Kadaba

ಉಪ್ಪಿನಂಗಡಿ: ಆಂಕರ್ ರಕ್ಷಿತ್ ಶೆಟ್ಟಿಗೆ ಬೆಸ್ಟ್ ಪ್ರೈಂಟೈಮ್ ಆಂಕರ್ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ. 07: ದಿಗ್ವಿಜಯ ನ್ಯೂಸ್ ಚಾನೆಲ್ ನ ಆಂಕರ್ ಆಗಿರುವ ಉಪ್ಪಿನಂಗಡಿಯ ರಕ್ಷತ್ ಶೆಟ್ಟಿವರಿಗೆ ಪತ್ರಿಕೋದ್ಯಮ ಕ್ಷೇತ್ರದ ಪ್ರತಿಷ್ಠಿತ ನ್ಯಾಷನಲ್ ಟೆಲಿವಿಷನ್ ಅವಾರ್ಡ್‍ನಲ್ಲಿ ಬೆಸ್ಟ್ ಪ್ರೈಂ ಟೈಮ್ ಆಂಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.     ಇವರು ನಿರೂಪಕರಾಗಿ, ಕಾರ್ಯಕ್ರಮ ನಿರ್ಮಾಪಕರಾಗಿರುವ ಮೆಗಾ ಡಿಬೇಟ್ ಕಾರ್ಯಕ್ರಮಕ್ಕೆ ಅತ್ಯುತ್ತಮ ಚರ್ಚಾ ಕಾರ್ಯಕ್ರಮ ಪ್ರಶಸ್ತಿ, ಒಟ್ಟು 2 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ. ಇವರು ಉಪ್ಪಿನಂಗಡಿ ನಿವಾಸಿಯಾಗಿರುವ ರಕ್ಷತ್ ಶೆಟ್ಟಿ ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಇವರು […]

ಉಪ್ಪಿನಂಗಡಿ: ಆಂಕರ್ ರಕ್ಷಿತ್ ಶೆಟ್ಟಿಗೆ ಬೆಸ್ಟ್ ಪ್ರೈಂಟೈಮ್ ಆಂಕರ್ ಪ್ರಶಸ್ತಿ Read More »

ಕರಾವಳಿ

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗ ನಿಧನ

(ನ್ಯೂಸ್ ಕಡಬ) newskadaba.com ಉಡುಪಿ, ನ. 07: ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ ಮಲ್ಪೆ ವಾಸುದೇವ ಸಾಮಗ(1) ಅವರು ಅಲ್ಪ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ನಿಧನರಾಗಿದ್ದಾರೆ.       ವಾಸುದೇವ ಸಾಮಗ ಅವರು ತೆಂಕು-ಬಡಗುತಿಟ್ಟಿನ ಸವ್ಯಸಾಚಿ ಕಲಾವಿದರೆಂದು ಗುರುತಿಸಲ್ಪಟ್ಟಿದ್ದು, ಅನೇಕ ಪ್ರಸಂಗಗಳಲ್ಲಿ ನಾಯಕ, ಪ್ರತಿನಾಯಕ, ಹಾಸ್ಯ ಸ್ತ್ರೀವೇಷವನ್ನು ನಿರ್ವಹಿಸಿದ್ದಾರೆ. ಇವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದು, ವಿಭಿನ್ನ ನಿಲುವಿನ ಕೈಕೆ, ದಶರಥ, ದೇವವ್ರತ-ಭೀಷ್ಮ ಕಂಸ ಕೃಷ್ಣ, ರುಕ್ಮಾಂಗದ-ಮೋಹಿನಿ, ಅಂಬೆ-ಪರಶುರಾಮ, ಮಂಥರೆ ಮುಂತಾ ಪಾತ್ರಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.  

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗ ನಿಧನ Read More »

ಕರಾವಳಿ

ಕೊಲ್ಲಮೊಗ್ರ: ಮನೆ – ಮನೆಗಳಿಗೆ ಭೇಟಿ ನೀಡಿ ಕೊರೋನಾ ಟೆಸ್ಟ್

(ನ್ಯೂಸ್ ಕಡಬ) newskadaba.com ಕೊಲ್ಲಮೊಗ್ರ, ನ. 07: ಕೊಲ್ಲಮೊಗ್ರ ಭಾಗಗಳಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಕೊರೋನಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ.     ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಭೇಟಿ ನೀಡಿದ ಮನೆಯಲ್ಲಿ ಪ್ರತಿಯೊಬ್ಬ ಸದಸ್ಯರ ಕೊರೋನಾ ಪರೀಕ್ಷೆಯನ್ನು ಮಾಡಲಾಗುತ್ತಿದೆ.  

