Kadaba

ಕಡಬ: ವಲಸೆ ಹಕ್ಕಿ ಸಮೂಹಕ್ಕೆ ಪಟಾಕಿ ಎಸೆದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಕಡಬ, ಸೆ. 04: ಕಡಬ ಪೊಲೀಸ್‌ ಠಾಣೆ ಸಮೀಪ ಮರದಲ್ಲಿ ಗುಂಪಾಗಿ ವಾಸವಿರುವ ವಲಸೆ ಹಕ್ಕಿ ಸಮೂಹಕ್ಕೆ ಇಂದು (ಗುರುವಾರ) ಕಿಡಿಗೇಡಿಗಳು ಪಟಾಕಿ ಎಸೆದು ವಿಕೃತಿ ಮೆರೆದಿದ್ದಾರೆ.     ಕಡಬದ ಮಾಡ ದೈವಸ್ಥಾನದ ಮುಂಭಾಗದಲ್ಲಿ ಈ ಮರವಿದ್ದು ಅಧಿಕ ಪಟಾಕಿಗಳನ್ನು ಎಸೆದ ಪರಿಣಾಮ ಗೂಡಿನಿಂದ ಹಕ್ಕಿಗಳು ಚೆಲ್ಲಾಪಿಲ್ಲಿಯಾಗಿ ಹಾರಾಡುವ ದೃಶ್ಯ ಕಂಡುಬಂದಿದೆ. ಲೋಕೋಪಯೋಗಿ ಇಲಾಖೆಯ ರಸ್ತೆ ಮಾರ್ಜಿನ್ ನಲ್ಲಿ ಈ ಮರವಿದ್ದು ಇದರ ಕೆಳಗೆ ಕೆಲ ವ್ಯಕ್ತಿಗಳು ಅನಧಿಕೃತ ಗೂಡಂಗಡಿಗಳನ್ನು ತೆರೆದು […]

ಕಡಬ: ವಲಸೆ ಹಕ್ಕಿ ಸಮೂಹಕ್ಕೆ ಪಟಾಕಿ ಎಸೆದ ಕಿಡಿಗೇಡಿಗಳು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

PSI ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ➤ ಹಣ ಕೇಳಿ ವಂಚಿಸಿದ ಕಿರಾತಕ

(ನ್ಯೂಸ್ ಕಡಬ) newskadaba.com ಕಾರವಾರ. ಸೆ.04:  ಟಿ ನಗರದ ಗ್ರಾಮೀಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರೇವಣಸಿದ್ದಪ್ಪ ಅವರ ಹೆಸರಿನಲ್ಲಿ ಫೇಸ್‌ಬುಕ್‌ ನಕಲಿ ಖಾತೆಯೊಂದನ್ನು ತೆರೆದು ವಂಚಿಸಿದ ಬಗ್ಗೆ ಸಿ.ಇ.ಎನ್ ಅಪರಾಧ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ. ಅವರ ಫೇಸ್‌ಬುಕ್ ಖಾತೆಯಿಂದ ಭಾವಚಿತ್ರ ಡೌನ್‌ಲೋಡ್ ಮಾಡಿಕೊಂಡ ಅಪರಿಚಿತ ಆರೋಪಿ, ನಕಲಿ ಖಾತೆಯನ್ನು ತೆರೆದಿದ್ದಾನೆ.   ಬಳಿಕ ಅವರ ಸ್ನೇಹಿತರಿಗೆ ‘ಫ್ರೆಂಡ್ ರಿಕ್ವೆಸ್ಟ್’ ಕಳುಹಿಸಿದ್ದ. ಅದನ್ನು ಸ್ವೀಕರಿಸಿದವರೊಂದಿಗೆ ‘ಮೆಸೆಂಜರ್’ ಮೂಲಕ ಮಾತಿಗೆ ಇಳಿದು, ತುರ್ತಾಗಿ  10 ಸಾವಿರ ಅಗತ್ಯವಿದೆ. ಕಳುಹಿಸಿಕೊಡುವಂತೆ

