Isro

ಸೂರ್ಯನತ್ತ ಇಸ್ರೋ ಹೆಜ್ಜೆ….!! – ಆದಿತ್ಯ L1 ಉಡಾವಣೆ ಗೆ ಕ್ಷಣಗಣನೆ ಆರಂಭ

(ನ್ಯೂಸ್ ಕಡಬ)newskadaba.com ನವದೆಹಲಿ, ಸೆ.02. ಭಾರತದ ಚಂದ್ರಯಾನ-3 ರ ಯಶಸ್ಸಿನ ನಂತರ, ದೇಶವು ಮತ್ತೊಂದು ಮಹತ್ತರ ಸಾಧನೆಗೆ ಸಜ್ಜಾಗುತ್ತಿದ್ದು, ಈ ಬಾರಿ ಇಸ್ರೋ ಸೂರ್ಯನಿತ್ತ ದೃಷ್ಟಿ ಇಟ್ಟಿದೆ ಎನ್ನಲಾಗಿದೆ. ಇಸ್ರೋದ ಸೂರ್ಯ ಮಿಷನ್ ಆಗಿರುವ ಆದಿತ್ಯ – ಎಲ್ 1 ಗೆ ಕ್ಷಣಗಣನೆ ಆರಂಭವಾಗಿದ್ದು, ಈ ಮಿಷನ್ ಇಂದು ಬೆಳಗ್ಗೆ 11:50ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಲಾಂಚ್ ಆಗಲಿದೆ. ಈ ಪ್ರಯೋಗದ ಹಿನ್ನೆಲೆಯಲ್ಲಿ ಆದಿತ್ಯ ಎಲ್1 ಆಕೃತಿ ಹೊತ್ತ ಇಸ್ರೋ ವಿಜ್ಞಾನಿಗಳ ತಂಡ ತಿರುಮಲ ತಿಮ್ಮಪ್ಪನನ್ನು ಭೇಟಿ […]

ಸೂರ್ಯನತ್ತ ಇಸ್ರೋ ಹೆಜ್ಜೆ….!! – ಆದಿತ್ಯ L1 ಉಡಾವಣೆ ಗೆ ಕ್ಷಣಗಣನೆ ಆರಂಭ Read More »

ರಾಷ್ಟ್ರೀಯ ನ್ಯೂಸ್

ಚಂದ್ರಯಾನ-3 ಯಶಸ್ಸಿಗೆ ದೇಶ- ವಿದೇಶಗಳಲ್ಲಿ ವಿಶೇಷ ಪ್ರಾರ್ಥನೆ

(ನ್ಯೂಸ್ ಕಡಬ) newskadaba.com ಬೆಂಗಳೂರು,ಆ. 23. ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ನೌಕೆ ಚಂದ್ರನ ಅಂಗಳಕ್ಕೆ ಕಾಲಿಡಲು ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಪರಿಪೂರ್ಣಗೊಳ್ಳಲಿ ಎಂದು ದೇಶದಾದ್ಯಂತ ಪ್ರತಿಯೊಬ್ಬ ಭಾರತೀಯರೂ ಶುಭ ಹಾರೈಸುತ್ತಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ, ಪೂಜೆ ಪುನಸ್ಕಾರಗಳ ಮೂಲಕ ಚಂದ್ರಯಾನ-3ರ ಯಶಸ್ಸಿಗೆ ಪ್ರಾರ್ಥಿಸಲಾಗುತ್ತಿದ್ದು, ಮಂದಿರ, ಮಸೀದಿ, ಚರ್ಚ್‌ ಎನ್ನದೇ ಸರ್ವಧರ್ಮೀಯರೂ ಶುಭ ಹಾರೈಸುತ್ತಿದ್ದಾರೆ. ಅತ್ತ ವಿದೇಶದಲ್ಲಿರುವ ಭಾರತೀಯರು ಕೂಡ ಚಂದ್ರಯಾನದ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದಾರೆ. ಚಂದ್ರಯಾನ-

ಚಂದ್ರಯಾನ-3 ಯಶಸ್ಸಿಗೆ ದೇಶ- ವಿದೇಶಗಳಲ್ಲಿ ವಿಶೇಷ ಪ್ರಾರ್ಥನೆ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಚಂದ್ರಯಾನ- 3 ಯಶಸ್ಸಿಗೆ ಕ್ಷಣಗಣನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 23.‌ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ- 3, ಇಂದು ಚಂದ್ರನ ಅಂಗಳದಲ್ಲಿ ಇಳಿಯುವ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಕೊನೆಯ ಆ. 20 ನಿಮಿಷಗಳು ಪ್ರತಿಯೊಬ್ಬ ಭಾರತೀಯರ ಎದೆಬಡಿತ ಹೆಚ್ಚಾಗಿರುತ್ತದೆ ಎಂದೇ ಹೇಳಬಹುದು. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ಈ ಮಹತ್ವದ ಕ್ಷಣಕ್ಕಾಗಿ ಜನ ಕಾತುರದಿಂದ ಕಾಯುತ್ತಿದ್ದಾರೆ. 2019ರ ಸೆಪ್ಟೆಂಬರ್ 6ರಂದು ಕೊನೇ ಕ್ಷಣದಲ್ಲಿ ಉಂಟಾದ ಆಘಾತ, ನೋವು

