Kadaba News

ಬೆಂಕಿ ಅವಘಡ: ಹೊಸೂರಿನ ಟಾಟಾ ಎಲೆಕ್ರ್ಟಾನಿಕ್ಸ್

(ನ್ಯೂಸ್ ಕಡಬ) newskadaba.com ಸೆ. 27. ಚೆನ್ನೈ: ಇಂದು ಬೆಳಗ್ಗೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಸಮೀಪದಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೆಟ್‌ ಲಿಮಿಟೆಡ್‌ ಘಟಕದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಸೆಲ್‌ಫೋನ್‌ ಉತ್ಪಾದನಾ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಉದ್ಯೋಗಿಗಳನ್ನುಸ್ಥಳಾಂತರಿಸಲಾಗಿದೆ. ಸದ್ಯ ಯಾವುದೇ ಸಾವು-ನೋವಿನ ಬಗ್ಗೆ ತಿಳಿದು ಬಂದಿಲ್ಲ. ಹೆಚ್ಚಿನ ವಿವರ ಕಲೆ ಹಾಕಲಾಗುತ್ತಿದೆ. ಆಸ್ತಿಪಾಸ್ತಿಗೆ ಅಪಾರ ಹಾನಿಯಾಗಿದ್ದು, ಪ್ರಸ್ತುತ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ. ನಾಗಮಂಗಲಂ ಬಳಿಯ ಉದ್ದನಪಲ್ಲಿಯಲ್ಲಿರುವ […]

ಬೆಂಕಿ ಅವಘಡ: ಹೊಸೂರಿನ ಟಾಟಾ ಎಲೆಕ್ರ್ಟಾನಿಕ್ಸ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮುಂಬೈ: ಭಯೋತ್ಪಾದಕ ದಾಳಿ ಎಚ್ಚರಿಕೆ-ಪೊಲೀಸರಿಂದ ಹೈ ಅಲರ್ಟ್

(ನ್ಯೂಸ್ ಕಡಬ) newskadaba.com ಸೆ. 27. ಮುಂಬೈ: ಮುಂಬೈನಲ್ಲಿ  ಭಯೋತ್ಪಾದನಾ ಬೆದರಿಕೆಯ ಬಗ್ಗೆ ಕೇಂದ್ರೀಯ ಸಂಸ್ಥೆಗಳು ಎಚ್ಚರಿಕೆ ನೀಡಿದ ನಂತರ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಮುಂಬೈನ ಅನೇಕ ಧಾರ್ಮಿಕ ಸ್ಥಳಗಳು ಮತ್ತು ಇತರ ಜನನಿಬಿಡ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಧಾರ್ಮಿಕ ಮತ್ತು ಜನಸಂದಣಿ ಇರುವ ಸ್ಥಳಗಳಲ್ಲಿ “ಮಾಕ್ ಡ್ರಿಲ್” ನಡೆಸಲು ಪೊಲೀಸ್ ಸಿಬ್ಬಂದಿಗೆ ತಿಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂಬೈ: ಭಯೋತ್ಪಾದಕ ದಾಳಿ ಎಚ್ಚರಿಕೆ-ಪೊಲೀಸರಿಂದ ಹೈ ಅಲರ್ಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವೈದ್ಯನಿಗೆ 63 ಲಕ್ಷ ರೂ ವಂಚನೆ:ಐಎಫ್ಎಸ್ ಅಧಿಕಾರಿ ವಿರುದ್ದ ಪ್ರಕರಣ

(ನ್ಯೂಸ್ ಕಡಬ) newskadaba.com ಸೆ. 27. ಲಕ್ನೋ: ಹೂಡಿಕೆ ನೆಪದಲ್ಲಿ ವೈದ್ಯರೊಬ್ಬರಿಗೆ 64 ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಅಧಿಕಾರಿ ನಿಹಾರಿಕಾ ಸಿಂಗ್ ಹಾಗೂ ಆಕೆಯ ಪತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಗೋಮತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ರಾಜೇಶ್ ಕುಮಾರ್ ತ್ರಿಪಾಠಿ ಹೇಳಿದ್ದಾರೆ. ಐಎಫ್ಎಸ್ ಅಧಿಕಾರಿ ನಿಹಾರಿಕಾ ಸಿಂಗ್ ಹಾಗೂ ಪಿ ಅಜಿತ್ ಗುಪ್ತಾ ಹಾಗೂ ಅವರ ಸಹ ಕಂಪನಿಗಳು