PSI ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ➤ ಹಣ ಕೇಳಿ ವಂಚಿಸಿದ ಕಿರಾತಕ Read More »

ಕರಾವಳಿ, ಕ್ರೈಮ್ ನ್ಯೂಸ್

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ ➤ ಕಡಬ ತಾಲೂಕಿನ ನಾಲ್ವರು ಶಿಕ್ಷಕರು ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 04: 2020-21 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಡಬ ತಾಲೂಕಿನ ನಾಲ್ವರು ಮತ್ತು ಪುತ್ತೂರು ಮತ್ತು ಬಂಟ್ವಾಳ ತಾಲೂಕಿನ ಓರ್ವ ಶಿಕ್ಷಕ ಆಯ್ಕೆಗೊಂಡಿದ್ದಾರೆ. ಕಡಬ ತಾಲೂಕಿನಿಂದ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕುಂಡಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪಿ.ಎಸ್.ನಾರಾಯಣ ಮತ್ತು ಬಾನಡ್ಕ ಕಿ.ಪ್ರಾ.ಶಾಲೆಯ ಶಿಕ್ಷಕಿ ಶ್ರೀಮತಿ ಜಾನಕಿ ಪ್ರೌಢಶಾಲಾ ವಿಭಾಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ವೆಂಕಟೇಶ್‌ ದಾಮ್ಲೆ ಮತ್ತು ಕಡಬ

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ ➤ ಕಡಬ ತಾಲೂಕಿನ ನಾಲ್ವರು ಶಿಕ್ಷಕರು ಆಯ್ಕೆ Read More »

ಕರಾವಳಿ, ಕರ್ನಾಟಕ

ಮಂಗಳೂರು :ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು. ಸೆ.04:  ಮಂಗಳೂರು ಬಂದರು ಠಾಣೆಯ ಪೊಲೀಸ್ ಸಿಬ್ಬಂದಿ ದಿನೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಿನೇಶ್(44) ಮೃತಪಟ್ಟ ಪೊಲೀಸ್ ಸಿಬ್ಬಂದಿ. ದಿನೇಶ್ ರವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಗುರುವಾರ ಬೆಳಗ್ಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ಧಾರೆ. ಎಂದು ಮೂಲಗಳು ತಿಳಿಸಿವೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಲಸೆ ಕರ್ತವ್ಯದಲ್ಲಿ ಕೆಲಸ ಮಾಡುತ್ತಿದ್ದಾಗ ಉತ್ತಮ ಸೇವಾ ದಾಖಲೆ ಹೊಂದಿದ್ದರು.

ಮಂಗಳೂರು :ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ನಿಧನ Read More »

ಕರಾವಳಿ

ಕಾಸರಗೋಡು: ಅಪಾರ್ಟ್‌ಮೆಂಟ್‌ನಲ್ಲಿ ಬಚ್ಚಿಟ್ಟ ಗಾಂಜಾ ವಶಕ್ಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 04: ಅಪಾರ್ಟ್ ಮೆಂಟ್‌‌ವೊಂದರಲ್ಲಿ ಬಚ್ಚಿಡಲಾಗಿದ್ದ ಸುಮಾರು 18. 5 ಕಿಲೋ ಗಾಂಜಾವನ್ನು ಕುಂಬಳೆ ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಲಾಗಿದೆ.   ಆರೋಪಿ ಸಯ್ಯಿದ್ ಜಾಬಿರ್ (32) ಎಂಬಾತನನ್ನು ಬಂಧಿಸಿದ್ದಾರೆ. ವರ್ಕಾಡಿ ಮೊರತ್ತಣೆಯ ಮನೆಯೊಂದರಲ್ಲಿ ಗಾಂಜಾ ಬಚ್ಚಿಡಲಾಗಿತ್ತು. ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ.  

