Kadaba News

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆ..!!!

(ನ್ಯೂಸ್ ಕಡಬ) newskadaba.com ಮಂಗಳೂರು, ಜು 08. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಬುಧವಾರ ಒಂದೇ ದಿನ ಮೂವರು ಮೃತಪಟ್ಟಿದ್ದು ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಪುತ್ತೂರು ಮೂಲದ 32 ವರ್ಷದ ಮಹಿಳೆ, ಉಳ್ಳಾಲದ 62 ವರ್ಷದ ವೃದ್ದೆ, ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂವರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದು ಈ ಪೈಕಿ ಇಬ್ಬರು ಮಹಿಳೆಯರು ನಗರದ ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಿಲ್ಲೆಯಲ್ಲಿ ಕೊರೊನಾ ಶರವೇಗದಲ್ಲಿ ವ್ಯಾಪಿಸುತ್ತಿದ್ದು ಮಂಗಳವಾರದವರೆಗೆ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆ..!!! Read More »

ಕರಾವಳಿ

ಕರಾವಳಿಯಲ್ಲಿ ಇಂದಿನಿಂದ ಜು 11ರ ವರೆಗೆ ಭಾರಿ ಮಳೆ ಸಾಧ್ಯತೆ ➤ ಎಲ್ಲೋ ಅಲರ್ಟ್ ಘೋಷಣೆ

(ನ್ಯೂಸ್ ಕಡಬ) newskadaba.com ಕರಾವಳಿ ,ಜು.07:  ಜು 7ರಿಂದ 11ರವರೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್‌‌ ಘೋಷಿಸಲಾಗಿದೆ ಎಂಬುದಾಗಿ ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆ ಕರಾವಳಿಯ ಕಡೆಗೆ ಆಗ್ನೇಯ ಅರಬ್ಬಿ ಸಮುದ್ರದಿಂದ ಗಂಟೆಗೆ ಸುಮಾರು 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಈ ನಿಟ್ಟಿನಲ್ಲಿ ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ತಿಳಿಸಿದೆ. ಇನ್ನು ಜು 10ರಿಂದ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮಳೆಯ ಪ್ರಮಾಣವು ಅಧಿಕವಾಗಲಿದ್ದು, ಮುಂದಿನ 48 ಗಂಟೆಗಳವರೆಗೆ

ಕರಾವಳಿಯಲ್ಲಿ ಇಂದಿನಿಂದ ಜು 11ರ ವರೆಗೆ ಭಾರಿ ಮಳೆ ಸಾಧ್ಯತೆ ➤ ಎಲ್ಲೋ ಅಲರ್ಟ್ ಘೋಷಣೆ Read More »

ಕರಾವಳಿ, ಕರ್ನಾಟಕ

ಕುಂದಾಪುರ : ಅಗ್ನಿ ಅವಘಡ, ಅಂಗಡಿಗಳು ಸಂಪೂರ್ಣ ಭಸ್ಮ

(ನ್ಯೂಸ್ ಕಡಬ) newskadaba.com ಕುಂದಾಪುರ,ಜು.07: ಗಂಗೊಳ್ಳಿ ಸಮೀಪದ ವಾಟರ್ ಟ್ಯಾಂಕ್ ಬಳಿ ಇರುವ ಎರಡು ಅಮಗಡಿಗಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋದ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ. ಜಿ ದಿನೇಶ್ ನಾಯಕ್ ಮತ್ತು ಜಿ ಪದ್ಮನಾಭ್ ನಾಯಕ್ ಎಂಬವರಿಗೆ ಸೇರಿದ ಅಂಗಡಿಯಾಗಿದ್ದು, ಎರಡು ಅಂಗಡಿಗಳು ಸಂಪೂರ್ಣವಾಗಿ ಭಸ್ಮವಾಗಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಕುಂದಾಪುರದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಸಂಭವಿಸಿರಬಹುದೆಂದು

ಕುಂದಾಪುರ : ಅಗ್ನಿ ಅವಘಡ, ಅಂಗಡಿಗಳು ಸಂಪೂರ್ಣ ಭಸ್ಮ Read More »

