ಉಪ್ಪಿನಂಗಡಿ: ಆಂಕರ್ ರಕ್ಷಿತ್ ಶೆಟ್ಟಿಗೆ ಬೆಸ್ಟ್ ಪ್ರೈಂಟೈಮ್ ಆಂಕರ್ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, . 07: ದಿಗ್ವಿಜಯ ನ್ಯೂಸ್ ಚಾನೆಲ್ ನ ಆಂಕರ್ ಆಗಿರುವ ಉಪ್ಪಿನಂಗಡಿಯ ರಕ್ಷತ್ ಶೆಟ್ಟಿವರಿಗೆ ಪತ್ರಿಕೋದ್ಯಮ ಕ್ಷೇತ್ರದ ಪ್ರತಿಷ್ಠಿತ ನ್ಯಾಷನಲ್ ಟೆಲಿವಿಷನ್ ಅವಾರ್ಡ್‍ನಲ್ಲಿ ಬೆಸ್ಟ್ ಪ್ರೈಂ ಟೈಮ್ ಆಂಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 

 

ಇವರು ನಿರೂಪಕರಾಗಿ, ಕಾರ್ಯಕ್ರಮ ನಿರ್ಮಾಪಕರಾಗಿರುವ ಮೆಗಾ ಡಿಬೇಟ್ ಕಾರ್ಯಕ್ರಮಕ್ಕೆ ಅತ್ಯುತ್ತಮ ಚರ್ಚಾ ಕಾರ್ಯಕ್ರಮ ಪ್ರಶಸ್ತಿ, ಒಟ್ಟು 2 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ. ಇವರು ಉಪ್ಪಿನಂಗಡಿ ನಿವಾಸಿಯಾಗಿರುವ ರಕ್ಷತ್ ಶೆಟ್ಟಿ ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಇವರು ಮೊದಲು ಸ್ಪಂದನ ಚಾನೆಲ್ ನಲ್ಲಿ ನಿರೂಪಕರಾಗಿದ್ದರು. ಪ್ರಸ್ತುತ ಡಾ. ವಿಜಯ ಸಂಕೇಶ್ವರ ಸಾರಥ್ಯದ ದಿಗ್ವಿಜಯ ನ್ಯೂಸ್ ಚಾನೆಲ್ ನಿರೂಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

Scroll to Top