ಚಂದ್ರಯಾನ- 3 ಯಶಸ್ಸಿಗೆ ಕ್ಷಣಗಣನೆ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಚಂದ್ರಯಾನ-3 ಯಶಸ್ಸಿಗೆ ಕುಕ್ಕೇ ಸುಬ್ರಹ್ಮಣ್ಯ ದೇವರಿಗೆ ಕುಕ್ಕೇ ಶ್ರೀ ಆಡಳಿತ ಮಂಡಳಿಯಿಂದ ವಿಶೇಷ ಸೇವೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 22. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆಯ ಚಂದ್ರಯಾನ-3 ನೌಕೆಯು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿ ಎಂದು ನಾಗರಪಂಚಮಿ ದಿನದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವಳದ ಆಡಳಿತ ಮಂಡಳಿ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ ಶ್ರೀ ದೇವರಿಗೆ ಇಸ್ರೋ ಹೆಸರಿನಲ್ಲಿ ಸೇವೆ ನೆರವೇರಿಸಲಾಯಿತು.   ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿಯ ಚಂದ್ರಯಾನ-3 ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಿ ಇತಿಹಾಸ ನಿರ್ಮಿಸಲಿ ಮತ್ತು ಇದರೊಂದಿಗೆ ನಮ್ಮ ರಾಷ್ಟ್ರದ

ಚಂದ್ರಯಾನ-3 ಯಶಸ್ಸಿಗೆ ಕುಕ್ಕೇ ಸುಬ್ರಹ್ಮಣ್ಯ ದೇವರಿಗೆ ಕುಕ್ಕೇ ಶ್ರೀ ಆಡಳಿತ ಮಂಡಳಿಯಿಂದ ವಿಶೇಷ ಸೇವೆ Read More »

ಕರಾವಳಿ

ಚಂದ್ರಯಾನ-3 ಕೊನೆಯ ಹಂತದ ಡೀಬೂಸ್ಟಿಂಗ್ ಯಶಸ್ವಿ – ಆ. 23ರಂದು ಲ್ಯಾಂಡಿಂಗ್

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 20. ದೇಶದ ಮಹತ್ವಾಕಾಂಕ್ಷೆ ಯೋಜನೆಯಾದ ಚಂದ್ರಯಾನ 3 ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಎರಡನೇ ಮತ್ತು ಅಂತಿಮ ಹಂತದ ಡೀಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವಿಕ್ರಮ್ ಲ್ಯಾಂಡರ್‌ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಇಸ್ರೋ ತಿಳಿಸಿದೆ. ವಿಕ್ರಮ್ ಲ್ಯಾಂಡರ್, ಈಗಾಗಲೇ ಚಂದ್ರನಿಗೆ ಅತ್ಯಂತ ಸಮೀಪವಿರುವ ಬಿಂದು 25 ಕಿ.ಮೀ ಮತ್ತು ಚಂದ್ರನಿಂದ 134 ಕಿ.ಮೀ ದೂರದ ಕಕ್ಷೆಯನ್ನು ತಲುಪಿದೆ. ಈ ಕಕ್ಷೆಯಿಂದಲೇ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನಿಸುತ್ತಿದೆ