ವೈದ್ಯನಿಗೆ 63 ಲಕ್ಷ ರೂ ವಂಚನೆ:ಐಎಫ್ಎಸ್ ಅಧಿಕಾರಿ ವಿರುದ್ದ ಪ್ರಕರಣ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಐಟಿ ಕಾಯ್ದೆ ತಿದ್ದುಪಡಿ ರದ್ದು

(ನ್ಯೂಸ್ ಕಡಬ) newskadaba.com ಸೆ. 27. ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಕೇಂದ್ರ ಸರಕಾರ ತಂದಿರುವ ತಿದ್ದುಪಡಿಯನ್ನು ಅಸಾಂವಿಧಾನಿಕ ಎಂದು ಘೋಷಿಸಿರುವ ಮುಂಬೈ ಹೈಕೋರ್ಟ್ ಇದನ್ನು ರದ್ದು ಪಡಿಸಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ತಿದ್ದುಪಡಿಯನ್ನು ಜಾರಿಗೆ ತಂದಿದ್ದು, ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಸರಕಾರಕ್ಕೆ ಸಂಬಂಧಿಸಿದ ವರದಿಗಳಲ್ಲಿರುವ ಸುಳ್ಳುಗಳನ್ನು ಪತ್ತೆ ಹಚ್ಚಲು ಒಂದು ಘಟಕವನ್ನು ಸ್ಥಾಪಿಸಲು ಮುಂದಾಗಿತ್ತು. ಈ ಘಟಕವು ಯಾವುದೇ ಸುದ್ದಿಯನ್ನು ನಕಲಿಯೆಂದು ನಿರ್ಧರಿಸಿದರೆ, ಆನ್ ಲೈನ್ ಸಂಸ್ಥೆಗಳು

ಐಟಿ ಕಾಯ್ದೆ ತಿದ್ದುಪಡಿ ರದ್ದು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಸಾಹಿತ್ಯೋತ್ಸವ: ಸ್ವಾಗತ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಪುತ್ತೂರು ಸೆ.27:  ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ವರ್ಷಕ್ಕೊಮ್ಮೆ ಆಯೋಜಿಸುವ ಸಾಂಸ್ಕೃತಿಕ, ಪ್ರತಿಭಾ ಸ್ಪರ್ಧಾ ಕಾರ್ಯಕ್ರಮ “ಸಾಹಿತ್ಯೋತ್ಸವ”ದ ಸ್ವಾಗತ ಸಮಿತಿಯನ್ನು ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಅಧ್ಯಕ್ಷರಾದ ಸಯ್ಯಿದ್ ಸಾಬಿತ್ ಮುಈನಿ ಅಸ್ಸಖಾಫಿ ತಂಙಳ್‌ ರವರ ನೇತೃತ್ವದಲ್ಲಿ ಪುತ್ತೂರು ಪಡೀಲಿನಲ್ಲಿರುವ ಸುನ್ನೀ ಸೆಂಟರ್‌ನಲ್ಲಿ ರಚಿಸಲಾಯಿತು. ಸಾಹಿತ್ಯೋತ್ಸವ ಕಾರ್ಯಕ್ರಮವು ನವೆಂಬರ್ 3ರ ಆದಿತ್ಯವಾರದಂದು ಪಾಟ್ರಕೋಡಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಸ್ವಾಗತ ಸಮಿತಿ ಚೇರ್ಮನ್ ಆಗಿ ಸಲಾಂ ಹನೀಫಿ ಕಬಕ, ಜನರಲ್ ಕನ್ವೀನರ್ ಆಗಿ ಉವೈಸ್ ಬೀಟಿಗೆ,

ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಸಾಹಿತ್ಯೋತ್ಸವ: ಸ್ವಾಗತ ಸಮಿತಿ ರಚನೆ Read More »

