Kadaba News

ಆ.12 ಪಿಲಿಕುಳ ನಿಸರ್ಗಧಾಮ ಸಾರ್ವಜನಿಕರ ವೀಕ್ಷಣೆಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಆಗಸ್ಟ್ 12 ರಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಎಲ್ಲಾ ವಿಭಾಗಗಳು ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ. ಮೃಗಾಲಯ,ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್ ಮತ್ತು ಸಂಸ್ಕೃತಿ  ಗ್ರಾಮ ಸಾರ್ವಜನಿಕರ ವೀಕ್ಷಣೆಗೆ ಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ಇವರ ಪ್ರಕಟಣೆ ತಿಳಿಸಿದೆ.

ಆ.12 ಪಿಲಿಕುಳ ನಿಸರ್ಗಧಾಮ ಸಾರ್ವಜನಿಕರ ವೀಕ್ಷಣೆಗೆ Read More »

ಕರಾವಳಿ

ಯುವತಿ ಕಾಣೆಯಾಗಿದ್ದಾರೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಮೂಡುಪೆರಾರ ಗ್ರಾಮದ ಮುಂಡರಬೆಟ್ಟು ಎಂಬಲ್ಲಿನ ವಿನಿತಾ(18) ಎಂಬ ಯುವತಿ ತನ್ನ ಅಜ್ಜಿ ಮನೆಯಿಂದ ಹೋದವಳು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಬಜಪೆ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದವರ ಚಹರೆ ಇಂತಿವೆ: ಹೆಸರು-ವಿನಿತಾ, ಪ್ರಾಯ-18 ವರ್ಷ 1 ತಿಂಗಳು, ಎತ್ತರ-4 ಅಡಿ 10 ಇಂಚು, ದೈಹಿಕ ಚಹರೆ-ಸಾಧಾರಣ ಮೈಕಟ್ಟು, ಕೋಲು ಮುಖ, ಬಲಬದಿ ಮೂಗಿನಲ್ಲಿ ಮೂಗುತಿ ಧರಿಸಿರುತ್ತಾಳೆ, ಬಿಳಿ ಮೈ ಬಣ್ಣ, ಕಪ್ಪು ಮತ್ತು ಕೆಂಪು ಚೆಕ್ಸ್ ಚೂಡಿದಾರ ಧರಿಸಿರುತ್ತಾಳೆ.

ಯುವತಿ ಕಾಣೆಯಾಗಿದ್ದಾರೆ. Read More »

ಕರಾವಳಿ

ಡೊಂಗರಕೇರಿ ➤ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9. ಕರ್ನಾಟಕ ಸರ್ಕಾರವು ಎಡಿಬಿ ನೆರವಿನೊಂದಿಗೆ ಮಂಗಳೂರು ನಗರಕ್ಕೆ ಕ್ವಿಮಿಪ್ ಟ್ರಾಂಚ್-2ರಡಿಯಲ್ಲಿ ಒಳಚರಂಡಿ ಹಾಗೂ ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಆಗಸ್ಟ್ 9 ರಂದು ಬೆಳಿಗ್ಗೆ 11 ಗಂಟೆಗೆ ವಾರ್ಡ್ ನಂ.42 ರಲ್ಲಿ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಡೊಂಗರಕೇರಿಯ ಬಿ.ಇ.ಎಮ್ ಅನುದಾನಿತ ಶಾಲೆಯಲ್ಲಿ ಕೆಯುಐಡಿಎಫ್‍ಸಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಿಂದ ಆಯೋಜಿಸಲಾಗಿದೆ ಮಂಗಳೂರು ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

ಡೊಂಗರಕೇರಿ ➤ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆ Read More »

ಕರಾವಳಿ

ಭಾರತೀಯ ಅಂಚೆ ಇಲಾಖೆ ➤ಮಕ್ಕಳ ಹಕ್ಕುಗಳು- ‘ಅಂಚೆ ಚೀಟಿ ಡಿಸೈನ್ ಸ್ಪರ್ಧೆ’