ಕಾಸರಗೋಡು: ಅಪಾರ್ಟ್‌ಮೆಂಟ್‌ನಲ್ಲಿ ಬಚ್ಚಿಟ್ಟ ಗಾಂಜಾ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಂಗಳೂರು-ಮಂಗಳೂರು ರೈಲು ಸೇವೆ ಮತ್ತೆ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 04: ಕರಾವಳಿ ವಿಭಾಗದಲ್ಲಿ ಮೂರು ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಿಭಾಗಕ್ಕೆ ರೈಲ್ವೆ ಮಂಡಳಿ ಅನುಮತಿ ನೀಡಿದ್ದು, ಇದರಲ್ಲಿ ಕಾರವಾರ-ಯಶವಂತ ಪುರ-ಕಾರವಾರ ರೈಲು ಕಾರ್ಯಾರಂಭಿಸಲಿದೆ.   ಸೆಪ್ಟೆಂಬರ್‌ 4ರ ಶುಕ್ರವಾರ ಸಂಜೆ 6.45ಕ್ಕೆ ನಂ.06585 ಯಶವಂತಪುರ ಹಾಗೂ ಕಾರವಾರ ನಡುವೆ ಕಾರ್ಯಾರಂಭಿಸಲಿದೆ. ಸೆಪ್ಟೆಂಬರ್‌ 5ರಂದು ಸಂಜೆ 6 ಗಂಟೆಗೆ ನಂ. 6595 ರೈಲು ಕಾರವಾರದಿಂದ ಹೊರಡಲಿದೆ. ಇನ್ನು ನಂ.16595/16596 ರೈಲುಗಳದ್ದೇ ವೇಳಾಪಟ್ಟಿ ಇವುಗಳಿಗೆ ಅನ್ವಯವಾಗಲಿದೆ. ಬೆಂಗಳೂರು-ಮಂಗಳೂರಿನ (06515) ನಡುವೆ

ಬೆಂಗಳೂರು-ಮಂಗಳೂರು ರೈಲು ಸೇವೆ ಮತ್ತೆ ಆರಂಭ Read More »

ಕರಾವಳಿ, ಕರ್ನಾಟಕ

ಪ್ರೇಮಿಯ ಜೊತೆ ಅಕ್ಕ ಪರಾರಿ ➤ ಆಘಾತದಿಂದ ತಂಗಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ. ಸೆ.04:   ಕಾರ್ಕಳದ ಮಾಳ ಗ್ರಾಮದಲ್ಲಿ ಅಕ್ಕ ಪ್ರೀತಿಸಿದ ಹುಡುಗನೊಂದಿಗೆ ಪರಾರಿಯಾಗಿದ್ದರಿಂದ ಆಘಾತಕ್ಕೊಳಗಾದ ತಂಗಿ ಮೃತಪಟ್ಟಿದ್ದಾಳೆ. ಯುವತಿ ಆಹಾರ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ದಿನಗಳಿಂದ ಆಕೆ ನಾಪತ್ತೆಯಾಗಿದ್ದು, ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ. ಕಳೆದ ದಿನ ತಂಗಿಯ ಮೊಬೈಲ್ ಗೆ ಕರೆ ಮಾಡಿದ ಅಕ್ಕ ಮನೆಯಲ್ಲಿ ನೋಡಿದ ಹುಡುಗನೊಂದಿಗೆ ಮದುವೆಯಾಗಲು ಇಷ್ಟವಿಲ್ಲದ ಕಾರಣ ಪ್ರೀತಿಸಿದ ಸಹೋದ್ಯೋಗಿ ಯುವಕನೊಂದಿಗೆ ಹೋಗಿದ್ದೇನೆ ಎಂದು ತಿಳಿಸಿದ್ದಾಳೆ. ಅಲ್ಲದೆ ಹುಡುಕುವ ಪ್ರಯತ್ನ ಮಾಡದಂತೆ ತಂಗಿಗೆ ತಿಳಿಸಿದ್ದಾಳೆ.

ಪ್ರೇಮಿಯ ಜೊತೆ ಅಕ್ಕ ಪರಾರಿ ➤ ಆಘಾತದಿಂದ ತಂಗಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಿಕೃತ ಮನಸ್ಸಿನ ಪುಸ್ತಕ ಮಾರಾಟಗಾರ ➤ 10ರ ಬಾಲೆ ಮೇಲೆ ಬಿತ್ತು ಆತನ ಕಣ್ಣು ..!