ಬ್ರೇಕಿಂಗ್ ನ್ಯೂಸ್

ತುಮಕೂರು-ಯಶವಂತಪುರ ಮಧ್ಯೆ ನೂತನ ವೈಮು ರೈಲು ಸೇವೆ:ಕೇಂದ್ರ ಸಚಿವ ವಿ ಸೋಮಣ್ಣ ಚಾಲನೆ

(ನ್ಯೂಸ್ ಕಡಬ) newskadaba.com ತುಮಕೂರು ಸೆ.27: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಇಂದು ಶುಕ್ರವಾರ ತುಮಕೂರು-ಯಶವಂತಪುರ ಮೆಮು ರೈಲಿಗೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತುಮಕೂರು-ಯಶವಂತಪುರ ಜೊತೆಗೆ ಬಾಣಸವಾಡಿ-ತುಮಕೂರು ನಡುವೆ ಹೊಸ ಮೆಮು ರೈಲು ಸೇವೆ ಆರಂಭ ಮಾಡುವುದಾಗಿ ಭರವಸೆ ನೀಡಿದರು. ಮೆಮು ರೈಲು ಸಂಚಾರ: ತುಮಕೂರು-ಯಶವಂತಪುರ ನಡುವಿನ ಹೊಸ ಮೆಮು ರೈಲು ಇಂದೇ ಕಾರ್ಯಾರಂಭ ಮಾಡುತ್ತಿದ್ದು, ಭಾನುವಾರ ಹೊರತುಪಡಿಸಿ ವಾರದ ಎಲ್ಲ ದಿನ ಸಂಚರಿಸಲಿದೆ.

ತುಮಕೂರು-ಯಶವಂತಪುರ ಮಧ್ಯೆ ನೂತನ ವೈಮು ರೈಲು ಸೇವೆ:ಕೇಂದ್ರ ಸಚಿವ ವಿ ಸೋಮಣ್ಣ ಚಾಲನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಿಎಂ ಮುಡಾ ಕೇಸ್ ಬೆನ್ನಲ್ಲೇ ಖರ್ಗೆ ಭೂ ಕಬಳಿಕೆ ಕಂಟಕ:ಲೋಕಾಯುಕ್ತಕ್ಕೆ ದೂರು

(ನ್ಯೂಸ್ ಕಡಬ) newskadaba.com ಕೆ.ಆರ್.ಪೇಟೆ, ಸೆ.27. ಮುಡಾ ನಿವೇಶನ ಹಂಚಿಕೆ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ಗೆ ಮತ್ತೊಂದು ಭೂ ಕಬಳಿಕೆಯ ಉರುಳು ಸುತ್ತಿಕೊಂಡಿದೆ. ಮುಡಾ ಹಗರಣದಲ್ಲಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ ಸಂದಿಗ್ಧ ಪರಿಸ್ಥಿತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬಸ್ಥರ ವಿರುದ್ಧ ಲೋಕಯುಕ್ತದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಮಾಜಿ ಕಾರ್ಪೊರೇಟರ್ ಎನ್ ಆರ್ ರಮೇಶ್ ಅವರು ಭೂ ಕಬಳಿಕೆ ಆರೋಪದಡಿಯಲ್ಲಿ ಇಬ್ಬರು ಸಚಿವರು ಹಾಗೂ ಹಿರಿಯ IAS ಅಧಿಕಾರಿ

ಸಿಎಂ ಮುಡಾ ಕೇಸ್ ಬೆನ್ನಲ್ಲೇ ಖರ್ಗೆ ಭೂ ಕಬಳಿಕೆ ಕಂಟಕ:ಲೋಕಾಯುಕ್ತಕ್ಕೆ ದೂರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹ

 (ನ್ಯೂಸ್ ಕಡಬ) newskadaba.com ಕೆ.ಆರ್.ಪೇಟೆ (ಸೆ.27)  ಮಹಿಳೆಯರು ಮತ್ತು ಒಕ್ಕಲಿಗ ಸಮುದಾಯದ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ತಾಲೂಕು ಒಕ್ಕಲಿಗ ಮಹಿಳಾ ಸಂಘ ಆಗ್ರಹಿಸಿದೆ. ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿದ್ದಾರೆ ಎಂದು ನಂಬಿರುವ ದೇಶ ನಮ್ಮದು. ಒಕ್ಕಲಿಗ ಸಮುದಾಯ ನಾಡಿಗೆ ಅನ್ನ ನೀಡುವ ಸಮುದಾಯ. ಎಲ್ಲಾ ಜಾತಿ, ಧರ್ಮ ಮತ್ತು ಸಂಸ್ಕೃತಿಯನ್ನು ಗೌರವಿಸಿ ನಡೆಯುತ್ತಿರುವರರು ಒಕ್ಕಲಿಗ ಸಮುದಾಯದ ಜನ. ಶಾಂತಿ ಮತ್ತು ಸಹಬಾಳ್ವೆಯಿಂದ ಬದುಕುತ್ತಿರುವ ಒಕ್ಕಲಿಗ ಸಮಾಜವನ್ನು

ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಪಾನ್ ನನ್ನು ಹಿಂದಿಕ್ಕಿದ ಭಾರತ: ಏಷ್ಯಾ ಫೆಸಿಫಿಕ್ ನಲ್ಲಿ ಟಾಪ್ 3ನೇ ದೇಶ

 (ನ್ಯೂಸ್ ಕಡಬ) newskadaba.com ನವದೆಹಲಿ(ಸೆ.27) ಭಾರೀ ವೇಗದ ಆರ್ಥಿಕಾಭಿವೃದ್ಧಿಯಿಂದ ಜಗತ್ತಿನ ಗಮನ ಸೆಳೆದಿರುವ ಭಾರತ ಇದೀಗ ಏಷ್ಯಾ ಪೆಸಿಫಿಕ್‌ ರಾಷ್ಟ್ರಗಳ ಪೈಕಿ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಪಟ್ಟಿಯಲ್ಲಿ ಜಪಾನ್‌ ದೇಶವನ್ನು ಹಿಂದಿಕ್ಕಿರುವ ಭಾರತವು ಅಮೆರಿಕ ಮತ್ತು ಚೀನಾದ ನಂತರದ ಸ್ಥಾನಕ್ಕೆ ಏರಿದೆ. ಭಾರೀ ವೇಗದ ಆರ್ಥಿಕಾಭಿವೃದ್ಧಿಯಿಂದ ಜಗತ್ತಿನ ಗಮನ ಸೆಳೆದಿರುವ ಭಾರತ ಇದೀಗ ಏಷ್ಯಾ ಪೆಸಿಫಿಕ್‌ ರಾಷ್ಟ್ರಗಳ ಪೈಕಿ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಆಸ್ಟ್ರೇಲಿಯಾದ ಲೋವಿ ಇನ್‌ಸ್ಟಿಟ್ಯೂಟ್‌ ‘2024ನೇ ಆವೃತ್ತಿಯ ಏಷ್ಯಾ

ಜಪಾನ್ ನನ್ನು ಹಿಂದಿಕ್ಕಿದ ಭಾರತ: ಏಷ್ಯಾ ಫೆಸಿಫಿಕ್ ನಲ್ಲಿ ಟಾಪ್ 3ನೇ ದೇಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮತ್ತೊಂದು ಹಂತಕ್ಕೆ ತಲುಪಿದ ರಾಜ್ಯಪಾಲ-ಸರ್ಕಾರದ ಗುದ್ದಾಟ

 (ನ್ಯೂಸ್ ಕಡಬ) newskadaba.com ಬೆಂಗಳೂರು(ಸೆ.27) ರಾಜ್ಯಪಾಲರು ಅಥವಾ ರಾಜ್ಯಪಾಲರ ಸಚಿವಾಲಯವು ಸರ್ಕಾರದಿಂದ ವಿವರಣೆ, ವರದಿ ಸೇರಿದಂತೆ ಯಾವುದೇ ಮಾಹಿತಿ ಕೇಳಿದರೂ ಅಧಿಕಾರಿಗಳು ನೇರವಾಗಿ ನೀಡುವಂತಿಲ್ಲ. ಸಚಿವ ಸಂಪುಟ ಸಭೆಯು ಪರಿಶೀಲಿಸಿ ಅನುಮತಿಸಿದ ಮಾಹಿತಿಯನ್ನು ಮಾತ್ರ ರಾಜ್ಯಪಾಲರಿಗೆ ನೀಡಬೇಕು’ ಎಂದು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ. ತನ್ಮೂಲಕ ತಕ್ಷಣದಿಂದ ಜಾರಿಯಾಗುವಂತೆ ಯಾವುದೇ ಮಾಹಿತಿಯನ್ನೂ ಸಚಿವ ಸಂಪುಟ ಸಭೆ ಮುಂದೆ ಮಂಡಿಸದೆ ನೇರವಾಗಿ ರಾಜ್ಯ ಪಾಲರಿಗೆ ನೀಡುವಂತಿಲ್ಲ. ಈವರೆಗೆ ರಾಜ್ಯಪಾಲರು ಬರೆದಿರುವ ಪತ್ರಗಳಿಗೂ ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಿ ಸಭೆ

ಮತ್ತೊಂದು ಹಂತಕ್ಕೆ ತಲುಪಿದ ರಾಜ್ಯಪಾಲ-ಸರ್ಕಾರದ ಗುದ್ದಾಟ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top