Kadaba

ಅಕ್ರಮ ಆಸ್ತಿಗಳಿಕೆ ಪ್ರಕರಣ ➤ ಜೈಲಲ್ಲಿರುವ ಶಶಿಕಲಾಗೆ ಐಟಿ ಬಿಗ್ ಶಾಕ್.!!

(ನ್ಯೂಸ್ ಕಡಬ) newskadaba.com ಚೆನ್ನೈ, ಅ. 08 : ಅಕ್ರಮ ಆಸ್ತಿಗಳಿಕೆ ಕೇಸ್‍ನಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಲ್ಲಿರುವ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್‍ಗೆ ಆದಾಯ ತೆರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ.ಶಶಿಕಲಾಗೆ ಸಂಬಂಧಿಸಿದ 2000 ಕೋಟಿ ಮೌಲ್ಯದ ಆಸ್ತಿಯನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.   ಇಳವರಸಿ, ಸುಧಾಕರನ್‍ಗೆ ಸೇರಿದ ಆಸ್ತಿಗಳನ್ನು ಸೀಜ್ ಮಾಡಲಾಗಿದೆ. ಸಿರುತ್ತಾವೂರ್, ಕೊಡನಾಡಿನಲ್ಲಿರುವ 300 ಕೋಟಿ ಮೌಲ್ಯದ ಆಸ್ತಿಯೂ ಇದ್ರಲ್ಲಿ ಸೇರಿದೆ. ಈ ಸಂಬಂಧ ಪ್ರಕಟಣೆ ಬಿಡುಗಡೆ ಮಾಡಿರುವ […]

ಅಕ್ರಮ ಆಸ್ತಿಗಳಿಕೆ ಪ್ರಕರಣ ➤ ಜೈಲಲ್ಲಿರುವ ಶಶಿಕಲಾಗೆ ಐಟಿ ಬಿಗ್ ಶಾಕ್.!! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ನೇಣಿಗೆ ಶರಣು

(ನ್ಯೂಸ್ ಕಡಬ) newskadaba.com ಚಂಡೀಗಢ, ಅ. 08: ಸಿಬಿಐ ಮಾಜಿ ನಿರ್ದೇಶಕ, ನಾಗಲ್ಯಾಂಡ್ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಮ್ಲಾದ ಅವರ ನಿವಾಸದಲ್ಲಿ ಬುಧವಾರ ನೇಣು ಬಿಗಿದ ಸ್ಥಿತಿಯಲ್ಲಿ ಅಶ್ವನಿ ಅವರ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.   ಡೆತ್ ನೋಟ್ ನಲ್ಲಿ ಜೀವನದಲ್ಲಿ ತುಂಬಾನೆ ಬೇಸರಗೊಂಡಿದ್ದೇನೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅಶ್ವನಿ ಬರೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಶ್ವನಿ

ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ನೇಣಿಗೆ ಶರಣು Read More »

ರಾಷ್ಟ್ರೀಯ ನ್ಯೂಸ್

ಸವಣೂರು: ಮಿನಿಡಂಪರ್ ಆವಿಷ್ಕಾರ ಮಾಡಿದ ಯುವಕನಿಗೆ ಶಾಸಕ ವೇದಾವ್ಯಾಸ ಕಾಮತ್ ನೆರವು

(ನ್ಯೂಸ್ ಕಡಬ) newskadaba.com ಸವಣೂರು, ಅ.08: ಕಡಬ ತಾಲೂಕಿನ ಸವಣೂರು ಸಮೀಪದ ಪಾಲ್ತಾಡಿ ಗ್ರಾಮದ ಬಂಬಿಲ ನಿವಾಸಿ ಪುರುಷೋತ್ತಮ ಅವರು ಮಿನಿಡಂಪರ್‌ ಆವಿಷ್ಕಾರ ಮಾಡಿದ್ದು, ಇದೀಗ ಅವರಿಗೆ ಮಂಗಳೂರು ಶಾಸಕ ವೇದಾವ್ಯಾಸ ಕಾಮತ್‌ರವರು ನೆರವಾಗುವ ಮೂಲಕ ಯುವಕನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.     ಶಾಸಕ ವೇದಾವ್ಯಾಸ ಕಾಮತ್‌ ಅವರು ಪುರುಷೋತ್ತಮ ಅವರ ಮಿನಿ ಆವಿಷ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಮನೆಗೆ ಸುಮಾರು 50,000/- ವೆಚ್ಚದಲ್ಲಿ ಶೆಡ್‌ ನಿರ್ಮಾಣ ಸೇರಿದಂತೆ ಇರತ ಪರಿಕರಗಳನ್ನು ಒಪ್ಪಿಸುವಲ್ಲಿ ಪಾತ್ರರಾಗಿದ್ದಾರೆ. ವೇದಾವ್ಯಾಸ