ಚಂದ್ರಯಾನ-3 ಕೊನೆಯ ಹಂತದ ಡೀಬೂಸ್ಟಿಂಗ್ ಯಶಸ್ವಿ – ಆ. 23ರಂದು ಲ್ಯಾಂಡಿಂಗ್ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಚಂದ್ರನ ಕಕ್ಷೆ ಪ್ರವೇಶಿಸಿರುವ ನೌಕೆ – ಮೊದಲ ಚಿತ್ರ ಬಿಡುಗಡೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 07. ಚಂದ್ರನ ಕಕ್ಷೆ ಪ್ರವೇಶಿಸಿರುವ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಸೆರೆ ಹಿಡಿದಿರುವ ಚಂದ್ರನ ಮೊದಲ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಿಡುಗಡೆಗೊಳಿಸಿದೆ. ಇಸ್ರೋ ಸಂಸ್ಥೆಯು ಚಂದ್ರನ ಫೋಟೋವನ್ನು ತನ್ನ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ನೌಕೆ ಕಕ್ಷೆ ಪ್ರವೇಶಿಸಿದ ಸಂದರ್ಭದಲ್ಲಿ ಸೆರೆ ಹಿಡಿಯಲಾದ ಫೋಟೋ ಎಂದು ಹೇಳಿದೆ. ಆಗಸ್ಟ್ 5ರಂದು ಚಂದ್ರನ ಆರ್ಬಿಟ್ ಅಳವಡಿಕೆ (LOI) ಸಮಯದಲ್ಲಿ ಚಂದ್ರಯಾನ -3 ಬಾಹ್ಯಾಕಾಶ ನೌಕೆಯಿಂದ ಚಂದ್ರನನ್ನು ವೀಕ್ಷಿಸಲಾಗಿದೆ ಎಂದು ಮಿಷನ್‌ನ

ಚಂದ್ರನ ಕಕ್ಷೆ ಪ್ರವೇಶಿಸಿರುವ ನೌಕೆ – ಮೊದಲ ಚಿತ್ರ ಬಿಡುಗಡೆ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಚಂದ್ರನಿಗೆ ಇನ್ನಷ್ಟು ಸಮೀಪವಾದ ಇಸ್ರೋ – 3ನೇ 2 ಭಾಗ ಅಂತರವನ್ನು ಕ್ರಮಿಸಿದ ಚಂದ್ರಯಾನ-3

 (ನ್ಯೂಸ್ ಕಡಬ)newskadaba.com ಬೆಂಗಳೂರು, ಆ.05. ಭಾರತದ ಚಂದ್ರಯಾನ-3 ನೌಕೆಯು ಶುಕ್ರವಾರದ ವೇಳೆಗೆ, ಭೂಮಿ ಮತ್ತು ಚಂದ್ರನ ನಡುವಿನ ಅಂತರದ ಮೂರನೇ ಎರಡು ಭಾಗವನ್ನು ಕ್ರಮಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ ಎನ್ನಲಾಗಿದೆ. ಆಗಸ್ಟ್ 01 ರಂದು, ಇಸ್ರೋ ಚಂದ್ರಯಾನ-3ನ್ನು ಚಂದ್ರನತ್ತ ತೂರಿಬಿಡಲು ಟ್ರಾನ್ಸ್ ಲೂನರ್ ಇಂಜೆಕ್ಷನ್ ಕಾರ್ಯಾಚರಣೆಯನ್ನು ಮಾಡಿತ್ತು. ಅಂದರೆ, ಆವರೆಗೆ ಭೂಮಿಯನ್ನು ಸುತ್ತುತ್ತಿದ್ದ ಚಂದ್ರಯಾನವನ್ನು ಚಂದ್ರನತ್ತ ಸಾಗುವ ದಾರಿಯಲ್ಲಿ ಇರಿಸಲಾಗಿತ್ತು. ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಆರೋಗ್ಯ ಸಾಮಾನ್ಯವಾಗಿದೆ ಎಂದು ಟ್ರಾನ್ಸ್ ಲೂನರ್

ಚಂದ್ರನಿಗೆ ಇನ್ನಷ್ಟು ಸಮೀಪವಾದ ಇಸ್ರೋ – 3ನೇ 2 ಭಾಗ ಅಂತರವನ್ನು ಕ್ರಮಿಸಿದ ಚಂದ್ರಯಾನ-3 Read More »

ಕರ್ನಾಟಕ

ಭೂಮಿಯ ಕಕ್ಷೆ ತೊರೆದು ಚಂದ್ರನತ್ತ ಸಾಗಿದ ಚಂದ್ರಯಾನ- 3

(ನ್ಯೂಸ್ ಕಡಬ) newskadaba.com ಇಸ್ರೋ, ಆ. 01. ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-3ರ ಬಾಹ್ಯಾಕಾಶ ನೌಕೆ ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಯತ್ತ ಪಯಣ ಮುಂದುವರಿಸಿದೆ. ಈಗಾಗಲೇ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಟ್ರಾನ್ಸ್‌ ಲೂನಾರ್ ಕಕ್ಷೆಗೆ ಸೇರಿಸಿದ್ದು, ಇನ್ನೇನು ನೌಕೆ ಚಂದ್ರನ ಕಡೆಗೆ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ. ಇಸ್ರೋ ಟೆಲಿಮಿಟ್ರಿ, ಟ್ರ್ಯಾಕಿಂಗ್ ಹಾಗೂ ಕಮಾಂಡ್ ನೆಟ್‌ ವರ್ಕ್‌ನಲ್ಲಿ ಯಶಸ್ವಿ ಪೆರಿಜಿ-ಫೈರಿಂಗ್ ಪೂರೈಸಿದೆ. ಇನ್ನು ನೌಕೆಯ ಸ್ಟಾಪ್ ಚಂದ್ರನ ಅಂಗಳವಾಗಿದೆ. ಚಂದ್ರನ ಬಳಿಗೆ ತಲುಪಿದ ನಾಲ್ಕು ದಿನದಲ್ಲಿ ಲೂನಾರ್-ಆರ್ಬಿಟ್ ಅಳವಡಿಕೆ

