Kadaba

ಕುಂತೂರು ಶಾಲಾ ಕಟ್ಟಡ ನಿರ್ಮಾಣಕ್ಕೆ 90 ಲಕ್ಷ ರೂ. ಮಂಜೂರು – ರಾಯ್ ಅಬ್ರಹಾಂ

(ನ್ಯೂಸ್ ಕಡಬ) newsksdaba.com ಕಡಬ, ಸೆ. 04. ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ಸರಕಾರವು 90 ಲಕ್ಷ ರೂ.  ಮಂಜೂರುಗೊಳಿಸಿದೆ ಎಂದು ಶಾಲಾ ಹಳೆ ವಿದ್ಯಾರ್ಥಿ ಹಾಗೂ ಕಾಂಗ್ರೇಸ್ ಮುಖಂಡ ರಾಯ್ ಅಬ್ರಹಾಂ ಹೇಳಿದರು. ಅವರು ಮಂಗಳವಾರದಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅವೈಜ್ಞಾನಿಕ ಕಾಮಗಾರಿ ನಡೆಸಿ ಶಾಲಾ ಕಟ್ಟಡ ಕುಸಿತವಾದ ಹಿನ್ನೆಲೆಯಲ್ಲಿ ಉಳಿದ ಕೊಠಡಿಗಳು ಕೂಡಾ ಬಳಕೆಗ ಯೋಗ್ಯವಾಗಿಲ್ಲ ಎನ್ನುವ ಕಾರಣಕ್ಕೆ ಅದನ್ನು ತೆರವುಗೊಳಿಸಿ ನೂತನ ಐದು ಕೊಠಡಿಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ […]

ಕುಂತೂರು ಶಾಲಾ ಕಟ್ಟಡ ನಿರ್ಮಾಣಕ್ಕೆ 90 ಲಕ್ಷ ರೂ. ಮಂಜೂರು – ರಾಯ್ ಅಬ್ರಹಾಂ Read More »

ಕರಾವಳಿ

ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

(ನ್ಯೂಸ್ ಕಡಬ) newskadaba.com ಅರಂತೋಡು, ಸೆ. 01. ಶತಮಾನೋತ್ಸವ ಕಂಡ ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟೆಂಬರ್ 1ರಂದು ಶ್ರಮದಾನ ನಡೆಯಿತು. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಬನ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಉಳುವಾರು, ಶಿಕ್ಷಕಿ ಭಾನುಮತಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಶಾಲೆಯ ಹಳೆಯ ವಿದ್ಯಾರ್ಥಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶ್ರಮದಾನದಲ್ಲಿ ಪಾಲ್ಗೊಂಡರು.

ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ Read More »

ಕರಾವಳಿ, ಕರ್ನಾಟಕ

ಕಡಬ: ಶಾಲಾ ಗೋಡೆ ಬಿದ್ದು 4 ವಿದ್ಯಾರ್ಥಿಗಳಿಗೆ ಗಾಯ- ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಆ. 28. ತಾಲೂಕಿನ ಪೆರಾಬೆ ಸಮೀಪದ ಕುಂತೂರಿನ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಗೋಡೆ ಛಾವಣಿ ಕುಸಿದುಬಿದ್ದ ಪರಿಣಾಮ ಗಾಯಗೊಂಡು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ವರು ವಿದ್ಯಾರ್ಥಿಗಳನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಹಾಗೂ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ, ಪಾಲಕರು ಮತ್ತು ಮಕ್ಕಳಿಗೆ ಧೈರ್ಯ ತುಂಬಿದರು‌. ಸೂಕ್ತ ಚಿಕಿತ್ಸೆ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಕಡಬ: ಶಾಲಾ ಗೋಡೆ ಬಿದ್ದು 4 ವಿದ್ಯಾರ್ಥಿಗಳಿಗೆ ಗಾಯ- ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಭೇಟಿ Read More »