ಸವಣೂರು: ಮಿನಿಡಂಪರ್ ಆವಿಷ್ಕಾರ ಮಾಡಿದ ಯುವಕನಿಗೆ ಶಾಸಕ ವೇದಾವ್ಯಾಸ ಕಾಮತ್ ನೆರವು Read More »

ಕರಾವಳಿ

ಅ.8: ಇಂದು ಭಾರತೀಯ ವಾಯುಪಡೆ ದಿನಾಚರಣೆ

(ನ್ಯೂಸ್ ಕಡಬ) newskadaba.com ನವದೆಹಲಿ, ಅ.08: ಕೊರೋನಾ ಸೋಂಕು ವಿಶ್ವದಾದ್ಯಂತ ಹರಡುತ್ತಿದ್ದು, ಕೊರೋನಾವನ್ನು ಭಾರತ ದಿಟ್ಟವಾಗಿ ಎದುರಿಸುತ್ತಿದೆ. ಈ ಅವಧಿಯಲ್ಲೂ ಪೂರ್ಣಪ್ರಮಾಣದ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಸಾಮರ್ಥ್ಯ ನಮ್ಮ ಯೋಧರಿಗಿದೆ. ಈ ವರ್ಷ ನಿಜಕ್ಕೂ ಅಭೂತಪೂರ್ವವಾಗಿದೆ.     ಇಂದು ಭಾರತೀಯ ವಾಯುಪಡೆ 89ನೇ ವರ್ಷಕ್ಕೆ ಕಾಲಿಡುತ್ತಿದ್ದು, ಯಾವುದೇ ಪರಿಸ್ಥಿತಿಯಲ್ಲಿ ದೇಶದ ಸಾರ್ವಭೌಮತ್ವ, ಹಿತಾಸಕ್ತಿ ರಕ್ಷಿಸಲು ಭಾರತೀಯ ವಾಯುಪಡೆ ಬದ್ಧವಾಗಿದೆ ಎಂದು ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಹೇಳಿದ್ದಾರೆ. ನಾವು ಯುಗವನ್ನು ಪ್ರವೇಶಿಸುತ್ತಿದ್ದು, ಏರೋಸ್ಪೇಸ್

ಅ.8: ಇಂದು ಭಾರತೀಯ ವಾಯುಪಡೆ ದಿನಾಚರಣೆ Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ಸಿಂಡಿಕೇಟ್‌ ಬ್ಯಾಂಕ್‌ ನ ನಿವೃತ್ತ ಅಧಿಕಾರಿ ಅತ್ತಾವರ ಶಿವಾನಂದ ಕರ್ಕೇರ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.08: ಪ್ರಸಿದ್ದ ತಳು ಸಂಘಟಕ, ಕನ್ನಡ, ತುಳು ಅಕಾಡೆಮಿಯ ಮಾಜಿ ಸದಸ್ಯ, ತುಳು ಸಾಹಿತಿಗಳಾದ ಅತ್ತಾವರ ಶಿವಾನಂದ ಕರ್ಕೇರ ಅವರು ಕಳೆದ ದಿನ ಸಂಜೆ ನಿಧನರಾದರು.   ಇವರು ಉತ್ತಮ ನಾಟಕ ರಚನೆಗಾರರಾಗಿದ್ದು, “ಎರು”, “ಮೈಂದೆ” ನಾಟಕವನ್ನು ಕೂಡ ರಚಿಸಿದ್ದಾರೆ. ತುಳು ಎಂ.ಎ ಪ್ರಥಮ ಬ್ಯಾಚ್‌ ವಿದ್ಯಾರ್ಥಿಯಾಗಿದ್ದು, ಸಿಂಡಿಕೇಟ್‌ ಬ್ಯಾಂಕ್‌ ನ ನಿವೃತ್ತ ಅಧಿಕಾರಿಯಾಗಿದ್ದರು. ಇವರಿಗೆ ಕಡಲ್‌ ಕವಿತಾ ಸಂಕಲನ ಹಾಗೂ ಎರು ಮೈಂದೆ ನಾಟಕಗಳಿಗೆ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಮೃತರು

ಮಂಗಳೂರು: ಸಿಂಡಿಕೇಟ್‌ ಬ್ಯಾಂಕ್‌ ನ ನಿವೃತ್ತ ಅಧಿಕಾರಿ ಅತ್ತಾವರ ಶಿವಾನಂದ ಕರ್ಕೇರ ನಿಧನ Read More »

ಕರಾವಳಿ

ಬೆಂಗಳೂರು : ಜಿಲ್ಲಾ ಅಧಿಕಾರಿಗಳೊಂದಿಗೆ ಸಿಎಂ ವಿಡಿಯೋ ಸಂವಾದ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 08: ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 11 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಕೊರೋನಾ ಸೋಂಕು ನಿಯಂತ್ರಣ ಕುರಿತಾಗಿ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಕೋವಿಡ್ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್, ಬೆಡ್, ಕೊರೋನಾ ಚಿಕಿತ್ಸಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.ಅನ್ ಲಾಕ್ ಪ್ರಕ್ರಿಯೆ ಮುಂದುವರೆದಿದ್ದು ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಿದ್ದಾರೆ.ಅಲ್ಲದೇ ಅಕ್ಟೋಬರ್ 15 ರಿಂದ

ಬೆಂಗಳೂರು : ಜಿಲ್ಲಾ ಅಧಿಕಾರಿಗಳೊಂದಿಗೆ ಸಿಎಂ ವಿಡಿಯೋ ಸಂವಾದ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ನಿನ್ನಿಕಲ್ಲು ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಆತ್ಯಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ , ಅ. 08: ಕೆಲವು ತಿಂಗಳ ಹಿಂದೆ ಹಿಂದೆ ಸುದ್ದಿಯಾಗಿದ್ದ ನಿನ್ನಿಕಲ್ಲು ನಿವಾಸಿ ಇಕ್ಬಾಲ್ ಸಾಧಿಕ್(27) ಎಂಬಾತ, ಕಳೆದ ದಿನ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆಡು ಮೇಯಿಸಲು ಹೋಗಿದ್ದ ಪರಿಶಿಷ್ಟ ಜಾತಿಯ ಯುವತಿಯನ್ನು ಅಡ್ಡಗಟ್ಟಿ ಅತ್ಯಾಚಾರ ಮಾಡಲು ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದರು, ಬಳಿಕ ಈತನ ಮೇಲೆ ಅತ್ಯಾಚಾರ ಯತ್ನ ಕೇಸು ದಾಖಲಾಗಿದ್ದು ಜೈಲು ಪಾಲಾಗಿದ್ದ. ಕೆಲ ದಿನಗಳ ಹಿಂದ ಜೈಲಿನಿಂದ ಜಾಮೀನ ಮೇಲೆ ಬಿಡುಗಡೆಹೊಂದಿದ್ದ. ಸ್ವಲ್ಪ ಮಟ್ಟಿಗೆ ಮಾನಸಿಕ

ನಿನ್ನಿಕಲ್ಲು ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಆತ್ಯಹತ್ಯೆಗೆ ಶರಣು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಲಾಕ್‌ಡೌನ್‌ ಸಡಿಲಿಕೆ ➤ 5 ರಾಜ್ಯಗಳಿಗೆ KSRTC ಸೇವೆ ಪುನಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 08: ಕೊವೀಡ್ 19 ಗೆ, ಎಲ್ಲವೂ ಸ್ತಭ್ಧವಾಗಿ, ಕೆಲಸ, ಕಾರ್ಯ, ಸಂಚಾರಗಳು ಸ್ಥಗಿತ ಗೊಂಡಿದ್ದವು.ಬಳಿಕ ಸರ್ಕಾರ ಹಂತ ಹಂತವಾಗಿ ಲಾಕ್ ಡೌನ್‍ನಲ್ಲಿ ರಿಲೀಫ್ ನೀಡುತ್ತ ಬಂದಿದೆ. ಲಾಕ್‌ಡೌನ್‌ ಸಡಿಲಿಕೆ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ಈಗಾಗಲೇ ಐದು ರಾಜ್ಯಗಳಿಗೆ ಅಂತರ್‌ ರಾಜ್ಯ ಬಸ್‌ ಸೇವೆ ಪುನರಾರಂಭಿಸಿದೆ. ಪ್ರಸ್ತುತ ನಿತ್ಯ 300 ಬಸ್‌ಗಳು ಸಂಚರಿಸುತ್ತಿವೆ. ಬಸ್‌ ಸೇವೆ ಆರಂಭಿಸುವ ಸಂಬಂಧ ರಾಜ್ಯ ಸರ್ಕಾರದ ಮನವಿಗೆ ಮಹಾ​ರಾಷ್ಟ್ರ, ಆಂಧ್ರಪ್ರದೇಶ, ಗೋವಾ,

