ಕಾರ್ಕಳ : ವಿವಾಹ ನಿಶ್ಚಿತಗೊಂಡಿದ್ದ ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಾರ್ಕಳ. ಸೆ.03:  ಮಾಳದ 20 ಹರೆಯದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಮಾಳ ಗ್ರಾಮದ ಯುವತಿ ಸ್ಥಳೀಯ ಸಿಹಿ ತಿಂಡಿ ಕಾರ್ಖಾನೆಯೊಂದರಲ್ಲಿ‌ ಕೆಲಸ ಮಾಡುತ್ತಿದಳು. ಇತ್ತೀಚೆಗೆ ಆಕೆಗೆ ಯುವಕನೋರ್ವನ ಜತೆ ಮದುವೆ ನಿಗದಿಯಾಗಿತ್ತು ಎನ್ನಲಾಗಿದೆ.

 

 

ಆದರೆ ಆಕೆ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು ಆತನ ಜೊತೆಯೇ ತೆರಳಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಯುವತಿಯ ಮನೆಯವರು ಕೂಡ ಅದೇ ಸಂಶಯ ವ್ಯಕ್ತಪಡಿಸಿದ್ದಾರೆ. ಗೊತ್ತು ಪಡಿಸಿದ ಯುವಕನ ಜೊತೆ ವಿವಾಹಕ್ಕೆ ಇಷ್ಟವಿಲ್ಲದೆ ಮನೆ ಬಿಟ್ಟು ಹೋಗಿರುವುದಾಗಿ ಅನುಮಾನ ವ್ಯಕ್ತಪಡಿಸಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top