ಕರಾವಳಿ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವ – ಕಡಬ ತಹಶೀಲ್ದಾರರ ಕಛೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆ. 26. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಕಡಬ ತಹಶೀಲ್ದಾರರ ಕಚೇರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಿತು. ಕಡಬ ತಹಶಿಲ್ದಾರ್ ಪ್ರಭಾಕರ್ ಖಜೂರೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆ.ಪಿ ಮೋಹನ್, ರಾಯ್ ಅಬ್ರಹಾಂ, ಉಪ ತಹಶೀಲ್ದಾರ್ ಗೋಪಾಲ್ ಅತಿಥಿಗಳಾಗಿ ಭಾಗವಹಿಸಿದ್ದರು. ತಾಲೂಕು ಆಡಳಿತಾಧಿಕಾರಿಗಳು, ಪಟ್ಟಣ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು, ಯಾದವ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು. ಸಿಬ್ಬಂದಿ ಕೌಶಿಕ್ ಸ್ವಾಗತಿಸಿ, ಉದಯಕುಮಾರ್ ಅವರು ವಂದಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವ – ಕಡಬ ತಹಶೀಲ್ದಾರರ ಕಛೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ Read More »

ಕರಾವಳಿ, ಕರ್ನಾಟಕ

ಕಡಬ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಶಾಲಾ ಬಾವಿಯಲ್ಲಿ ಪತ್ತೆ..!

(ನ್ಯೂಸ್ ಕಡಬ) newskadaba.com ಕಡಬ, ಆ. 20. ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಮೃತದೇಹವು ಸಮೀಪದ ಶಾಲಾ ಬಾವಿಯಲ್ಲಿ ಪತ್ತೆಯಾದ ಕುರಿತು ತಾಲೂಕಿನ ಕೇನ್ಯ ಗ್ರಾಮದಿಂದ ವರದಿಯಾಗಿದೆ. ಮೃತರನ್ನು ಬೀದಿಗುಡ್ಡೆ ಸಮೀಪ ಕೇನ್ಯ ಶಾಲೆ ಬಳಿಯ ನಿವಾಸಿ ಬಾಬು ಪೂಜಾರಿ ಎಂದು ಗುರುತಿಸಲಾಗಿದೆ. ಆ. 19ರ ಮುಂಜಾನೆ ಮನೆಯಿಂದ ನಾಪತ್ತೆಯಾಗಿದ್ದ ಬಾಬು ಪೂಜಾರಿಯನ್ನು ಮನೆಯವರು ಹುಡುಕಾಟ ನಡೆಸಿದಾಗ ಶಾಲಾ ಬಾವಿಯ ಕಟ್ಟೆಯಲ್ಲಿ ಲುಂಗಿ, ಟಾರ್ಚ್ ಮತ್ತು ಚಪ್ಪಲಿ ಪತ್ತೆಯಾಗಿತ್ತು. ಹೀಗಾಗಿ ಬಾವಿಗೆ ಹಾರಿರಬಹುದೆಂಬ ಶಂಕೆಯಿಂದ ಸ್ಥಳೀಯರು ಬಾವಿ ಶೋಧ

ಕಡಬ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಶಾಲಾ ಬಾವಿಯಲ್ಲಿ ಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಸರಸ್ವತೀ ಪ್ರೌಢಶಾಲೆಯಲ್ಲಿ ರಕ್ಷಾಬಂಧನ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆ. 19. ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಸೋಮವಾರದಂದು ಆಚರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸರಸ್ವತೀ ಸಮೂಹ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರೂ, ಪ್ರಾಥಮಿಕ ವಿಭಾಗದ ಮೇಲ್ವಿಚಾರಕಿ ಶ್ರೀಮತಿ ಪ್ರಮೀಳಾ ಲೋಕೇಶ್ ವಹಿಸಿ ಪುರಾಣ ಮಹಾಭಾರತ ಇತಿಹಾಸಗಳಲ್ಲಿ ರಕ್ಷಾಬಂಧನ ಆಚರಣೆಯಲ್ಲಿತ್ತು. ಪ್ರಸ್ತುತ ಸಮಾಜದಲ್ಲಿ ಇಂತಹ ರಕ್ಷೆಯನ್ನು ಕಟ್ಟಿ ಸಹೋದರ-ಸಹೋದರಿಯರು ಎಂಬ ಭ್ರಾತೃತ್ವದ ಭಾವವನ್ನು ಮೂಡಿಸಿ ನಮ್ಮ ಹಿಂದೂ ಸಮಾಜದ ರಕ್ಷಣೆಯಲ್ಲಿ ನಾವು ಕೈಜೋಡಿಸುವುದರ ಮೂಲಕ ಭಾರತಮಾತೆಯ ರಕ್ಷಣೆ ಮಾಡೋಣ ಎಂದು

