Kadaba News

ಮಲ್ಪೆ: ಮಹಿಳೆಯ ಚಿನ್ನದ ಸರ ಕದ್ದೊಯ್ದು ಪರಾರಿ

(ನ್ಯೂಸ್ ಕಡಬ) newskadaba.com ಮಲ್ಪೆ, ನ. 19:  ಮೀನು ಮಾರಾಟ ಮಾಡುವುದಕ್ಕಾಗಿ ಮನೆಯಿಂದ ಪಡುಕೆರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಪರಿಚಿತನೋರ್ವ ಸ್ಕೂಟರ್ ನಲ್ಲಿ ಹಿಂದಿನಿಂದ ಬಂದು ಕುತ್ತಿಗೆಗೆ ಕೈ ಹಾಕಿ ಅವರನ್ನು ದೂಡಿ ಹಾಕಿ ಚಿನ್ನದ ಸರವನ್ನು ಕದ್ದೊಯ್ದಿರುವ ಘಟನೆ ನಡೆದಿದೆ.   ಮಹಿಳೆಯನ್ನು ಪಡುಕೆರೆ ಕಿದಿಯೂರು ನಿವಾಸಿ ಯಮುನಾ(65) ಎಂದು ಗುರುತಿಸಲಾಗಿದೆ. ಸುಮಾರು 1.19 ಲಕ್ಷ ಮೌಲ್ಯದ ಐದೂವರೆ ಪವನ್ ತೂಕದ ಚಿನ್ನದ ಆಭರಣವೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. […]

ಮಲ್ಪೆ: ಮಹಿಳೆಯ ಚಿನ್ನದ ಸರ ಕದ್ದೊಯ್ದು ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಕೌಡಿಚಾರು: ರಸ್ತೆಯಲ್ಲಿ ಅಡ್ಡ ಬಂದ ದನಕ್ಕೆ ಬೈಕ್ ಢಿಕ್ಕಿ

(ನ್ಯೂಸ್ ಕಡಬ) newskadaba.com ಕೌಡಿಚಾರು, ನ. 19. ಕಳೆದ ದಿನ ಪುತ್ತೂರು ಕಡೆಯಿಂದ ಸುಳ್ಯದ ಕಡೆಗೆ ಬರುತ್ತಿದ್ದ ಬೈಕೊಂದು ರಸ್ತೆಯಲ್ಲಿ ಅಡ್ಡ ಬಂದ ದನಕ್ಕೆ ಢಿಕ್ಕಿ ಹೊಡೆದು ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.     ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಮರ್ಕಂಜ ಬಳಿಯ ಆರಂತೋಡು ಗ್ರಾಮದ ಪಿಂಡಿಮನೆ ಸಂತೋಷ್ ಮತ್ತು ಪ್ರವೀಣ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಯುವಕರಿಬ್ಬರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.    

ಕೌಡಿಚಾರು: ರಸ್ತೆಯಲ್ಲಿ ಅಡ್ಡ ಬಂದ ದನಕ್ಕೆ ಬೈಕ್ ಢಿಕ್ಕಿ Read More »

ಕರಾವಳಿ

ನಾಲ್ಕೂರು: ಬೈಕ್ ಮತ್ತು ಕಾರು ನಡುವೆ ಪರಸ್ಪರ ಢಿಕ್ಕಿ

(ನ್ಯೂಸ್ ಕಡಬ) newskadaba.com ನಾಲ್ಕೂರು, ನ. 19. ಕಳೆದ ದಿನ ನಾಲ್ಕೂರು ಗ್ರಾಮದ ಅಂಜೇರಿ ಎಂಬಲ್ಲಿ ಬೈಕ್ ಮತ್ತು ಕಾರು ನಡುವೆ ಪರಸ್ಪರ ಢಿಕ್ಕಿ ಹೊಡೆದು ಬೈಕ್ ಸವಾರರು ಗಾಯಗೊಂಡ ಘಟನೆ ನಡೆದಿದೆ.     ಕಲ್ಮಕಾರಿನವರೊಬ್ಬರು ಗುತ್ತಿಗಾರು ಕಡೆ ತೆರಳುತ್ತಿದ್ದು, ಕಲ್ಮಕಾರಿನ ಯುವಕ ಮತ್ತು ಬಾಲಕನೊಬ್ಬ ಬೈಕ್ ನಲ್ಲಿ ಗುತ್ತಿಗಾರಿನಿಂದ ನಡುಗಲ್ಲು ಕಡೆ ಬರುತ್ತಿದ್ದು ಅಂಜೇರಿ ಬಳಿ ಕಾರಿಗೆ ಬೈಕ್ ನವರು ಬಂದು ಢಿಕ್ಕಿ ಹೊಡೆದಿದ್ದಾರೆ. ಬೈಕ್ ನಲ್ಲಿದ್ದ ಹಿಂಬದಿ ಬಾಲಕನ ಕಾಲಿಗೆ ಬಲವಾದ ಏಟು