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಭಾರತೀಯ ಅಂಚೆ ಇಲಾಖೆಯು ಅಂಚೆ ಚೀಟಿ ಡಿಸೈನ್ ಸ್ಪರ್ಧೆಯನ್ನು “ಮಕ್ಕಳ ಹಕ್ಕುಗಳು” ಎಂಬ ವಿಷಯದಲ್ಲಿ 1 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದೆ. ಡಿಸೈನ್ ಸ್ವಂತದ್ದಾಗಿದ್ದು, ಸ್ಪೀಡ್ ಪೋಸ್ಟ್ ಮುಖಾಂತರ ಎ4 ಸೈಜ್ ಎನ್ವಲಪ್‍ನಲ್ಲಿ “ಮಕ್ಕಳ ದಿನಾಚರಣೆ 2019- ಸ್ಟಾಂಪ್ ಡಿಸೈನ್ ಸ್ಪರ್ಧೆ” ಎಂದು ನಮೂದಿಸಿರಬೇಕು. ಅಸಿಸ್ಟೆಂಟ್ ಡೈರೆಕ್ಟರ್ ಜನರಲ್, ರೂಮ್ ನಂ 108, ಡಾಕ್ ಭವನ್, ಪಾರ್ಲಿಮೆಂಟ್ ರಸ್ತೆ, ದೆಹಲಿ-110001” ಈ ವಿಳಾಸಕ್ಕೆ ಸಪ್ಟೆಂಬರ್ 20 ರ ಒಳಗಡೆ

ಭಾರತೀಯ ಅಂಚೆ ಇಲಾಖೆ ➤ಮಕ್ಕಳ ಹಕ್ಕುಗಳು- ‘ಅಂಚೆ ಚೀಟಿ ಡಿಸೈನ್ ಸ್ಪರ್ಧೆ’ Read More »

ಕರಾವಳಿ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ➤ಆರೋಗ್ಯ ಜಾಗೃತಿ:ವಸ್ತು ಪ್ರದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9. ವಿವಿಧ ಸಾಂಕ್ರಾಮಿಕ ರೋಗಗಳ ಹಾಗೂ ಆರೋಗ್ಯ ಜಾಗೃತಿ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು, ಮಾಹಿತಿ ಪ್ರದರ್ಶನ ನಗರದ ಲಾಲ್‍ಬಾಗ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಗಸ್ಟ್ 8 ರಂದು ಚಾಲನೆ  ನೀಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಅವರು ಪ್ರದರ್ಶನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಂಕ್ರಾಮಿಕ ರೋಗಗಳ ನಿಯಂತ್ರಣ ನಮ್ಮಿಂದಲೇ ಸಾಧ್ಯ. ವೈದ್ಯಕೀಯ ಚಿಕಿತ್ಸೆಗಳ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ➤ಆರೋಗ್ಯ ಜಾಗೃತಿ:ವಸ್ತು ಪ್ರದರ್ಶನ Read More »

ಕರಾವಳಿ

ಹೊಸ್ಮಠ :ಹಳೆ ಸೇತುವೆ ಇಡೀ ದಿನ ಮುಳುಗಡೆ

(ನ್ಯೂಸ್ ಕಡಬ) newskadaba.com ಹೊಸ್ಮಠ, ಆಗಸ್ಟ್.8.ಗುಂಡ್ಯ ಹೊಳೆಗೆ ಅಡ್ಡಲಾಗಿರುವ ಕಡಬ ಸಮೀಪದ ಹೊಸ್ಮಠ ಹಳೆ ಸೇತುವೆ ಕಳೆದ ಬುದವಾರ ರಾತ್ರಿಯಿಂದ  ಮುಳುಗಡೆಯಾಗಿದೆ. ಈ ಸೇತುವೆಯ ಪಕ್ಕದಲ್ಲಿರು ನೂತನ ಸರ್ವಋತು ಸೇತುವೆಯಲ್ಲಿ ಪ್ರಯಾಣಿಸುವ ಹಲವಾರು ಮಂದಿ ತಮ್ಮ ವಾಹನವನ್ನು ಸೇತುವೆಯಲ್ಲಿ ನಿಲ್ಲಿಸಿ ನೀರನನು ವೀಕ್ಷಿಸುತ್ತಿದ್ದರು, ಸೇತುವೆ ಮೇಲೆ ನಿಂತು ಅಪಾಯದ ಭಂಗಿಯಲ್ಲಿಕೆಲವರು ಸೆಲ್ಪಿಗೆ ಮೊರೆಹೋಗುತ್ತಿದ್ದರು.  