ಕೊಲ್ಲಮೊಗ್ರ: ಮನೆ – ಮನೆಗಳಿಗೆ ಭೇಟಿ ನೀಡಿ ಕೊರೋನಾ ಟೆಸ್ಟ್ Read More »

ಕರಾವಳಿ

ಕೇರಳ: ಪರಿಶಿಷ್ಟ ಪಂಗಡ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್

(ನ್ಯೂಸ್ ಕಡಬ) newskadaba.com ಕೇರಳ ನ. 07:  ಮೊದಲನೆ ಬಾರಿಗೆ ಕೇರಳದ ತಿರುವಾಂಕೂರು ದೇವಸ್ವಂ ಬೋರ್ಡ್(TDB)ನ ಅಡಿಯಲ್ಲಿ ನಿರ್ವಹಣೆಯಾಗುತ್ತಿರುವ ದೇವಾಲಯವೊಂದಕ್ಕೆ ಪರಿಶಿಷ್ಟ ಪಂಗಡದ ವ್ಯಕ್ತಿ ಅರ್ಚಕರಾಗಿ ನೇಮಕವಾಗಲಿದ್ದಾರೆ.   TDB ಯೂ ಸ್ವಾಯತ್ತ ಸಂಸ್ಥೆಯಾಗಿದ್ದು, ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇರಿದಂತೆ ಕೇರಳದ ದಕ್ಷಿಣದಲ್ಲಿ 1,200 ದೇವಾಲಯಗಳನ್ನು ನಿರ್ವಹಿಸುತ್ತಿದೆ. ಈ ದೇವಾಲಯಗಳಲ್ಲಿ 18 ಪರಿಶಿಷ್ಟ ಜಾತಿ ಹಾಗೂ 1 ಪರಿಶಿಷ್ಟ ಪಂಗಡದ ಅರ್ಚಕರು ಸೇರಿ ಒಟ್ಟು 19 ಜನರನ್ನು ನೇಮಿಸಲು ತಿರುವಾಂಕೂರು ದೇವಸ್ವಂ ಬೋರ್ಡ್ ನಿರ್ಧರಿಸಿದೆ.”TDB ಅಡಿಯಲ್ಲಿ ಬರುವ

ಕೇರಳ: ಪರಿಶಿಷ್ಟ ಪಂಗಡ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್ Read More »

ರಾಷ್ಟ್ರೀಯ ನ್ಯೂಸ್

ಉಳ್ಳಾಲ : ಮೂರೇ ಘಂಟೆಯಲ್ಲಿ ಸರಗಳ್ಳನ ಅರೇಸ್ಟ್

(ನ್ಯೂಸ್ ಕಡಬ) newskadaba.com ಉಳ್ಳಾಲ ನ. 07: ಕೆಲಸ ಮುಗಿಸಿ ಬರುತ್ತಿದ್ದ ಯುವತಿಯ ಚಿನ್ನದ ಸರ ಎಗರಿಸಿದ್ದ ಖದೀಮನನ್ನು ಉಳ್ಳಾಲ ಪೊಲೀಸರು ಘಟನೆ ನಡೆದ ಮೂರೇ ಘಂಟೆಯಲ್ಲಿ ಬಂದಿಸಿದ್ದಾರೆ.ಆರೋಪಿಯನ್ನು ಕೇರಳ ಮೂಲದ ಸುಲ್ತಾನ್ (28) ಎಂದು ತಿಳಿದು ಬಂದಿದೆ.   ಶುಕ್ರವಾರ ಸಂಜೆ ವೇಳೆಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಯುವತಿಯ ಕುತ್ತಿಗೆಯಿಂದ ಒಂದು ಪವನ್ ಬೆಲೆಬಾಳುವ ಚಿನ್ನದ ಸರವನ್ನು ಬುಲೆಟ್ ಬೈಕಿನಲ್ಲಿ ಬಂದ ಆರೋಪಿ ಸುಲ್ತಾನ್ ಕಳವು ನಡೆಸಿದ್ದ. ಈತನ ಕಳವು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಉಳ್ಳಾಲ : ಮೂರೇ ಘಂಟೆಯಲ್ಲಿ ಸರಗಳ್ಳನ ಅರೇಸ್ಟ್ Read More »

ಕರಾವಳಿ

ಬೆಳ್ಳಂ ಬೆಳಿಗ್ಗೆ ಕೆಎಎಸ್ ಅಧಿಕಾರಿಗೆ ಎಸಿಬಿಯಿಂದ ಶಾಕ್.!

