಶರಣಾಗಿದ್ದಾನೆ. ಈತನ ಆತ್ಮಹತ್ಯೆ ನಿಖರ ಕಾರಣ ತಿಳಿದು ಬಂದಿಲ್ಲ. ಧರ್ಮಸ್ಥಳ ಪೊಲೀಸ್ ಠಾಣೆಗೆ ಮನೆಯವರು ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.    

ಬೆಳ್ತಂಗಡಿ : ನೇಣಿಗೆ ಶರಣಾದ 25ರ ಯುವಕ Read More »

ಕರಾವಳಿ

ದ. ಕ ಹಾಗೂ ಉಡುಪಿಯಲ್ಲಿ ಭಾನುವಾರ ಲಾಕ್‌ಡೌನ್‌ ಮುಂದುವರಿಯಲಿದೆ ➤ ಜಿಲ್ಲಾಧಿಕಾರಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಉಡುಪಿ: ಜು.25., ಕೊರೊನಾ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾನುವಾರ ಲಾಕ್‌ಡೌನ್‌ ಮುಂದುವರೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಮತ್ತು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್‌ ಅವರು ಉಭಯ ಜಿಲ್ಲೆಗಳಲ್ಲಿ ಶನಿವಾರ ರಾತ್ರಿ 9 ಗಂಟೆಯಿಂದ ಭಾನುವಾರದ ಲಾಕ್‌ಡೌನ್‌ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಕಳೆದ ಮಂಗಳವಾರ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ ಲೈವ್‌ ಮೂಲಕ ರಾಜ್ಯದ ಜನತೆಯನ್ನು

ದ. ಕ ಹಾಗೂ ಉಡುಪಿಯಲ್ಲಿ ಭಾನುವಾರ ಲಾಕ್‌ಡೌನ್‌ ಮುಂದುವರಿಯಲಿದೆ ➤ ಜಿಲ್ಲಾಧಿಕಾರಿ ಸ್ಪಷ್ಟನೆ Read More »

ಕರಾವಳಿ

ಆನ್‌ಲೈನ್‌ ತರಗತಿ ➤ ಗುಡ್ಡ ಹತ್ತಿ ನೆಟ್‌ವರ್ಕ್‌ಗಾಗಿ ವಿದ್ಯಾರ್ಥಿಗಳ ಪ್ರಯಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.25:  ಕೋವಿಡ್-19 ಸಾಂಕ್ರಾಮಿಕದಿಂದಾಗಿ ಶಾಲೆ-ಕಾಲೇಜುಗಳು ಆರಂಭವಾಗಿಲ್ಲ. ಆದರೆ, ಆನ್‌ಲೈನ್‌ ಪಾಠಗಳೂ ನಿಂತಿಲ್ಲ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್‌ನ ಸಮಸ್ಯೆ ತೀವ್ರವಾಗುತ್ತಿದ್ದು, ಇದಕ್ಕಾಗಿ ಜಿಲ್ಲೆಯ ವಿದ್ಯಾರ್ಥಿಗಳು ಹರಸಾಹಸ ಮಾಡುತ್ತಿದ್ದಾರೆ. ಕಡಬ ತಾಲ್ಲೂಕಿನ ಕೊಯಿಲಾ ಗ್ರಾಮದ ಕುದ್ಲೂರು ಪರಿಸರದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಗುಡ್ಡ ಹತ್ತಿ ನೆಟ್‌ವರ್ಕ್‌ಗಾಗಿ ಪ್ರಯಾಸ ಪಡುತ್ತಿದ್ದಾರೆ. ಇಲ್ಲಿ ಯಾವುದೇ ಸಿಮ್‌ನ ನೆಟ್‌ವರ್ಕ್ ಕೂಡ ಸಿಗುತ್ತಿಲ್ಲ.       ‘ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲವನ್ನೇ ನೋಡಲಾಗದ ಸ್ಥಿತಿ ನಮ್ಮದಾಗಿದೆ. ಮಾತನಾಡಲು ನೆಟ್‌ವರ್ಕ್ ಸಿಗುತ್ತಿಲ್ಲ.