ಹೊಸ್ಮಠ :ಹಳೆ ಸೇತುವೆ ಇಡೀ ದಿನ ಮುಳುಗಡೆ Read More »

ಕರಾವಳಿ

ಉಳಿಪ್ಪು ರಸ್ತೆ ದುರಸ್ತಿ ವಿಚಾರದಲ್ಲಿ ➤ ಪಂಚಾಯತ್ ವಿರುದ್ದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.8.ಕುಟ್ರುಪಾಡಿ ಗ್ರಾಮದ ಉಳಿಪ್ಪು ಎಂಬಲ್ಲಿ ರಸ್ತೆ ದುರಸ್ತಿ ವಿಚಾರದಲ್ಲಿ ಆ.9ರಂದು ಕುಟ್ರುಪಾಡಿ ಪಂಚಾಯತ್ ಎದುರು ಎಲ್ಸಿತೋಮಸ್ ಎಂಬವರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಹಿನ್ನಲೆಯಲ್ಲಿ ಕುಟ್ರುಪಾಡಿ ಗ್ರಾ.ಪಂ.ನಲ್ಲಿ ತುರ್ತು ಸಭೆಯಲ್ಲಿ  ಚರ್ಚೆ ನಡೆಸಿ, ರಸ್ತೆಯ ದುರಸ್ತಿಗೆ ನ್ಯಾಯಾಲಯದ ಆದೇಶ ಮತ್ತು ಪಟ್ಟಾ ಜಾಗದವರ ಆಕ್ಷೇಪಣೆ ಅರ್ಜಿ ಅಡ್ಡಿಯುಂಟಾಗಿರುವುದರಿಂದ ತುರ್ತು ದುರಸ್ತಿ ಸಾಧ್ಯವಾಗುವುದಿಲ್ಲ, ಈ ವಿಚಾರವನ್ನು ಎಲ್ಸಿ ತೋಮಸ್ ಅವರು ಅರ್ಥ ಮಾಡಿಕೊಂಡು ಪಂಚಾಯತ್ ವಿರುದ್ದ ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು

ಉಳಿಪ್ಪು ರಸ್ತೆ ದುರಸ್ತಿ ವಿಚಾರದಲ್ಲಿ ➤ ಪಂಚಾಯತ್ ವಿರುದ್ದ ಪ್ರತಿಭಟನೆ Read More »

ಕರಾವಳಿ

ಮಳೆಗೆ ಕೃಷಿ ತೋಟ ಜಲಾವೃತ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.8.ದಿನ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ನೂಜಿಬಾಳ್ತಿಲ ಗ್ರಾಮದ ಗುಂಡ್ಯ ಹೊಳೆ ಬದಿಯ ಕೃಷಿ ಪ್ರದೇಶಗಳು ಜಲಾವೃತಗೊಂಡ ಬಗ್ಗೆ ವರದಿಯಾಗಿದೆ. ನೂಜಿಬಾಳ್ತಿಲ ಗ್ರಾಮದ ಇಚ್ಲಂಪಾಡಿ ಸೇತುವೆ ಸಮೀಪದ ಕುಂಬ್ಲಾಯಿ ಉದಯ ಕುಮಾರ್ ಎಂಬವರ ಅಡಿಕೆ ತೋಟ ಹಾಗೂ ವಸಂತ ಕುಂಬ್ಲಾಯಿ ಎಂಬವರ ಅಡಿಕೆ, ರಬ್ಬರ್ ತೋಟಕ್ಕೆ ನೀರು ನುಗ್ಗಿದ್ದು, ತೋಟ ಪೂರ್ತಿ ಜಲಾವೃತಗೊಂಡಿದ್ದು, ಹೊಳೆ ಬದಿಯ ಹಲವರ ಕೃಷಿ ಭೂಮಿಗೆ ನೀರು ನುಗ್ಗಿದೆ ಎಂದು ತಿಳಿದುಬಂದಿದೆ. ನೆನ್ನೆ ಸಂಜೆ ವೇಳೆ ನೀರು ಕಡಿಮೆಯಾಗತೊಡಗಿದೆ.