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 07: ಬೆಳ್ಳಂ ಬೆಳಿಗ್ಗೆ  ಕೆಎಎಸ್ ಅಧಿಕಾರಿಗೆ ಎಸಿಬಿ ಶಾಕ್ ನೀಡಿದ್ದಾರೆ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಡಳಿತಾಧಿಕಾರಿಯಾಗಿರುವ ಸುಧಾ ಅವರ ಕೊಡಿಗೇನಹಳ್ಳಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಯಲಹಂಕದಲ್ಲಿರುವ ಫ್ಲಾಟ್, ಬ್ಯಾಟರಾಯನಪುರದ ಮನೆ, ಬಿಇಎಂಎಲ್ ನಲ್ಲಿರುವ ನಿವಾಸ, ಶಾಂತಿನಗರದಲ್ಲಿರುವ ಕಚೇರಿ ಹಾಗೂ ಉಡುಪಿ ಜಿಲ್ಲೆಯ ಹೆಬ್ರಿಯ ತಂಕಬಟ್ಟಿನ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಬೆಳ್ಳಂ ಬೆಳಿಗ್ಗೆ ಕೆಎಎಸ್ ಅಧಿಕಾರಿಗೆ ಎಸಿಬಿಯಿಂದ ಶಾಕ್.! Read More »

ಕರಾವಳಿ

ಅಕ್ರಮ ಮರದ ದಿಮ್ಮಿಗಳ ಸಾಗಾಟ ➤ ಆರೋಪಿ ವಲಯ ಅರಣ್ಯಾಧಿಕಾರಿ ಬಲೆಗೆ

(ನ್ಯೂಸ್ ಕಡಬ) newskadaba.com ಪುಂಜಾಲಕಟ್ಟೆ  ನ. 07: ಹಲವು ಮತ್ತು ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ವಲಯ ಅರಣ್ಯಾಧಿಕಾರಿ ವಶಕ್ಕೆ ಪಡೆದುಕೊಂಡಿದ್ದಾರೆ. ಗಸ್ತು ಕರ್ತವ್ಯದಲ್ಲಿದ್ದ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಎಚ್ ಎಸ್ ರವರು ಪುಂಜಾಲಕಟ್ಟೆ ಬಳಿ, ಸುಮಾರು 5ಲಕ್ಷ ಮೌಲ್ಯದ ಹಲಸು ಹಾಗೂ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಅಕ್ರಮವಾಘಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಮೊಗನಾಡು ಗ್ರಾಮದ ಏಳಬೈಲು ಶೇಡಿಗುರಿ ನಿವಾಸಿ

ಅಕ್ರಮ ಮರದ ದಿಮ್ಮಿಗಳ ಸಾಗಾಟ ➤ ಆರೋಪಿ ವಲಯ ಅರಣ್ಯಾಧಿಕಾರಿ ಬಲೆಗೆ Read More »

ಕರಾವಳಿ

ಹಿರಿಯಡ್ಕದಲ್ಲಿ ನಾಪತ್ತೆಯಾಗಿದ್ದ ಭಿನ್ನ ಕೋಮಿನ ಜೋಡಿಗಳು ಪತ್ತೆ.!

(ನ್ಯೂಸ್ ಕಡಬ) newskadaba.com ಹಿರಿಯಡ್ಕ ನ. 07: ಹಿರಿಯಡ್ಕದಲ್ಲಿ ನಾಪತ್ತೆಯಾಗಿದ್ದ ಭಿನ್ನ ಕೋಮಿನ ಜೋಡಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ಅಕ್ಟೋಬರ್ 28 ರಂದು ಹಿರಿಯಡ್ಕ ಠಾಣಾ ವ್ಯಾಪ್ತಿಯ ಪೆರ್ಡೂರಿನ ಕುಕ್ಕೆಹಳ್ಳಿ ಗ್ರಾಮದ 17 ವರ್ಷದ ಬಾಲಕಿಯೋರ್ವಳು ಅನ್ಯಕೋಮಿನ ಯುವಕನೊಂದಿಗೆ ನಾಪತ್ತೆಯಾಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯುವತಿಯನ್ನು ಅನ್ಯ ಉದ್ದೇಶಗಳಿಗೆ ಅಪಹರಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಅಕ್ಟೋಬರ್ 31 ರಂದು ಯುವಕನ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.ಕೊನೆಗೂ ಯುವ ಜೋಡಿಯನ್ನು ಪೊಲೀಸರು ಭಟ್ಕಳದಲ್ಲಿ ಪತ್ತೆ ಹಚ್ಚಿದ್ದು ವಾಪಾಸು ಹಿರಿಯಡ್ಕಕ್ಕೆ