ಭೂಮಿಯ ಕಕ್ಷೆ ತೊರೆದು ಚಂದ್ರನತ್ತ ಸಾಗಿದ ಚಂದ್ರಯಾನ- 3 Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮತ್ತೊಂದು ಮೈಲಿಗಲ್ಲಿನತ್ತ ಇಸ್ರೋ – ಜುಲೈ 30 ರಂದು PSLV-C56 ಉಪಗ್ರಹ ಉಡಾವಣೆ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜು. 26. ಜುಲೈ 14 ರಂದು ಚಂದ್ರಯಾನ-3 ಮಿಷನ್‌ನ ಯಶಸ್ವಿ ಉಡಾವಣೆ ಮಾಡಿದ ನಂತರ, ಇಸ್ರೋ ಸಂಸ್ಥೆಯು ಪಿಎಸ್‌ಎಲ್‌ವಿ-ಸಿ 56 ಉಡಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ. DS-SAR ಉಪಗ್ರಹವನ್ನು ಜುಲೈ 30 ರಂದು ಬೆಳಿಗ್ಗೆ 6:30 ಕ್ಕೆ ಆರು ಸಹ-ಪ್ರಯಾಣಿಕ ಉಪಗ್ರಹಗಳೊಂದಿಗೆ ಇಸ್ರೋದ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಲಾಗುವುದು ಎಂದು ತಿಳಿಸಿದೆ. ಈ ಮೊದಲು, ಉಡಾವಣೆಯನ್ನು ಜುಲೈ 26ಕ್ಕೆ ನಿಗದಿಪಡಿಸಲಾಗಿತ್ತು, ಆದರೆ ಹಲವು ಕಾರಣಗಳಿಂದಾಗಿ ಅದನ್ನು ಜುಲೈ 30ಕ್ಕೆ ಮರು ನಿಗದಿಪಡಿಸಲಾಗಿದೆ.

ಮತ್ತೊಂದು ಮೈಲಿಗಲ್ಲಿನತ್ತ ಇಸ್ರೋ – ಜುಲೈ 30 ರಂದು PSLV-C56 ಉಪಗ್ರಹ ಉಡಾವಣೆ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಚಂದ್ರಯಾನ-3 ಭೂಮಿಯ ಕೊನೆಯ ಕಕ್ಷೆಗೆ ಪ್ರವೇಶ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 25. ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕಯು ಇಂದು ಭೂಮಿಯ ಕೊನೆಯ ಕಕ್ಷೆಯನ್ನು ಪ್ರವೇಶಿಸಲಿದೆ. ಮಧ್ಯಾಹ್ನ 2-3 ಗಂಟೆಗೆ 5ನೇ ಅರ್ಥ್‌-bound perigee firing ಪೂರ್ಣಗೊಳ್ಳಲಿದ್ದು ನಂತರ ಜು.31ರ ರಾತ್ರಿ ಭೂಮಿ ಕಕ್ಷೆಯನ್ನು ತೊರೆದು ಚಂದ್ರನ ಕಡೆಗೆ ಚಲಿಸುತ್ತದೆ. ಪ್ರಸ್ತುತ, ಗಗನನೌಕೆ ಭೂಮಿಯಿಂದ 71,351 ಕಿಮೀ x 233 ಕಿಮೀ ದೂರದ ಕಕ್ಷೆಯಲ್ಲಿದೆ ಎಂದು ಇಸ್ರೋ ಸಂಸ್ಥೆ ಹೇಳಿದೆ. ಬಳಿಕ ಚಂದ್ರನಿಗೆ 5 ಸುತ್ತುಗಳನ್ನು ಹಾಕಿ ಆ. 23ರಂದು ಚಂದ್ರನ ದಕ್ಷಿಣ

ಚಂದ್ರಯಾನ-3 ಭೂಮಿಯ ಕೊನೆಯ ಕಕ್ಷೆಗೆ ಪ್ರವೇಶ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್
Scroll to Top