ಮಳೆಗೆ ಕೃಷಿ ತೋಟ ಜಲಾವೃತ Read More »

ಕರಾವಳಿ

ಮರ್ದಾಳ ➤ ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.8.ಮರ್ದಾಳ 9ನೇ ವರ್ಷದ ವರಮಹಾಲಕ್ಷ್ಮೀ ಪೂಜೆಯ ಸಮಿತಿ ಅಧ್ಯಕ್ಷೆಯಾಗಿ ಚಿತ್ರನೇಮಿರಾಜ ಬರಮೇಲು, ಕಾರ್ಯದರ್ಶಿಯಾಗಿ ಜಾನಕಿ ಮಿತ್ತೋಡಿ, ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳಾಗಿ ವಸಂತಿನಾರಾಯಣ ಗೌಡ ಪುಯಿಲ, ನಿರ್ಮಲಾಸೀತಾರಾಮ ಗೌಡ, ಉಷಾಮನೋಹರ್ ರೈ, ಸುನಾಂದ ಕೋಲಂತ್ತಾಡಿ, ಪ್ರೇಮ ಕೋಲಂತ್ತಾಡಿ, ಜಾನಕಿ ಕಂಪ, ಕುಸುಮ ಸುಳ್ಯ, ವೇದಾವತಿ ಎಡೆಂಜ, ಆಯ್ಕೆ ಮಾಡಲಾಗಿದೆ.

ಮರ್ದಾಳ ➤ ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆ Read More »

ಕರಾವಳಿ

ಕೇಪು ಕುಟ್ರುಪಾಡಿ ➤ ಕೋಟಿ ವೃಕ್ಷ ಆಂದೋಲನ

(ನ್ಯೂಸ್ ಕಡಬ) newskadaba.com ಕೇಪು ಕುಟ್ರುಪಾಡಿ , ಆಗಸ್ಟ್.8.ಕುಟ್ರುಪಾಡಿ ಗ್ರಾಮದ ಕೇಪು ಶ್ರೀ ಲಕ್ಷೀ ಜನಾರ್ದನ ದೇವಸ್ಥಾನದ ಬಳಿ ಕೋಟಿ ವೃಕ್ಷ ಆಂದೋಲನ ನಡೆಯಿತು. ಕಡಬ ಸರಸ್ವತಿ ವಿದ್ಯಾಲಯದ ಸಹಯೋಗದೊಂದಿಗೆ ನಡೆದ ಕೋಟಿ ವೃಕ್ಷ ಆಂದೋಲನವನ್ನು ಸುರೇಶ್ ದೇಂತಾರು ಗಿಡ ನೆಡುವ ಮೂಲಕ ಚಾಲನೆ ನೀಡಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೂ ಸಸಿಗಳು ವಿತರಿಸಲಾಯಿತು. ಕೇಪು ಶ್ರೀ ಲಕ್ಷೀ ಜನಾರ್ದನ ದೇವಸ್ಥಾನದ ವಠಾರ ಹಾಗೂ ಸುತ್ತಮುತ್ತಲಿನಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಕುಟ್ರುಪಾಡಿ ಗ್ರಾ.ಪಂ. ಸದಸ್ಯ ಶಿವಪ್ರಸಾದ್

ಕೇಪು ಕುಟ್ರುಪಾಡಿ ➤ ಕೋಟಿ ವೃಕ್ಷ ಆಂದೋಲನ Read More »

ಕರಾವಳಿ
Scroll to Top