ನಾಲ್ಕೂರು: ಬೈಕ್ ಮತ್ತು ಕಾರು ನಡುವೆ ಪರಸ್ಪರ ಢಿಕ್ಕಿ

(ನ್ಯೂಸ್ ಕಡಬ) newskadaba.com ನಾಲ್ಕೂರು, . 19. ಕಳೆದ ದಿನ ನಾಲ್ಕೂರು ಗ್ರಾಮದ ಅಂಜೇರಿ ಎಂಬಲ್ಲಿ ಬೈಕ್ ಮತ್ತು ಕಾರು ನಡುವೆ ಪರಸ್ಪರ ಢಿಕ್ಕಿ ಹೊಡೆದು ಬೈಕ್ ಸವಾರರು ಗಾಯಗೊಂಡ ಘಟನೆ ನಡೆದಿದೆ.

 

 

ಕಲ್ಮಕಾರಿನವರೊಬ್ಬರು ಗುತ್ತಿಗಾರು ಕಡೆ ತೆರಳುತ್ತಿದ್ದು, ಕಲ್ಮಕಾರಿನ ಯುವಕ ಮತ್ತು ಬಾಲಕನೊಬ್ಬ ಬೈಕ್ ನಲ್ಲಿ ಗುತ್ತಿಗಾರಿನಿಂದ ನಡುಗಲ್ಲು ಕಡೆ ಬರುತ್ತಿದ್ದು ಅಂಜೇರಿ ಬಳಿ ಕಾರಿಗೆ ಬೈಕ್ ನವರು ಬಂದು ಢಿಕ್ಕಿ ಹೊಡೆದಿದ್ದಾರೆ. ಬೈಕ್ ನಲ್ಲಿದ್ದ ಹಿಂಬದಿ ಬಾಲಕನ ಕಾಲಿಗೆ ಬಲವಾದ ಏಟು ಬಿದ್ದಿದ್ದು, ಬೈಕ್ ಸವಾರನಿಗೂ ಗಾಯಗಳಾಗಿದೆ. ಗಾಯಾಳುಗಳನ್ನು ಕೆ.ವಿ.ಜಿ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Xl

Scroll to Top