ನಾಲ್ಕೂರು: ಬೈಕ್ ಮತ್ತು ಕಾರು ನಡುವೆ ಪರಸ್ಪರ ಢಿಕ್ಕಿ Read More »

ಕರಾವಳಿ

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಕಡಿತ ಅಮಾನವೀಯ ➤ಎನ್‌ಎಸ್‌ಯುಐ ದ.ಕ. ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಖಂಡನೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 19:  PHD ಮತ್ತು ಎಂಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್ ಮೊತ್ತವನ್ನು ರಾಜ್ಯ ಸರಕಾರ ಕಡಿತಗೊಳಿಸಿರುವುದನ್ನು ಎನ್‌ಎಸ್‌ಯುಐ ದ.ಕ. ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಖಂಡಿಸಿದ್ದಾರೆ.   PHD ಮಾಡುವವರಿಗೆ ಮೂರು ವರ್ಷ, ಎಂಫಿಲ್ ಮಾಡುವವರಿಗೆ ಎರಡು ವರ್ಷ ಮಾಸಿಕ 25,000 ರೂ. ನೀಡಲಾಗುತ್ತಿದ್ದು, ಕಳೆದ ಹತ್ತು ತಿಂಗಳಿನಿಂದ ಈ ಮೊತ್ತ ಪಾವತಿಸದೆ ಇದೀಗ ಕಡಿತಗೊಳಿಸಿರುವುದಾಗಿ ತಿಳಿಸಿರುವುದು ಅಮಾನವೀಯ. ಕೊರೊನಾ ಸಂದರ್ಭ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಲವಾರು ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟು

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಕಡಿತ ಅಮಾನವೀಯ ➤ಎನ್‌ಎಸ್‌ಯುಐ ದ.ಕ. ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಖಂಡನೆ Read More »

ಕರಾವಳಿ

ಪ್ರಭಾಕರ್ ಭಟ್ ಬಂಧನಕ್ಕೆ ಆಗ್ರಹಿಸಿ ಇಂದು ಉಳ್ಳಾಲ ಪೊಲೀಸ್ ಠಾಣೆಗೆ ಮುತ್ತಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 19: ಉಳ್ಳಾಲ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಲಿದೆ.     ನವೆಂಬರ್ 1ರಂದು ಕಿನ್ಯದ ಕೇಶವ ಶಿಶು ಮಂದಿರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್, ಉಳ್ಳಾಲವನ್ನು ಪಾಕಿಸ್ತಾನವೆಂದು ಕರೆದಿದ್ದರು. ಈ ಹೇಳಿಕೆಗೆ ಸಂಬಂಧಪಟ್ಟಂತೆ ಈಗಾಗಲೇ ಪ್ರಭಾಕರ್ ಭಟ್ ವಿರುದ್ಧ ಉಳ್ಳಾಲ

ಪ್ರಭಾಕರ್ ಭಟ್ ಬಂಧನಕ್ಕೆ ಆಗ್ರಹಿಸಿ ಇಂದು ಉಳ್ಳಾಲ ಪೊಲೀಸ್ ಠಾಣೆಗೆ ಮುತ್ತಿಗೆ Read More »

ಕರಾವಳಿ

ಪಂಜ: ಅಕ್ರಮ ಗಣಿಗಾರಿಕೆ ➤ ಎಚ್ಚೆತ್ತುಕೊಳ್ಳದ ಅಧಿಕಾರಿಗಳು..!