ಕರಾವಳಿ, ಕರ್ನಾಟಕ

ಉಡುಪಿ: ಕ್ಷುಲಕ ಕಾರಣಕ್ಕೆ ಯುವಕನ ಹತ್ಯೆ

(ನ್ಯೂಸ್ ಕಡಬ) newskadaba.com ಉಡುಪಿ,ಜು.07: ಉಡುಪಿ  ಕ್ಷುಲಕ ಕಾರಣಕ್ಕೆ ಗುಂಪೊಂದು ಯುವಕನನ್ನು ಹತ್ಯೆ ಮಾಡಿದ ಘಟನೆ ಲಕ್ಷ್ಮೀನಗರ ಪ್ರದೇಶದಲ್ಲಿ   ಮಂಗಳವಾರ ನಡೆದಿದೆ. ಹತ್ಯೆಯಾದ ಯುವಕನನ್ನು ಯೋಗೀಶ್ ಎಂದು ಗುರುತಿಸಲಾಗಿದೆ. ಯೋಗೀಶ್ ಮತ್ತು ತಂಡ ನಡುವೆ ಇದ್ದ ವೈಯಕ್ತಿಕ ಮನಸ್ತಾಪವೇ ಈ ಘಟನೆಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಉಡುಪಿ: ಕ್ಷುಲಕ ಕಾರಣಕ್ಕೆ ಯುವಕನ ಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ರೈತರಿಂದ ನೇರವಾಗಿ ಸರ್ಕಾರ ಹಸುವಿನ ಸೆಗಣಿ ಖರೀದಿಸುವ ಯೋಜನೆಗೆ ಚಾಲನೆ

(ನ್ಯೂಸ್ ಕಡಬ) newskadaba.com.ಛತ್ತೀಸಗಢ,ಜು.6: ಛತ್ತೀಸಗಢ ಸರಕಾರವು ಹೊಸ ಯೋಜನೆಯ ಮೂಲಕ ರೈತರ ನೆರವಿಗೆ ಧಾವಿಸಿದೆ. ಸರ್ಕಾರವು ಗೋಧನ್‌ ನ್ಯಾಯ ಯೋಜನೆ ಎನ್ನುವ ಯೋಜನೆಯನ್ನು ಆರಂಭಿಸಿ ಸಾವಯವ ವಿಧಾನದಲ್ಲಿ ಕೃಷಿ ಬೆಳೆಯುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಸರ್ಕಾರ ಆರಂಭಿಸಿದೆ. ಈ ಯೋಜನೆಯ ಭಾಗವಾಗಿ ಇದೀಗ ಕೃಷಿಕರಿಂದ ರಾಜ್ಯ ಸರ್ಕಾರ ಹಸುವಿನ ಸೆಗಣಿ ಖರೀದಿಗೆ ಮುಂದಾಗಿದೆ. ಪ್ರತಿ ಕಿಲೋಗ್ರಾಂಗೆ 1.50 ರೂಪಾಯಿಯಂತೆ ಸೆಗಣಿ ಖರೀದಿಸಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೃಷಿ ಸಚಿವ ರವೀಂದ್ರ ಚೌಬೆ ನೇತೃತ್ವದ

ರೈತರಿಂದ ನೇರವಾಗಿ ಸರ್ಕಾರ ಹಸುವಿನ ಸೆಗಣಿ ಖರೀದಿಸುವ ಯೋಜನೆಗೆ ಚಾಲನೆ Read More »

ರಾಷ್ಟ್ರೀಯ ನ್ಯೂಸ್

ಅಡ್ಕಾರ್: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ

(ನ್ಯೂಸ್ ಕಡಬ) newskadaba.com ಸುಳ್ಯ,ಜು.06: ಸುಳ್ಯದ ಅಡ್ಕಾರ್  ಬಳಿ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ ಹೊಡೆದ ಘಟನೆ ಇಂದು ನಡೆದಿದೆ. ಅತಿಯಾದ ವೇಗದ ಪರಿಣಾಮ ಪಲ್ಟಿ ಹೊಡೆದ ಪಿಕಪ್ ಪುನ: ಪುತ್ತೂರು ಕಡೆ ಮುಖಮಾಡಿ ತಿರುಗಿ ಬಿದ್ದಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಪಲ್ಟಿಯಾಗಿರುವ ಬಾಹನವನ್ನು ಮೇಲೆತ್ತುವ ಕಾರ್ಯ ಭರದಿಂದ ಸಾಗಿದೆ.  