ಕಡಬ: ಸರಸ್ವತೀ ಪ್ರೌಢಶಾಲೆಯಲ್ಲಿ ರಕ್ಷಾಬಂಧನ ಆಚರಣೆ Read More »

ಕರಾವಳಿ, ಕರ್ನಾಟಕ

ಭಾತೃತ್ವ ಸಂಬಂಧ ಬೆಸೆಯುವ ಹಬ್ಬ ರಕ್ಷಾ ಬಂಧನ – ಶ್ರೀ ಲಿಂಗಪ್ಪ ಜೆ

(ನ್ಯೂಸ್ ಕಡಬ) newskadaba.com ಕಡಬ, ಆ. 19. ವಿದ್ಯಾರ್ಥಿಗಳಲ್ಲಿ ಸಹೋದರತ್ವದ ಭಾಂದವ್ಯ ಬೆಸೆಯುವ ನಿಟ್ಟಿನಲ್ಲಿ ರಕ್ಷಾ ಬಂಧನ  ಕಾರ್ಯಕ್ರಮವನ್ನು ಇಲ್ಲಿನ ಸರಸ್ವತೀ ವಿದ್ಯಾಲಯದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಸಮಿತಿ ಕೋಶಾಧಿಕಾರಿಯಾದ ಶ್ರೀ ಲಿಂಗಪ್ಪ ಜೆ. ಇವರು ವಿದ್ಯಾರ್ಥಿಗಳಿಗೆ ರಕ್ಷಾ ಬಂಧನದ ಹಿನ್ನೆಲೆ ಹಾಗೂ ಅದರ ಮಹತ್ವದ ಬಗ್ಗೆ ವಿವರಿಸಿದರು. ತದನಂತರ ಶಾಲಾ ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿ ಸಂಭ್ರಮಿಸಿದರು.  ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಮಾತಾಜಿ ಶ್ವೇತಾ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಭಾತೃತ್ವ ಸಂಬಂಧ ಬೆಸೆಯುವ ಹಬ್ಬ ರಕ್ಷಾ ಬಂಧನ – ಶ್ರೀ ಲಿಂಗಪ್ಪ ಜೆ Read More »

ಕರಾವಳಿ

ಕೋಡಿಂಬಾಳ ಮಸೀದಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆ. 19. ರಹ್ಮಾನಿಯ ಜುಮ್ಮಾ ಮಸೀದಿ ಕೋಡಿಂಬಾಳ ಇದರ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಮಸೀದಿಯ ವಠಾರದಲ್ಲಿ  ಆಚರಿಸಲಾಯಿತು. ಜಮಾಅತ್ ಅಧ್ಯಕ್ಷರಾದ ಫಝಲ್ ಕೋಡಿಂಬಾಳರವರು ದ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ಬಾಷಣವನ್ನು ಜಮಾತ್ ಖತೀಬರಾದ ಅಬೂಬಕ್ಕರ್ ಮದನಿ ಉಸ್ತಾದ್ ರವರು ಸವಿಸ್ತಾರವಾಗಿ ನುಡಿದರು.  ಈ ಸಂದರ್ಭದಲ್ಲಿ ಮದ್ರಾಸ ಅಧ್ಯಾಪಕರು ವಿದ್ಯಾರ್ಥಿಗಳು ಹಾಗೂ ಜಮಾಅತ್ ಬಾಂಧವರು ಉಪಸ್ಥಿತರಿದ್ದರು.  ಇದೇ ಸಂದರ್ಭದಲ್ಲಿ SSF, SYS, KJM ಕೋಡಿಂಬಾಳ ಇದರ ವತಿಯಿಂದ ಮದ್ರಸಾ ವಿದ್ಯಾರ್ಥಿಗಳಿಗೆ ಮತ್ತು ಓಂತ್ರಡ್ಕ