ಹಿರಿಯಡ್ಕದಲ್ಲಿ ನಾಪತ್ತೆಯಾಗಿದ್ದ ಭಿನ್ನ ಕೋಮಿನ ಜೋಡಿಗಳು ಪತ್ತೆ.! Read More »

ಕರಾವಳಿ

ಉಡುಪಿ: ಬಸ್ ಮಾಲಕನ ಹತ್ಯೆ ಯತ್ನ ಪ್ರಕರಣ ➤ 9 ಮಂದಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಉಡುಪಿ, ನ. 07: ಎಕೆಎಂಎಸ್ ಬಸ್ ಮಾಲಕನ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೋಲಿಸರು ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.       ಬಂಧಿತ ಆರೋಪಿಗಳನ್ನು ದರ್ಶನ್ ದೇವಯ್ಯ ವಿರಾಜಪೇಟೆ, ಸೌಭಾಗ್ಯ, ಅನಿಲ್ ಕುಮಾರ್, ಮಹೇಶ್ ಬಾಬು ಹಿರಿಯಪಟ್ಣ, ಸೋಮು ಕೆ.ಆರ್.ನಗರ, ಸುಕೇಶ್ ಪೂಜಾರಿ, ಮೋಹನ್ ಬೆಳ್ತಂಗಡಿ, ಗೋಪಾಲ್ ಮೂಡುಬಿದಿರೆ, ಸಂತೋಷ್ ಮುಡುಮನೆ ಎಂದು ಗುರುತಿಸಲಾಗಿದೆ. ೨ ದಿನಗಳ ಹಿಂದೆ ಎಕೆಎಂಎಸ್ ಬಸ್ ಮಾಲಿಕ ಸೈಫುದ್ದೀನ್ ಹತ್ಯೆಗೆ ಯತ್ನ ನಡೆದಿತ್ತು.

ಉಡುಪಿ: ಬಸ್ ಮಾಲಕನ ಹತ್ಯೆ ಯತ್ನ ಪ್ರಕರಣ ➤ 9 ಮಂದಿ ಪೊಲೀಸರ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕುಂದಾಪುರ : ನಿಷೇಧವಿದ್ದರೂ ಬುಲ್‌ ಟ್ರಾಲ್‌ ಫಿಶಿಂಗ್, ಬೋಟ್‌ ವಶಕ್ಕೆ

(ನ್ಯೂಸ್ ಕಡಬ) newskadaba.com ಕುಂದಾಪುರ ನ. 07: ಗಂಗೊಳ್ಳಿಯಿಂದ 8 ನಾಟಿಕಲ್‌ ಮೈಲು ದೂರದಲ್ಲಿ ಮಂಗಳೂರು ಮೂಲದ ಅಲ್‌ ಮಸುಲ್‌ ಬಹಾರ್‌ ಹೆಸರಿನ ಎರಡು ಬುಲ್‌ ಟ್ರಾಲ್‌ ಬೋಟುಗಳು ಕದ್ದು ಮುಚ್ಚಿ ಮೀನುಗಾರಿಕೆ ಮಾಡುತ್ತಿರುವ ಕುರಿತು ಗಂಗೊಳ್ಳಿ ಬಂದರಿನ ನಾಡದೋಣಿ ಮೀನುಗಾರರು ಕೋಸ್ಟ್‌ಗಾರ್ಡ್‌ ಸಿಬ್ಬಂದಿ ನೆರವಿನಿಂದ ಬೋಟನ್ನು ವಶಕ್ಕೆ ಪಡೆದು ಬಂದರಿಗೆ ಎಳೆದು ತಂದಿದ್ದು, 10 ಲಕ್ಷ ರೂ. ಮೌಲ್ಯದ ಮೀನನ್ನು ವಶಕ್ಕೆ ಪಡೆಯಲಾಗಿದೆ. ಗುರುವಾರ ಮುಂಜಾನೆ ನಾಡದೋಣಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ

ಕುಂದಾಪುರ : ನಿಷೇಧವಿದ್ದರೂ ಬುಲ್‌ ಟ್ರಾಲ್‌ ಫಿಶಿಂಗ್, ಬೋಟ್‌ ವಶಕ್ಕೆ Read More »

ಕರಾವಳಿ
Scroll to Top