ಲಾಕ್‌ಡೌನ್‌ ಸಡಿಲಿಕೆ ➤ 5 ರಾಜ್ಯಗಳಿಗೆ KSRTC ಸೇವೆ ಪುನಾರಂಭ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಬೆಂಗಳೂರು: ಆಗಸದಲ್ಲಿ ಜನ್ಮತಾಳಿದ ಮಗು

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 08: ಹಾರಾಡುತ್ತಿದ್ದ ವಿಮಾನದಲ್ಲಿ ತಾಯಿ ಮಗುವಿಗೆ ಜನ್ಮ ನೀಡಿದ್ದು, ಇಬ್ಬರು ಕ್ಷೇಮವಾಗಿದ್ದು ಅಪರೂಪದ ಘಟನೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಳೆದ ರಾತ್ರಿ ಸಾಕ್ಷಿಯಾಗಿದೆ.ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ಇಂಡಿಗೋ ವಿಮಾನಯಾನ ಸಂಸ್ಥೆಯ ಫ್ಲೈಟ್​ ನಂಬರ್ 6ಇ 122 ವಿಮಾನದಲ್ಲಿ ಗಂಡು ಮಗುವಿನ ಜನನವಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಬರುತ್ತಿರುವ ವೇಳೆ ಮಹಿಳೆಗೆ ಆಗಸದಲ್ಲಿ ಪ್ರಸವ ವೇದನೆ ಶುರುವಾಗಿದೆ. ವಿಮಾನ ಟೇಕ್ ಆಫ್ ಆಗಿ ಬಾನಂಗಳದಲ್ಲಿ ಹಾರಾಡುತ್ತಿರುವಾಗ

ಬೆಂಗಳೂರು: ಆಗಸದಲ್ಲಿ ಜನ್ಮತಾಳಿದ ಮಗು Read More »

ಕರ್ನಾಟಕ

ನಿಲ್ಲುತ್ತಿಲ್ಲ ಕಡಬದಲ್ಲಿ ಅಕ್ರಮ ಗೋ ಸಾಗಾಟ, 2 ಗೋವುಗಳು ವಶಕ್ಕೆ ➤ ಮಾಜಿ ಪಂಚಾಯತ್ ಸದಸ್ಯ ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಅ.07:  ಕೋಡಿಂಬಾಳ ಗ್ರಾಮದ ಮಜ್ಜಾರು ಕ್ರಾಸ್ ಸಮೀಪ ಅಕ್ರಮವಾಗಿ ಕಸಾಯಿಖಾನೆಗೆ ಎರಡು ಜಾನುವಾರುಗಳನ್ನು ಕೊಂಡೋಯ್ಯುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಕಡಬ ಪೋಲಿಸರು ಎರಡು ಹೋರಿ ಹಾಗೂ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಜಿ ಪಂಚಾಯತ್ ಸದಸ್ಯ ಪರಾರಿಯಾಗಿದ್ದಾರೆ. ಪುಳಿಕುಕ್ಕು ಎಂಬಲ್ಲಿಂದ ಮಡ್ಯಡ್ಕ ಎಂಬಲ್ಲಿಗೆ ಜಾನುವಾರನ್ನು ಕೊಂಡೊಯ್ಯಲಾಗುತ್ತಿದ್ದು ಮಡ್ಯಡ್ಕದ ಮನೆಯೊಂದರಲ್ಲಿ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಇಂದಿನ ಜಾನುವಾರು ಸಾಗಾಟದಲ್ಲಿ ಕಡಬದ ಮಾಜಿ ಬಿಜೆಪಿಯ ಸದಸ್ಯರೋರ್ವರು ಶಾಮಿಲಾಗಿರುವ ಬಗ್ಗೆ ಶಂಕೆ

ನಿಲ್ಲುತ್ತಿಲ್ಲ ಕಡಬದಲ್ಲಿ ಅಕ್ರಮ ಗೋ ಸಾಗಾಟ, 2 ಗೋವುಗಳು ವಶಕ್ಕೆ ➤ ಮಾಜಿ ಪಂಚಾಯತ್ ಸದಸ್ಯ ಪರಾರಿ Read More »

ಕರಾವಳಿ
Scroll to Top