(ನ್ಯೂಸ್ ಕಡಬ) newskadaba.com ಪಂಜ, ನ. 18. ತಾಲೂಕಿನ ಸುಬ್ರಹ್ಮಣ್ಯ ವ್ಯಾಪ್ತಿಯ ಯೇನೆಕಲ್ಲು ಬಾನಡ್ಕ ಕಟ್ಟ ಎಂಬಲ್ಲಿ ಸುಮಾರು ಎರಡು ಎಕರೆ ಪ್ರದೇಶದ ಖಾಸಗಿ ಜಾಗದಲ್ಲಿ ಕೆಂಪು ಕಲ್ಲಿನ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಕಂಡು ಕಾಣದಂತೆ ಕಣ್ಣು ಮುಚ್ಚಿಕೊಂಡಿರುವುದು ವಿಪರ್ಯಾಸವೇ ಸರಿ.     ಇಲ್ಲಿ ಟಿಪ್ಪರ್ ವಾಹನಗಳ ನಿರಂತರ ಓಡಾಟದಿಂದ ರಸ್ತೆಗಳು ತೀರಾ ಹದಗೆಟ್ಟಿದ್ದು, ಅನಧಿಕೃತ ಗಣಿಗಾರಿಕೆಗೆ ಕಡಿವಾಣ ಇಲ್ಲದಂತಾಗಿದ್ದು, ಸಂಬಂಧಪಟ್ಟ

ಪಂಜ: ಅಕ್ರಮ ಗಣಿಗಾರಿಕೆ ➤ ಎಚ್ಚೆತ್ತುಕೊಳ್ಳದ ಅಧಿಕಾರಿಗಳು..! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ಭಿಕ್ಷೆ ಬೇಡಿ ಮಗುವಿನ‌ ಚಿಕಿತ್ಸೆಗೆ ನೆರವಾದರು ಮಂಗಳಮುಖಿಯರು

(ನ್ಯೂಸ್ ಕಡಬ) newskadaba.com  ಉಡುಪಿ ನ. 18: ಉಡುಪಿ ಜಿಲ್ಲೆಯಲ್ಲಿ ಎರಡು ಸಾವಿರದಷ್ಟು ಮಂಗಳ ಮುಖಿಯರಿದ್ದು, ಇವರ ಪೈಕಿ ಮುನ್ನೂರರಷ್ಟು ಜನ ಮುಖ್ಯವಾಹಿನಿಯಲ್ಲಿದ್ದಾರೆ. ತಮ್ಮದೇ ‘ಆಶ್ರಯ ಸಮುದಾಯ ಸಂಘಟನೆ’ ಕಟ್ಟಿಕೊಂಡಿರುವ ಇವರು ಸಮಾಜಕ್ಕೆ ತಾವೇನಾದರೂ ಮಾಡಬೇಕು ಎಂಬ ಕಳಕಳಿ ಇಟ್ಟುಕೊಂಡಿದ್ದಾರೆ. ಆಶ್ರಯ ಸಮುದಾಯ ಸಂಘಟನೆಯ ಸದಸ್ಯರಾದ ಸಮೀಕ್ಷಾ, ಸಾನ್ವಿ, ರೇಖಾ ,ಸಂಧ್ಯಾ ,ನಿಶಾ, ಲಾವಣ್ಯ ಎಂಬವರ ತಂಡ ಉಡುಪಿ ಜಿಲ್ಲೆಯಾದ್ಯಂತ ಭಿಕ್ಷಾಟನೆ ಮಾಡಿ ಎರಡೂವರೆ ವರ್ಷದ ಮಗುವಿನ ಕಾಯಿಲೆಗೆ ಹಣ ನೀಡುವ ಮೂಲಕ ಮಿಡಿದಿದ್ದಾರೆ.     ಪಕ್ಕದ

ಉಡುಪಿ: ಭಿಕ್ಷೆ ಬೇಡಿ ಮಗುವಿನ‌ ಚಿಕಿತ್ಸೆಗೆ ನೆರವಾದರು ಮಂಗಳಮುಖಿಯರು Read More »