ಅಡ್ಕಾರ್: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ Read More »

ಕರಾವಳಿ, ಕರ್ನಾಟಕ

ಭಾನುವಾರ ಲಾಕ್ ಡೌನ್ ಸದುಪಯೋಗ ➤ ಕಾಂಕ್ರೀಟ್ ಹಾಕಿ ಹೊಂಡ ಮುಚ್ಚಿದ ಬಿಜೆಪಿ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಮಂಗಳೂರು ,ಜು.06: ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಮತ್ತೆ ಸಂಡೇ ಲಾಕ್ ಡೌನ್ ಜಾರಿ ಮಾಡುತ್ತಿದೆ. ಪ್ರತಿ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಲಾಕ್ ಡೌನ್ ಮಾಡಿದೆ. ಈ ಸಮಯದಲ್ಲಿ ಕೆಲವರು ಮನೆಯಲ್ಲಿ ಕುಳಿತು ಕೆಲಸ ಮಾಡಿದ್ದಾರೆ. ಆದರೇ, ಬಿ.ಸಿ ರೋಡಿನ ಬಿಜೆಪಿ ಕಾರ್ಯಕರ್ತರು ಸಂಡೇ ಲಾಕ್ ಡೌನ್ ಅನ್ನ ಸದುಪಯೋಗಪಡಿಸಿಕೊಂಡು ಬಿ.ಸಿ ರೋಡಿನಲ್ಲಿ ರಸ್ತೆ ಹೊಂಡಗಳನ್ನು ಮುಚ್ಚುವ ಮೂಲಕ ಉತ್ತಮ ಕಾರ್ಯವನ್ನ ಮಾಡಿದ್ದಾರೆ.   ಭಾನುವಾರ ಲಾಕ್ಡೌನ್ ಹಿನ್ನೆಲೆಯಲ್ಲಿ ಬಿಜೆಪಿಯ ಬಿ.ಸಿ ರೋಡಿನ

ಭಾನುವಾರ ಲಾಕ್ ಡೌನ್ ಸದುಪಯೋಗ ➤ ಕಾಂಕ್ರೀಟ್ ಹಾಕಿ ಹೊಂಡ ಮುಚ್ಚಿದ ಬಿಜೆಪಿ ಕಾರ್ಯಕರ್ತರು Read More »

ಕರಾವಳಿ, ಕರ್ನಾಟಕ

2021 ಜುಲೈ ತನಕ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ➤ತಪ್ಪಿದ್ದಲ್ಲಿ10ಸಾವಿರ ದಂಡ ಹಾಗೂ 2ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ಕೇರಳ, ಜು.06. ಕೊರೋನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಿರುವ ಹಿನ್ನಲೆಯಲ್ಲಿ ಕೇರಳ ಸರಕಾರ ಸುರಕ್ಷತಾ ಕ್ರಮಗಳ ಪಾಲನೆಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸುವಂತೆ ಭಾನುವಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿದೆ. ಕೇರಳ ಸರ್ಕಾರದ ಈ ಮಹತ್ವದ ಆದೇಶ 2021 ಜುಲೈವರೆಗೂ ಅನ್ವಯವಾಗಲಿದೆ. ಅಲ್ಲದೇ ಇದೇ ವೇಳೆ ಮದುವೆಗೆ 50ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಹಾಗೂ ಅಂತ್ಯಕ್ರೀಯೆಯಲ್ಲಿ 20 ಜನರಷ್ಟೆ ಭಾಗವಹಿಸಬೇಕು. ಸಮುದಾಯ ಕಾರ್ಯಕ್ರಮ,

2021 ಜುಲೈ ತನಕ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ➤ತಪ್ಪಿದ್ದಲ್ಲಿ10ಸಾವಿರ ದಂಡ ಹಾಗೂ 2ವರ್ಷ ಜೈಲು ಶಿಕ್ಷೆ Read More »

ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ ಕೊರೋನಾಗೆ 19 ಸಾವಿರದ 693 ಸಾವು ➤ ರಷ್ಯಾವನ್ನು ಹಿಂದಿಕ್ಕಿರುವ ಭಾರತ.!!!