ಕೋಡಿಂಬಾಳ ಮಸೀದಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ದಿನಾಚರಣೆ Read More »

ಕರಾವಳಿ, ಕರ್ನಾಟಕ

ಕಡಬ ರಕ್ಷಿತಾರಣ್ಯದಲ್ಲಿ ಅಸ್ಥಿಪಂಜರ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಆ. 17. ಸಂಪೂರ್ಣ ಕೊಳೆತುಹೋದ ಮೃತದೇಹದ ಅಸ್ಥಪಂಜರವೊಂದು ಪತ್ತೆಯಾಗಿರುವ ಕುರಿತು ಕಡಬ ತಾಲೂಕಿನ ಕೊಂಬಾರು ಗ್ರಾಮದ ಬೊಟ್ಟಡ್ಕ ಬಳಿಯ ಕೊಂಬಾರು ರಕ್ಷಿತಾರಣ್ಯದ ಪ್ರದೇಶದ ಉಡೆಂಜಿಪಲ್ಲ ತೋಡು ಪ್ರದೇಶದಿಂದ ವರದಿಯಾಗಿದೆ. ಸ್ಥಳೀಯರ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ತಲೆ ಬುರುಡೆ, ಎದೆ ಮೂಳೆಗಳು ಹಾಗೂ ಕಾಲಿನ ಮೂಳೆಗಳು ಮಾತ್ರ ಕಂಡುಬಂದಿದ್ದು, ಮಾಂಸಖಂಡಗಳು ಮತ್ತು ಚರ್ಮ ಇಲ್ಲದೇ ಇದ್ದು, ಮೃತದೇಹವು ಪುರುಷನದ್ದೋ ಅಥವಾ ಮಹಿಳೆಯದ್ದೋ ಎನ್ನುವುದು ತಿಳಿದುಬಂದಿಲ್ಲ. ಸುಮಾರು 4ರಿಂದ 6 ತಿಂಗಳ ಹಿಂದೆ

ಕಡಬ ರಕ್ಷಿತಾರಣ್ಯದಲ್ಲಿ ಅಸ್ಥಿಪಂಜರ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆ. 17. ಕಡಬ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿದ್ಯುಕ್ತವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಯೋಧರಾದ ಶ್ರೀ ಅನೀಶ್ ಡಿ ಎಲ್ ಅವರು ಧ್ವಜಾರೋಹಣಗೈದರು. ಜಾತಿ ಮತ ಧರ್ಮ ಭೇದಗಳ ನೆಲೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಲು ಅವಕಾಶ ನೀಡದೇ ಸಂವಿಧಾನದ ಶ್ರೇಷ್ಠ ಅಂಶಗಳನ್ನು ಭಾರತೀಯರೆಲ್ಲರೂ ಅನುಸರಿಸಬೇಕು ಅಲ್ಲದೇ ರಾಷ್ಟ್ರೀಯ ಸಮಗ್ರತೆಗೆ ಐಕ್ಯತಾಭಾವನೆ ನಮ್ಮ ಮೂಲ ಮಂತ್ರವಾಗಬೇಕು ಎಂದು ಅವರು ಅತಿಥಿ ಭಾಷಣದಲ್ಲಿ ಹೇಳಿದರು.   ಕಾರ್ಯಕ್ರಮದ ಅಧ್ಯಕ್ಷತೆಯನ್ನು

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ Read More »

ಕರಾವಳಿ, ಕರ್ನಾಟಕ
Scroll to Top