(ನ್ಯೂಸ್ ಕಡಬ) newskadaba.com ಬರೇಲಿ , ಸೆ.04:  ಸ್ಥಳೀಯ ಪುಸ್ತಕ ಮಾರಾಟಗಾರನೊಬ್ಬ ಪುಸ್ತಕ ಖರೀದಿಸಲು ಬಂದ 10 ವರ್ಷದ ಬಾಲಕಿಯ ಮೇಲೆ ದುಷ್ಕೃತ್ಯ ಎಸಗಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.   ಬಾಲಕಿ ನೋಟ್ ಬುಕ್ ಖರೀದಿಸಲು ಆರೋಪಿಯ ಅಂಗಡಿಗೆ ಹೋದಾಗ ಆತ ಆಕೆಯ ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ. ಆಗ ಬಾಲಕಿ ಆತನಿಂದ ತಪ್ಪಿಸಿಕೊಂಡು ಬಂದು ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಬಾಲಕಿಯ ಪೋಷಕರು ಕಲಾನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ

ವಿಕೃತ ಮನಸ್ಸಿನ ಪುಸ್ತಕ ಮಾರಾಟಗಾರ ➤ 10ರ ಬಾಲೆ ಮೇಲೆ ಬಿತ್ತು ಆತನ ಕಣ್ಣು ..! Read More »

ಕ್ರೈಮ್ ನ್ಯೂಸ್

ಸಿಸಿಬಿ ಯಿಂದ ನಟಿ ರಾಗಿಣಿ ದ್ವಿವೇದಿ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು. ಸೆ.04:  ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಅವರನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ. ಇಂದು ಬೆಳಗ್ಗೆ ಯಲಹಂಕದಲ್ಲಿರುವ ರಾಗಿಣಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪ್ರಶ್ನೋತ್ತರದ ಬಳಿಕ ಸಿಸಿಬಿ ಅಧಿಕಾರಿಗಳು ರಾಗಿಣಿ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.   ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಶೆಯ ನಂಟಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿನ್‌ಎ ನಟಿ ರಾಗಿಣಿ ದ್ವಿವೇದಿಯನ್ನು ವಿಚಾರಣೆಗೆ ಹಾಜರಾಗುವಂತೆ

ಸಿಸಿಬಿ ಯಿಂದ ನಟಿ ರಾಗಿಣಿ ದ್ವಿವೇದಿ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾರ್ಕಳ : ವಿವಾಹ ನಿಶ್ಚಿತಗೊಂಡಿದ್ದ ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಾರ್ಕಳ. ಸೆ.03:  ಮಾಳದ 20 ಹರೆಯದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಮಾಳ ಗ್ರಾಮದ ಯುವತಿ ಸ್ಥಳೀಯ ಸಿಹಿ ತಿಂಡಿ ಕಾರ್ಖಾನೆಯೊಂದರಲ್ಲಿ‌ ಕೆಲಸ ಮಾಡುತ್ತಿದಳು. ಇತ್ತೀಚೆಗೆ ಆಕೆಗೆ ಯುವಕನೋರ್ವನ ಜತೆ ಮದುವೆ ನಿಗದಿಯಾಗಿತ್ತು ಎನ್ನಲಾಗಿದೆ.     ಆದರೆ ಆಕೆ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು ಆತನ ಜೊತೆಯೇ ತೆರಳಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಯುವತಿಯ ಮನೆಯವರು ಕೂಡ ಅದೇ ಸಂಶಯ ವ್ಯಕ್ತಪಡಿಸಿದ್ದಾರೆ. ಗೊತ್ತು ಪಡಿಸಿದ ಯುವಕನ ಜೊತೆ ವಿವಾಹಕ್ಕೆ ಇಷ್ಟವಿಲ್ಲದೆ

ಕಾರ್ಕಳ : ವಿವಾಹ ನಿಶ್ಚಿತಗೊಂಡಿದ್ದ ಯುವತಿ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top