(ನ್ಯೂಸ್ ಕಡಬ) newskadaba.com ನವದೆಹಲಿ, ಜು.06.,ಭಾರತದಲ್ಲಿ ಕೊರೋನ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 24 ಸಾವಿರದ 248 ಹೊಸ ಪ್ರಕರಣಗಳು ವರದಿಯಾಗಿದ್ದು 425 ಮಂದಿಯನ್ನು ಬಲಿ ತೆಗೆದು ಕೊಂಡಿದೆ. 6,97,413 ಪಾಸಿಟಿವ್ ಕೇಸುಗಳಿದ್ದು ಅವುಗಳಲ್ಲಿ 2,53,287 ಸಕ್ರಿಯ ಕೇಸುಗಳಾಗಿವೆ, 4,24,433 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಭಾರತದಲ್ಲಿ ಒಟ್ಟು 19 ಸಾವಿರದ 693 ಸಾವು ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶ ತಿಳಿಸಿದೆ. ಕೋವಿಡ್-19

ಭಾರತದಲ್ಲಿ ಕೊರೋನಾಗೆ 19 ಸಾವಿರದ 693 ಸಾವು ➤ ರಷ್ಯಾವನ್ನು ಹಿಂದಿಕ್ಕಿರುವ ಭಾರತ.!!! Read More »

ರಾಷ್ಟ್ರೀಯ ನ್ಯೂಸ್

ಎಡೆಬಿಡದೆ ಸುರಿದ ಮಳೆರಾಯ ➤ ಕುಮಾರಧಾರಾ ನೀರಿನ ಮಟ್ಟದಲ್ಲಿ ಏರಿಕೆ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ ,ಜು.06: ಒಂದೆಡೆ ಕೊರೊನಾ ಕಾಟ ಹೆಚ್ಚಾಗುತ್ತಿದ್ದಾರೆ, ಮತ್ತೊಂದೆಡೆ ವರುಣನ ಆರ್ಭಟ ಹೆಚ್ಚುತ್ತಿದೆ. ಇದೀಗಾ ಕುಕ್ಕೆ ಸುಬ್ರಹ್ಮಣ್ಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ರವಿವಾರವೂ ಮಳೆಯಾಗಿದ್ದು, ಕುಮಾರಧಾರಾ ನದಿ ನೀರಿನ ಹರಿವು ಹೆಚ್ಚಳಗೊಂಡಿದೆ. ಕುಮಾರ ಪರ್ವತ ಹಾಗೂ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿದ ಪರಿಣಾಮ ನದಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ಸುಬ್ರಹ್ಮಣ್ಯ ಸುತ್ತಮುತ್ತಲಿನ ಪರಿಸರದಲ್ಲೂ ಭಾರೀ ಮಳೆಯಾಗಿದೆ. ಸಣ್ಣ ಪುಟ್ಟ ನದಿ, ತೊರೆಗಳು ನಿರಂತರ ಮಳೆಯಿಂದಾಗಿ ತುಂಬಿ ಹರಿಯುತ್ತಿವೆ. ಅಲ್ಲದೆ ಕೆಲವೊಂದು

ಎಡೆಬಿಡದೆ ಸುರಿದ ಮಳೆರಾಯ ➤ ಕುಮಾರಧಾರಾ ನೀರಿನ ಮಟ್ಟದಲ್ಲಿ ಏರಿಕೆ Read More »

ಕರಾವಳಿ, ಕರ್ನಾಟಕ
Scroll to Top