ಕರಾವಳಿ

ಯುವತಿಯ ಮೇಲೆ ಅತ್ಯಾಚಾರ ಪ್ರಕರಣ ➤ ಸಬ್ ಇನ್ ಸ್ಪೆಕ್ಟರ್ ಅಮಾನತು…!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 18:  ಚಾಮರಾಜಪೇಟೆ ಠಾಣೆಯ ಸಬ್ ಇನ್‍ಸ್ಪೆಕ್ಟರೊಬ್ಬರು(ಪಿಎಸ್‍ಐ) ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅಮಾನತು ಮಾಡಿದ ಸಬ್ ಇನ್ಸ್‍ಪೆಕ್ಟರ್ ನ್ನು ವಿಶ್ವನಾಥ್ ಬಿರಾದಾರ ರಂದು ಗುರುತಿಸಲಾಗಿದೆ.       ವಿಶ್ವನಾಥ ಹಾಗೂ ಬೆಂಗಳೂರಿನ 30 ವರ್ಷದ ಯುವತಿ ನಡುವೆ ಸ್ನೇಹ ಏರ್ಪಟ್ಟಿತ್ತು. ಯುವತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನನ್ನನ್ನು ಬೆದರಿಸುತ್ತಿದ್ದಾಳೆ ಎಂದು ವಿಶ್ವನಾಥ್ ಯುವತಿ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಇದಕ್ಕೆ

ಯುವತಿಯ ಮೇಲೆ ಅತ್ಯಾಚಾರ ಪ್ರಕರಣ ➤ ಸಬ್ ಇನ್ ಸ್ಪೆಕ್ಟರ್ ಅಮಾನತು…! Read More »

ಕರ್ನಾಟಕ

ವಿಟ್ಲ : ರಫೀಕ್ ಕೆ ಎಂ ರವರಿಗೆ “ಮುಖ್ಯಮಂತ್ರಿಗಳ ಚಿನ್ನದ ಪದಕ”

(ನ್ಯೂಸ್ ಕಡಬ) newskadaba.com ವಿಟ್ಲ ನ. 18: ಕೆಲಿಂಜ ನಿವಾಸಿಯಾಗಿರುವ ಬೆಂಗಳೂರು ವಿವೇಕನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ರಫೀಕ್ ಕೆ.ಎಂ ಅವರಿಗೆ ಪೊಲೀಸ್ ಇಲಾಖೆಯ ಅತ್ತುತ್ತಮ ಸೇವೆಗಾಗಿ ನವೆಂಬರ್ 20 ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರು ವಿಧಾನಸೌಧದ ಬ್ಯಾಂಕ್ಚೆಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯ ಸರಕಾರ ಕೊಡಮಾಡುವ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಲಿದ್ದಾರೆ. ರಫೀಕ್ ಕೆ.ಎಂ ರವರು 15 ವರ್ಷಳಿಂದ ಪೊಲೀಸ್ ಸೇವೆಯಲ್ಲಿದ್ದು, ವೃತ್ತಿಯ ಪ್ರಾರಂಭದಲ್ಲಿ ಮೈಸೂರು ಜಿಲ್ಲೆಯ

ವಿಟ್ಲ : ರಫೀಕ್ ಕೆ ಎಂ ರವರಿಗೆ “ಮುಖ್ಯಮಂತ್ರಿಗಳ ಚಿನ್ನದ ಪದಕ” Read More »

ಕರಾವಳಿ

ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 6 ಮಂದಿಯಲ್ಲಿ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ನ. 18:  ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 6 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.     ಕಡಬ ತಾಲೂಕಿನ ಸವಣೂರಿನ 67 ವರ್ಷದ ಮಹಿಳೆ, ಕಾಮಣದ 43 ವರ್ಷದ ಮಹಿಳೆಯಲ್ಲಿ ಕೋವಿಡ್ 19 ದೃಢಪಟ್ಟಿದೆ. ಪುತ್ತೂರು ತಾಲೂಕಿನ ಪಾಂಗ್ಲಾಯಿ ನಿವಾಸಿ 48 ವರ್ಷದ ಮಹಿಳೆ, ನೆಟ್ಟಣಿಗೆ ಮುಡ್ನೂರಿನ 28 ವರ್ಷದ ಯುವಕ, 26 ವರ್ಷದ ಯುವತಿ, 60 ವರ್ಷದ ಮಹಿಳೆಯಲ್ಲಿ ಕೊರೋನಾ ಪತ್ತೆಯಾಗಿದೆ.  

ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 6 ಮಂದಿಯಲ್ಲಿ ಕೊರೋನಾ ದೃಢ Read More »

ಕರಾವಳಿ
Scroll to Top