ಆನ್‌ಲೈನ್‌ ತರಗತಿ ➤ ಗುಡ್ಡ ಹತ್ತಿ ನೆಟ್‌ವರ್ಕ್‌ಗಾಗಿ ವಿದ್ಯಾರ್ಥಿಗಳ ಪ್ರಯಾಸ Read More »

ಕರಾವಳಿ

ಕೋವಿಡ್-19 ಸಂಕಷ್ಟ ➤ ನಾಗರ ಪಂಚಮಿಗೆ ಖರೀದಿ ಡಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು.25: ಕೋವಿಡ್-19 ನಿಯಂತ್ರಣ ನಿಟ್ಟಿನಲ್ಲಿ ಈ ಬಾರಿ ಸಾರ್ವಜನಿಕವಾಗಿ ನಾಗರ ಪಂಚಮಿ ಆಚರಣೆ ಇಲ್ಲದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಹೂವು, ಸೀಯಾಳ, ಕೇದಗೆ, ಹಿಂಗಾರ ಶುಕ್ರವಾರ ಮಾರುಕಟ್ಟೆಗೆ ಬಂದಿದೆ. ಆದರೆ ಗ್ರಾಹಕರು ಖರೀದಿಗೆ ಆಸಕ್ತಿ ತೋರಿಲ್ಲ.     ಶ್ರೀ ಕ್ಷೇತ್ರ ಕುಕ್ಕೆ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಪ್ರತಿ ವರ್ಷ ನಾಗರ ಪಂಚಮಿ ದಿನದಂದು ಬೆಳಗ್ಗಿನ ಜಾವವೇ ಭಕ್ತರು ಸಾಲಿನಲ್ಲಿ ನಿಲ್ಲುತ್ತಿದ್ದರು. ಈ ವರ್ಷ

ಕೋವಿಡ್-19 ಸಂಕಷ್ಟ ➤ ನಾಗರ ಪಂಚಮಿಗೆ ಖರೀದಿ ಡಲ್ Read More »

ಕರಾವಳಿ

ಕಂಟೈನರ್ ನಲ್ಲಿ 17 ಜಾನುವಾರುಗಳ ಸಾಗಾಟ ➤ ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು

(ನ್ಯೂಸ್ ಕಡಬ) newskadaba.com ಹೊಸಂಗಡಿ, ಜು.25: ಅಕ್ರಮವಾಗಿ ಕಂಟೈನರ್ ವಾಹನದಲ್ಲಿ 17 ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವುದನ್ನು ಅಮಾಸೆಬೈಲು ಠಾಣೆಯ ಪೋಲಿಸರು ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ಪತ್ತೆ ಹಚ್ಚಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು  ಹೆಡೆಮುರಿ ಕಟ್ಟಿದಾರೆ.  ಬಂಧಿತ ಆರೋಪಿಗಳನ್ನು ಹನೀಫ್ ಮಂಗಳೂರು, ಜಾಫರ್ ಸಾಧಿಕ್ ಎಂದು ಗುರುತಿಸಲಾಗಿದೆ.     ಜು.25 ಬೆಳಿಗ್ಗೆ 5 ಗಂಟೆಗೆ ಹೊಸಂಗಡಿ ಚೆಕ್‍ಪೋಸ್ಟ್‍ನಲ್ಲಿ ವಾಹನ ತಪಾಸಣೆಯ ವೇಳೆ ಹುಲಿಕಲ್ ಘಾಟಿ ಕಡೆಯಿಂದ ಚೆಕ್‍ಪೋಸ್ಟ್ ಕಡೆಗೆ ಬರುತ್ತಿದ್ದ ಕೆ.ಎ 17 ಡಿ 6471

ಕಂಟೈನರ್ ನಲ್ಲಿ 17 ಜಾನುವಾರುಗಳ ಸಾಗಾಟ ➤ ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು Read More »

ಕರಾವಳಿ
Scroll to Top